Just In
Don't Miss
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Movies
Ramachari Serial: ವಿಹಾನ್ ಬಳಿ ಸತ್ಯ ಹೇಳಿಬಿಟ್ಟ ಚಾರು!
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶಿಯೋಮಿ 11T ಪ್ರೊ ಫೋನಿಗೆ ಸಿಗುವ ಡಿಸ್ಕೌಂಟ್ ತಿಳಿದ್ರೆ, ನೀವು ಅಚ್ಚರಿ ಪಡ್ತೀರಾ!
ಶಿಯೋಮಿ ಮೊಬೈಲ್ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಈಗಾಗಲೇ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಅದೇ ಹಾದಿಯಲ್ಲಿ ಮುಂದೆ ನಡೆದಿರುವ ಶಿಯೋಮಿ ಸಂಸ್ಥೆಯು ಕಳೆದ ವರ್ಷ ಭಾರತದಲ್ಲಿ ಬಿಡುಗಡೆ ಮಾಡಿರುವ ಶಿಯೋಮಿ 11X ಸ್ಮಾರ್ಟ್‌ಫೋನ್ ಸರಣಿಯು ಪ್ರೀಮಿಯಂ ಮಾದರಿ ಫೋನ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಆ ಪೈಕಿ ಶಿಯೋಮಿ 11X ಪ್ರೊ ಖರೀದಿ ಮಾಡುವ ಗ್ರಾಹಕರಿಗೆ ಇದೀಗ ಭರ್ಜರಿ ಸಿಹಿಸುದ್ದಿ ಇದೆ.

ಶಿಯೋಮಿ ಕಂಪನಿಯ ಶಿಯೋಮಿ 11T ಪ್ರೊ ಫೋನ್ ತ್ರಿವಳಿ ಕ್ಯಾಮೆರಾ, ಫಾಸ್ಟ್ ಚಾರ್ಜಿಂಗ್, ವೇಗದ ಪ್ರೊಸೆಸರ್ ನಂತಹ ಫೀಚರ್ಸ್‌ಗಳ ಮೂಲಕ ಪ್ರೀಮಿಯಂ ಫೋನ್‌ಗಳ ವರ್ಗದಲ್ಲಿ ಗಮನ ಸೆಳೆದಿದೆ. ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ಇದೇ ಸೆಪ್ಟೆಂಬರ್ 23 ರಿಂದ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಪ್ರಾರಂಭವಾಗಲಿದ್ದು, ಈ ಸೇಲ್‌ನಲ್ಲಿ ಶಿಯೋಮಿ 11T ಪ್ರೊ ಫೋನ್ ಭರ್ಜರಿ ರಿಯಾಯಿತಿ ದರದಲ್ಲಿ ದೊರೆಯಲಿದೆ.

ಶಿಯೋಮಿ 11T ಪ್ರೊ ಫೋನ್ 39,999ರೂ. ಗಳ ಪ್ರೈಸ್ ಟ್ಯಾಗ್‌ನಲ್ಲಿ ಹೊಂದಿದ್ದು, ಅಮೆಜಾನ್‌ನಲ್ಲಿ ಸೇಲ್‌ನಲ್ಲಿ ಈ ಫೋನ್ 28,999 ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಈ ಕೊಡುಗೆಯು ಬ್ಯಾಂಕ್ ಆಫರ್‌ಗಳನ್ನು ಒಳಗೊಂಡಿರುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಸೆಲೆಸ್ಟಿಯಲ್ ಮ್ಯಾಜಿಕ್, ಮೆಟಿಯೊರೈಟ್ ಗ್ರೇ ಮತ್ತು ಮೂನ್‌ಲೈಟ್ ವೈಟ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಹಾಗಾದರೇ ಶಿಯೋಮಿ 11T ಪ್ರೊ ಫೋನ್ ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಶಿಯೋಮಿ 11T ಪ್ರೊ 5G ಸ್ಮಾರ್ಟ್‌ಫೋನ್ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67 ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ಡೈನಾಮಿಕ್ ರಿಫ್ರೆಶ್ ರೇಟ್ ಹೊಂದಿದ್ದು, 10-ಬಿಟ್ ಟ್ರೂಲಿ ಕಲರ್ ಫ್ಲಾಟ್ ಅಮೋಲೆಡ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಈ ಡಿಸ್‌ಪ್ಲೇ ಡಾಲ್ಬಿ ವಿಷನ್ ಬೆಂಬಲಿಸಲಿದ್ದು, 480Hz ವರೆಗೆ ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಹೊಂದಿದೆ.

ಪ್ರೊಸೆಸರ್ ಬಲ ಯಾವುದು
ಶಿಯೋಮಿ 11T ಪ್ರೊ 5G ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 11 ನಲ್ಲಿ MIUI 12.5 ಜೊತೆಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 128GB, 12 GB RAM ಮತ್ತು 256 GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಜೊತೆಗೆ 3GB ವರ್ಚುವಲ್ RAM ವಿಸ್ತರಣೆಗೆ ಸಹ ಬೆಂಬಲಿಸಲಿದೆ.

108 ಮೆಗಾಪಿಕ್ಸೆಲ್ ಕ್ಯಾಮೆರಾ ಹೈಲೈಟ್
ಶಿಯೋಮಿ 11T ಪ್ರೊ 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ HM2 ಸೆನ್ಸಾರ್ f/1.75 ವೈಡ್-ಆಂಗಲ್ ಲೆನ್ಸ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಅಲ್ಟ್ರಾ-ವೈಡ್ ಎಫ್/2.2 ಲೆನ್ಸ್ 120 ಡಿಗ್ರಿಗಳ ಫೀಲ್ಡ್-ಆಫ್-ವ್ಯೂ (FoV) ಹೊಂದಿದೆ. ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್ ಟೆಲಿಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ನಲ್ಲಿ ಟೈಮ್-ಲ್ಯಾಪ್ಸ್, ಸಿನಿಮಾಟಿಕ್ ಫಿಲ್ಟರ್‌ಗಳು ಮತ್ತು ಆಡಿಯೊ ಜೂಮ್‌ನಂತಹ 50 ಕ್ಕೂ ಹೆಚ್ಚು ಡೈರೆಕ್ಟರ್ ಮೋಡ್‌ಗಳೊಂದಿಗೆ ಪ್ರೀ ಲೋಡ್ ಆಗಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಕೂಡ ಹೊಂದಿದೆ.

ಬ್ಯಾಟರಿ ಮತ್ತು ಇತರೆ
ಶಿಯೋಮಿ 11T ಪ್ರೊ 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 120W ಹೈಪರ್‌ಚಾರ್ಜ್ ವೇಗದ ವೈರ್ಡ್ ಚಾರ್ಜಿಂಗ್‌ನೊಂದಿಗೆ ಬರುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್, GPS/ A-GPS/ NavIC, NFC, ಇನ್ಫ್ರಾರೆಡ್ (IR) ಬ್ಲಾಸ್ಟರ್, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದಲ್ಲದೆ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಬ್ಯಾರೋಮೀಟರ್, ಗೈರೊಸ್ಕೋಪ್, ಮ್ಯಾಗ್ನೆಟಿಕ್ ದಿಕ್ಸೂಚಿ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಸೇರಿವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470