ಡಿಸ್ಕೌಂಟ್‌ನಲ್ಲಿ ಗ್ಯಾಜೆಟ್ಸ್‌ ಖರೀದಿಸಬೇಕೆ?.ಹಾಗಿದ್ರೆ ಇದೇ ಸೆ.29ರ ವರೆಗೂ ಕಾಯಿರಿ!

|

ಪ್ರತಿಷ್ಠಿತ ಇ-ಕಾಮರ್ಸ್‌ ತಾಣಗಳಲ್ಲಿ ಏನಾದರೂ ವಿಶೇಷ ಸೇಲ್ ಆಯೋಜಿಸಿದಾಗ ಭರ್ಜರಿ ಆಫರ್ ಸಿಗಲಿದೆ ಎನ್ನುವುದು ಗೊತ್ತಿರುವ ಸಂಗತಿಯೇ ಸರಿ. ಆದರೆ ಜನಪ್ರಿಯ ಇ ಕಾಮರ್ಸ್‌ ತಾಣ 'ಅಮೆಜಾನ್' ಆಯೋಜಿಸುವ 'ಗ್ರೇಟ್‌ ಇಂಡಿಯನ್ ಫೆಸ್ಟಿವಲ್' ಸೇಲ್ ಅಂದರೇ ಅದು ಆನ್‌ಲೈನ್‌ ಶಾಪಿಂಗ್ ಪ್ರಿಯರಿಗೆ ಜಾತ್ರೆಯ ಸಂಭ್ರಮ. ಗ್ರಾಹಕರಿಗೆ ಖುಷಿ ನೀಡುವ ಅಮೆಜಾನ್ 'ಗ್ರೇಟ್‌ ಇಂಡಿಯನ್ ಫೆಸ್ಟಿವಲ್' ಮೇಳವಿಗ ಮತ್ತೆ ಬಂದಿದೆ.

ಗ್ರೇಟ್ ಇಂಡಿಯನ್ ಫೆಸ್ಟ್‌ವಲ್

ಹೌದು, ಇ ಕಾಮರ್ಸ್ ದೈತ್ಯ ಅಮೆಜಾನ್ ಆಯೋಜಿಸುವ 'ಗ್ರೇಟ್ ಇಂಡಿಯನ್ ಫೆಸ್ಟ್‌ವಲ್' ಸೇಲ್ ಮೇಳವು ಇದೀಗ ಮತ್ತೆ ಶುರುವಾಗಲಿದೆ. ಈ ಸೇಲ್ ಮೇಳವು ಇದೇ ಸೆಪ್ಟೆಂಬರ್ 29ರಂದು ಆರಂಭವಾಗಲಿದ್ದು, ಇದೇ ಅಕ್ಟೋಬರ್ 4ರ ವರೆಗೂ ನಡೆಯಲಿದೆ. ಈ ಅವಧಿಯಲ್ಲಿ ಗ್ಯಾಜೆಟ್‌ಗಳು ಸೇರಿದಂತೆ ಗೃಹ ಬಳಕೆಯ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಮತ್ತು ಹೋಮ್ ಅಪ್ಲೇಯನ್ಸ್‌ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ಸಿಗಲಿದೆ. ಹಾಗಾದರೇ ಅಮೆಜಾನ್ 'ಗ್ರೇಟ್ ಇಂಡಿಯನ್ ಫೆಸ್ಟ್‌ವಲ್' ಮೇಳದ ಆಫರ್‌ಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಟಾಟಾಸ್ಕೈ, ಡಿಶ್‌ಟಿವಿ ಸಂಸ್ಥೆಗಳಿಂದ ಉಚಿತ ಹೆಚ್ಚುವರಿ ಸೇವೆ!.ಇಲ್ಲಿದೆ ಮಾಹಿತಿ!ಓದಿರಿ : ಟಾಟಾಸ್ಕೈ, ಡಿಶ್‌ಟಿವಿ ಸಂಸ್ಥೆಗಳಿಂದ ಉಚಿತ ಹೆಚ್ಚುವರಿ ಸೇವೆ!.ಇಲ್ಲಿದೆ ಮಾಹಿತಿ!

ರಿಯಾಯಿತಿ ಮತ್ತು ಆಫರ್

ರಿಯಾಯಿತಿ ಮತ್ತು ಆಫರ್

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಮೇಳದಲ್ಲಿ ಗ್ರಾಹಕರಿಗೆ ಅನೇಕ ಫೈನಾಶ್ಸಿಯಲ್ ಆಯ್ಕೆಗಳು ದೊರೆಯಲಿವೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ ಬಳಸಿ ನೋ ಕಾಸ್ಟ್‌ ಇಎಮ್‌ಐ ಆಯ್ಕೆ, ಬಜಾಜ್ ಫೀನ್‌ಸರ್ವ್ ನಲ್ಲಿಯೂ ಕ್ರೆಡಿಟ್ ಆಯ್ಕೆ ಸಿಗಲಿದೆ. ಎಸ್‌ಬಿಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿಸಿದರೇ ಶೇ.10% ಇನ್‌ಸ್ಟಂಟ್ ಡಿಸ್ಕೌಂಟ್‌ ಲಭ್ಯವಾಗಲಿದೆ. ಇದರೊಂದಿಗೆ ಎಕ್ಸ್‌ಚೇಂಜ್ ಆಫರ್ ಸಹ ಗ್ರಾಹಕರಿಗೆ ಸಿಗಲಿದೆ.

ಓದಿರಿ : 'ಗ್ಯಾಲ್ಯಾಕ್ಸಿ M30s' ಬಿಡುಗಡೆ!..ಖರೀದಿಗೆ ಜನರು ಮುಗಿ ಬೀಳುವುದು ಪಕ್ಕಾ!ಓದಿರಿ : 'ಗ್ಯಾಲ್ಯಾಕ್ಸಿ M30s' ಬಿಡುಗಡೆ!..ಖರೀದಿಗೆ ಜನರು ಮುಗಿ ಬೀಳುವುದು ಪಕ್ಕಾ!

ಸ್ಮಾರ್ಟ್‌ಫೋನ್‌ಗಳಿಗೆ ಬೆಸ್ಟ್‌ ಆಫರ್

ಸ್ಮಾರ್ಟ್‌ಫೋನ್‌ಗಳಿಗೆ ಬೆಸ್ಟ್‌ ಆಫರ್

ಶುರುವಾಗಲಿರುವ ಅಮೆಜಾನ್ ಗ್ರೇಟ್‌ ಇಂಡಿಯನ್ ಫೆಸ್ಟಿವಲ್ ಸೇಲ್ ಮೇಳದಲ್ಲಿ ಸ್ಮಾರ್ಟ್‌ಫೋನ್‌ ಗಳಿಗೆ ಶೇ.40%ರಷ್ಟು ಡಿಸ್ಕೌಂಟ್‌ ದೊರೆಯಲಿದೆ. ಹೊಸದಾಗಿ ಲಾಂಚ್ ಆಗಿರುವ ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ40ಎಸ್, ವಿವೋ U1, ಶಿಯೋಮಿ A3, ಒನ್‌ಪ್ಲಸ್‌ 7T ಸ್ಮಾರ್ಟ್‌ಫೋನ್‌ಗಳು ಲಭ್ಯವಾಗಲಿವೆ. ಸುಮಾರು 6,000ರೂ ವರೆಗೂ ಎಕ್ಸ್‌ಚೇಂಜ್ ರಿಯಾಯಿತಿ ಸಿಗಲಿದ್ದು, ಬ್ಲೂಟೂತ್ ಹೆಡ್‌ಫೋನ್‌ಗಳ ಮೇಲೆ ಶೇ.70%ರಷ್ಟು ವಿಶೇಷ ರಿಯಾಯಿತಿ ಸಹ ದೊರೆಯಲಿದೆ.

ಲ್ಯಾಪ್‌ಟಾಪ್‌ ಮತ್ತು ಸ್ಪೀಕರ್‌ ಆಫರ್

ಲ್ಯಾಪ್‌ಟಾಪ್‌ ಮತ್ತು ಸ್ಪೀಕರ್‌ ಆಫರ್

ಅಮೆಜಾನ್ ಗ್ರೇಟ್‌ ಇಂಡಿಯನ್ ಫೆಸ್ಟಿವಲ್ ಸೇಲ್ ಮೇಳದಲ್ಲಿ ಲ್ಯಾಪ್‌ಟಾಪ್‌ ಮತ್ತು ಸ್ಪೀಕರ್ಸ್‌ಗಳ ಮೇಲೆ ಭರ್ಜರಿ ಡೀಲ್‌ಗಳನ್ನು ಅಮೆಜಾನ್ ನೀಡಲಿದೆ. ಲ್ಯಾಪ್‌ಟಾಪ್‌ಗಳ ಮೇಲೆ ಸುಮಾರು 40,000ರೂ ಕಡಿತ ಮಾಡಲಿದ್ದು, ಜೊತೆಗೆ 12 ತಿಂಗಳ ನೋ ಕಾಸ್ಟ್‌ ಇಎಮ್‌ಐ ಆಯ್ಕೆ ನೀಡಲಿದೆ. ಹಾಗೆಯೇ ಸ್ಪೀಕರ್ಸ್‌ಗಳಿಗೆ ಶೇ.60% ರಷ್ಟು ರಿಯಾಯಿತಿ ಲಭ್ಯವಾಗಲಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್‌ಗಳಿಗೆ ಶೇ.50% ರಷ್ಟು ಡಿಸ್ಕೌಂಟ್‌ ನೀಡಲಿದೆ.

ಓದಿರಿ : ಆನ್‌ಲೈನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್‌ ಪಡೆಯಲು ಈ ದಾಖಲಾತಿಗಳು ಅಗತ್ಯ!ಓದಿರಿ : ಆನ್‌ಲೈನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್‌ ಪಡೆಯಲು ಈ ದಾಖಲಾತಿಗಳು ಅಗತ್ಯ!

ಸ್ಮಾರ್ಟ್‌ಟಿವಿಗಳಿಗೂ ಆಫರ್‌

ಸ್ಮಾರ್ಟ್‌ಟಿವಿಗಳಿಗೂ ಆಫರ್‌

ಗ್ರಾಹಕರು ಕುತೂಹಲದಿಂದ ಕಾಯುತ್ತಿರುವ ಅಮೆಜಾನ್ ಗ್ರೇಟ್‌ ಇಂಡಿಯನ್ ಫೆಸ್ಟಿವಲ್ ಸೇಲ್ ಮೇಳದಲ್ಲಿ ಸ್ಮಾರ್ಟ್‌ಟಿವಿಗಳಿಗೆ ಮತ್ತು ವಾಶಿನ್‌ಮಿಷಿನ್‌ ಉತ್ಪನ್ನಗಳಿಗೆ ಶೇ.70%ರಷ್ಟು ಡಿಸ್ಕೌಂಟ್ ಲಭ್ಯವಾಗಲಿದೆ. 4K ಮಾದರಿಯ ಟಿವಿಗಳಿಗೆ ಶೇ.50% ಹಾಗೂ 32 ಇಂಚಿನ ಟಿವಿಗಳಿಗೆ ಶೇ.40% ವಿಶೇಷ ರಿಯಾಯಿತಿ ದೊರೆಯಲಿದ್ದು, ಇದರೊಂದಿಗೆ ನೋ ಕಾಸ್ಟ್‌ ಇಎಮ್‌ಐ ಮತ್ತು ಎಕ್ಸ್‌ಚೇಂಜ್ ಕೊಡುಗೆಗಳು ಸಹ ಸೇರಿರಲಿವೆ.

ಅಮೆಜಾನ್ ಉತ್ಪನ್ನಗಳಿಗೂ ಆಫರ್‌

ಅಮೆಜಾನ್ ಉತ್ಪನ್ನಗಳಿಗೂ ಆಫರ್‌

ಅಮೆಜಾನ್ ಗ್ರೇಟ್‌ ಇಂಡಿಯನ್ ಫೆಸ್ಟಿವಲ್ ಸೇಲ್ ಮೇಳದಲ್ಲಿ ಅಮೆಜಾನ್ ಉತ್ಪನ್ನಗಳಾದ ಅಮೆಜಾನ್ ಫೈರ್‌ಸ್ಟಿಕ್, ಇಕೋ ಸ್ಮಾರ್ಟ್ ಸ್ಪೀಕರ್ಸ್ ಸೇರಿದಂತೆ ಇತರೆ ಡಿವೈಸ್‌ಗಳಿಗೂ ಶೇ.45% ರಷ್ಟು ಡಿಸ್ಕೌಂಟ್‌ ನೀಡಲಿದೆ. ಇಕೋ ಶೋ 5 ಡಿವೈಸ್‌ ಖರೀದಿಯ ಮೇಲೆ ಶೇ.35% ರಷ್ಟು ಡಿಸ್ಕೌಂಟ್ ಲಭ್ಯವಾಗಲಿದೆ.

ಓದಿರಿ : ಫೋನಿನಲ್ಲಿ 'ಗೂಗಲ್‌ ಸರ್ಚ್' ಬಳಸಲು ಇಂಟರ್ನೆಟ್‌ ಬೇಕಾಗಿಯೇ ಇಲ್ಲ! ಓದಿರಿ : ಫೋನಿನಲ್ಲಿ 'ಗೂಗಲ್‌ ಸರ್ಚ್' ಬಳಸಲು ಇಂಟರ್ನೆಟ್‌ ಬೇಕಾಗಿಯೇ ಇಲ್ಲ!

ಓದಿರಿ : ಟಾಟಾಸ್ಕೈ, ಡಿಶ್‌ಟಿವಿ ಸಂಸ್ಥೆಗಳಿಂದ ಉಚಿತ ಹೆಚ್ಚುವರಿ ಸೇವೆ!.ಇಲ್ಲಿದೆ ಮಾಹಿತಿ!ಓದಿರಿ : ಟಾಟಾಸ್ಕೈ, ಡಿಶ್‌ಟಿವಿ ಸಂಸ್ಥೆಗಳಿಂದ ಉಚಿತ ಹೆಚ್ಚುವರಿ ಸೇವೆ!.ಇಲ್ಲಿದೆ ಮಾಹಿತಿ!

Best Mobiles in India

English summary
Amazon is Great Indian Festival on its platform in India from September 29 and October 4. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X