ಇತಿಹಾಸದ ಶಾಪಿಂಗ್‌ ಸೇಲ್: ಅಮೆಜಾನ್‌ನಲ್ಲಿ ಮೊಬೈಲ್-TVಗಳ ಗ್ರೇಟ್ ಡೀಲ್..!

|

ಭಾರತೀಯ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಅಮೆಜಾನ್ ದೊಡ್ಡದೊಂದು ಸೇಲ್‌ನೊಂದಿಗೆ ಗ್ರಾಹಕರನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ. 2018ರಲ್ಲಿ ಇದೇ ಮೊದಲ ಬಾರಿಗೆ ಅಮೆಜಾನ್ ತನ್ನ ಗ್ರೇಟ್ ಇಂಡಿಯನ್ ಸೇಲ್ ಅನ್ನು ಆಯೋಜಿಸಿದ್ದು, ಗ್ರಾಹಕರಿಗೆ ಭರ್ಜರಿ ಆಫರ್ ಅನ್ನು ನೀಡಲು ಮುಂದಾಗಿದೆ.

ಇತಿಹಾಸದ ಶಾಪಿಂಗ್‌ ಸೇಲ್: ಅಮೆಜಾನ್‌ನಲ್ಲಿ ಮೊಬೈಲ್-TVಗಳ ಗ್ರೇಟ್ ಡೀಲ್..!

ಅಮೆಜಾನ್ ಈ ಬಾರಿ ಭಾರತೀಯ ಆನ್‌ಲೈನ್‌ ಮಾರುಕಟ್ಟೆಯಲ್ಲಿಯೇ ಅತೀ ದೊಡ್ಡ ಸೇಲ್‌ ಅನ್ನು ನಡೆಸಲಿದೆ ಎನ್ನಲಾಗಿದ್ದು, ಈಗಾಗಲೇ ಸೇಲ್ ನಡೆಯುವ ದಿನದಂದು ತಾತ್ಕಾಲಿಕವಾಗಿ ಹೆಚ್ಚುವರಿಯಾಗಿ 6000 ಉದ್ಯೋಗಿಗಳನ್ನು ಅಮೆಜಾನ್ ಸೇರಿಕೊಳ್ಳುತ್ತಿದೆ. ಇದಲ್ಲದೆ ಅತೀ ಹೆಚ್ಚಿನ ಪ್ರಮಾಣದ ಆಫರ್‌ಗಳನ್ನು ಘೋಷಣೆ ಮಾಡಲಿದೆ ಎನ್ನಲಾಗಿದೆ.

Honor 9 Lite with four cameras (KANNADA)

ಓದಿರಿ: ಜಿಯೋ ಫೋನಿನಲ್ಲಿ ವಾಟ್ಸ್‌ಆಪ್ ಬಳಸವುದು ಹೇಗೆ..? ಇಲ್ಲಿದೇ ಸಿಂಪಲ್ ಟಿಪ್ಸ್‌..!

'ಗ್ರೇಟ್‌ ಇಂಡಿಯಾ ಸೇಲ್‌':

'ಗ್ರೇಟ್‌ ಇಂಡಿಯಾ ಸೇಲ್‌':

ಅಮೆಜಾನ್ ನಲ್ಲಿ ಇದೇ ಜನವರಿ 20 ರಿಂದ 24ರ ವರೆಗೆ 'ಗ್ರೇಟ್‌ ಇಂಡಿಯಾ ಸೇಲ್‌' ನಡೆಯಲಿದ್ದು, ಈ ಸಂದರ್ಭದಲ್ಲಿ ಮೊಬೈಲ್, ಟಿವಿ, ಲ್ಯಾಪ್ ಟಾಪ್ ಸೇರಿದಂತೆ ಎಲ್ಲಾ ಮಾದರಿಯ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಿಲಿದೆ ಎನ್ನಲಾಗಿದೆ.

500 ಕೋಟಿ ಹೂಡಿಕೆ:

500 ಕೋಟಿ ಹೂಡಿಕೆ:

ಭಾರತದ ಇ-ಕಾಮರ್ಸ್‌ ವಲಯದಲ್ಲಿ ನಂ.1 ಪಟ್ಟಕ್ಕಾಗಿ ಫ್ಲಿಪ್‌ಕಾರ್ಟ್‌ ನೊಂದಿಗೆ ಸ್ಪರ್ಧಿಸುತ್ತಿರುವ ಅಮೆರಿಕ ಮೂಲದ ಅಮೆಜಾನ್‌, ಭಾರತೀಯ ಮಾರುಕಟ್ಟೆಯಲ್ಲಿ 500 ಕೋಟಿ ಡಾಲರ್‌ ಹೂಡಿಕೆಗೆ ಮುಂದಾಗಿದೆ. ಈ ಹಿನ್ನಲೆಯಲ್ಲಿ ಭರ್ಜರಿ ಸೇಲ್ ಆರಂಭವಾಗಲಿದೆ.

6,500 ತಾತ್ಕಾಲಿಕ ಉದ್ಯೋಗ:

6,500 ತಾತ್ಕಾಲಿಕ ಉದ್ಯೋಗ:

ಅಮೆಜಾನ್‌ 'ಗ್ರೇಟ್‌ ಇಂಡಿಯಾ ಸೇಲ್‌' ಸಲುವಾಗಿ ಫುಲ್‌ಫಿಲ್ಮೆಂಟ್‌ ಸೆಂಟರ್‌ಗಳು, ವಿತರಣಾ ಕೇಂದ್ರಗಳಲ್ಲಿ 5,500 ತಾತ್ಕಾಲಿಕ ಉದ್ಯೋಗಗಳು ಮತ್ತು ಗ್ರಾಹಕ ಸೇವಾ ವಿಭಾಗದಲ್ಲಿ 1,000 ಸಹಾಯಕ ಉದ್ಯೋಗಗಳು ನಿರ್ಮಾಣವಾಗಲಿದೆ.

ಅಮೆಜಾನ್ ಪ್ರೈಮ್:

ಅಮೆಜಾನ್ ಪ್ರೈಮ್:

ಇದಲ್ಲದೇ ಈ ಸೇಲ್ ನಲ್ಲಿ ಅಮೆಜಾನ್ ಪ್ರೈಮ್ ಸದಸ್ಯರಿಗೆ ಹೆಚ್ಚಿನ ಲಾಭವಿದ್ದು, ಅಮೆಜಾನ್ ನೀಡುವ ಎಲ್ಲಾ ಆಫರ್ ಗಳು ಪ್ರೈಮ್ ಸದಸ್ಯರಿಗೆ 12 ಗಂಟೆಗಳ ಮೊದಲೇ ದೊರೆಯಲಿದೆ ಎನ್ನಲಾಗಿದೆ. ಇದಲ್ಲದೇ ಅಮೆಜಾನ್ ಪೇ ಮೂಲಕ ಖರೀದಿಸಿದರೆ ಹೆಚ್ಚುವರಿ 10% ಡಿಸ್ಕೌಂಟ್ ಸಹ ದೊರೆಯಲಿದೆ ಎನ್ನಲಾಗಿದೆ.

ಮೊಬೈಲ್ ಸೇಲ್:

ಮೊಬೈಲ್ ಸೇಲ್:

ಅಮೆಜಾನ್‌ 'ಗ್ರೇಟ್‌ ಇಂಡಿಯಾ ಸೇಲ್ ನಲ್ಲಿ ಮೊಬೈಲ್ ಫೋನ್‌ಗಳ ಮೇಲೆ ಶೇ.40% ಕಡಿತವನ್ನು ಅಮೆಜಾನ್ ನೀಡುತ್ತಿದ್ದು, ಇದರೊಂದಿಗೆ ನೋ ಕಾಸ್ಟ್ ಇಎಂಐ, ಎಕ್ಸ್‌ಚೆಂಜ್ ಆಫರ್, ಕ್ಯಾಷ್ ಬ್ಯಾಕ್ ಸೇರಿದಂತೆ ವಿವಿಧ ಆಫರ್ ಗಳನ್ನ ನೀಡಲಿದೆ.

Best Mobiles in India

English summary
Amazon Great Indian Sale Dates Revealed. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X