ಸ್ಪೀಕರ್‌, ಮೋಡ್‌ ಲೈಟ್ಸ್‌, ಅಲೆಕ್ಸಾ ಫೀಚರ್ಸ್‌...ಈ ಸ್ಮಾರ್ಟ್‌ ಟಾಯ್ಲೆಟ್ ಬೆಲೆ ಎಷ್ಟು!?

|

ಬಹುಪಾಲು ಮಂದಿ ಶೌಚಾಲಯಕ್ಕೆ ಹೋಗುವಾಗ ಸ್ಮಾರ್ಟ್‌ಫೋನ್‌ಗಳನ್ನು ತೆಗೆದುಕೊಂಡು ಹೋಗುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಅದರಲ್ಲೂ ಮೊಬೈಲ್‌ ಇದೆ ಎಂದರೆ ಎಷ್ಟೇ ಹೊತ್ತಾದರೂ ಕೆಲವರು ಆಚೆ ಬರುವುದಿಲ್ಲ. ಬದಲಾಗಿ ಮಾಡುವ ಕೆಲಸ ಮಾಡಿ ಮುಗಿಸಿಕೊಂಡು ಆಚೆ ಬರುವುದನ್ನು ಬಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುತ್ತಾರೆ. ಈ ರೀತಿಯ ಘಟನೆಗಳನ್ನು ಹಲವಾರು ಜನ ನೋಡಿರಬಹುದು.

ಸ್ಮಾರ್ಟ್‌

ಹೌದು, ಈಗಂತೂ ಎಲ್ಲವೂ ಸ್ಮಾರ್ಟ್‌ ಲೋಕ ಅದರಲ್ಲೂ ಅಡುಗೆ ಕೋಣೆ, ಬೆಡ್‌ರೂಂ, ಮನೆಯ ಹಾಲ್‌ ಸೇರಿದಂತೆ ಎಲ್ಲವನ್ನೂ ಸ್ಮಾರ್ಟ್‌ ಆಗಿ ಮಾಡಿಬಿಟ್ಟಿದ್ದೇವೆ. ಆದರೆ, ಇದರಲ್ಲಿ ಬಾಕಿ ಉಳಿದಿದ್ದು ಶೌಚಾಲಯ. ಈಗ ಅದೂ ಸಹ ಸ್ಮಾರ್ಟ್‌ ರೂಪ ಪಡೆದುಕೊಳ್ಳಲಿದೆ. ಖಂಡಿತವಾಗಿಯೂ ಈ ಮಾಹಿತಿ ನಿಮಗೆ ಆಶ್ಚರ್ಯ ಎನಿಸಬಹುದು. ಯಾಕೆಂದರೆ ಶೌಚಾಲಯವನ್ನು ಹೇಗೆ ಸ್ಮಾರ್ಟ್‌ ಮಾಡುವುದು ಎಂಬ ಪ್ರಶ್ನೆಯೂ ಸಹ ಮೂಡಿರಬಹುದು. ಇದಕ್ಕೆಲ್ಲಾ ಕೊಹ್ಲರ್ ನ ನುಮಿ 2.0 ಸ್ಮಾರ್ಟ್ ಟಾಯ್ಲೆಟ್ (Kohler's Numi 2.0) ಉತ್ತರಿಸಿದೆ.

ಏನಿದು ಕೊಹ್ಲರ್ ನ ನುಮಿ  2.0 ಸ್ಮಾರ್ಟ್ ಟಾಯ್ಲೆಟ್?

ಏನಿದು ಕೊಹ್ಲರ್ ನ ನುಮಿ 2.0 ಸ್ಮಾರ್ಟ್ ಟಾಯ್ಲೆಟ್?

ಕೊಹ್ಲರ್ ನ ನುಮಿ 2.0 ಸ್ಮಾರ್ಟ್ ಟಾಯ್ಲೆಟ್ ತುಂಬಾನೆ ಸ್ಮಾರ್ಟ್‌. ಇದು ನಿಮ್ಮ ನಿತ್ಯ ಕರ್ಮಕ್ಕೆ ಸಹಕಾರಿಯಾಗುವುದರ ಜೊತೆಗೆ ಮನರಂಜನೆ ಸಹ ನೀಡುತ್ತದೆ. ಇದರಲ್ಲಿ ಸ್ಪೀಕರ್‌ಗಳು, ಅಲೆಕ್ಸಾ, ಹ್ಯಾಂಡ್ಸ್ ಫ್ರೀ ಓಪನ್ ಆಂಡ್‌ ಕ್ಲೋಸ್ ಫೀಚರ್ಸ್ ಲಭ್ಯವಿದೆ. ಅದರಲ್ಲೂ ಕೂರಲು ಚಳಿ ಅನುಭವವಾದರೆ ಬಿಸಿ ಮಾಡಿಕೊಳ್ಳುವ ಸೌಲಭ್ಯವೂ ಉಂಟು. ಇದಿಷ್ಟೇ ಅಲ್ಲದೆ, ಆಪ್‌ ಮೂಲಕ ಇದನ್ನು ನಿಯಂತ್ರಣ ಸಹ ಮಾಡಬಹುದಾಗಿದ್ದು, ಇದರ ಇನ್ನಷ್ಟು ಸೌಲಭ್ಯವನ್ನು ಈ ಲೇಖನದಲ್ಲಿ ತಿಳಿಯೋಣ ಓದಿರಿ.

ಇದರ ಪ್ರಮುಖ ಸೌಲಭ್ಯಗಳು

ಇದರ ಪ್ರಮುಖ ಸೌಲಭ್ಯಗಳು

ಕೊಹ್ಲರ್‌ನ ನುಮಿ 2.0 ಟಾಯ್ಲೆಟ್‌ಗೆ ನೀವು ಮೊಬೈಲ್‌ ತೆಗೆದುಕೊಂಡು ಹೋಗಬೇಕೆಂದೇನಿಲ್ಲ. ಯಾಕೆಂದರೆ ಇದರಲ್ಲಿ ಸ್ಪೀಕರ್‌ ಆಯ್ಕೆ ಇದೆ. ಅಮೆಜಾನ್‌ ಅಲೆಕ್ಸಾ ಫೀಚರ್ಸ್‌ ಸಹ ಇದೆ. ಇದಿಷ್ಟೇ ಅಲ್ಲದೆ, ಎಲ್‌ಇಡಿ ಲೈಟ್‌ ಆಯ್ಕೆ ನೀಡಲಾಗಿರುವುದರಿಂದ ನಿಮ್ಮ ಶೌಚಾಲಯದ ರೂಂಗೆ ಪ್ರತ್ಯೇಕ ಬೆಳಕಿನ ಅಗತ್ಯವೂ ಇರುವುದಿಲ್ಲ.

ಆಟೋ ಡ್ರೈಯರ್ ಆಯ್ಕೆ

ಆಟೋ ಡ್ರೈಯರ್ ಆಯ್ಕೆ

ಇದರಲ್ಲಿ ಟಚ್-ಬಟನ್ ಸಕ್ರಿಯಗೊಳಿಸುವಿಕೆಯೊಂದಿಗೆ ವಿದ್ಯುತ್ ಕಡಿತದ ಸಮಯದಲ್ಲಿ 100 ಫ್ಲಶ್‌ಗಳನ್ನು ಬೆಂಬಲಿಸುವ ತುರ್ತು ಫ್ಲಶ್ ಫೀಚರ್ಸ್‌ ಅನ್ನು ನೀಡಲಾಗಿದೆ. ಇದರೊಂದಿಗೆ ಪವರ್-ಸೇವ್ ಮೋಡ್ ಸಹ ಇದ್ದು, ವಿದ್ಯುತ್‌ ಶಕ್ತಿಯನ್ನು ಉಳಿಕೆ ಮಾಡುತ್ತದೆ. ಇದರ ಜೊತೆಗೆ ಕೂರುವ ಸೀಟ್‌ ಅನ್ನು ಸೆಟ್ಟಿಂಗ್‌ ಆಯ್ಕೆ ಮೂಲಕ ಬಿಸಿ ಮಾಡಿಕೊಳ್ಳಬಹುದಾಗಿದ್ದು, ಚಳಿಗಾಲದಲ್ಲಿ ಹಾಗೂ ವಯಸ್ಸಾದವರಿಗೆ ಅತ್ಯಾನುಕೂಲವಾಗಲಿದೆ.

ರಿಮೋಟ್‌ ಮೂಲಕ ಕಂಟ್ರೋಲ್‌

ರಿಮೋಟ್‌ ಮೂಲಕ ಕಂಟ್ರೋಲ್‌

ಈ ಸ್ಮಾರ್ಟ್‌ ಟಾಯ್ಲೆಟ್‌ ಅನ್ನು ರಿಮೋಟ್‌ ಮೂಲಕ ನಿಯಂತ್ರಣ ಮಾಡಬಹುದಾಗಿದೆ. ಇದರಿಂದ ಫ್ಲಶ್‌ ಮಾಡಬಹುದು, ಕಮೋಡ್‌ ತೆರೆಯಬಹುದು, ಲೈಟ್‌ ಆನ್‌ ಮಾಡಬಹುದು. ಹೀಗೆ ಸ್ಮಾರ್ಟ್‌ ಟಾಯ್ಲೆಟ್‌ನಲ್ಲಿ ಕಂಡು ಬರುವ ಎಲ್ಲಾ ಸೌಲಭ್ಯವನ್ನು ರಿಮೋಟ್‌ ಮೂಲಕವೇ ನಿಯಂತ್ರಣ ಮಾಡಬಹುದಾಗಿದೆ.

ಆಟೋ ಡಿಯೋಡರೈಸಿಂಗ್

ಆಟೋ ಡಿಯೋಡರೈಸಿಂಗ್

ಶೌಚಾಲಯ ಅಂದ ಮೇಲೆ ಅದೇನೋ ಪರಿಮಳ ಬೀರುವ ಸ್ಥಳವಲ್ಲ. ಆದರೆ, ಈ ಸ್ಮಾರ್ಟ್‌ ಶೌಚಾಲಯ ಬಳಸುವವರಿಗೆ ಪರಿಮಳ ನೀಡುತ್ತದೆ. ಅದು ಹೇಗೆಂದರೆ ಇದರಲ್ಲಿ ಆಟೋ ಡಿಯೋಡರೈಸಿಂಗ್ ಮೋಡ್ ಫೀಚರ್ಸ್‌ ನೀಡಲಾಗಿದ್ದು, ಆಹ್ಲಾದಕರ ಪರಿಮಳ ನಿರಂತರವಾಗಿ ಹರಡುತ್ತಿರುತ್ತದೆ.

ಎತ್ತರ ಹೊಂದಿಸಿಕೊಳ್ಳಬಹುದು

ಎತ್ತರ ಹೊಂದಿಸಿಕೊಳ್ಳಬಹುದು

ಈ ಸ್ಮಾರ್ಟ್‌ ಶೌಚಾಲಯವನ್ನು ವ್ಯಕ್ತಿಯ ದೇಹದ ಉದ್ದಕ್ಕೆ ಅನುಗುಣವಾಗಿ ಬದಲಾಯಿಸಿಕೊಳ್ಳಬಹುದಾಗಿದೆ. ಇದರಲ್ಲಿ ಎತ್ತರವನ್ನು ಸರಿಹೊಂದಿಸಿಕೊಳ್ಳುವ ಮೂಲಕ ಅತೀ ಉದ್ದದ ಜನರು ಹಾಗೂ ಅತೀ ಕುಳ್ಳಗೆ ಇರುವ ಜನರೂ ಸಹ ಆರಾಮವಾಗಿ ಬಳಕೆ ಮಾಡಿಕೊಳ್ಳಬಹುದು.

ವೆಸ್ಟರ್ನ್‌

ಈಗಾಗಲೇ ವೆಸ್ಟರ್ನ್‌ ಟಾಯ್ಲೆಟ್‌ ಭಾರತದ ತುಂಬೆಲ್ಲಾ ಆವರಿಸಿದ್ದು, ಈ ಹೊಸ ಸ್ಮಾರ್ಟ್‌ ಟಾಯ್ಲೆಟ್‌ ಯಾವಾಗ ಭಾರತಕ್ಕೆ ಪದಾರ್ಪಣೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಹಾಗೆಯೇ ಕೊಹ್ಲರ್ ಮೊದಲು CES 2019 ನಲ್ಲಿ ನುಮಿ 2.0 ಸ್ಮಾರ್ಟ್ ಟಾಯ್ಲೆಟ್ ಅನ್ನು ಪ್ರದರ್ಶಿಸಿದ್ದು, ಸದ್ಯಕ್ಕೆ ಯುಎಸ್‌ನಲ್ಲಿ ಮಾತ್ರ ಬಳಕೆಗೆ ಲಭ್ಯವಾಗುತ್ತಿವೆ.

ಇದರ ಬೆಲೆ ಎಷ್ಟು?

ಇದರ ಬೆಲೆ ಎಷ್ಟು?

ಕೊಹ್ಲರ್ ನ ನುಮಿ 2.0 ಸ್ಮಾರ್ಟ್‌ ಟಾಯ್ಲೆಟ್‌ $11,500 (ಅಂದಾಜು 9,25,000ರೂ.) ಗಳನ್ನು ಹೊಂದಿದ್ದು, ಸದ್ಯಕ್ಕೆ ಭಾರತದಲ್ಲಿ ಲಭ್ಯವಿಲ್ಲ. ನಿಮಗೂ ಈ ಸ್ಮಾರ್ಟ್‌ ಟಾಯ್ಲೆಟ್‌ ಬೇಕು ಎಂದರೆ ಕೆಲವು ಸಮಯ ಕಾಯಬೇಕಿದೆ.

Best Mobiles in India

English summary
Amazon Alexa, mood lighting, speaker features in new Kohler's Numi 2.0 smart toilet.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X