ಗ್ರೇಟ್ ರಿಪಬ್ಲಿಕ್ ಡೇ ಮಾರಾಟದ ದಿನಾಂಕ ಪ್ರಕಟಿಸಿದ ಅಮೆಜಾನ್‌; ಬೊಂಬಾಟ್ ಆಫರ್‌ ನಿಮಗಾಗಿ!

|

ಇ-ಕಾಮರ್ಸ್‌ಗಳಲ್ಲಿ ಪ್ರಮುಖವಾಗಿರುವ ಅಮೆಜಾನ್‌ ಭಾರತೀಯರ ಹಬ್ಬ ಹಾಗೂ ಇನ್ನಿತರೆ ಸಂಭ್ರಮಗಳಲ್ಲಿ ಹಲವಾರು ಕೊಡುಗೆ ನೀಡುವ ಮೂಲಕ ಇನ್ನಷ್ಟು ರಂಗು ಹೆಚ್ಚಾಗುವಂತೆ ಮಾಡುತ್ತಾ ಬರುತ್ತಿದೆ. ಇದರ ಭಾಗವಾಗಿ ಅಮೆಜಾನ್‌ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ ಆರಂಭಿಸಲು ದಿನಾಂಕ ನಿಗದಿ ಮಾಡಿದೆ. ಈ ಮೂಲಕ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ ಹಾಗೂ ಇನ್ನಿತರೆ ಸ್ಮಾರ್ಟ್‌ ಡಿವೈಸ್‌ಗಳನ್ನು ಡಿಸ್ಕೌಂಟ್‌ ಬೆಲೆಗೆ ಖರೀದಿ ಮಾಡಬಹುದಾಗಿದೆ.

ರಿಪಬ್ಲಿಕ್

ಹೌದು, ಮುಂಬರುವ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2023 ರ ದಿನಾಂಕವನ್ನು ಅಮೆಜಾನ್ ಪ್ರಕಟಿಸಿದ್ದು, ಕಂಪೆನಿಯು ತನ್ನ ಅಧಿಕೃತ ವೆಬ್‌ಸೈಟ್ ಅನ್ನು ಹೊಸ ವಿಭಾಗದೊಂದಿಗೆ ನವೀಕರಿಸಿದೆ. ಇದು ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್ ಡೇ ಸೇಲ್‌ 2023 ರ ದಿನಾಂಕವನ್ನು ದೃಢೀಕರಿಸಿದೆ. ಹಾಗಿದ್ರೆ, ಈ ಮಾರಾಟ ಎಂದಿನಿಂದ ಆರಂಭ ಆಗಲಿದೆ?, ಏನೆಲ್ಲಾ ಸ್ಮಾರ್ಟ್‌ಡಿವೈಸ್‌ಗಳಿಗೆ ಆಫರ್‌ ಇದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಎಂದಿನಿಂದ ಆರಂಭ

ಎಂದಿನಿಂದ ಆರಂಭ

ಅಮೆಜಾನ್‌ನ ಈ ವಿಶೇಷ ಮಾರಾಟವು ಜನವರಿ 17 ರಂದು ಪ್ರಾರಂಭವಾಗಲಿದ್ದು, ಜನವರಿ 20 ರವರೆಗೆ ನಡೆಯಲಿದೆ. ಆದರೆ, ಅಮೆಜಾನ್‌ ಪ್ರೈಮ್‌ ಸದಸ್ಯರು ಜನವರಿ 16 ರಿಂದ ಈ ಡೀಲ್‌ಗಳು ಮತ್ತು ಕೊಡುಗೆಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಈ ಮಾರಾಟವು ಗ್ರಾಹಕರಿಗೆ ಉತ್ತಮ ಬೆಲೆಗಳು, ಸುರಕ್ಷಿತ ಪಾವತಿಗಳು ಮತ್ತು ಸುಲಭ ಆದಾಯವನ್ನು ನೀಡುತ್ತದೆ ಎಂದು ಅಮೆಜಾನ್‌ ತನ್ನ ಸೈಟ್‌ನಲ್ಲಿ ಉಲ್ಲೇಖಿಸಿದೆ. ಇದರೊಂದಿಗೆ ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್ ಡೇ ಸೇಲ್ 2023 ಗೆ ಶಿಯೋಮಿ ಪಾಲುದಾರನಾಗಿದ್ದು, ಇದರೊಂದಿಗೆ ವಿವಿಧ ಬ್ಯಾಂಕ್‌ ಕಾರ್ಡ್‌ಗಳ ಮೂಲಕ ಇನ್ನಷ್ಟು ಕೊಡುಗೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಏನೆಲ್ಲಾ ಖರೀದಿ ಮಾಡಬಹುದು?

ಏನೆಲ್ಲಾ ಖರೀದಿ ಮಾಡಬಹುದು?

ಈ ಮಾರಾಟದಲ್ಲಿ ಗ್ಯಾಜೆಟ್‌ಗಳು, ಗೃಹೋಪಯೋಗಿ ವಸ್ತುಗಳು, ಫ್ಯಾಶನ್ ಪ್ರೊಡಕ್ಟ್‌ಗಳು, ದೈನಂದಿನ ಅಗತ್ಯ ವಸ್ತುಗಳು, ಪುಸ್ತಕಗಳು, ಆಟಿಕೆಗಳು ಮತ್ತು ಅಮೆಜಾನ್‌ ಡಿವೈಸ್‌ಗಳ ಮೇಲೆ ಆಕರ್ಷಕ ಡಿಸ್ಕೌಂಟ್‌ ಲಭ್ಯವಾಗಲಿದೆ.

ಎಷ್ಟು ಪರ್ಸೆಂಟ್‌ ರಿಯಾಯಿತಿ?

ಎಷ್ಟು ಪರ್ಸೆಂಟ್‌ ರಿಯಾಯಿತಿ?

ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ಮತ್ತು ಇಎಂಐ ವಹಿವಾಟುಗಳ ಮೂಲಕ ಪಾವತಿಸುವ ಗ್ರಾಹಕರಿಗೆ ಅಮೆಜಾನ್ 10% ತ್ವರಿತ ರಿಯಾಯಿತಿಯನ್ನು ನೀಡಲಿದೆ. ಅದರಲ್ಲೂ ಮೊಬೈಲ್‌ಗಳು ಮತ್ತು ಇತರೆ ಪರಿಕರಗಳ ಮೇಲೆ ಬರೋಬ್ಬರಿ 40% ವರೆಗೆ ರಿಯಾಯಿತಿ ಲಭ್ಯ ಇರಲಿದ್ದು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಇತರ ಉತ್ಪನ್ನಗಳ ಮೇಲೆ 75% ವರೆಗೆ ರಿಯಾಯಿತಿ ಸಿಗಲಿದೆ. ಜೊತೆಗೆ ಅಮೆಜಾನ್ ಟಿವಿಗಳು ಮತ್ತು ಇತರ ಗೃಹೋಪಯೋಗಿ ಉಪಕರಣಗಳ ಮೇಲೆ 60% ವರೆಗೆ ರಿಯಾಯಿತಿ ಘೋಷಣೆ ಮಾಡಲಾಗುತ್ತದೆ. ಇದರೊಂದಿಗೆ ಅಮೆಜಾನ್‌ನ ಯಾವುದೇ ಪ್ರೊಡಕ್ಟ್‌ಗಳ ಮೇಲೆ 45% ವರೆಗೆ ರಿಯಾಯಿತಿ ಸಿಗಲಿದೆ.

2 ಲಕ್ಷದವರೆಗಿನ ಕ್ರೆಡಿಟ್ ಮಿತಿ

2 ಲಕ್ಷದವರೆಗಿನ ಕ್ರೆಡಿಟ್ ಮಿತಿ

ಇದರ ಹೊರತಾಗಿಯೂ ಅಮೆಜಾನ್‌ ಇತರೆ ಕ್ರೆಡಿಟ್‌ ಹಾಗೂ ಡೆಬಿಟ್ ಕಾರ್ಡ್‌ಗಳು ಮತ್ತು ಬಜಾಜ್ ಫಿನ್‌ಸರ್ವ್‌ನಲ್ಲಿಯೂ ಸಹ ನೋ ಕಾಸ್ಟ್‌ ಇಎಮ್‌ಐ ಸೌಲಭ್ಯವನ್ನು ನೀಡಲಿದೆ. ಅರ್ಹ ಗ್ರಾಹಕರು 2 ಲಕ್ಷದವರೆಗಿನ ಕ್ರೆಡಿಟ್ ಮಿತಿಯನ್ನು ಸಹ ಇದರಿಂದ ಪಡೆದುಕೊಳ್ಳಬಹುದಾಗಿದ್ದು, ಇದರ ಬಗೆಗಿನ ಅರ್ಹತೆಯನ್ನು ವೆಬ್‌ಸೈಟ್‌ನಲ್ಲಿ ನಮೂದಿಸಲಾಗಿದ್ದು, ಅಗತ್ಯ ಗ್ರಾಹಕರು ಈ ಬಗ್ಗೆ ಅಮೆಜಾನ್‌ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದಾಗಿದೆ.

ಆಫರ್‌

ಇದರೊಂದಿಗೆ ವಿನಿಮಯ ಆಫರ್‌ ಸಹ ಲಭ್ಯವಿದ್ದು, ಯಾವುದೇ ಡಿವೈಸ್‌ಗಳನ್ನು ಖರೀದಿ ಮಾಡುವಾಗ ಇದು ಅನ್ವಯ ಆಗಲಿದೆ. ಗ್ರಾಹಕರು ತಮ್ಮ ಹಳೆಯ ಫೋನ್ ಅನ್ನು ಹೊಸ ಫೋನ್‌ಗೆ ಈ ಮೂಲಕ ವಿನಿಮಯ ಮಾಡಿಕೊಳ್ಳಬಹುದು. ಇದರಲ್ಲಿ ನಿಮ್ಮ ಹಳೆಯ ಫೋನ್‌ ಸುಸ್ತಿಯಲ್ಲಿದ್ದರೆ 25,000 ರೂ. ವರೆಗೆ ಹೊಸ ಡಿವೈಸ್‌ಗಳಿಗೆ ರಿಯಾಯಿತಿ ಲಭ್ಯವಾಗುತ್ತದೆ.

Best Mobiles in India

English summary
Amazon announces dates of Great Republic Day Sale.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X