KSRTC ಪ್ರಯಾಣಿಕರಿಗೆ ಸಿಹಿಸುದ್ದಿ: ಪ್ರಯಾಣಿಸುವಾಗ ಅನ್‌ಲಿಮಿಟೆಡ್ ಉಚಿತ ಇಂಟರ್‌ನೆಟ್ ಬಳಸಿ!!

|

ದೂರದೂರಿಗೆ ಬಸ್ಸಿನಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಸರಿಯಾದ ನೆಟ್‌ವರ್ಕ್ ಇರುವುದಿಲ್ಲ ಮತ್ತು ಹೆಚ್ಚು ಡೇಟಾ ಕೂಡ ಲಭ್ಯವಿರುವುದಿಲ್ಲ ಎಂದು ಚಿಂತಿಸುತ್ತಿದ್ದವರಿಗೆ ಇಂದು ಸಿಹಿ ಸುದ್ದಿ.! ಏಕೆಂದರೆ, ಭಾರತದ ಸಾರಿಗೆ ವ್ಯವಸ್ಥೆಯಲ್ಲೇ ಅತ್ಯುನ್ನತ ಸೇವೆಗಳನ್ನು ನೀಡುತ್ತಿರುವ ಕೆ.ಎಸ್.ಆರ್.ಟಿ.ಸಿ ಸಾರಿಗೆ ಸಂಸ್ಥೆ, ಇದೀಗ ತನ್ನ ಪ್ರಯಾಣಿಕರಿಗೆ ಉಚಿತ ಡೇಟಾ ನೀಡಲಿದೆ.

ಹೌದು, ಕೆ.ಎಸ್.ಆರ್.ಟಿ.ಸಿ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಇನ್ಮುಂದೆ ಪ್ರಯಣದುದ್ದಕ್ಕೂ ಸ್ಮಾರ್ಟ್‌ಫೋನಿನಲ್ಲಿ ಉಚಿತವಾಗಿ ಸಿನೆಮಾ, ಧಾರಾವಾಹಿ, ರಿಯಾಲಿಟಿ ಶೋ ಹಾಗೂ ಇನ್ನೂ ಹೆಚ್ಚಿನ ಮನರಂಜನೆಯನ್ನು ಸವಿಯಬಹುದಾಗಿದೆ. ಖಾಸಗಿ ಸಾರಿಗೆಗಳಲ್ಲಿ ಮಾತ್ರ ದೊರೆಯುತ್ತಿದ್ದ ಫೀ ಇಂಟರ್‌ನೆಟ್ ಸೌಲಭ್ಯವನ್ನು ಬಸ್‌ಗಳಲ್ಲಿಯೂ ನೀಡಲು ಸಂಸ್ಥೆ ಮುಂದೆ ಬಂದಿದೆ.

KSRTC ಪ್ರಯಾಣಿಕರಿಗೆ ಅನ್‌ಲಿಮಿಟೆಡ್ ಉಚಿತ ಇಂಟರ್‌ನೆಟ್!!

ವೂಟ್.ಕಾಂ ಜೊತೆಗಿನ ಒಪ್ಪಂದದೊಂದಿಗೆ ವೈ-ಫೈ ಹಾಟ್ ಸ್ಪಾಟ್ ಸೇವೆಯನ್ನು ಸರ್ಕಾರಿ ಬಸ್ಸುಗಳಲ್ಲಿ ಅಳವಡಿಸಲಾಗಿದ್ದು, ಈ ಸೇವೆಯನ್ನು ಪಡೆಯಲು ಕೆಲವು ಷರತ್ತುಗಳನ್ನು ಸಹ ವಿಧಿಸಲಾಗಿದೆ. ಹಾಗಾದರೆ, ಕೆ.ಎಸ್.ಆರ್.ಟಿ.ಸಿ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತ ಇಂಟರ್‌ನೆಟ್ ಪಡೆಯುವುದು ಹೇಗೆ? ಇರುವ ಷರತ್ತುಗಳು ಏನು ಎಂಬುದನ್ನು ಮುಂದೆ ತಿಳಿಯಿರಿ.

ಪ್ರಯಾಣಿಕರನ್ನು ಸೆಳೆಯಲು!

ಪ್ರಯಾಣಿಕರನ್ನು ಸೆಳೆಯಲು!

ಖಾಸಗಿ ಸಾರಿಗೆ ಸಂಸ್ಥೆಗಳು ನೀಡುತ್ತಿದ್ದ ಉಚಿತ ಇಂಟರ್‌ನೆಟ್ ಅನ್ನು ಕೆ.ಎಸ್.ಆರ್.ಟಿ.ಸಿ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿಯೂ ನೀಡುವ ಮೂಲಕ ಪ್ರಯಾಣಿಕರನ್ನು ತನ್ನತ್ತ ಸೆಳೆಯಲು ಸಂಸ್ಥೆ ಈ ಯೋಜನೆ ರೂಪಿಸಿದೆ. ಹಾಗಾಗಿ, ಸ್ಮಾರ್ಟ್‌ಫೋನುಗಳಲ್ಲಿ ಉಚಿತವಾಗಿ ವೈ-ಫೈ ಮೂಲಕ ಉಚಿತವಾಗಿ ಸಂಪರ್ಕಿಸಿಕೊಂಡು ಮನೋರಂಜನೆ ಪಡೆಯಬಹುದಾಗಿದೆ.

ಆಯ್ದ ಸರ್ಕಾರಿ ಬಸ್ಸುಗಳಲ್ಲಿ ಈಗ ಲಭ್ಯ!

ಆಯ್ದ ಸರ್ಕಾರಿ ಬಸ್ಸುಗಳಲ್ಲಿ ಈಗ ಲಭ್ಯ!

ಉಚಿತ ಇಂಟರ್‌ನೆಟ್ ಅನ್ನು ಕೆ.ಎಸ್.ಆರ್.ಟಿ.ಸಿ ಸಾರಿಗೆ ಸಂಸ್ಥೆಯ ಆಯ್ದ ಸರ್ಕಾರಿ ಬಸ್ಸುಗಳಲ್ಲಿ ಈಗ ನೀಡಲಾಗಿದೆ. ಈ ಸೇವೆ ಪ್ರಾರಂಭಿಕ ಹಂತದಲ್ಲಿದ್ದು ಒಂದಿಷ್ಟು ಆಯ್ದ ಸರ್ಕಾರಿ ಬಸ್ಸುಗಳಲ್ಲಿ ಇದು ಲಭ್ಯವಿದ್ದರೂ, ಮುಂದಿನ ದಿನಗಳಲ್ಲಿ ರಾಜ್ಯಾದಂತ್ಯ ಎಲ್ಲ ಕೆ.ಎಸ್.ಆರ್.ಟಿ.ಸಿ ಬಸ್ಸುಗಳಲ್ಲೂ ಈ ಸೇವೆ ದೊರೆಯುವ ಸಾಧ್ಯತೆಗಳಿವೆ.

ಉಚಿತ ವೈಫೈ ಪಡೆಯುವುದೇಗೆ?

ಉಚಿತ ವೈಫೈ ಪಡೆಯುವುದೇಗೆ?

ಬಸ್ಸಿನಲ್ಲಿ ಕುಳಿತ ನಂತರ ನಿಮ್ಮ ಸ್ಮಾರ್ಟ್‌ಪೋನನ್ನು ತೆರೆದು ಮೊದಲು ಸೆಟ್ಟಿಂಗ್ ಗೆ ಹೋಗಿ ವೈ-ಫೈ ಕ್ಲಿಕ್ ಮಾಡಿ. ನಂತರ Wi-Fi / WLAN ಶುರು ಮಾಡಿದ ನಂತರ ಕೆಳಗಿರುವ ಲಿಸ್ಟ್‌ನಲ್ಲಿ KIVI ಎಂಬ ನೆಟ್ವರ್ಕ್ ಆಯ್ಕೆ ಮಾಡಿ. ಈಗ ಸೆಟ್ಟಿಂಗ್ ನಿಂದ ಹೊರಗೆ ಬಂದು ಗೂಗಲ್ ಕ್ರೋಮ್ / ಸಫಾರಿ ಬ್ರೌಸರ್ ಮೂಲಕ ಇಂಟರ್‌ನೆಟ್ ಬಳಕೆ ಮಾಡಿ.

ಫೇಸ್‌ಬುಕ್, ಯೂಟ್ಯೂಬ್, ಟ್ವಿಟ್ಟರ್ ಬಳಸಲು ಸಾಧ್ಯವಿಲ್ಲ!

ಫೇಸ್‌ಬುಕ್, ಯೂಟ್ಯೂಬ್, ಟ್ವಿಟ್ಟರ್ ಬಳಸಲು ಸಾಧ್ಯವಿಲ್ಲ!

ಕೆ.ಎಸ್.ಆರ್.ಟಿ.ಸಿ ಸಾರಿಗೆ ಸಂಸ್ಥೆಯ ಆಯ್ದ ಸರ್ಕಾರಿ ಬಸ್ಸುಗಳಲ್ಲಿ ಸಿಗುತ್ತಿರುವ ಉಚಿತ ಇಂಟರ್‌ನೆಟ್ ಮೂಲಕ ಫೇಸ್‌ಬುಕ್, ಯೂಟ್ಯೂಬ್, ಟ್ವಿಟ್ಟರ್ ಸೇರಿದಂತೆ ಯಾವ ಆಪ್‌ಗಳನ್ನು ಬಳಸಲು ಸಾಧ್ಯವಿಲ್ಲ. ಒಂದು ಖಾಸಾಗಿ ಸಂಸ್ಥೆಯ ಜೊತೆ ನಿರ್ದಿಷ್ಟ ಒಪ್ಪಂದವನ್ನು ಮಾಡಿಕೊಂಡಿರುವುದರಿಂದ ಒಂದೇ ಸಂಸ್ಥೆಯ ವೆಬ್‌ಸೈಟ್ ಅನ್ನು ವೀಕ್ಷಿಸಬಹುದಾಗಿದೆ.

ಉಚಿತ ಮನರಂಜನೆ!

ಉಚಿತ ಮನರಂಜನೆ!

ಕೆ.ಎಸ್.ಆರ್.ಟಿ.ಸಿ ಸಾರಿಗೆ ಸಂಸ್ಥೆಯ ಆಯ್ದ ಸರ್ಕಾರಿ ಬಸ್ಸುಗಳಲ್ಲಿ ಸಿಗುತ್ತಿರುವ ಉಚಿತ ಡೇಟಾವನ್ನು ನೀವು ಕೇವಲ www.voot.com ಮಾತ್ರ ಬಳಸಿಕೊಳ್ಳಬಹುದಾಗಿದೆ. ಕನ್ನಡದಲ್ಲಿ ಕಲರ್ಸ್ ಕನ್ನಡ ಚಾನೆಲ್ ಒಡೆತನವನ್ನು ಹೊಂದಿರುವ ಈ ವೂಟ್ ಆಪ್ ಅಥವಾ ಲಿಂಕ್‌ನಲ್ಲಿ ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋ ಸೇರಿದಂತೆ ಹೆಚ್ಚಿನ ಮನರಂಜನೆಯನ್ನು ಸವಿಯಬಹುದು.

Best Mobiles in India

English summary
Commuters travelling in Karnataka State Road Transport Corporation (KSRTC) AC buses will soon get better facilities, including free Wi-Fi. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X