ಅಮೆಜಾನ್ ಸೇಲ್‌ನಲ್ಲಿ ಈ ಗ್ಯಾಜೆಟ್ಸ್‌ಗಳ ಬೆಲೆ ತುಂಬಾ ಕಡಿಮೆ!

|

ಅಮೆಜಾನ್‌ ತನ್ನ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ನಲ್ಲಿ ಸ್ಮಾರ್ಟ್‌ ಹೋಮ್‌ ಗ್ಯಾಜೆಟ್ಸ್‌ಗಳಿಗೆ ಭಾರಿ ರಿಯಾಯಿತಿ ಲಭ್ಯವಿದೆ. ಸ್ಮಾರ್ಟ್‌ಹೋಮ್‌ ಗ್ಯಾಜೆಟ್‌ಗಳನ್ನು ಖರೀದಿಸುವುದಕ್ಕೆ ಇದು ಬೆಸ್ಟ್‌ ಟೈಮ್‌ ಆಗಿದೆ. ಇದರಲ್ಲಿ ನಿಮ್ಮ ಮನೆಗೆ ಅಗತ್ಯವಾಗಿ ಬೇಕಾದ ಕೆಲವು ಗ್ಯಾಜೆಟ್ಸ್‌ಗಳು ನಿರೀಕ್ಷೆಗೂ ಮೀರಿದ ರಿಯಾಯಿತಿ ಪಡೆದುಕೊಂಡಿವೆ.

ಅಮೆಜಾನ್‌

ಹೌದು, ಅಮೆಜಾನ್‌ನಲ್ಲಿ ನೀವು ಮನೆಗೆ ಅಗತ್ಯವಾದ ಗ್ಯಾಜೆಟ್‌ಗಳನ್ನು ಕೊಂಡುಕೊಳ್ಳಬೇಕು ಎಂದರೆ ಇದು ಸೂಕ್ತ ಸಮಯವಾಗಿದೆ. ಇದರಲ್ಲಿ ನೀವು ರಿಯಾಯಿತಿ ದರದಲ್ಲಿ ವಾಯ್ಸ್‌ ಕಮಾಂಡ್ಸ್‌ ಸ್ಪೀಕರ್‌, ವೈ-ಫೈ ಬೂಸ್ಟರ್‌, ಸ್ಮಾ್ಟ್‌ ಕ್ಯಾಮ್‌, ಅಮೆಜಾನ್‌ ಅಲೆಕ್ಸಾ ಸೇರಿದಂತೆ ಇನ್ನಿತರ ಗ್ಯಾಜೆಟ್‌ಗಳನ್ನು ಕೊಂಡು ಕೊಳ್ಳಬಹುದು. ಸ್ಮಾರ್ಟ್‌ ಗ್ಯಾಜೆಟ್ಸ್‌ಗಳು ಪಡೆದುಕೊಂಡಿರುವ ಡಿಸ್ಕೌಂಟ್‌ ವಿವರವನ್ನು ಇಲ್ಲಿ ತಿಳಿಸಲಾಗಿದೆ, ಮುಂದೆ ಓದಿರಿ.

ಎಕೋ ಫ್ಲೆಕ್ಸ್- ಪ್ಲಗ್-ಇನ್

ಎಕೋ ಫ್ಲೆಕ್ಸ್- ಪ್ಲಗ್-ಇನ್

ಈ ಎಕೋ ಫ್ಲೆಕ್ಸ್- ಪ್ಲಗ್-ಇನ್ 50% ರಿಯಾಯಿತಿ ಪಡೆದಿದ್ದು, ಇದನ್ನು ನೀವು 1,499 ರೂ. ಗೆ ಕೊಂಡುಕೊಳ್ಳಬಹುದಾಗಿದೆ. ಈ ಸ್ಮಾರ್ಟ್‌ ಡಿವೈಸ್‌ ಅಲೆಕ್ಸಾ ಆಯ್ಕೆ ಪಡೆದಿದ್ದು, 3.5 ಎಂಎಂ ಆಡಿಯೊ ಕೇಬಲ್ ಮೂಲಕ ಅಥವಾ ಬ್ಲೂಟೂತ್ ಮೂಲಕ ನಿಮ್ಮ ಸ್ಪೀಕರ್‌ಗೆ ಎಕೋ ಫ್ಲೆಕ್ಸ್ ಅನ್ನು ಸಂಪರ್ಕಿಸಿಕೊಳ್ಳಬಹುದಾಗಿದೆ. ಇದನ್ನು ಮನೆಯಲ್ಲಿನ ಲೈಟ್‌ಗಳು, ಎಸಿ, ಟಿವಿ, ಗೀಸರ್‌ಗಳು, ವಾಟರ್ ಮೋಟಾರ್‌ಗಳನ್ನು ನಿಯಂತ್ರಿಸಲು ಬಳಸಿಕೊಳ್ಳಬಹುದಾಗಿದೆ.

TP-Link AC750 Wifi ರೇಂಜ್ ಎಕ್ಸ್‌ಟೆಂಡರ್

TP-Link AC750 Wifi ರೇಂಜ್ ಎಕ್ಸ್‌ಟೆಂಡರ್

TP-Link AC750 Wifi ರೇಂಜ್ ಎಕ್ಸ್‌ಟೆಂಡರ್‌ ಬರೋಬ್ಬರಿ 71% ರಿಯಾಯಿತಿ ಪಡೆದಿದ್ದು, ಇದನ್ನು 1,599 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ವೈ-ಫೈ ಬೂಸ್ಟರ್ ವೈರ್‌ಲೆಸ್ ಸಿಗ್ನಲ್‌ಗಳನ್ನು ಹೆಚ್ಚಿಸುವ ಕೆಲಸ ಮಾಡಲಿದೆ. ಜೊತೆಗೆ ವೈರ್ಡ್ ಡಿವೈಸ್‌ಗಳಿಗೆ ಅಡಾಪ್ಟರ್ ಆಗಿಯೂ ಬಳಸಿಕೊಳ್ಳುವ ಆಯ್ಕೆ ಪಡೆದಿದೆ. ಇದರಲ್ಲಿನ AC750 ಡ್ಯುಯಲ್ ಬ್ಯಾಂಡ್ ವೈ-ಫೈ ವೇಗವು 750Mbps ವರೆಗೆ ಇದೆ. ಹೀಗಾಗಿ ಸಿಗ್ನಲ್‌ ಸಿಗದ ಜಾಗದಲ್ಲೂ ಇದು ಸಿಗ್ನಲ್‌ ಹೆಚ್ಚಿಸಿ ಉತ್ತಮವಾಗಿ ಕೆಲಸ ಮಾಡುತ್ತದೆ.

ವೈರ್‌ಲೆಸ್ ಬ್ಲೂಟೂತ್ ಸ್ಪೀಕರ್

ವೈರ್‌ಲೆಸ್ ಬ್ಲೂಟೂತ್ ಸ್ಪೀಕರ್

ಈ ಸ್ಮಾರ್ಟ್‌ ಸ್ಪೀಕರ್‌ 37% ರಿಯಾಯಿತಿ ಪಡೆದಿದ್ದು, 939 ರೂ.ಗಳಿಗೆ ಲಭ್ಯವಿದೆ. ಇದೊಂದು ಸಾಂಪ್ರದಾಯಿಕ ಪಾಟ್‌ ತರ ಕಾಣುತ್ತದೆಯಾದರೂ ಇದರ ಕೆಲಸ ಮಾತ್ರ ಅಚ್ಚರಿಗೊಳಿಸುತ್ತದೆ. ಈ ಬ್ಲೂಟೂತ್ ಸ್ಪೀಕರ್ ಮತ್ತು ಲೈಟ್ಸ್‌ಗಳನ್ನು ನಿಯಂತ್ರಣ ಮಾಡುತ್ತದೆ. ಇದನ್ನು ಆಫೀಸ್‌ ಹಾಗೂ ಮನೆಯಲ್ಲಿ ಅಲಂಕಾರಿಕ ವಸ್ತುಗಳ ಜೊತೆ ಇಡುವ ಮೂಲಕ ಮನೆಯ ಅಂದವನ್ನು ಹೆಚ್ಚಿಸಬಹುದಾಗಿದೆ.

ಓಕ್ರೆಮೋಟ್ ವೈಫೈ ಆಲ್ ಇನ್ ಒನ್ ಸ್ಮಾರ್ಟ್ ಯೂನಿವರ್ಸಲ್ ರಿಮೋಟ್

ಓಕ್ರೆಮೋಟ್ ವೈಫೈ ಆಲ್ ಇನ್ ಒನ್ ಸ್ಮಾರ್ಟ್ ಯೂನಿವರ್ಸಲ್ ರಿಮೋಟ್

ಈ ರಿಮೋಟ್ 56% ರಿಯಾಯಿತಿ ಪಡೆದಿದ್ದು, 1,099 ರೂ.ಗಳಲ್ಲಿ ಲಭ್ಯವಿದೆ. ಇದರ ಮೂಲ ಬೆಲೆ 2,490 ರೂ.ಗಳಾಗಿದೆ. ಇದರಲ್ಲಿ ವೈ-ಫೈ ಕಾನ್ಫಿಗರೇಶನ್ 2.4 GHZ ಇದ್ದು, ಈ ಡಿವೈಸ್‌ ಅನ್ನು ಟಿವಿ, ಎಸಿ, ಸ್ಪೀಕರ್‌ಗಳು, ಹೋಮ್ ಥಿಯೇಟರ್‌ಗಳು ಮತ್ತು ಇನ್ನಿತರ ಸ್ಮಾರ್ಟ್‌ ಗ್ಯಾಜೆಟ್‌ಗಳನ್ನು ನಿಯಂತ್ರಿಸಲು ಬಳಕೆ ಮಾಡಿಕೊಳ್ಳಬಹುದು.

ಹೊಟೆಯಾನ್ ಆಟೋಮ್ಯಾಟಿಕ್ ವಾಟರ್ ಡಿಸ್ಪೆನ್ಸ್‌ರ್

ಹೊಟೆಯಾನ್ ಆಟೋಮ್ಯಾಟಿಕ್ ವಾಟರ್ ಡಿಸ್ಪೆನ್ಸ್‌ರ್

ಈ ಸ್ಮಾರ್ಟ್‌ ಡಿವೈಸ್‌ 46% ರಿಯಾಯಿತಿ ಪಡೆದಿದ್ದು, 1,079 ರೂ.ಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಇದು 1200mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಒಂದು ಬಾರಿಯ ಚಾರ್ಜ್‌ಗೆ 20 ಲೀಟರ್‌ ಬಾಟಲಿಯ ಸುಮಾರು 8 ರಿಂದ 10 ಬಾಟಲ್‌ಗಳಲ್ಲಿನ ನೀರನ್ನು ಪಂಪ್‌ ಮಾಡಬಹುದಾಗಿದೆ. ಇದನ್ನು ಆಫೀಸ್‌ ಹಾಗೂ ಮನೆ, ಶಾಲೆಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿರುವ LED ಲೈಟ್ ಸ್ವಿಚ್ ಬಟನ್ ಒತ್ತಿದರೆ ಒಮ್ಮೆಲೆ 600ml ನೀರನ್ನು ವಿತರಿಸುತ್ತದೆ.

ಝೆಬ್ರಾನಿಕ್ಸ್ ಝೆಬ್ ಸ್ಮಾರ್ಟ್ ಕ್ಯಾಮ್

ಝೆಬ್ರಾನಿಕ್ಸ್ ಝೆಬ್ ಸ್ಮಾರ್ಟ್ ಕ್ಯಾಮ್

ಈ ಸ್ಮಾರ್ಟ್‌ ಸಾಧನ 44% ರಿಯಾಯಿತಿ ಪಡೆದಿದ್ದು, 1,399 ರೂ. ಗಳಿಗೆ ಲಭ್ಯವಿದೆ. ಇದರ ಮೂಲ ಬೆಲೆ 2,499 ರೂ.ಗಳು. ಈ ಸಾಧನ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಅನ್ನು ಬೆಂಬಲಿಸುತ್ತದೆ. ಇದು ಆಂಡ್ರಾಯ್ಡ್ ಹಾಗೂ ಐಒಎಸ್‌ಗೆ ಸಪೋರ್ಟ್‌ ಮಾಡುತ್ತದೆ. ಇದನ್ನು ಮನೆಯಲ್ಲಿ ಹಾಗೂ ಆಫೀಸ್‌ಗಳಲ್ಲಿ ಬಳಕೆ ಮಾಡಬಹುದಾಗಿದೆ.

ಯುಫಿ ಜಿನೀ ವೈ-ಫೈ ಸ್ಮಾರ್ಟ್ ಸ್ಪೀಕರ್‌

ಯುಫಿ ಜಿನೀ ವೈ-ಫೈ ಸ್ಮಾರ್ಟ್ ಸ್ಪೀಕರ್‌

ಈ ಯುಫಿ ಜಿನೀ ವೈ-ಫೈ ಸ್ಪೀಕರ್‌ 61% ರಿಯಾಯಿತಿ ಪಡೆದಿದ್ದು, 1,299 ರೂ.ಗಳಲ್ಲಿ ಲಭ್ಯವಿದೆ. ಇದರ ಮೂಲ ಬೆಲೆ 3,299 ರೂ.ಗಳಾಗಿದೆ. ಇದು ಇನ್‌ಬಿಲ್ಟ್‌ ಅಲೆಕ್ಸಾ ಆಯ್ಕೆ ಪಡೆದಿದ್ದು, ಇದರಿಂದ ಸ್ಮಾರ್ಟ್ ಹೋಮ್ ಸಾಧನಗಳನ್ನು ನಿಯಂತ್ರಿಸಬಹುದು. ಹ್ಯಾಂಡ್ಸ್-ಫ್ರೀ ಬಳಕೆ ಜೊತೆ ಆನ್‌ಲೈನ್ ಸಂಗೀತದ ಫೀಚರ್ಸ್‌ ಪಡೆದಿದೆ.

ವಿಪ್ರೋ 10 Amp ಸ್ಮಾರ್ಟ್ ಪ್ಲಗ್

ವಿಪ್ರೋ 10 Amp ಸ್ಮಾರ್ಟ್ ಪ್ಲಗ್

ವಿಪ್ರೋ 10 Amp ಸ್ಮಾರ್ಟ್ ಪ್ಲಗ್ 42% ರಿಯಾಯಿತಿ ಪಡೆದಿದ್ದು, 1,739 ರೂ.ಗಳಲ್ಲಿ ಲಭ್ಯವಿದೆ. ಇದರ ಸಾಮಾನ್ಯ ದರ 3,000 ರೂ.ಗಳಾಗಿವೆ. ಇದನ್ನು ಸ್ಮಾರ್ಟ್‌ ಹೋಮ್ ಅಪ್ಲಿಕೇಶನ್‌ಗಳನ್ನು ನಿಯಂತ್ರಿಸಲು ಬಳಸಬಹುದು. ಉಪಕರಣಗಳನ್ನು ಆನ್ ಮತ್ತು ಆಫ್ ಮಾಡಲು ಇದು ಸಹಾಯ ಮಾಡುತ್ತದೆ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಿಪ್ರೋ ಸ್ಮಾರ್ಟ್ ಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡಿಕೊಂಡರೆ ಎಲ್ಲಿಂದಲಾದರೂ ವಿದ್ಯುತ್ ಸಾಧನಗಳನ್ನು ನಿಯಂತ್ರಿಸುವ ಆಯ್ಕೆಯನ್ನು ನೀಡಲಾಗಿದೆ. ಇದು ಅಮೆಜಾನ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಆಯ್ಕೆ ಪಡೆದಿದೆ.

Best Mobiles in India

English summary
Amazon is selling gadgets at huge discounts in the Great Indian Festival Sale. We have given the details of the gadgets available under 1,999.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X