ಅಮೆಜಾನ್‌ ಸೇಲ್‌ನಲ್ಲಿ ಈ ಸ್ಮಾರ್ಟ್‌ವಾಚ್‌ಗಳಿಗೆ ಬಿಗ್‌ ಆಫರ್‌!

|

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಹಲವಾರು ಡಿವೈಸ್‌ಗಳಿಗೆ ಆಕರ್ಷಕ ರಿಯಾಯಿತಿ ನೀಡಲಾಗುತ್ತಿದೆ. ಹಬ್ಬಗಳ ಸೀಸನ್‌ನಲ್ಲಿ ನಡೆಯುತ್ತಿರುವ ಈ ಸೇಲ್‌ನಲ್ಲಿ ಆಫರ್‌ಗಳ ಸುರಿಮಳೆ ಆಗುತ್ತಿದೆ. ಆನ್‌ಲೈನ್‌ ಗ್ರಾಹಕರು ಅಗ್ಗದ ಬೆಲೆಯಲ್ಲಿ ತಮ್ಮ ನೆಚ್ಚಿನ ಡಿವೈಸ್‌ಗಳನ್ನು ಖರೀದಿಸುತ್ತಿದ್ದಾರೆ. ಇದರಲ್ಲಿ ಲ್ಯಾಪ್‌ಟಾಪ್‌, ಟಿವಿ, ಸ್ಮಾರ್ಟ್‌ವಾಚ್‌ಗಳು ಹೆಚ್ಚಿನ ರಿಯಾಯಿತಿ ಪಡೆದುಕೊಂಡಿವೆ.

ಅಮೆಜಾನ್‌

ಹೌದು, ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಸ್ಮಾರ್ಟ್‌ ಗ್ಯಾಜೆಟ್ಸ್‌ಗಳ ಮೇಲೆ ವಿಶೇಷ ರಿಯಾಯಿತಿ ಲಭ್ಯವಿದೆ. ಇದರಲ್ಲಿ ಸ್ಮಾರ್ಟ್‌ವಾಚ್‌ಗಳು ಬಿಗ್‌ ಆಫರ್ ಪಡೆದುಕೊಂಡಿವೆ. ಜನಪ್ರಿಯ ಬ್ರಾಂಡ್‌ಗಳಾದ ಹಾನರ್‌, ಫಿಟ್‌ಬಿಟ್‌, ಅಮಾಜ್‌ಫಿಟ್ ವಾಚ್‌ಗಳು ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತಿವೆ. ಹಾಗಾದ್ರೆ ಅಮೆಜಾನ್‌ ಸೇಲ್‌ನಲ್ಲಿ ಡಿಸ್ಕೌಂಟ್‌ ಪಡೆದಿರುವ ಟಾಪ್‌ 5 ಸ್ಮಾರ್ಟ್‌ವಾಚ್‌ಗಳ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ಹಾನರ್‌ ವಾಚ್‌ GS 3 ಬ್ಲೂಟೂತ್ ಕಾಲಿಂಗ್ ಸ್ಮಾರ್ಟ್ ವಾಚ್

ಹಾನರ್‌ ವಾಚ್‌ GS 3 ಬ್ಲೂಟೂತ್ ಕಾಲಿಂಗ್ ಸ್ಮಾರ್ಟ್ ವಾಚ್

ಹಾನರ್ ವಾಚ್ GS 3 ಬ್ಲೂಟೂತ್ ಕಾಲಿಂಗ್ ಸ್ಮಾರ್ಟ್ ವಾಚ್ 32% ಡಿಸ್ಕೌಂಟ್‌ ಪಡೆದಿದೆ. ಆದ್ದರಿಂದ ಈ ವಾಚ್‌18,999 ರೂ. ಗಳಿಗೆ ಬದಲಾಗಿ ಕೇವಲ 12,999 ರೂ.ಬೆಲೆಯಲ್ಲಿ ಲಭ್ಯವಾಗಲಿದೆ. ಹೆಚ್ಚುವರಿಯಾಗಿ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸಿದರೆ 1,250 ರೂ.ಗಳ ರಿಯಾಯಿತಿ ಸಹ ದೊರೆಯಲಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 1.43 ಇಂಚಿನ AMOLED ಡಿಸ್‌ಪ್ಲೇ ಹೊಂದಿದೆ. ಇದು ಹೃದಯ ಬಡಿತ ಸೆನ್ಸಾರ್‌, ನಿದ್ರೆ ಮತ್ತು ರಕ್ತದ ಆಮ್ಲಜನಕ ಟ್ರ್ಯಾಕಿಂಗ್‌ ಫೀಚರ್ಸ್‌ ಒಳಗೊಂಡಿದೆ.

ಅಮಾಜ್‌ಫಿಟ್ ಜೆಪ್ ಇ ಸ್ಮಾರ್ಟ್ ವಾಚ್

ಅಮಾಜ್‌ಫಿಟ್ ಜೆಪ್ ಇ ಸ್ಮಾರ್ಟ್ ವಾಚ್

ಈ ವಾಚ್‌ 54% ರಿಯಾಯಿತಿ ಪಡೆದಿದ್ದು, 5,999 ರೂ.ಗಳಿಗೆ ಲಭ್ಯವಿದೆ. ಇದರ ಮೂಲ ಬೆಲೆ 12,999 ರೂ. ಆಗಿದೆ. ಜೊತೆಗೆ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ನಲ್ಲಿ ಇದನ್ನು ಖರೀದಿಸಿದರೆ 1500 ರೂ. ವರೆಗೂ ರಿಯಾಯಿತಿ ಪಡೆಯಬಹುದು. ಇದು ಕರ್ವ್ಡ 3D ಡಿಸ್‌ಪ್ಲೇ ಹೊಂದಿದ್ದು, ಕೇವಲ 9 ಮಿಮೀ ದಪ್ಪ ಇದೆ. ಈ ಡಿವೈಸ್‌ ರಕ್ತ-ಆಮ್ಲಜನಕ ಶುದ್ಧತ್ವ ಮಾಪನ, ಕ್ರೀಡಾ ಸಂಬಂಧಿತ ಮಾಹಿತಿ, ನಿದ್ರೆ, ಉಸಿರಾಟದ ಗುಣಮಟ್ಟ ಸೇರಿದಂತೆ ಪ್ರಮುಖ ಅಗತ್ಯ ಮಾಹಿತಿಯನ್ನು ಒದಗಿಸಲಿದೆ.

ಫೈರ್-ಬೋಲ್ಟ್ ಇನ್ವಿನ್ಸಿಬಲ್ ಬ್ಲೂಟೂತ್ ಕಾಲಿಂಗ್

ಫೈರ್-ಬೋಲ್ಟ್ ಇನ್ವಿನ್ಸಿಬಲ್ ಬ್ಲೂಟೂತ್ ಕಾಲಿಂಗ್

ಈ ಸ್ಮಾರ್ಟ್‌ವಾಚ್‌ 63 % ರಿಯಾಯಿತಿ ಪಡೆದಿದ್ದು 5,999 ರೂ.ಗಳಲ್ಲಿ ಖರೀದಿ ಮಾಡಬಹುದು. ಇದರ ಸಾಮಾನ್ಯ ದರ 15,999 ರೂ. ರೂ. ಆಗಿದೆ. ಗ್ರಾಹಕರು ಎಸ್‌ಬಿಐ ಕಾರ್ಡ್‌ಗಳನ್ನು ಬಳಸಿಕೊಂಡು 1500 ರೂ. ವರೆಗ ಹೆಚ್ಚುವರಿ ರಿಯಾಯಿತಿ ಪಡೆಯಬಹುದು. ಈ ಸ್ಮಾರ್ಟ್‌ವಾಚ್‌ 1.39 ಇಂಚಿನ AMOLED ಡಿಸ್‌ಪ್ಲೇ ಹೊಂದಿದ್ದು, ಇದರಲ್ಲಿ ಬ್ಲೂಟೂತ್ ಕಾಲಿಂಗ್ ಆಯ್ಕೆ ನೀಡಲಾಗಿದೆ. ಹಾಗೆಯೇ 8GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, ಬರೋಬ್ಬರಿ 1500+ ಹಾಡುಗಳನ್ನು ಸಂಗ್ರಹಣೆ ಮಾಡಬಹುದಾಗಿದೆ. ಹೃದಯ ಬಡಿತ, ರಕ್ತದೊತ್ತಡ, ನಿದ್ರೆ ಮತ್ತು ಉಸಿರಾಟ ಸೇರದಂತೆ ಇತರೆ ಮಾಹಿತಿಯನ್ನು ನೀಡುತ್ತದೆ.

ನಾಯ್ಸ್ ಕಲರ್ ಫಿಟ್ ಪ್ರೊ  3 ಆಲ್ಫಾ ಬ್ಲೂಟೂತ್ ಕಾಲಿಂಗ್

ನಾಯ್ಸ್ ಕಲರ್ ಫಿಟ್ ಪ್ರೊ 3 ಆಲ್ಫಾ ಬ್ಲೂಟೂತ್ ಕಾಲಿಂಗ್

ಈ ಸ್ಮಾರ್ಟ್‌ವಾಚ್‌ 44% ರಿಯಾಯಿತಿ ಜೊತೆಗೆ 4,999 ರೂ.ನಲ್ಲಿ ಲಭ್ಯವಾಗಲಿದೆ. ಇದರ ಸಾಮಾನ್ಯ ದರ 8,999 ರೂ. ರೂ. ಆಗಿದೆ. ಇನ್ನು ಎಸ್‌ಬಿಐ ಕಾರ್ಡ್‌ ಬಳಸಿ ಖರೀದಿಸಿದರೆ 300 ರೂ.ವರೆಗೆ ತ್ವರಿತ ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ. ಈ ಸ್ಮಾರ್ಟ್‌ವಾಚ್‌ 1.69 ಡಿಸ್‌ಪ್ಲೇ ಹೊಂದಿದ್ದು, 80+ ಹಾಡುಗಳ ಸಂಗ್ರಹಣೆ ಮಾಡಬಹುದಾಗಿದೆ. ಈ ಸ್ಮಾರ್ಟ್‌ವಾಚ್‌ 100 ಸ್ಪೋರ್ಟ್ಸ್ ಮೋಡ್‌ಗಳು, ಹೃದಯದ ಬಡಿತ, ನಿದ್ರೆ ಸೇರಿದಂತೆ ಇನ್ನಿತರ ಆರೋಗ್ಯ ಸಂಬಂಧಿತ ವಿಷಯಗಳನ್ನು ಟ್ರ್ಯಾಕ್‌ ಮಾಡಲಿದೆ. ಹಾಗೆಯೇ ಅಲೆಕ್ಸಾ ಆಯ್ಕೆ ಸಹ ಪಡೆದಿದೆ.

ಫೈರ್-ಬೋಲ್ಟ್ ಥಂಡರ್ ಬ್ಲೂಟೂತ್ ಕಾಲಿಂಗ್

ಫೈರ್-ಬೋಲ್ಟ್ ಥಂಡರ್ ಬ್ಲೂಟೂತ್ ಕಾಲಿಂಗ್

ಈ ಫೈರ್-ಬೋಲ್ಟ್ ಥಂಡರ್ ಬ್ಲೂಟೂತ್ ಕಾಲಿಂಗ್ ಸ್ಮಾರ್ಟ್‌ವಾಚ್ 69% ರಿಯಾಯಿತಿ ಪಡೆದುಕೊಂಡಿದ್ದು, ಇದರ ಮೂಲ ಬೆಲೆ 12,999 ರೂ. ಆಗಿದೆ. ಇದನ್ನು ನೀವು ಕೇವಲ 3,998 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಡಿವೈಸ್‌ 1.32 ಇಂಚಿನ Amoled LCD ಡಿಸ್‌ಪ್ಲೇ ಹೊಂದಿದ್ದು, ಹೃದಯ ಬಡಿತ ಮತ್ತು ನಿದ್ರೆಯ ಮಾನಿಟರಿಂಗ್ ಜೊತೆಗೆ 30 ಕ್ರೀಡಾ ವಿಷಯಗಳ ಬಗ್ಗೆ ಮಾಹಿತಿ ನೀಡಲಿದೆ.

Best Mobiles in India

English summary
Attractive discounts on several devices in Amazon Great Indian Sale . here we describe some Smartwatch features and price.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X