ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ ಡೇಟ್‌ ಫಿಕ್ಸ್‌! ಗ್ರಾಹಕರಿಗೆ ಬಂಪರ್‌ ಆಫರ್‌!

|

ಪ್ರಸ್ತುತ ದಿನಗಳಲ್ಲಿ ಆನ್‌ಲೈನ್‌ ಶಾಪಿಂಗ್‌ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆನ್‌ಲೈನ್‌ ಶಾಪಿಂಗ್‌ ಮಾಡುವುದು ಒಂದು ಹವ್ಯಾಸವಾಗಿ ಬದಲಾಗಿದೆ. ಇದಕ್ಕೆ ಇ-ಕಾಮರ್ಸ್‌ ಸೈಟ್‌ಗಳು ನೀಡುವ ಡಿಸ್ಕೌಂಟ್‌ ಆಫರ್‌ ಸೇಲ್‌ಗಳು ಕೂಡ ಕಾರಣವಾಗಿದೆ. ಅದರಲ್ಲೂ ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ತನ್ನ ಗ್ರಾಹಕರಿಗಾಗಿ ಒಂದಿಲ್ಲೊಂದು ಸೇಲ್‌ ನಡೆಸುತ್ತಲೇ ಬಂದಿದೆ. ಇದೀಗ ದೇಶದಲ್ಲಿ ಸ್ವಾತಂತ್ಯೋತ್ಸವದ ಸಂಭ್ರಮದ ಪ್ರಯುಕ್ತ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ ಅಯೋಜಿಸಲು ಸಿದ್ಧತೆ ನಡೆಸಿದೆ. ಅಲ್ಲದೆ ಈ ಸೇಲ್‌ ಯಾವಾಗ ಪ್ರಾರಂಭವಾಗಲಿದೆ ಹಾಗೂ ಡಿಸ್ಕೌಂಟ್‌ ಏನಿರಲಿದೆ ಅನ್ನೊದರ ವಿವರವನ್ನು ಬಹಿರಂಗಪಡಿಸಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ ಡೇಟ್‌ ಬಹಿರಂಗಪಡಿಸಿದೆ. ಈ ಸೇಲ್‌ ಭಾರತದಲ್ಲಿ ಇದೇ ಆಗಸ್ಟ್ 6 ರಿಂದ ಆಗಸ್ಟ್ 10 ರ ನಡುವೆ ನಡೆಯಲಿದೆ. ಇನ್ನು ಈ ಸೇಲ್‌ ವಿವಿಧ ವಿಭಾಗಗಳಿಂದ ಹಲವಾರು ಉತ್ಪನ್ನಗಳ ಮೇಲೆ ರಿಯಾಯಿತಿಗಳನ್ನು ನೀಡಲಿದೆ. ಅಲ್ಲದೆ ಈ ಸೇಲ್‌ ಸಮಯದಲ್ಲಿ ಹಲವು ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗುವ ಸಾಧ್ಯತೆ ಕೂಡ ಇದೆ. ಅಲ್ಲದೆ ಹೊಸದಾಗಿ ಬಿಡುಗಡೆ ಆಗಿರುವ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ಟಿವಿಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟ್‌ಗಳ ಮೇಲೆ ರಿಯಾಯಿತಿಗಳನ್ನು ಒಳಗೊಂಡಿದೆ.

ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌

ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ ಈ ಭಾರಿಯ ಸ್ವಾತಂತ್ರೋತ್ಸವದ ಸಂಭ್ರಮವನ್ನು ಇಮ್ಮಡಿಗೊಳಿಸುವುದು ಖಂಡಿತ. ಏಕೆಂದರೆ ಇತ್ತೀಚಿಗೆ ಮಾರುಕಟ್ಟೆಗೆ ಎಂಟ್ರಿ ನೀಡಿರುವ ಹಲವು ಜನಪ್ರಿಯ ಡಿವೈಸ್‌ಗಳನ್ನು ನೀವು ಡಿಸ್ಕೌಂಟ್‌ನಲ್ಲಿ ಖರೀದಿಸಲು ಅವಕಾಶ ಸಿಗಲಿದೆ. ಜೊತೆಗೆ ಆಯ್ದ ಪ್ರಾಡಕ್ಟ್‌ಗಳ ಮೇಲೆ ಎಸ್‌ಬಿಐ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸುವವರಿಗೆ ಭರ್ಜರಿ ಡಿಸ್ಕೌಂಟ್‌ ಹಾಗೂ ಕ್ಯಾಶ್‌ಬ್ಯಾಕ್‌ ಆಫರ್‌ ಕೂಡ ಲಭ್ಯವಾಗಲಿದೆ. ಹಾಗಾದ್ರೆ ಅಮೆಜಾನ್‌ ಪ್ರೀಡಂ ಫೆಸ್ಟಿವಲ್ ಸೇಲ್‌ನಲ್ಲಿ ಏನೆಲ್ಲಾ ಆಫರ್‌ ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್‌ ಗ್ರೇಟ್‌ ಪ್ರೀಡಂ ಫೆಸ್ಟಿವಲ್‌ ಸೇಲ್‌

ಅಮೆಜಾನ್‌ ಗ್ರೇಟ್‌ ಪ್ರೀಡಂ ಫೆಸ್ಟಿವಲ್‌ ಸೇಲ್‌

ಭಾರತದಲ್ಲಿ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‌ ಇದೇ ಆಗಸ್ಟ್ 6 ರಿಂದ ಆಗಸ್ಟ್ 10 ರ ನಡುವೆ ನಡೆಯಲಿದೆ. ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಮಯದಲ್ಲಿ ಈ ಸೇಲ್‌ ಮರಳಿರುವುದು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇಡೀ ದೇಶವೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿ ಮುಳಗಿದೆ. ಇದಕ್ಕಾಗಿ ಈಗಾಗಲೇ ಅನೇಕ ಸಿದ್ಧತೆಗಳು ನಡೆದಿವೆ. ಇದೇ ಸನ್ನಿವೇಶದಲ್ಲಿ ಅಮೆಜಾನ್‌ ತನ್ನ ಗ್ರಾಹಕರಿಗೆ ವಿಶೇಷ ಆಫರ್‌, ಡಿಸ್ಕೌಂಟ್‌ಗಳ ಜೊತೆಗೆ ಬ್ಯಾಂಕ್‌ ಆಫರ್‌ಗಳನ್ನು ಹೊತ್ತು ತಂದಿದೆ.

ಬ್ಯಾಂಕ್‌ ಆಫರ್‌ ಏನಿರಲಿದೆ!

ಬ್ಯಾಂಕ್‌ ಆಫರ್‌ ಏನಿರಲಿದೆ!

ಈ ಸೇಲ್‌ ಸಮಯದಲ್ಲಿ ಖರೀದಿದಾರರು ಆಯ್ದ ಪ್ರಾಡಕ್ಟ್‌ಗಳ ಮೇಲೆ SBI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಬಳಸುವವರು ವಿಶೇಷ ಡಿಸ್ಕೌಂಟ್‌ ಪಡೆಯಲಿದ್ದಾರೆ. ಅಂದರೆ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಬಳಸಿ ಖರೀದಿಸಿರೆ ನಿಮಗೆ 10% ಡಿಸ್ಕೌಂಟ್‌ ಲಭ್ಯವಾಗಲಿದೆ. ಇದಲ್ಲದೆ ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ ಹೊಸದಾಗಿ ಖರೀದಿಮಾಡುವವರು ಅಂದರೆ ಮೊದಲ-ಬಾರಿ ಖರೀದಿಗೆ 10% ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಇದಲ್ಲದೆ ನೋ ಕಾಸ್ಟ್‌ ಇಎಂಐ ಆಯ್ಕೆಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

ಡಿಸ್ಕೌಂಟ್‌ನಲ್ಲಿ ಏನೆಲ್ಲಾ ಸಿಗಲಿದೆ!

ಡಿಸ್ಕೌಂಟ್‌ನಲ್ಲಿ ಏನೆಲ್ಲಾ ಸಿಗಲಿದೆ!

ಅಮೆಜಾನ್ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಪರಿಕರಗಳ ಮೇಲೆ 40% ರಷ್ಟು ರಿಯಾಯಿತಿಯನ್ನು ನೀಡಲಿದೆ. ಇದರಲ್ಲಿ ಕೆಲವು ಎಂಟ್ರಿ ಲೆವೆಲ್‌ ಸ್ಮಾರ್ಟ್‌ಫೋನ್‌ಗಳು ನಿಮಗೆ ಕೇವಲ 6,599 ರೂ.ಗಳಿಗೆ ಲಭ್ಯವಾಗಲಿವೆ. ಇದಲ್ಲದೆ ಈ ಫ್ರೀಡಂ ಫೆಸ್ಟಿವಲ್ ಸೇಲ್‌ನಲ್ಲಿ ಹಲವು ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗಲಿವೆ. ಅಲ್ಲದೆ ಫ್ರೀಡಂ ಫೆಸ್ಟಿವಲ್‌ ಸೇಲ್‌ನಲ್ಲಿ ಮಾರಾಟಕ್ಕೆ ಬರಲಿವೆ. ಇದರಲ್ಲಿ ಒನ್‌ಪ್ಲಸ್‌ 10T ಮತ್ತು ಐಕ್ಯೂ 9T ಸ್ಮಾರ್ಟ್‌ಫೋನ್‌ಗಳು ಸೇರಿವೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಇದೇ ಆಗಸ್ಟ್‌ 3 ರಂದು ಬಿಡುಗಡೆಯಾಗಲಿವೆ. ಅಲ್ಲದೆ ಈ ಸೇಲ್‌ನಲ್ಲಿ ಅಮೆಜಾನ್‌ನಲ್ಲಿ ಪ್ರತ್ಯೇಕವಾಗಿ ಮಾರಾಟವಾಗಲಿದೆ.

ಅಮೆಜಾನ್‌

ಇನ್ನು ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ರೆಡ್ಮಿ K50i 5G ಸ್ಮಾರ್ಟ್‌ಫೋನ್‌ ಕೇವಲ 20,999ರೂ.ಬೆಲೆಗೆ ದೊರೆಯಲಿದೆ. ಈ ಬೆಲೆ ಕಾರ್ಡ್ ರಿಯಾಯಿತಿಗಳು ಮತ್ತು ವಿನಿಮಯ ಕೊಡುಗೆಗಳ ನಂತರದ ಬೆಲೆಯಾಗಿದೆ. ಇದಲ್ಲದೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13, ಐಕ್ಯೂ ನಿಯೋ 6 5G, ಟೆಕ್ನೋ ಕ್ಯಾಮನ್‌ 19 ನಿಯೋ ಮತ್ತು ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ಗಳು ಕೂಡ ಈ ಸೇಲ್‌ನಲ್ಲಿ ಡಿಸ್ಕೌಂಟ್‌ನಲ್ಲಿ ದೊರೆಯಲಿವೆ. ಖರೀದಿದಾರರು ಈ ಡಿವೈಸ್‌ಗಳ ಮೇಲೆ ಕ್ರೆಡಿಟ್‌ ಕಾರ್ಡ್‌ ಕಾರ್ಡ್ ರಿಯಾಯಿತಿಗಳನ್ನು ನಿರೀಕ್ಷಿಸಬಹುದು. ಜೊತೆಗೆ ಸ್ಮಾರ್ಟ್‌ಫೋನ್ ಖರೀದಿಯಲ್ಲಿ ನೋ-ಕಾಸ್ಟ್ EMI ಆಯ್ಕೆಯನ್ನು ಕೂಡ ಸಹ ಪಡೆಯಬಹುದು.

ಅಮೆಜಾನ್‌

ಅಮೆಜಾನ್‌ ಗ್ರೇಟ್‌ ಪ್ರೀಡಂ ಫೆಸ್ಟಿವಲ್‌ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲ ಸ್ಮಾರ್ಟ್‌ವಾಚ್‌ಗಳು, ಗೇಮಿಂಗ್ ಪರಿಕರಗಳು, TWS ಇಯರ್‌ಬಡ್‌ಗಳು ಮತ್ತು ಕ್ಯಾಮೆರಾಗಳ ಮೇಲೆ ಕೂಡ ರಿಯಾಯಿತಿಗಳು ದೊರೆಯಲಿದೆ. ಅದರಂತೆ ಈ ಸೇಲ್‌ನಲ್ಲಿ ಬೋಟ್‌ ಏರ್‌ಡ್ರಾಪ್ಸ್‌ 121 ಪ್ರೊ TWS ಇಯರ್‌ಬಡ್ಸ್‌ ಮತ್ತು ಗೊಪ್ರೋ ಹಿರೋ 10 ಸೇರಿದಂತೆ ಹೊಸದಾಗಿ ಬಿಡುಗಡೆಯಾದ ಗ್ಯಾಜೆಟ್ಸ್‌ಗಳ ಮೇಲೆ ರಿಯಾಯತಿ ದೊರೆಯಲಿದೆ. ಜೊತೆಗೆ ಅಮೆಜಾನ್ ಅಲೆಕ್ಸಾ, ಕಿಂಡಲ್ ಮತ್ತು ಫೈರ್ ಟಿವಿ ಸ್ಟಿಕ್‌ನಂತಹ ಸ್ಮಾರ್ಟ್ ಹೋಮ್ ಡಿವೈಸ್‌ಗಳಲ್ಲಿ 45% ಡಿಸ್ಕೌಂಟ್‌ ಅನ್ನು ಪಡೆದುಕೊಳ್ಳಬಹುದಾಗಿದೆ.

ಅಮೆಜಾನ್‌

ಇನ್ನು ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ನಲ್ಲಿ ಲ್ಯಾಪ್‌ಟಾಪ್‌ಗಳ ಮೇಲೆ ಕೂಡ ವಿಶೇಷ ರಿಯಾಯಿತಿಯನ್ನು ಘೋಷಿಸಲಾಗಿದೆ. ಇದರಲ್ಲಿ ಖರೀದಿದಾರರು ಕೆಲವು ನೋಟ್‌ಬುಕ್‌ಗಳ ಮೇಲೆ 40,000 ರೂ.ವರೆಗೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಸೇಲ್‌ನಲ್ಲಿ ಹೆಚ್‌ಪಿ ವಿಕ್ಟಸ್‌ 2022 ಮಾಡೆಲ್ ಮತ್ತು LG ಗ್ರಾಮ್ ಸರಣಿಯಂತಹ ಕೆಲವು ಹೊಸ ಲಾಂಚ್ ಲ್ಯಾಪ್‌ಟಾಪ್‌ಗಳು ಡಿಸ್ಕೌಂಟ್‌ನಲ್ಲಿ ಸೇಲ್‌ ಆಗಲಿವೆ. ಭಾರತದಲ್ಲಿ ಅಮೆಜಾನ್‌ ತನ್ನ ವಿಶೇಷ ಸೇಲ್‌ಗಳ ಮೂಲಕ ಗಮನ ಸೆಳೆಯುತ್ತಲೇ ಬಂದಿದೆ. ಭಾರತದಲ್ಲಿ ಅಮೆಜಾನ್‌ನ ದೊಡ್ಡ ಸ್ಪರ್ಧೆ ಎಂದರೆ ಫ್ಲಿಪ್‌ಕಾರ್ಟ್. ನಿರೀಕ್ಷೆಯಂತೆ, ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಸಮಯದಲ್ಲಿ ಫ್ಲಿಪ್‌ಕಾರ್ಟ್ ತನ್ನ ಸೂಪರ್ ಸೇವಿಂಗ್ ಡೇಸ್ ಸೇಲ್‌ ಅನ್ನು ಆಗಸ್ಟ್ 6 ರಿಂದ ಪ್ರಾರಂಭಿಸುತ್ತಿದೆ. ಈ ಮೂಲಕ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ತಾಣಗಳಲ್ಲಿ ವಿಶೇಷ ಡಿಸ್ಕೌಂಟ್‌ಗಳನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

Most Read Articles
Best Mobiles in India

English summary
Amazon Freedom Sale Is Just Around The Corner: Checkout The Top Deals

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X