ಮ್ಯೂಸಿಕ್‌ ಗ್ಯಾಜೆಟ್ಸ್‌ ಖರೀದಿಸುವವರಿಗೆ ಅಮೆಜಾನ್‌ನಲ್ಲಿದೆ ಬಿಗ್‌ ಸಪ್ರೈಸ್‌!

|

ಸ್ಮಾರ್ಟ್‌ಫೋನ್‌ ಜೊತೆಗೊಂದು ಉತ್ತಮವಾದ ಇಯರ್‌ಫೋನ್‌ ಬಳಸುವುದಕ್ಕೆ ಎಲ್ಲರೂ ಬಯಸುತ್ತಾರೆ. ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಖರೀದಿಸುವಾಗ ಫೋನ್‌ ಬಾಕ್ಸ್‌ನಲ್ಲಿ ಇಯರ್‌ಫೋನ್‌ಗಳನ್ನು ನೀಡಲಾಗುತ್ತಿಲ್ಲ. ಇದೇ ಕಾರಣಕ್ಕೆ ನೀವು ನಿಮಗೆ ಸೂಕ್ತ ಎನಿಸುವ ಇಯರ್‌ಫೋನ್‌ ಖರೀದಿಸಬೇಕಾಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಇಯರ್‌ಫೋನ್‌ಗಳು ಖರೀದಿಗೆ ಲಭ್ಯವಿದೆ. ಇವುಗಳಲ್ಲಿ ಅನೇಕ ಇಯರ್‌ ಫೋನ್‌ ಹಾಗೂ ನೆಕ್‌ಬ್ಯಾಂಡ್‌ಗಳು ಆನ್‌ಲೈನ್‌ನಲ್ಲಿ ಆಫರ್‌ ನಲ್ಲಿ ದೊರೆಯುತ್ತಿವೆ.

ಆನ್‌ಲೈನ್‌ನಲ್ಲಿ

ಹೌದು, ಆನ್‌ಲೈನ್‌ನಲ್ಲಿ ಇಯರ್‌ಫೋನ್‌ ಹಾಗೂ ನೆಕ್‌ಬ್ಯಾಂಡ್‌ಗಳು ರಿಯಾಯಿತಿ ದರದಲ್ಲಿ ದೊರೆಯಲಿವೆ. ಇದೀಗ ಅಮೆಜಾನ್‌ ಇಯರ್‌ಫೋನ್‌ಗಳನ್ನು ರಿಯಾಯಿತಿ ದರದಲ್ಲಿ ಖರೀದಿಸುವವರಿಗೆ ಸೂಕ್ತವಾದ ವೇದಿಕೆಯನ್ನು ನೀಡಿದೆ. ಅಮೆಜಾನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಇಯರ್‌ಬಡ್ಸ್‌, ನೆಕ್‌ಬ್ಯಾಂಡ್ಸ್‌ ಗಳ ಮೇಲೆ ಬಿಗ್‌ ಆಫರ್‌ ಅನ್ನು ನೀಡುತ್ತಿದೆ. ಈ ಆಫರ್‌ ಇದೇ ಜೂನ್‌ 23ರವರೆಗೆ ದೊರೆಯಲಿದ್ದು, ನಿಮಗಎ ಸೂಕ್ತ ಎನಿಸುವ ಇಯರ್‌ಫೋನ್‌ಗಳನ್ನು ಖರೀದಿಸಬಹುದಾಗಿದೆ.

ಅಮೆಜಾನ್‌

ಅಮೆಜಾನ್‌ ತನ್ನ ಗ್ರಾಹಕರಿಗೆ ಮ್ಯೂಸಿಕ್‌ ಗ್ಯಾಜೆಟ್ಸ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ಘೋಷಿಸಿದೆ. ಈ ಮೂಲಕ ಮ್ಯೂಸಿಕ್‌ ಪ್ರಿಯರು ಇಯರ್‌ಫೋನ್‌ಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಸೂಕ್ತ ಇಎಂಐ ಆಫರ್‌ನಲ್ಲಿ ಖರೀದಿಸುವ ಅವಕಾಶ ನೀಡಿದೆ. ಈ ಆಫರ್‌ನಲ್ಲಿ ಗಿಟಾರ್‌ಗಳು, ಕೀಬೋರ್ಡ್‌ಗಳು, ಮೈಕ್ರೊಫೋನ್‌ಗಳು, ಸ್ಪೀಕರ್‌ಗಳು, ಹೆಡ್‌ಫೋನ್‌ಗಳು, ಸೌಂಡ್‌ಬಾರ್‌ಗಳು ಮತ್ತು ಮ್ಯೂಸಿಕ್‌ ಟೂಲ್ಸ್‌ಗಳನ್ನು 60% ರಷ್ಟು ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. ಹಾಗಾದ್ರೆ ಅಮೆಜಾನ್‌ನಲ್ಲಿ ಯಾವೆಲ್ಲಾ ಮ್ಯೂಸಿಕ್‌ ಗ್ಯಾಜೆಟ್ಸ್‌ಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬೋಟ್ ರಾಕರ್ಜ್‌ 330ಪ್ರೊ

ಬೋಟ್ ರಾಕರ್ಜ್‌ 330ಪ್ರೊ

ಅಮೆಜಾನ್‌ನಲ್ಲಿ ಆಫರ್‌ ಪಡೆದುಕೊಂಡಿರುವ ಮ್ಯೂಸಿಕ್‌ ಗ್ಯಾಜೆಟ್ಸ್‌ಗಳಲ್ಲಿ ಬೋಟ್ ರಾಕರ್ಜ್‌ 330ಪ್ರೊ ಕೂಡ ಒಂದಾಗಿದೆ. ಪ್ರಸ್ತುತ ಈ ನೆಕ್‌ಬ್ಯಾಂಡ್‌ ನಿಮಗೆ ಕೇವಲ 1,499ರೂ.ಗಳಿಗೆ ಲಭ್ಯವಾಗಲಿದೆ. ಇದಲ್ಲದೆ ಈ ನೆಕ್‌ಬ್ಯಾಂಡ್‌ ಸಿಂಗಲ್‌ ಚಾರ್ಜ್‌ನಲ್ಲಿ 60 ಗಂಟೆಗಳವರೆಗೆ ಪ್ಲೇಬ್ಯಾಕ್ ಟೈಂ ನೀಡಲಿದೆ. ಈ ನೆಕ್‌ಬ್ಯಾಂಡ್ ENx ಟೆಕ್ನಾಲಜಿಯನ್ನು ಹೊಂದಿದ್ದು, ಯಾವುದೇ ಬ್ಯಾಕ್‌ಗ್ರೌಂಡ್‌ ತೊಂದರೆಗಳಿಲ್ಲದೆ ನಿಮ್ಮ ಧ್ವನಿಯನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ವಾಯ್ಸ್‌ ಕಾಲ್‌ನಲ್ಲಿ ನಿಮಗೆ ಧ್ವನಿ ಸ್ಪಷ್ಟವಾಗಿ ಕೇಳುವುದಕ್ಕೆ ಅನುಮತಿಸಲಿದೆ.

ಸೋನಿ WF-1000XM4

ಸೋನಿ WF-1000XM4

ಸೋನಿ ಕಂಪೆನಿಯ ಸೋನಿ WF-1000XM4 ಅತ್ಯುತ್ತಮವಾದ ಇಯರ್‌ಬಡ್ಸ್‌ಗಳಲ್ಲಿ ಒಂದಾಗಿದೆ. ಈ ಇಯರ್‌ಬಡ್ಸ್‌ ಇದೀಗ ಅಮೆಜಾನ್‌ನಲ್ಲಿ ಆಫರ್‌ ಪಡೆದುಕೊಂಡಿದೆ. ಇದರಿಂದ ಇದನ್ನು ನೀವು ಕೇವಲ 18,990ರೂ.ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಇಯರ್‌ಬಡ್ಸ್‌ ಹೊಸ ಇಂಟಿಗ್ರೇಟೆಡ್ ಪ್ರೊಸೆಸರ್ V1 ಹೊಂದಿದೆ. ಈ ಹೊಸ ಇಂಟಿಗ್ರೇಟೆಡ್ ಪ್ರೊಸೆಸರ್ V1 ಮತ್ತು ಬೆಂಬಲಿಸುವ LDAC ಕೊಡೆಕ್‌ನೊಂದಿಗೆ ಅಸಾಧಾರಣ ಧ್ವನಿ ಗುಣಮಟ್ಟದೊಂದಿಗೆ ಬರುತ್ತದೆ. ಸ್ಪಷ್ಟವಾದ ಕರೆ ಗುಣಮಟ್ಟ, ಬೀಮ್‌ಫಾರ್ಮಿಂಗ್ ಮೈಕ್ರೊಫೋನ್ ಅನ್ನು ಹೊಂದಿದೆ. ಇದರಲ್ಲಿರುವ ಸ್ಪೀಕ್-ಟು-ಚಾಟ್ ತಂತ್ರಜ್ಞಾನವು ಸಂಭಾಷಣೆಯ ಸಮಯದಲ್ಲಿ ವಾಲ್ಯೂಮ್ ಅನ್ನು ಆಟೋಮ್ಯಾಟಿಕ್‌ ಆಗಿ ಕಡಿಮೆ ಮಾಡಲಿದೆ.

JBL ಫ್ಲಿಪ್ 4

JBL ಫ್ಲಿಪ್ 4

ಆಫರ್‌ನಲ್ಲಿ ಮ್ಯೂಸಿಕ್‌ ಗ್ಯಾಜೆಟ್ಸ್‌ ಖರೀದಿಸಬೇಕೆಂದುಕೊಂಡವರಿಗೆ ಅಮೆಜಾನ್‌ JBL ಫ್ಲಿಪ್ 4 ಸ್ಪೀಕರ್‌ ಮೇಲೆ ಆಫರ್‌ ನೀಡಿದೆ. ಈ ಸ್ಪೀಕರ್‌ ವಾಯರ್‌ಲೆಸ್ ಆಗಿ 2 ಸ್ಮಾರ್ಟ್‌ಫೋನ್‌ಗಳು ಅಥವಾ ಟ್ಯಾಬ್ಲೆಟ್‌ಗಳನ್ನು ಕನೆಕ್ಟ್‌ ಮಾಡಲಿದೆ. ಇದು ವಾಟರ್‌ಪ್ರೂಫ್‌ ಸ್ಪೀಕರ್‌ ಆಗಿದ್ದು, ನೀರಿನಲ್ಲಿ ಮುಳುಗಿದರು ಕೂಡ ಯಾವುದೇ ತೊಂದರೆಯಿಲ್ಲದೆ ಪಾರ್ಟಿಯನ್ನು ಅನುಭವಿಸಬಹುದು. ಪ್ರಸ್ತುತ ಈ ಸ್ಪೀಕರ್‌ ನಿಮಗೆ ಅಮೆಜಾನ್‌ನಲ್ಲಿ ಕೇವಲ 7,499ರೂ.ಬೆಲೆಗೆ ದೊರೆಯಲಿದೆ.

ಇಂಟರ್ನ್ INT-38C ಅಕೌಸ್ಟಿಕ್ ಗಿಟಾರ್ ಕಿಟ್

ಇಂಟರ್ನ್ INT-38C ಅಕೌಸ್ಟಿಕ್ ಗಿಟಾರ್ ಕಿಟ್

ಇಂಟರ್ನ್ INT-38C ಅಕೌಸ್ಟಿಕ್ ಗಿಟಾರ್ ಕಿಟ್ ಖರೀದಿಸಲು ಬಯಸುವವರು ಅಮೆಜಾನ್‌ನಲ್ಲಿ 2,090ರೂ.ಗಳಿಗೆ ಖರೀದಿಸಬಹುದು. ಅಗತ್ಯ ಪರಿಕರಗಳೊಂದಿಗೆ ಸಂಗೀತ ವಾದ್ಯಗಳ ದೊಡ್ಡ ಶ್ರೇಣಿಯನ್ನು ನೀಡುತ್ತದೆ. ಇನ್ನು ಅಕೌಸ್ಟಿಕ್ ಗಿಟಾರ್ ಅನ್ನು ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ. ಇದರಿಂದ ನೀವು ಉತ್ತಮ ಗುಣಮಟ್ಟದ ಮ್ಯೂಸಿಕ್‌ ಔಟ್‌ಪುಟ್‌ ಅನ್ನು ಪಡೆದುಕೊಳ್ಳಬಹುದಾಗಿದೆ. ನೀವು ತಕ್ಷಣ ನುಡಿಸಲು ಪ್ರಾರಂಭಿಸಲು ಅಗತ್ಯವಿರುವ ಎಲ್ಲದರೊಂದಿಗೆ ಈ ಗಿಟಾರ್ ಬರುತ್ತದೆ. ಇದರ ಕಾಂಪ್ಯಾಕ್ಟ್ ಗಾತ್ರ ಮತ್ತು ಅಕೌಸ್ಟಿಕ್ ಟೋನ್ ನಿಮಗೆ ಎಲ್ಲಿಯಾದರೂ ಮ್ಯೂಸಿಕ್‌ ಅನ್ನು ಪ್ಲೇ ಮಾಡಲು ಅವಕಾಶ ನೀಡಲಿದೆ.

JUAREZ (ಜುರೇಜ್) ಆಕ್ಟೇವ್ JRK661 ಎಲೆಕ್ಟ್ರಾನಿಕ್ ಕೀಬೋರ್ಡ್

JUAREZ (ಜುರೇಜ್) ಆಕ್ಟೇವ್ JRK661 ಎಲೆಕ್ಟ್ರಾನಿಕ್ ಕೀಬೋರ್ಡ್

JUAREZ (ಜುರೇಜ್) ಆಕ್ಟೇವ್ JRK661 ಎಲೆಕ್ಟ್ರಾನಿಕ್ ಕೀಬೋರ್ಡ್ ಹೆಸರೇ ಸೂಚಿಸುವಂತೆ ಇದು ಎಲೆಕ್ಟ್ರಾನಿಕ್ಸ್‌ ಕೀಬೋರ್ಡ್‌ ಆಗಿದೆ. ಅಂದರೆ ಮ್ಯೂಸಿಕ್‌ ಅನ್ನು ನುಡಿಸುವ ಕಿಬೋರ್ಡ್‌ ಪಿಯೋನೋ ಇದಾಗಿದೆ. ಇದರಲ್ಲಿ ಇಂಟರ್‌ಬಿಲ್ಟ್‌ ಸ್ಪೀಕರ್‌ಗಳನ್ನು ನೀಡಲಾಗಿದ್ದು, ಈ ಸ್ಪೀಕರ್‌ಗಳು 255 ಟಿಂಬ್ರೆಗಳು, 255 ಲಯಗಳು, 8 ಕೀಬೋರ್ಡ್ ತಾಳವಾದ್ಯಗಳು ಮತ್ತು 24 ಪ್ರದರ್ಶನ ಹಾಡುಗಳೊಂದಿಗೆ ಪ್ರಚಂಡ ಧ್ವನಿಯನ್ನು ನೀಡುತ್ತವೆ. ಇದನ್ನು ನೀವು ಕೇವಲ 3,799ರೂ.ಗಳಿಗೆ ಖರೀದಿಸಬಹುದಾಗಿದೆ.

ಜೆಬ್ರೋನಿಕ್ಸ್ ಜುಕ್‌ಬಾರ್ 3900

ಜೆಬ್ರೋನಿಕ್ಸ್ ಜುಕ್‌ಬಾರ್ 3900

ಜೆಬ್ರೋನಿಕ್ಸ್ ಜುಕ್‌ಬಾರ್ 3900 ಒಂದು ಸೌಂಡ್‌ಬಾರ್ ಆಗಿದೆ. ಇದು ಪವರ್‌ಫುಲ್‌ ಡ್ಯುಯಲ್ 5.7cm ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದರಿಂದ ನೀವು ನಿಮ್ಮ ಮನೆಯಲ್ಲಿಯೇ ಹೈ-ಫಿಡೆಲಿಟಿ ಸಿನಿಮೀಯ ಅನುಭವವನ್ನು ಪಡೆಯಬಹುದು. ಇದಕ್ಕಾಗಿ ಇದರಲ್ಲಿ 13.3cm ಸಬ್ ವೂಫರ್ ಅನ್ನು ಸೆಟ್‌ ಮಾಡಲಾಗದೆ. ಇನ್ನು ಈ ಸೌಂಡ್‌ಬಾರ್ ಮಲ್ಟಿ-ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದೆ. ಇದಲ್ಲದೆ ಈ ಸೌಂಡ್‌ಬಾರ್‌ನಲ್ಲಿ ಬಿಟಿ ಮೋಡ್ ಮೂಲಕ ವಾಯರ್‌ಲೆಸ್ ಸ್ಟ್ರೀಮಿಂಗ್ ಅನ್ನು ಆನಂದಿಸಬಹುದು. ಪ್ರಸ್ತುತ ಈ ಸೌಂಡ್‌ ಬಾರ್‌ 4,599ರೂ ಬೆಲೆಗೆ ದೊರೆಯಲಿದೆ.

Best Mobiles in India

Read more about:
English summary
Amazon India has come up with heavily discounted sales for its users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X