ಭಾರತದಲ್ಲಿ ಅಲೆನ್ ವೇರ್ m15 R7 ಗೇಮಿಂಗ್ ಲ್ಯಾಪ್‌ಟಾಪ್ ಲಾಂಚ್: ದುಬಾರಿ ಬೆಲೆ!

|

ಗೇಮಿಂಗ್‌ ವಲಯ ಇಂದು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಅಂತೆಯೇ ಸ್ಮಾರ್ಟ್‌ ಗ್ಯಾಜೆಟ್‌ಗಳು ಹೆಚ್ಚಾಗುವುದರ ಜೊತೆಗೆ ಬಹುಪಾಲು ಜನರು ಗೇಮಿಂಗ್‌ ಆಡಲೆಂದೇ ಗ್ಯಾಜೆಟ್‌ಗಳನ್ನು ಖರೀದಿ ಮಾಡುತ್ತಿದ್ದಾರೆ. ಅದರಲ್ಲೂ ಪ್ರಮುಖ ಕಂಪೆನಿಗಳು ಗೇಮಿಂಗ್‌ ಆಧಾರಿತ ಸ್ಮಾರ್ಟ್‌ಫೋನ್‌, ಮಾನಿಟರ್‌, ಲ್ಯಾಪ್‌ಟಾಪ್‌ಗಳು ಮಾರುಕಟ್ಟೆಗೆ ಪರಿಚಯಿಸಿದ್ದು, ಈಗ ಅವುಗಳ ಸಾಲಿಗೆ ಹೊಸ ಅಲೆನ್ ವೇರ್ m15 R7 (Alienware m15 R7) ಲ್ಯಾಪ್‌ಟಾಪ್‌ ಸೇರಿಕೊಳ್ಳಲಿದೆ.

ಅಲೆನ್ ವೇರ್

ಹೌದು, ಅಲೆನ್ ವೇರ್ m15 R7 ಗೇಮಿಂಗ್‌ ಲ್ಯಾಪ್‌ಟಾಪ್‌ ಭಾರತದಲ್ಲಿ ಲಾಂಚ್‌ ಆಗಿದೆ. ಇದು AMD ರೈಜೆನ್ 7 6800H ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, 165Hz ರಿಫ್ರೆಶ್ ರೇಟ್‌ ನೊಂದಿಗೆ 15.6 ಇಂಚಿನ ಫುಲ್ HD ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಕ್ರಯೋ-ಟೆಕ್ ಕೂಲಿಂಗ್ ತಂತ್ರಜ್ಞಾನಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಹಾಗಿದ್ರೆ ಇದರ ಇನ್ನಷ್ಟು ಫೀಚರ್ಸ್‌ ಯಾವುವು, ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬುದನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಅಲೆನ್ ವೇರ್ m15 R7 ಲ್ಯಾಪ್‌ಟಾಪ್ 15.6 ಇಂಚಿನ ಫುಲ್‌ HD ಡಿಸ್‌ಪ್ಲೇ ಹೊಂದಿದ್ದು, 165Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದೆ. ಇದರ ಜೊತೆಗೆ 3 ಮಿಲಿಸೆಕೆಂಡ್ ಪ್ರತಿಕ್ರಿಯೆ ಸಮಯವನ್ನು ಹೊಂದಿದ್ದು, ಕಣ್ಣಿಗೆ ಉಂಟಾಗುವ ತೊಂದರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಇದರಲ್ಲಿ ಡೆಲ್‌ನ ಕಂಫರ್ಟ್‌ವ್ಯೂ ಪ್ಲಸ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದರೊಂದಿಗೆ ಸುಗಮ ದೃಶ್ಯಗಳಿಗಾಗಿ ಎನ್ವಿಡಿಯಾ ಜಿ-ಸಿಂಕ್ ಮತ್ತು ಸುಧಾರಿತ ಆಪ್ಟಿಮಸ್ ತಂತ್ರಜ್ಞಾನಗಳನ್ನು ಸಹ ಇದು ಬೆಂಬಲಿಸುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ಪ್ರೊಸೆಸರ್ ಸಾಮರ್ಥ್ಯ

ಈ ಲ್ಯಾಪ್‌ಟಾಪ್‌ ಆಕ್ಟಾ-ಕೋರ್ AMD ರೈಜೆನ್ 7 6800H ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಇದರಲ್ಲಿ ಗರಿಷ್ಠ 4.7GHz ವರೆಗೆ ಬೂಸ್ಟ್ ಕ್ಲಾಕ್‌ ರೇಟ್‌ ಹೊಂದಿದೆ. ಇನ್ನು ಎನ್ವಿಡಿಯಾ ಜಿಫೋರ್ಸ್ RTX 3060 (6GB) ಹಾಗೂ ಎನ್ವಿಡಿಯಾ ಜಿಫೋರ್ಸ್ RTX 3070 Ti (8GB) ಎಂಬ ಎರಡು ವೇರಿಯಂಟ್‌ನಲ್ಲಿ ಸಿಗಲಿದೆ. ಈ ಲ್ಯಾಪ್‌ಟಾಪ್‌ ಕ್ರಯೋ-ಟೆಕ್ ಕೂಲಿಂಗ್ ತಂತ್ರಜ್ಞಾನವನ್ನು ಹೊಂದಿದ್ದು, ದೀರ್ಘ ಸಮಯದ ಗೇಮಿಂಗ್ ಅನುಭವ ನೀಡಲಿದೆ. ಹಾಗೆಯೇ ಈ ಎನ್ವಿಡಿಯಾ ಜಿಫೋರ್ಸ್ RTX 3060 ಲ್ಯಾಪ್‌ಟಾಪ್ 16GB (2x8GB) RAM ಹಾಗೂ 512GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಹೊಂದಿದ್ದು, ಎನ್ವಿಡಿಯಾ ಜಿಫೋರ್ಸ್ RTX 3070 Ti 1TB ಸ್ಟೋರೇಜ್‌ ಸಾಮರ್ಥ್ಯ ಪಡೆದಿದೆ.

ಕನೆಕ್ಟಿವಿಟಿ ಆಯ್ಕೆ

ಕನೆಕ್ಟಿವಿಟಿ ಆಯ್ಕೆ

ಗೇಮಿಂಗ್‌ ಲ್ಯಾಪ್‌ಟಾಪ್ ವೈ-ಫೈ 6 ಮತ್ತು ಬ್ಲೂಟೂತ್‌ ಆವೃತ್ತಿ v5.2, ಯುಎಸ್‌ಬಿ 3.2 Gen 1 ಟೈಪ್-A ಪೋರ್ಟ್, ಯುಎಸ್‌ಬಿ 3.2 Gen 2 ಟೈಪ್-C, ಹೆಚ್‌ಡಿಎಮ್ಐ 2.1 ಪೋರ್ಟ್, RJ45 ಎತರ್ನೆಟ್ ಪೋರ್ಟ್ ಮತ್ತು 3.5mm ಹೆಡ್‌ಸೆಟ್ ಜ್ಯಾಕ್ ಹೊಂದಿದೆ.

ಬ್ಯಾಟರಿ ಹಾಗೂ ಇತರೆ ಫೀಚರ್ಸ್‌

ಬ್ಯಾಟರಿ ಹಾಗೂ ಇತರೆ ಫೀಚರ್ಸ್‌

ಈ ಗೇಮಿಂಗ್ ಲ್ಯಾಪ್‌ಟಾಪ್ 86Wh ಬ್ಯಾಟರಿ ಹೊಂದಿದ್ದು, 240W ಅಡಾಪ್ಟರ್‌ ಆಯ್ಕೆ ಪಡೆದಿದೆ. ಹಾಗೆಯೇ ಎಮ್-ಸೀರಿಸ್‌ ಅಲೆನ್ಎಫ್ಎಕ್ಸ್ ಆರ್‌ಜಿಬಿ ಬ್ಯಾಕ್‌ಲಿಟ್ ಕೀಬೋರ್ಡ್ ಅನ್ನು ಹೊಂದಿದ್ದು, ಅಲೆನ್ ವೇರ್ ಕಮಾಂಡ್ ಸೆಂಟರ್ ಮೂಲಕ ಸಿಸ್ಟಮ್ ತಾಪಮಾನವನ್ನು ಕಟ್ರೋಲ್‌ ಮಾಡಲು ಕಸ್ಟಮೈಸ್ ಆಯ್ಕೆ ನೀಡಲಾಗಿದೆ. ಇದರ ಜೊತೆಗೆ ಹೆಚ್‌ಡಿ ವೆಬ್‌ಕ್ಯಾಮ್ ಮತ್ತು ಡ್ಯುಯಲ್-ಅರೇ ಮೈಕ್ರೊಫೋನ್‌ಗಳನ್ನು ನೀಡಲಾಗಿದ್ದು, ಡಾಲ್ಬಿ ಅಟ್ಮಾಸ್ ತಂತ್ರಜ್ಞಾನ ಇರುವ ಎರಡು 2.5W ಸ್ಟೀರಿಯೋ ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಈ ಎನ್ವಿಡಿಯಾ ಜಿಫೋರ್ಸ್ RTX 3070 Ti ಲ್ಯಾಪ್‌ಟಾಪ್‌ಗೆ 1,99,990ರೂ. ಗಳು ಹಾಗೂ ಎನ್ವಿಡಿಯಾ ಜಿಫೋರ್ಸ್ RTX 3060 ಲ್ಯಾಪ್‌ಟಾಪ್‌ಗೆ 1,59,990ರೂ. ಗಳನ್ನು ನಿಗದಿ ಮಾಡಲಾಗಿದೆ. ಇವುಗಳನ್ನು ಭಾರತದಲ್ಲಿ ಡೆಲ್‌ನ ಆನ್‌ಲೈನ್‌ ಹಾಗೂ ರಿಟೇಲ್‌ ಸ್ಟೋರ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
The gaming sector is thriving today. Meanwhile, Dell has now launched the Alienware m15 R7 gaming laptop in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X