TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಫ್ಲಿಪ್‌ಕಾರ್ಟ್ ಸೇಲ್ ದಿನವೇ ಅಮೆಜಾನ್ ಸೇಲ್: ಯಾರಿಗುಂಟು ಯಾರಿಗಿಲ್ಲ..!
ಹಬ್ಬದ ಶಾಪಿಂಗ್ ನ ದಿನಗಳು ಹತ್ತಿರ ಬರುತ್ತಿದೆ. ಅದಕ್ಕಾಗಿ ಆನ್ ಲೈನ್ ಶಾಪಿಂಗ್ ಮಳಿಗೆಗಳೂ ಕೂಡ ಜಿದ್ದಿಗೆ ಬಿದ್ದು ಸೀಸನ್ ಸೇಲ್ ನ್ನು ಆರಂಭಿಸುತ್ತಿವೆ. ಈಗಾಗಲೇ ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇ ಸೇಲ್ ಅಕ್ಟೋಬರ್ 10 ರಂದು ಆರಂಭವಾಗುತ್ತದೆ ಎಂದು ತಿಳಿದ ಬೆನ್ನಲ್ಲೇ ಅಮೇಜಾನ್ ಕೂಡ ಗ್ರೇಟ್ ಇಂಡಿಯನ್ ಫೇಸ್ಟಿವಲ್ ಸೇಲ್ ಅನ್ನು ಅದೇ ದಿನ ಅಂದರೆ ಅಕ್ಟೋಬರ್ 10 ರಿಂದಲೇ ಆರಂಭಿಸುತ್ತಿದೆ.
ಆಫರ್ ಗಳ ಸುರಿಮಳೆ:
ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಅಮೇಜಾನ್ ಸೇಲ್-2018 ರಲ್ಲಿ ಭರ್ಜರಿ ರಿಯಾಯಿತಿಗಳು, ಪ್ರಮುಖ ವಸ್ತುಗಳ ಮೇಲೆ ಅದರಲ್ಲೂ ಸ್ಮಾರ್ಟ್ ಫೋನ್ ಗಳು, ಎಲ್ಇಡಿ ಟಿವಿಗಳು, ದೊಡ್ಡ ದೊಡ್ಡ ಎಲೆಕ್ಟ್ರಾನಿಕ್ ವಸ್ತುಗಳು, ಮನರಂಜನೆ ಸೇರಿದಂತೆ ಇತರೆ ಎಲ್ಲಾ ಕೆಟಗರಿಯ ವಸ್ತುಗಳ ಮೇಲೂ ಆಫರ್ ಗಳಿದೆ.
ಅಕ್ಟೋಬರ್ 10 ರಿಂದ 15 ರ ವರೆಗೆ:
ಅಮೇಜಾನ್ ನ ಗ್ರೇಟ್ ಇಂಡಿಯಲ್ ಫೆಸ್ಟಿವಲ್ ಸೇಲ್ ಅಕ್ಟೋಬರ್ 10 ರಿಂದ 15 ರ ವರೆಗೆ ನಡೆಯಲಿದೆ. ಅಮೇಜಾನ್ ನಲ್ಲಿ ಎಲ್ಲಾ ಕೆಟಗರಿಯ ಪ್ರೊಡಕ್ಟ್ ಗಳ ಮೇಲಿನ ರಿಯಾಯಿತಿ ಮಾರಾಟವನ್ನು ಮೊದಲ ದಿನದಿಂದಲೇ ಆರಂಭಿಸಲಾಗುತ್ತದೆ. ಆದರೆ ಪ್ರೈಮ್ ಸದಸ್ಯರು ಈ ಆಫರ್ ಮತ್ತು ಡೀಲ್ ಗಳನ್ನು ಸಹಜ ಗ್ರಾಹಕರಿಗಿಂತ ಸ್ವಲ್ಪ ಮುಂಚಿತವಾಗಿ ಆಕ್ಸಿಸ್ ಮಾಡಲು ಅವಕಾಶವಿರುತ್ತದೆ.
ಪೇಮೆಂಟ್ ಆಫರ್ ಗಳು:
ಅಮೇಜಾನ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ಕೈಜೋಡಿಸಿದ್ದು ಶೇಕಡಾ 10 ರ ಇನ್ಸ್ ಟೆಂಟ್ ರಿಯಾಯಿತಿಯನ್ನು ಈ ಬ್ಯಾಂಕಿನ ಡೆಬಿಟ್ ಕಾರ್ಡ್ ಬಳಕೆದಾರರಿಗೆ ನೀಡುತ್ತದೆ. ಅಮೇಜಾನ್ ಪೇ ಬಳಕೆದಾರರೂ ಕೂಡ ಕ್ಯಾಷ್ ಬ್ಯಾಕ್ ಆಫರ್ ಗಳನ್ನು ಈ ಸೇಲ್ ನಲ್ಲಿ ಪಡೆಯಲಿದ್ದಾರೆ. ಅಮೇಜಾನ್ ಪೇ ಬಳಕೆದಾರರು ತಮ್ಮ ಅಕೌಂಟಿಗೆ 3000 ರುಪಾಯಿಯನ್ನು ಸೇರಿಸಿದರೆ ಅವರಿಗೂ ಕೂಡ 300 ರುಪಾಯಿಯ ಇನ್ಸ್ ಟೆಂಟ್ ಕ್ಯಾಷ್ ಬ್ಯಾಕ್ ಸೌಲಭ್ಯವಿರುತ್ತದೆ. ಇನ್ನು ಹಲವಾರು ಪೇಮೆಂಟ್ ಆಯ್ಕೆಗಳನ್ನು ಅಮೇಜಾನ್ ಈ ಬಾರಿಯ ಸೇಲ್ ನಲ್ಲಿ ನೀಡಲಿದೆ.
ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ಏನನ್ನು ನಿರೀಕ್ಷಿಸಬಹುದು?
ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ರೆಗ್ಯುಲರ್ ಡಿಸ್ಕೌಂಟ್ ಮತ್ತು ಲಿಮಿಟೆಡ್ ಪಿರೇಡ್ ಡಿಸ್ಕೌಂಟ್ ಗಳು ಇರಲಿದೆ. ಅಮೇಜಾನ್ ಗೆ ನೀವು ಹೊಸ ವ್ಯಕ್ತಿಯಾಗಿದ್ದರೆ ಲಿಮಿಟೆಡ್ ಪಿರೇಡ್ ರಿಯಾಯಿತಿ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಲಿಮಿಟೆಡ್ ಪಿರೇಡ್ ರಿಯಾಯಿತಿ ಎಂದರೆ ಕೆಲವು ವಸ್ತುಗಳಿಗೆ ಅಲ್ಪಾವಧಿಯ ರಿಯಾಯಿತಿ ದರವನ್ನು ನಿಗದಿ ಮಾಡಲಾಗಿರುತ್ತದೆ ಎಂದರ್ಥ. ಒಂದು ರೀತಿಯಲ್ಲಿ ಇದು ಫ್ಲ್ಯಾಶ್ ಸೇಲ್ ಎಂದೇ ಹೇಳಬಹುದು. ನಿರ್ಧಿಷ್ಟ ಸಮಯದ ಒಳಗೆ ನೀವು ಪಾವತಿ ಮಾಡಿ ವಸ್ತುವನ್ನು ಖರೀದಿಸಬೇಕಾಗುತ್ತದೆ. ಕೆಲವೇ ನಿಮಿಷಗಳಲ್ಲಿ ಆ ವಸ್ತುಗಳು ಖಾಲಿಯಾಗಿ ಬಿಡುತ್ತದೆ.
ಎಲೆಕ್ಟ್ರಾನಿಕ್ ವಸ್ತುಗಳಿಗೆ 55% ರಿಯಾಯಿತಿ:
ಅಮೇಜಾನ್ ಹೇಳುವ ಪ್ರಕಾರ ಈ ಬಾರಿಯ ಸೇಲ್ ನಲ್ಲಿ ಭರ್ಜರಿ ರಿಯಾಯಿತಿಯನ್ನು ನೀಡಲಾಗುತ್ತದೆ. ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ 55 ಶೇಕಡಾದವರೆಗೆ ರಿಯಾಯಿತಿ, ಎಲ್ ಇಡಿ ಟಿವಿ ಸೇರಿದಂತೆ ಹಲವು ವಸ್ತುಗಳ ಮೇಲೆ ದೊಡ್ಡ ಮೊತ್ತದ ರಿಯಾಯಿತಿಯನ್ನು ಈ ಬಾರಿಯ ಸೇಲ್ ನಲ್ಲಿ ನಿರೀಕ್ಷೆ ಮಾಡಬಹುದು.
ಈಗಲೇ ಪಟ್ಟಿ ತಯಾರಿಸಿಕೊಳ್ಳಿ:
ಹಬ್ಬದ ಸೀಸನ್ ನ ರಿಯಾಯಿತಿಯನ್ನು ಪಡೆಯಬೇಕು ಎಂದರೆ ನಿಮ್ಮ ಶಾಪಿಂಗ್ ಪಟ್ಟಿ ಈಗಲೇ ತಯಾರಿಸಿಕೊಳ್ಳುವುದು ಒಳಿತು. ಆನ್ ಲೈನ್ ನಲ್ಲಿ ಅದೂ ಅಲ್ಲದೇ ಅಮೇಜಾನ್ ನಲ್ಲಿ ಖರೀದಿಸಬೇಕು ಎಂದುಕೊಳ್ಳುವ ವಸ್ತುವನ್ನು ಈಗಲೇ ನಿಮ್ಮ ವಿಷ್ ಲಿಸ್ಟ್ ಗೆ ಸೇರಿಸಿಕೊಳ್ಳಿ. ನಂತರ ಅವುಗಳ ರೇಟ್ ನ್ನು ಟ್ರ್ಯಾಕ್ ಮಾಡಲು ಸುಲಭವಾಗುತ್ತದೆ. ಅಷ್ಟೇ ಅಲ್ಲದೆ ನಿಮ್ಮ ವಿಷ್ ಲಿಸ್ಟ್ ನಲ್ಲಿರುವ ವಸ್ತುವಿನ ಲೈಟನಿಂಗ್ ಡೀಲ್ ಗಳ ಬಗ್ಗೆ ಮತ್ತು ಬೆಲೆಯ ಬಗ್ಗೆ ನಿಮಗೆ ಆ ಮೂಲಕ ನೋಟಿಫಿಕೇಷನ್ ಕೂಡ ಲಭ್ಯವಾಗುತ್ತದೆ.
ಟಿವಿ, ಸ್ಪೀಕರ್ ಮತ್ತು ಇತರೆ ವಸ್ತುಗಳು:
ಅತೀ ಹೆಚ್ಚಿನ ಆಫರ್ ಗಳನ್ನು ಆನ್ ಲೈನ್ ನ ಈ ಸೀಸನ್ ಸೇಲ್ ನಲ್ಲಿ ನಿರೀಕ್ಷಿಸಿಬಹುದಾಗಿರುವ ಕೆಟಗರಿ ಎಂದರೆ ಅದು ಎಲೆಕ್ಟ್ರಾನಿಕ್ ವಸ್ತುಗಳು. ಹೌದು ಅಮೇಜಾನ್ ಹೇಳುವ ಪ್ರಕಾರ ಎಲೆಕ್ಟ್ರಾನಿಕ್ ವಸ್ತುಗಳಿಗೆ ರಿಯಾಯಿತಿ ದರ, ಎಕ್ಸ್ ಚೇಂಜ್ ಆಫರ್, ನೋ-ಕಾಸ್ಟ್ ಇಎಂಐ ಆಯ್ಕೆ ಸೇರಿದಂತೆ ಇನ್ನು ಹಲವಾರು ರೀತಿಯ ಆಫರ್ ಗಳನ್ನು ಈ ಬಾರಿಯ ಸೇಲ್ ನಲ್ಲಿ ನೀಡಲಾಗುತ್ತದೆಯಂತೆ.
ಲ್ಯಾಪ್ ಟಾಪ್ ಗಳಿಗೆ ಅತ್ಯುತ್ತಮ ಎಕ್ಸ್ ಚೇಂಜ್ ಆಯ್ಕೆ:
ಲ್ಯಾಪ್ ಟಾಪ್ ಗಳು 17,000 ರುಪಾಯಿ ವರೆಗೆ ಎಕ್ಸ್ ಚೇಂಜ್ ಆಫರ್ ಗಳಲ್ಲಿ ಲಭ್ಯವಿದೆ ಮತ್ತು ಇನ್ಸೆಂಟ್ ಡಿಸ್ಕೌಂಟ್ ಸೇರಿದಂತೆ ಹೆಚ್ಚುವರಿ 5 ಶೇಕಡಾ ರಿಯಾಯಿತಿ ಬೆಲೆಯು ಕೆಲವು ಪ್ರಮುಖ ಬ್ರ್ಯಾಂಡ್ ನ ಲ್ಯಾಪ್ ಟಾಪ್ ಗಳಿಗೆ ಲಭ್ಯವಿದೆಯಂತೆ.
ಶಿಯೋಮಿಯ ಹೊಸ ಎಂಐ ಟಿವಿ ಪ್ರೋ ಈ ಬಾರಿಯ ಸೇಲ್ ನಲ್ಲಿ ಲಭ್ಯವಾಗಲಿದೆ. ಆದರೆ ಇದು ರಿಯಾಯಿತಿಯಲ್ಲಿ ಲಭ್ಯವಾಗದೇ ಇರಬಹುದು. ಆದರೆ ಎಸ್ ಬಿಐ ಕಾರ್ಡ್ ಬಳಸಿ ಅಲ್ಪ ಮಟ್ಟಿಗೆ ಡಿಸ್ಕೌಂಟ್ ಪಡೆಯುವ ಸಾಧ್ಯತೆ ಇದೆ. ಪ್ರಿಂಟರ್ ಗಳಿಗೆ ಶೇಕಡಾ 50 ರ ವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ.
32 ಇಂಚಿನ ಎಲ್ ಜಿ ಸ್ಮಾರ್ಟ್ ಎಲ್ಇಡಿ ಟಿವಿ, ಜೆಬಿಲ್ ವಯರ್ ಲೆಸ್ ಸ್ಪೀಕರ್ ಗಳು, ಕೆನಾನ್ 1500 D DSLR, ಜೆಬಿಎಲ್ ಸಿನೆಮಾ ಸೌಂಡ್ ಬಾರ್, ಕೆನಾನ್ ಪಿಕ್ಸ್ಮಾ G2012 ಆನ್-ಇನ್-ಒನ್ ಪ್ರಿಂಟರ್ ಮತ್ತು ಇತರೆ ಹಲವು ವಸ್ತುಗಳು ರಿಯಾಯಿತಿಯಲ್ಲಿ ಲಭ್ಯ. ಸೇಲ್ ಆರಂಭಕ್ಕೂ ಮುನ್ನ ಇನ್ನಷ್ಟು ವಸ್ತುಗಳ ಮೇಲಿನ ರಿಯಾಯಿತಿಯ ಬಗ್ಗೆ ಅಮೇಜಾನ್ ಪ್ರಕಟ ಮಾಡುವ ಸಾಧ್ಯತೆ ಇದೆ.
ಮೊಬೈಲ್ ಫೋನ್ ಗಳ ಮೇಲೆ ಅಮೇಜಾನ್ ಡೀಲ್ ಗಳು:
ಹೆಚ್ಚಿನವರು ಸ್ಮಾರ್ಟ್ ಫೋನ್ ಹೊಸದಾಗಿ ಖರೀದಿಸಲು ಇಲ್ಲವೇ ಅವರ ಸ್ಮಾರ್ಟ್ ಫೋನ್ ನ್ನು ಅಪ್ ಗ್ರೇಡ್ ಮಾಡಿಕೊಳ್ಳಲು ಹಬ್ಬದ ಸೀಸನ್ ನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಯಾಕೆಂದರೆ ಈ ಸಂದರ್ಬದಲ್ಲಿ ಆನ್ ಲೈನ್ ಮಳಿಗೆಗಳು ಸ್ಮಾರ್ಟ್ ಫೋನ್ ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡುತ್ತದೆ. ಕೇವಲ ಉತ್ತಮ ಬೆಲೆ ಮಾತ್ರವಲ್ಲ ನಿಮ್ಮ ಹಳೆಯ ಫೋನ್ ನ್ನು ಮಾರಾಟ ಮಾಡಿ ಹೊಸ ಫೋನ್ ನ್ನು ಖರೀದಿಸಲು ಕೂಡ ಇಲ್ಲಿ ಉತ್ತಮ ಅವಕಾಶಗಳು ಹಬ್ಬದ ಈ ಸೀಸನ್ ಸೇಲ್ ನಲ್ಲಿ ಲಭ್ಯವಿದೆ.
ಓಪ್ಪೋ ಎಫ್9 ಪ್ರೋ ಮತ್ತು ರೆಡ್ಮಿ 6 ಪ್ರೋ ಗಳ ಮೇಲೆ ಈ ಸೇಲ್ ನಲ್ಲಿ ಎಕ್ಸ್ ಚೇಂಜ್ ಆಫರ್ ಇದೆ.ಶಿಯೋಮಿ ಎಂಐ ಎ2 ಹಿಂದೆಂದಿಗಿಂತಲೂ ಹೆಚ್ಚಿನ ರಿಯಾಯಿತಿ ಬೆಲೆಯಲ್ಲಿ ಈ ಸೇಲ್ ನಲ್ಲಿ ಲಭ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಹುವಾಯಿ ನೋವಾ 3ಐ ಮತ್ತು ಹಾನರ್ 7ಸಿ ಗೆ ಅತ್ಯುತ್ತಮ ಬೆಲೆ ನೀಡುವ ಭರವಸೆಯನ್ನು ಅಮೇಜಾನ್ ನೀಡಿದೆ. ಒನ್ ಪ್ಲಸ್ 6 ಗೂ ಕೂಡ ಈ ಬಾರಿಯ ಸೇಲ್ ನಲ್ಲಿ ಅಮೇಜಾನ್ ಫೆಸ್ಟೀವ್ ಸ್ಪೆಷಲ್ ಪ್ರೈಸ್ ನ್ನು ನೀಡಲಿದೆ ಎಂದು ಹೇಳಲಾಗಿದೆ. ಖಂಡಿತವಾಗ್ಲೂ ಈ ಎಲ್ಲಾ ಸ್ಮಾರ್ಟ್ ಫೋನ್ ಗಳನ್ನು ಈ ಫೇಸ್ಟೀವ್ ಸೇಲ್ ನಲ್ಲಿ ಖರೀದಿಸುವುದರಲ್ಲಿ ಲಾಭವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಗ್ರೇಟ್ ಇಂಡಿಯನ್ ಫೆಸ್ಟೀವ್ ಸೇಲ್- 2018 ರ ಇನ್ನಷ್ಟು ಡೀಲ್ ಗಳು :
ಅಮೇಜಾನ್ ನ ಸ್ವಂತ ಪ್ರೊಡಕ್ಟ್ ಗಳನ್ನು ಖರೀದಿಸಲು ಇದಕ್ಕಿಂತ ಉತ್ತಮ ಸಮಯ ಮತ್ತೊಂದಿಲ್ಲ ಎಂದರೆ ಅತಿಶಯೋಕ್ತಿ ಆಗಲಾರದು. ಅಮೇಜಾನ್ ಇಕೋ ಸ್ಮಾರ್ಟ್ ಸ್ಪೀಕರ್, ಫೈಯರ್ ಟಿವಿ ಸ್ಟಿಕ್ ಮತ್ತು ಕಿಂಡಲ್ ಇಬುಕ್ ರೀಡರ್ಸ್ ಗಳಿಗೆ ಅತ್ಯುತ್ತಮ ರಿಯಾಯಿತಿಯನ್ನು ಆಫರ್ ಮಾಡಲಿದೆ. ಹೊಸ ಇಕೋ ಸ್ಮಾರ್ಟ್ ಸ್ಪೀಕರ್ ಗಳನ್ನು ಖರೀದಿಸಲು ಇದು ಸುವರ್ಣಾವಕಾಶ.
ಬಿಗ್ ಸ್ಕ್ರೀನ್ ಟಿವಿಯನ್ನು ಹೆಚ್ಚಿನ ಮಂದಿ ಈ ಸಮಯದಲ್ಲೇ ಖರೀದಿಸುತ್ತಾರೆ. ಟಿವಿ ಮತ್ತು ಅಪ್ಲಯನ್ಸಸ್ ಗಳ ಮೇಲೆ ಶೇಕಡಾ 85 ರ ರಿಯಾಯಿತಿಯನ್ನು ಅಮೇಜಾನ್ ಈ ಬಾರಿಯ ಸೇಲ್ ನಲ್ಲಿ ನೀಡುವ ಬಗ್ಗೆ ಸೂಚನೆ ನೀಡಿದೆ. ನೋ-ಕಾಸ್ಟ್ ಇಎಂಐ ಆಯ್ಕೆಯಲ್ಲಿ ನಿಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಇದನ್ನು ಪಡೆದುಕೊಳ್ಳಬಹುದು. ನಿಮ್ಮ ಹಳೆಯ ಟಿವಿಯನ್ನು ಮತ್ತು ಇತರೆ ಕೆಲವು ಅಪ್ಲಯನ್ಸಸ್ ಗಳನ್ನು ಎಕ್ಸ್ ಚೇಂಜ್ ಮಾಡಿ 22,000 ರುಪಾಯಿ ವರೆಗಿನ ಇನ್ಸ್ ಟೆಂಟ್ ರಿಯಾಯಿತಿಯಲ್ಲಿ ಹೊಸ ವಸ್ತುಗಳನ್ನು ಖರೀದಿಸಬಹುದು. ಜೆಬಿಲ್ ಸ್ಪೀಕರ್ ಗಳು, ಬಿಗ್ ಸ್ಕ್ರೀನ್ ಟಿವಿಗಳನ್ನು ಖರೀದಿಸಲು ಖಂಡಿತ ಅಮೇಜಾನ್ ನ ಈ ಸೇಲ್ ಅತ್ಯುತ್ತಮ ಆಯ್ಕೆಯಾಗಲಿದೆ.