ಪ್ರತಿಯೊಬ್ಬ ಮೊಬೈಲ್ ಬಳಕೆದಾರರು ತಿಳಿದಿರಲೇ ಬೇಕಾದ ನಂಬರ್ ಇದು..!!

Written By:

ಟೆಲಿಕಾಂ ಕಮಿಷನ್ ಜನ ಸಾಮಾನ್ಯರ ಹಿತದೃಷ್ಟಿಯಿಂದ ಕ್ರಮವೊಂದನ್ನು ತೆಗೆದುಕೊಂಡಿದೆ. ಇಡೀ ದೇಶದಲ್ಲಿ ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ಬೇರೆ ಬೇರೆ ನಂಬರ್ ಗಳ ಬದಲಾಗಿ 112 ಸಂಖ್ಯೆಯನ್ನು ಡಯಲ್ ಮಾಡುವ ಮೂಲಕ ಪೊಲೀಸ್, ಫೈರ್ ಮತ್ತು ಆಂಬುಲೈನ್ಸ್ ಸೇವೆಯನ್ನು ಪಡೆಯಬಹುದಾಗಿದೆ.

ಪ್ರತಿಯೊಬ್ಬ ಮೊಬೈಲ್ ಬಳಕೆದಾರರು ತಿಳಿದಿರಲೇ ಬೇಕಾದ ನಂಬರ್ ಇದು..!!

ಓದಿರಿ: ಏಷ್ಯಾಕ್ಕೆ ಕಾಲಿಟ್ಟ ನೋಕಿಯಾ 8: ಭಾರತಕ್ಕೆ ಎಂದು..?

ಸದ್ಯ ಪೊಲೀಸ್‌ಗೆ 100, ಅಗ್ನಿಶಾಮಕ ದಳಕ್ಕೆ 101 ಮತ್ತು ಆಂಬ್ಯುಲೆನ್ಸ್ ಸೇವೆಗಾಗಿ 102 ಡಯಲ್ ಮಾಡಬೇಕಾಗಿದೆ. ಇನ್ನು ಕೇಲವು ದಿನಗಳು ಮಾತ್ರವೇ ಈ ನಂಬರ್ ಗಳು ಆಕ್ಟಿವ್ ಆಗಿರಲಿದ್ದು, ನಂತರದಲ್ಲಿ 112 ಮಾತ್ರವೇ ಬಳಕೆಯಲ್ಲಿ ಇರಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಿಮ್ ಇಲ್ಲದೇ ಕರೆ ಮಾಡಬಹುದು:

ಸಿಮ್ ಇಲ್ಲದೇ ಕರೆ ಮಾಡಬಹುದು:

112 ಸಂಖ್ಯೆಗೆ ಯಾವುದೇ ಹ್ಯಾಂಡ್ ಸೆಟ್ ನಿಂದ ಕರೆ ಮಾಡಲು ಸಿಮ್ ಕಾರ್ಡ್ ಇರಲೇ ಬೇಕು ಎನ್ನುವ ನಿಯಮವಿಲ್ಲ. ಅಲ್ಲದೇ ಫೋನ್ ಲಾಕ್ ಆಗಿದ್ದರೂ ನೀವು ಕರೆ ಮಾಡಬಹುದು.

ರಾಷ್ಟ್ರೀಯ ತುರ್ತು ಸಂಖ್ಯೆ:

ರಾಷ್ಟ್ರೀಯ ತುರ್ತು ಸಂಖ್ಯೆ:

ತುರ್ತು ಸಂದರ್ಭದಲ್ಲಿ ಪ್ರತಿ ಸೆಕೆಂಡ್ ಸಹ ಮುಖ್ಯವಾಗಿರಲಿದ್ದು, ಈ ಹಿನ್ನಲೆಯಲ್ಲಿ ಎಲ್ಲಾ ತುರ್ತು ಅಗತ್ಯ ಸೇವೆಗೆ ನೀವು 112 ಸಂಖ್ಯೆಯನ್ನು ಡಯಲ್ ಮಾಡಬಹುದಾಗಿದೆ.

ಜನಸ್ನೇಹಿ:

ಜನಸ್ನೇಹಿ:

ತುರ್ತು ಸಂದರ್ಭದಲ್ಲಿ ಎರಡು ಮೂರು ನಂಬರ್ ಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲದ ಕಾರಣ 112 ಸಂಖ್ಯೆಯ ಮೂಲಕ ಎಲ್ಲಾ ಜನರಿಗೂ ಸಹಾಯವಾಗುವಂತೆ ಸೇವೆ ಇದಾಗಿದೆ. ಮೊಬೈಲ್ ಬಳಕೆದಾರರು ಮಾತ್ರವಲ್ಲದೇ ಎಲ್ಲರು ಈ ನಂಬರ್ ನೆನಪಿನಲ್ಲಿಟ್ಟುಕೊಳ್ಳಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Current emergency contact numbers like 100, 101 and 102 are to be continued for a year. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot