ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್: ಪವರ್‌ಬ್ಯಾಂಕ್‌, ಪ್ರಿಂಟರ್‌ಗಳಿಗೆ ರಿಯಾಯಿತಿ

|

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ನಲ್ಲಿ ಸ್ಮಾರ್ಟ್ ಡಿವೈಸ್‌ಗಳಿಗೆ ಭಾರೀ ಆಫರ್‌ ಘೋಷಣೆ ಮಾಡಲಾಗಿದೆ. ಅಮೆಜಾನ್‌ನಲ್ಲಿ ಗ್ರಾಹಕರು ತಮಗೆ ಇಷ್ಟವಾದ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳುತ್ತಿದ್ದಾರೆ. ಇದರ ನಡುವೆ ಅಮೆಜಾನ್ ಬರೋಬ್ಬರಿ 50 % ರಿಂದ 70 % ವರೆಗೂ ಕೆಲವು ಪ್ರಮುಖ ವಸ್ತುಗಳಿಗೆ ರಿಯಾಯಿತಿ ನೀಡಿದೆ.

ಇಂಡಿಯನ್‌

ಅಮೆಜಾನ್‌ನ ಈ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಪ್ರಿಂಟರ್‌ಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಣೆ ಮಾಡಲಾಗಿದೆ. ಈ ಮೂಲಕ ಪ್ರಮುಖ ಬ್ರಾಂಡ್‌ಗಳ ಪ್ರಿಂಟರ್‌ಗಳನ್ನು ನೀವು ಆಕರ್ಷಕ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇಷ್ಟೇ ಅಲ್ಲದೆ ಇದರ ಜೊತೆಗೆ ಹೆಚ್ಚಿನ ಡಿಸ್ಕೌಂಟ್‌ನಲ್ಲಿ ಸ್ಮಾರ್ಟ್‌ವಾಚ್‌, ಪವರ್‌ಬ್ಯಾಂಕ್‌, ಸ್ಮಾರ್ಟ್‌ ಡಿವೈಸ್‌ಗಳನ್ನೂ ಸಹ ಅಮೆಜಾನ್‌ ರಿಯಾಯಿತಿ ದರದಲ್ಲಿ ನೀಡುತ್ತಿದೆ. ಈ ಡಿವೈಸ್‌ಗಳು ಅದ್ಭುತ ಫೀಚರ್ಸ್‌ ಹೊಂದಿದ್ದು ತುಂಬಾ ಆಕರ್ಷಣೀಯವಾಗಿವೆ.

ಅಮೆಜಾನ್‌

ಹೌದು, ಅಮೆಜಾನ್‌ ಈಗ ಹೆಚ್‌ಪಿ ಕಂಪೆನಿಯ ಪ್ರಿಂಟರ್‌ ಹಾಗೂ ರೆಡ್‌ಮಿ ಕಂಪೆನಿಯ ಸ್ಮಾರ್ಟ್‌ವಾಚ್‌, ಮಿ ಕಂಪೆನಿಯ ಪವರ್‌ ಬ್ಯಾಂಕ್‌ ಸೇರಿದಂತೆ ಪ್ರಮುಖ ಡಿವೈಸ್‌ಗಳ ಮೇಲೆ ಭರ್ಜರಿ ರಿಯಾಯಿತಿ ನೀಡಿದೆ. ನೀವೇನಾದರೂ ಈ ಸಮಯದಲ್ಲಿ ಅಗತ್ಯ ಡಿವೈಸ್‌ಗಳನ್ನು ಕೊಂಡುಕೊಳ್ಳಲು ಇಚ್ಚಿಸಿದರೆ ಈ ಲೇಖನ ನಿಮಗೆ ಸೂಕ್ತವಾಗಲಿದೆ. ಇಲ್ಲಿ ಡಿವೈಸ್‌ಗಳ ಬೆಲೆ ಹಾಗೂ ಕೆಲವು ಫೀಚರ್ಸ್‌ಗಳನ್ನ ನೀಡಲಾಗಿದೆ ಓದಿರಿ.

ಹೆಚ್‌ಪಿ ಇಂಕ್ ಟ್ಯಾಂಕ್ 319 ಕಲರ್ ಪ್ರಿಂಟರ್

ಹೆಚ್‌ಪಿ ಇಂಕ್ ಟ್ಯಾಂಕ್ 319 ಕಲರ್ ಪ್ರಿಂಟರ್

ಹೆಚ್‌ಪಿ ಕಂಪೆನಿಯ ಹೆಚ್‌ಪಿ ಇಂಕ್‌ಟ್ಯಾಂಕ್‌ಗೆ ಅಮೆಜಾನ್‌ ಭಾರೀ ರಿಯಾಯಿತಿ ನೀಡಿದೆ. ಇದನ್ನು ನೀವು ಕೇವಲ 11,699 ರೂ.ಗಳಲ್ಲಿ ಕೊಂಡುಕೊಳ್ಳಬಹುದಾಗಿದೆ. ಇದಕ್ಕೆ ಅಮೆಜಾನ್‌ 2,672 ರೂ.ಗಳ ರಿಯಾಯಿತಿ ನೀಡಿದೆ. ಈ ಇಂಕ್ ಟ್ಯಾಂಕ್ ಪ್ರಿಂಟರ್ ಸ್ಕ್ಯಾನ್, ಕಾಪಿ ಮತ್ತು ಪ್ರಿಂಟ್ ಅಯ್ಕೆಯನ್ನು ಪಡೆದಿದೆ. ಇದರಲ್ಲಿ ಒಮ್ಮೆ ಪೂರ್ಣ ಇಂಕ್‌ ಲೋಡ್‌ ಮಾಡಿ ಬಳಕೆ ಮಾಡಲು ಮುಂದಾದರೆ ಬರೋಬ್ಬರಿ 15,000 ಕಪ್ಪು ಮತ್ತು 8000 ಬಣ್ಣದ ಪುಟಗಳನ್ನು ಮುದ್ರಿಸಬಹುದಾಗಿದೆ. ಇದರಲ್ಲಿ ವೈ-ಫೈ ಬೆಂಬಲದ ಆಯ್ಕೆಯನ್ನು ನೀಡಲಾಗಿದೆ.

ಬ್ರದರ್ DCP-T226 ಇಂಕ್ ಟ್ಯಾಂಕ್ ರೀಫಿಲ್ ಸಿಸ್ಟಮ್

ಬ್ರದರ್ DCP-T226 ಇಂಕ್ ಟ್ಯಾಂಕ್ ರೀಫಿಲ್ ಸಿಸ್ಟಮ್

ಈ ಪ್ರಿಂಟರ್‌ಗೆ ಅಮೆಜಾನ್‌ 2,991 ರೂ.ಗಳ ರಿಯಾಯಿತಿ ಘೋಷಣೆ ಮಾಡಿದ್ದು, 10,999 ರೂ.ನಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ ಪ್ರಿಂಟರ್‌ ಮುದ್ರಣ, ಸ್ಕ್ಯಾನ್ ಮತ್ತು ಕಾಪಿ ಆಯ್ಕೆಯನ್ನು ಪಡೆದಿದೆ. ಇದರಲ್ಲಿ ಒಮ್ಮೆ ಇಂಕ್‌ಟ್ಯಾಂಕ್‌ ಭರ್ತಿ ಮಾಡಿದರೆ ಕಪ್ಪು ಬಣ್ಣದಲ್ಲಿ 7,500 ಪುಟಗಳು ಹಾಗೂ ಬಣ್ಣದಲ್ಲಿ 5,000 ಪುಟಗಳನ್ನು ಮುದ್ರಿಸಬಹುದಾಗಿದೆ.

ಮಿ 10000mAH Li-Polymer ಪವರ್ ಬ್ಯಾಂಕ್:

ಮಿ 10000mAH Li-Polymer ಪವರ್ ಬ್ಯಾಂಕ್:

ಈ ಪವರ್ ಬ್ಯಾಂಕ್‌ಗೆ ಅಮೆಜಾನ್‌ ಭಾರೀ ರಿಯಾಯಿತಿ ನೀಡಿದೆ. ಇದನ್ನು ನೀವು ಕೇವಲ 999 ರೂ.ಗಳಲ್ಲಿ ಕೊಂಡುಕೊಳ್ಳಬಹುದಾಗಿದೆ. ಇದಕ್ಕೆ ಅಮೆಜಾನ್‌ 2,199 ರೂ. ಗಳ ರಿಯಾಯಿತಿ ನೀಡಿದೆ. 10000mAh ಬ್ಯಾಟರಿ ಸಾಮರ್ಥ್ಯ ಇರುವ ಈ ಪವರ್ ಬ್ಯಾಂಕ್ 18W ವೇಗದ ಚಾರ್ಜಿಂಗ್‌ನ ಬೆಂಬಲ ಪಡೆದಿದ್ದು, ಟೈಪ್-ಸಿ ಇನ್‌ಪುಟ್ ಮತ್ತು ಮೈಕ್ರೋ ಯುಎಸ್‌ಬಿ ಪೋರ್ಟ್‌ ಆಯ್ಕೆ ಪಡೆದಿದೆ.

ವೆಸ್ಟರ್ನ್ ಡಿಜಿಟಲ್ WD 1TB ಎಲಿಮೆಂಟ್ಸ್ ಪೋರ್ಟಬಲ್ ಹೆಚ್‌ಡಿಡಿ

ವೆಸ್ಟರ್ನ್ ಡಿಜಿಟಲ್ WD 1TB ಎಲಿಮೆಂಟ್ಸ್ ಪೋರ್ಟಬಲ್ ಹೆಚ್‌ಡಿಡಿ

ಈ ಹಾರ್ಡ್‌ಡಿಸ್ಕ್‌ಗೆ ಅಮೆಜಾನ್‌ ಉತ್ತಮ ರಿಯಾಯಿತಿ ನೀಡಿದೆ. ಇದನ್ನು ನೀವು ಕೇವಲ 3,798 ರೂ.ಗಳಲ್ಲಿ ಕೊಂಡುಕೊಳ್ಳಬಹುದಾಗಿದೆ. ಇದಕ್ಕೆ1,602 ರೂ.ಗಳ ರಿಯಾಯಿತಿ ನೀಡಲಾಗಿದೆ. ಇನ್ನುಳಿದಂತೆ ಇದರ ಕೆಲವು ವೈಶಿಷ್ಟ್ಯವನ್ನು ಗಮನಿಸುವುದಾದರೆ WD 1TB ಎಲಿಮೆಂಟ್ಸ್ ಬಾಹ್ಯ ಡ್ರೈವ್ USB 3.0 ಸಂಪರ್ಕದ ಆಯ್ಕೆ ಪಡೆದಿದೆ. ಹಾಗೆಯೇ PC, PS4 ಮತ್ತು Xbox ನೊಂದಿಗೆ ಹೊಂದಿಕೊಳ್ಳುತ್ತದೆ. ಜೊತೆಗೆ ವೇಗದ ಮಾಹಿತಿ ವರ್ಗಾವಣೆ ಮಾಡುವ ಫೀಚರ್ಸ್‌ ಪಡೆದುಕೊಂಡಿದೆ.

Best Mobiles in India

English summary
A huge offer has been announced for smart devices in the Amazon Great Indian Sale. Amazon has offered discounts ranging from 50% to 70% on some key items.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X