ಅಮೆಜಾನ್‌ ಆಫರ್‌ ಸೇಲ್‌: ವೆಸ್ಟಿಂಗ್‌ಹೌಸ್ ಟಿವಿಗಳಿಗೆ 60% ವರೆಗೆ ರಿಯಾಯಿತಿ

|

ಅಮೆಜಾನ್ ತನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಭರ್ಜರಿ ಕೊಡುಗೆ ನೀಡುತ್ತಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಟಿವಿಗಳು ಹಾಗೂ ಇನ್ನಿತರೆ ಎಲೆಕ್ಟ್ರಾನಿಕ್ ಡಿವೈಸ್‌ಗಳ ಮೇಲೆ ಕೊಡುಗೆ ಘೋಷಣೆ ಮಾಡಲಾಗಿದ್ದು, ಅಗ್ಗದ ಬೆಲೆಯಲ್ಲಿ ಟಿವಿ ಖರೀದಿ ಮಾಡುವವರಿಗೆ ಇದು ಸುವರ್ಣಾವಕಾಶ ಎಂದೇ ಹೇಳಬಹುದು. ಇದರಲ್ಲಿ ತನ್ನ ಕೆಲವು ಆಯ್ದ ಟಿವಿಗಳಿಗೆ ಅಮೆಜಾನ್ 60% ವರೆಗೆ ಡಿಸ್ಕೌಂಟ್ ನೀಡಿದೆ.

ಅಮೆಜಾನ್‌

ಹೌದು, ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ವೆಸ್ಟಿಂಗ್‌ಹೌಸ್ (Westinghouse) ಕಂಪೆನಿಯ ಸ್ಮಾರ್ಟ್‌ಟಿವಿಗಳಿಗೆ ಭಾರೀ ರಿಯಾಯಿತಿ ನೀಡಲಾಗಿದೆ. ಈ ಸೇಲ್‌ನಲ್ಲಿ 32 ಇಂಚಿನ Pi ಸರಣಿಯ ಟಿವಿ, 24 ಇಂಚಿನ ನಾನ್ ಸ್ಮಾರ್ಟ್ LED ಟಿವಿ, 43,50 ಹಾಗೂ 55 ಇಂಚಿನ ವಿವಿಧ ಮಾದರಿಯ ಟಿವಿಗಳನ್ನು ಖರೀದಿ ಮಾಡಬಹುದಾಗಿದೆ. ಈ ಸೇಲ್‌ ಇದೇ ತಿಂಗಳ 23 ರವರೆಗೆ ಇರಲಿದೆ. ಹಾಗಿದ್ರೆ ಈ ಟಿವಿಗಳು ಎಷ್ಟೆಲ್ಲಾ ಡಿಸ್ಕೌಂಟ್‌ ಪಡೆದುಕೊಂಡಿವೆ, ಏನೆಲ್ಲಾ ಫೀಚರ್ಸ್‌ ಇವೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

32 ಇಂಚಿನ ಆಲ್ ರೌಂಡರ್ ಟಿವಿ

32 ಇಂಚಿನ ಆಲ್ ರೌಂಡರ್ ಟಿವಿ

32 ಇಂಚಿನ ಪೈ ಸರಣಿಯ ಈ ಹೆಚ್‌ಡಿ ರೆಡಿ ಟಿವಿ 10,000ರೂ. ಗಳ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಟಿವಿ 1366 x 768 ಪಿಕ್ಸೆಲ್‌ ಸಾಮರ್ಥ್ಯದ HD ಡಿಸ್‌ಪ್ಲೇ ಹೊಂದಿದೆ. ಹಾಗೆಯೇ 512MB RAM ಹಾಗೂ 4 GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದಿದ್ದು, ಕನೆಕ್ಟಿವಿಟಿ ವಿಚಾರದಲ್ಲಿ 3 ಹೆಚ್‌ಡಿಎಂಐ, 2 ಯುಎಸ್‌ಬಿ ಪೋರ್ಟ್‌ಗಳನ್ನು ಹೊಂದಿದೆ. ಹಾಗೆಯೇ ಡಿಜಿಟಲ್ ನಾಯ್ಸ್ ಫಿಲ್ಟರ್ ಹಾಗೂ 2 ಸ್ಪೀಕರ್‌ಗಳು ಇದ್ದು, ಇವು ಸರೌಂಡ್ ಸೌಂಡ್ ಜೊತೆ 30Wಸೌಂಡ್ ಔಟ್‌ಪುಟ್ ನೀಡಲಿವೆ.

 24 ಇಂಚಿನ ಟಿವಿ (WH24PL01)

24 ಇಂಚಿನ ಟಿವಿ (WH24PL01)

ಈ ಟಿವಿ 5,499 ರೂ.ಗಳ ಕೈಗೆಟುಕುವ ಬೆಲೆಯಲ್ಲಿ ನಿಮಗೆ ಲಭ್ಯವಾಗಲಿದೆ. ಇನ್ನು 24 ಇಂಚಿನ HD ರೆಡಿ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಇದು 1366 x 768 ಪಿಕ್ಸೆಲ್‌ ರೆಸಲ್ಯೂಶನ್‌ ನೀಡಲಿದೆ. ಇತರೆ ಫೀಚರ್ಸ್‌ಗಳಲ್ಲಿ 20W ಸೌಂಡ್‌ ಔಟ್‌ಪುಟ್ ನೀಡುವ 2 ಸ್ಪೀಕರ್‌ಗಳು, ಆಡಿಯೊ ಈಕ್ವಲೈಜರ್ ಮತ್ತು ಸ್ವಯಂಚಾಲಿತ ವಾಲ್ಯೂಮ್ ಲೆವೆಲ್ ಆಯ್ಕೆ ಹೊಂದಿದೆ.

32 ಇಂಚಿನ ಟಿವಿ (WH32PL09)

32 ಇಂಚಿನ ಟಿವಿ (WH32PL09)

ಈ ಟಿವಿ ನಿಮಗೆ ಅಮೆಜಾನ್‌ನಲ್ಲಿ ಕೇವಲ 6,999ರೂ. ಗಳಿಗೆ ಲಭ್ಯವಿದೆ. ಇದು 32 ಇಂಚಿನ LED ಡಿಸ್‌ಪ್ಲೇ ಹೊಂದಿದ್ದು, 350nits ಬ್ರೈಟ್‌ನೆಸ್‌ ನೀಡಲಿದೆ. ಹಾಗೆಯೇ 2 ಹೆಚ್‌ಡಿಎಂಐ ಹಾಗೂ 2 ಯುಎಸ್‌ಬಿ ಪೋರ್ಟ್‌ ಆಯ್ಕೆ ಇದರಲ್ಲಿದ್ದು, 20W ಸೌಂಡ್‌ ಔಟ್‌ಪುಟ್‌ ನೀಡುವ 2 ಸ್ಪೀಕರ್‌ಗಳನ್ನು ಹೊಂದಿದೆ.

 32,40 ಇಂಚಿನ ಆಂಡ್ರಾಯ್ಡ್ ಟಿವಿ

32,40 ಇಂಚಿನ ಆಂಡ್ರಾಯ್ಡ್ ಟಿವಿ

ಹೆಚ್‌ಡಿ ರೆಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯಲ್ಲಿ 32 ಇಂಚಿನ ಡಿಸ್‌ಪ್ಲೇ ಆಯ್ಕೆ ಇರುವ ಟಿವಿಗೆ 8,999ರೂ. ಗಳು ಹಾಗೂ 40 ಇಂಚಿನ ಡಿಸ್‌ಪ್ಲೇ ಹೊಂದಿರುವ ಟಿವಿ 13,999ರೂ. ಬೆಲೆ ಪಡೆದಿದೆ. ಇವು ಫುಲ್‌ HD ಡಿಸ್‌ಪ್ಲೇ ಹೊಂದಿದ್ದು, 400nits ಬ್ರೈಟ್‌ನೆಸ್‌ ನೀಡಲಿವೆ. ಹಾಗೆಯೇ 1GB RAM ಹಾಗೂ 8GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿವೆ. ಈ ಎರಡೂ ಟಿವಿಗಳು ಆಂಡ್ರಾಯ್ಡ್‌ 9 ನಿಂದ ರನ್‌ ಆಗಲಿದ್ದು, 24W ಸೌಂಡ್‌ ಔಟ್‌ಪುಟ್, ಹೆಚ್‌ಡಿಆರ್‌, ಸರೌಂಡ್ ಸೌಂಡ್ ಟೆಕ್ನಾಲಜಿ ಆಯ್ಕೆ ಪಡೆದಿವೆ.

43 ಇಂಚಿನ ಟಿವಿ (WH43SP99)

43 ಇಂಚಿನ ಟಿವಿ (WH43SP99)

ಈ ಸ್ಮಾರ್ಟ್‌ಟಿವಿ 15,999ರೂ. ಗಳಿಗೆ ಲಭ್ಯವಿದೆ. ಇದು 43 ಇಂಚಿನ ಫುಲ್ HD ಡಿಸ್‌ಪ್ಲೇ ಹೊಂದಿದ್ದು, 500nits ಬ್ರೈಟ್‌ನೆಸ್ ಹಾಗೂ ಅಲ್ಟ್ರಾ-ತೆಳುವಾದ ಬೆಜೆಲ್ ಆಯ್ಕೆ ಪಡೆದಿದೆ. ಈ ಟಿವಿ 1GB RAM ಹಾಗೂ 8GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ಆಂಡ್ರಾಯ್ಡ್ 9 ನಿಂದ ರನ್‌ ಆಗಲಿದ್ದು, 30W ಸೌಂಡ್‌ ಔಟ್‌ಪುಟ್‌ ನೀಡಲಿದೆ.

43 ಹಾಗೂ 50 ಇಂಚಿನ ಟಿವಿ

43 ಹಾಗೂ 50 ಇಂಚಿನ ಟಿವಿ

43 ಇಂಚಿನ ಮಾಡೆಲ್‌ WH43UD10 ಸ್ಮಾರ್ಟ್‌ಟಿವಿಗೆ 18,999ರೂ. ಗಳು ಹಾಗೂ 50 ಇಂಚಿನ ಮಾಡೆಲ್‌ WH50UD82 ಗೆ 23,999ರೂ. ಗಳನ್ನು ನಿಗದಿ ಮಾಡಲಾಗಿದೆ. ಈ ಟಿವಿಗಳು UHD/4K ಡಿಸ್‌ಪ್ಲೇ ಹೊಂದಿದ್ದು, 2GB RAM ಹಾಗೂ 8GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿವೆ. ಇದರ ಜೊತೆಗೆ 3 ಹೆಚ್‌ಡಿ2ಎಂಐ, ಯುಎಸ್‌ಬಿ ಪೋರ್ಟ್‌ ಕನೆಕ್ಟಿವಿಟಿ ಆಯ್ಕೆ ಪಡೆದಿವೆ. ಈ ವೇರಿಯಂಟ್ ಹೆಚ್‌ಡಿಆರ್ 10 ಮತ್ತು ಕ್ರೋಮಾಕಾಸ್ಟ್‌ ಫೀಚರ್ಸ್‌ ಪಡೆದಿದೆ.

55 ಇಂಚಿನ ಟಿವಿ (WH55UD45)

55 ಇಂಚಿನ ಟಿವಿ (WH55UD45)

ಈ ಸ್ಮಾರ್ಟ್‌ಟಿವಿ ಅಮೆಜಾನ್‌ನಲ್ಲಿ 28,999ರೂ. ಗಳ ಬೆಲೆ ಪಡೆದಿದೆ. ಇದು 55 ಇಂಚಿನ 500nits ಬ್ರೈಟ್‌ನೆಸ್ ನೀಡುವ ಡಿಸ್‌ಪ್ಲೇ ಹೊಂದಿದ್ದು, ಆಂಡ್ರಾಯ್ಡ್‌ ‌ 9ರಲ್ಲಿ ರನ್‌ ಆಗಲಿದೆ. ಹಾಗೆಯೇ 2GB RAM ಹಾಗೂ 8GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದಿದ್ದು, 40W ಸೌಂಡ್ ಔಟ್‌ಪುಟ್ ಆಯ್ಕೆ ಇರುವ 2 ಸ್ಪೀಕರ್‌ಗಳು ಈ ಟಿವಿಯಲ್ಲಿವೆ.

ಬ್ಯಾಂಕ್‌ ಆಫರ್‌ ಏನು?

ಬ್ಯಾಂಕ್‌ ಆಫರ್‌ ಏನು?

ಅಮೆಜಾನ್, ರುಪೇ, ಕೊಟಕ್‌, ಐಸಿಐಸಿಐ, ಸಿಟಿಬ್ಯಾಂಕ್ ಹಾಗೂ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಅಮೆಜಾನ್ ಹೆಚ್ಚುವರಿ 10% ತ್ವರಿತ ರಿಯಾಯಿತಿ ಸಹ ನೀಡಲಿದೆ. ಇದರೊಂದಿಗೆ ನೋ ಕಾಸ್ಟ್‌ ಇಎಂಐ ಆಯ್ಕೆಯ ಮೂಲಕವೂ ಟಿವಿಗಳನ್ನು ಖರೀದಿ ಮಾಡಬಹುದಾಗಿದೆ.

Best Mobiles in India

English summary
Amazon is offering great deals in its Great Indian Festival Sale. Especially Westinghouse TVs are discounted up to 60%.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X