Subscribe to Gizbot

ಮಿಸ್‌ ಮಾಡಿದ್ರೆ ಲಾಸ್‌: ಮತ್ತೆ ಸಿಗದ ಆಫರ್ ಮೊಟೊ G5 ರೂ.6999ಕ್ಕೆ ಮಾರಾಟ..!

Written By:

ಭಾರತೀಯ ಆನ್‌ಲೈನ್ ಮಾರುಕಟ್ಟೆಯಲ್ಲಿ ಶಾಪಿಂಗ್‌ ತಾಣಗಳಾದ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್ ಗಳು ಸಾಕಷ್ಟು ಸದ್ದು ಮಾಡುತ್ತಿದ್ದು, ಒಂದೇ ಬಾರಿ ಆಫರ್ ಘೋಷಣೆ ಮಾಡಿ, ಜಿದ್ದಿಗೆ ಬಿದ್ದು ಆಫರ್ ನೀಡುತ್ತಿವೆ. ಫ್ಲಿಪ್‌ಕಾರ್ಟ್‌ ರಿಪಬ್ಲಿಕ್‌ ಡೇ ಹೆಸರಿನಲ್ಲಿ ಆಫರ್ ಘೋಷಣೆ ಮಾಡಿದರೆ, ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಹೆಚ್ಚಿನ ಆಫರ್ ಗಳನ್ನು ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ಲಾಭವಾಗುತ್ತಿದ್ದು, ಜನವರಿ 21 ರಿಂದ ಆರಂಭವಾಗಿರುವ ಈ ಸೇಲ್‌ಗಳು 23ರ ವರೆಗೂ ನಡೆಯಲಿದೆ.

ಮಿಸ್‌ ಮಾಡಿದ್ರೆ ಲಾಸ್‌: ಮತ್ತೆ ಸಿಗದ ಆಫರ್ ಮೊಟೊ G5 ರೂ.6999ಕ್ಕೆ ಮಾರಾಟ..!

ಈಗಾಗಲೇ ಅಮೆಜಾನ್-ಫ್ಲಿಪ್‌ಕಾರ್ಟ್‌ ಸೇಲ್ ಆರಂಭವಾಗಿದ್ದು, ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಅಮೆಜಾನ್ HDFC ಕಾರ್ಡ್ ಬಳಕೆದಾರರಿಗೆ ಹೆಚ್ಚಿನ ಲಾಭ ಮಾಡಿಕೊಟ್ಟರೆ, ಫ್ಲಿಪ್‌ಕಾರ್ಡ್ ಸಿಟಿ ಬ್ಯಾಂಕ್ ಕಾರ್ಡ್‌ ಬಳಕೆದಾರರಿಗೆ ಅಧಿಕ ಆಫರ್ ಗಳನ್ನು ನೀಡುತ್ತಿದೆ. ಈ ಎರಡು ಸೇಲ್‌ಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಳೆ ಭರ್ಜರಿ ಆಫರ್ ಕಾಣಬಹುದಾಗಿದ್ದು, ಅವುಗಳ ಕುರಿತ ಮಾಹಿತಿಯೂ ಇಲ್ಲಿದೆ.

ಓದಿರಿ: ಡಿಸ್‌ಪ್ಲೇಯಲ್ಲಿ ತೂತು ಮಾಡಿದ ಸ್ಯಾಮ್‌ಸಂಗ್: ಆಪಲ್ ಸೋಲಿಸಲು ಹೀಗೆ ಮಾಡಿದ್ದ.?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಟೊ G5 ಕೇವಲ ರೂ. 6,999ಕ್ಕೆ:

ಮೊಟೊ G5 ಕೇವಲ ರೂ. 6,999ಕ್ಕೆ:

ಮೊಟೊ ಬಿಡುಗಡೆ ಮಾಡಿರುವ ಮೊಟೊ G5 ಸ್ಮಾರ್ಟ್‌ ಫೋನ್ ಇತಿಹಾಸದಲ್ಲೇ ಇಷ್ಟು ಕಡಿಮೆ ಬೆಲೆಗೆ ಬಿಡುಗಡೆಯಾಗಿಲ್ಲ ಎನ್ನಲಾಗಿದೆ. ಅಮೆಜಾನ್‌ನಲ್ಲಿ ಈ ಸ್ಮಾರ್ಟ್‌ ಫೋನ್ ಕೇಲವ ರೂ.6,999ಕ್ಕೆ ಮಾರಾಟವಾಗುತ್ತಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಅಸಲಿ ಬೆಲೆ ರೂ.11,999 ಆಗಿದೆ. ಇದರಲ್ಲಿ 3GB RAM ಮತ್ತು 16GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ.

ರೆಡ್‌ಮಿ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಕಡಿತ:

ರೆಡ್‌ಮಿ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಕಡಿತ:

ಇದಲ್ಲದೆ ಮಾರುಕಟ್ಟೆಯಲ್ಲಿ ಹವಾ ಎನ್ನಿಸಿರುವ ರೆಡ್‌ಮಿ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಫ್ಲಿಪ್‌ಕಾರ್ಡ್ ಕಡಿತವನ್ನು ಮಾಡಿದೆ. ರೆಡ್‌ಮಿ ನೋಟ್ 4 ಬೆಲೆಯಲ್ಲಿ ರೂ.2000 ಕಡಿತವಾಗಿದೆ. ರೂ.10,999ಕ್ಕೆ ಈ ಸ್ಮಾರ್ಟ್‌ಫೋನ್ ದೊರೆಯುತ್ತಿದೆ.

10.or E ಮತ್ತು 10.or G ಬೆಲೆಯಲ್ಲಿ ರೂ.3000 ಕಡಿತ:

10.or E ಮತ್ತು 10.or G ಬೆಲೆಯಲ್ಲಿ ರೂ.3000 ಕಡಿತ:

ಬಜೆಟ್ ಬೆಲೆಯ ಸ್ಟಾಕ್ ಆಂಡ್ರಾಯ್ಡ್ ಖ್ಯಾತಿಯನ್ನು ಪಡೆದುಕೊಂಡಿರುವ 10,or E ಮತ್ತು 10,or G ಬೆಲೆಯಲ್ಲಿ ರೂ.3000 ಕಡಿತವನ್ನು ಅಮೆಜಾನ್ ಘೋಷಣೆ ಮಾಡಿದೆ ಎನ್ನಲಾಗಿದೆ. ಇದು ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ.

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?
ಒಪ್ಪೋ ಬೆಲೆಯಲ್ಲಿ ಭಾರೀ ಕಡಿತ:

ಒಪ್ಪೋ ಬೆಲೆಯಲ್ಲಿ ಭಾರೀ ಕಡಿತ:

ಇದರೊಂದಿಗೆ ಫ್ಲಿಪ್‌ಕಾರ್ಟ್‌ ಒಪ್ಪೋ F3 ಸ್ಮಾರ್ಟ್‌ಪೋನ್ ಅನ್ನು ರೂ.12000ಕ್ಕೆ ಮಾರಾಟ ಮಾಡುತ್ತಿದೆ. ಈ ಸ್ಮಾರ್ಟ್‌ಫೋನ್ ಬೆಲೆ ಮಾರುಕಟ್ಟೆಯಲ್ಲಿ ರೂ.19000ಗಳಾಗಿದೆ ಎನ್ನಲಾಗಿದೆ. ಇದಲ್ಲದೇ ಇನ್ನು ಹಲವು ಆಫರ್ ಗಳು ಇಲ್ಲಿ ಲಭ್ಯವಿದೆ.

ಅಮೆಜಾನ್‌ನಲ್ಲಿ ಮಿ ಮಿಕ್ಸ್:

ಅಮೆಜಾನ್‌ನಲ್ಲಿ ಮಿ ಮಿಕ್ಸ್:

ಅಮೆಜಾನ್ ಶಿಯೋಮಿ ಮಿ ಮಿಕ್ಸ್ 2 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಕಡಿತ ಮಾಡಿದ್ದು, ರೂ.12,999ಕ್ಕೆ ಈ ಪೋನ್ ಮಾರಾಟ ಮಾಡುತ್ತಿದೆ. ಇದರ ಅಸಲಿ ಬೆಲೆ ರೂ. 14,999ಗಳಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Amazon India, Flipkart fight it out in first sale of 2018. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot