ಅಮೆಜಾನ್‌ ಕಿಕ್‌ಸ್ಟಾರ್ಟರ್ ಡೀಲ್ಸ್‌ನಲ್ಲಿ ಈ ಡಿವೈಸ್‌ಗಳಿಗೆ ಬಿಗ್‌ ಡಿಸ್ಕೌಂಟ್‌!

|

ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣ ಎನಿಸಿಕೊಂಡಿದೆ. ತನ್ನ ಗ್ರಾಹಕರಿಗಾಗಿ ವಿಶೇಷ ದಿನಗಳಲ್ಲಿ ಮಾತ್ರವಲ್ಲದೆ ವಿಕೆಂಡ್‌ ಮಂತ್‌ ಎಂಡ್‌ ಸೇಲ್‌ಗಳನ್ನು ನಡೆಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಅನ್ನು ಆಯೋಜಸಲು ಸಿದ್ಧತೆ ನಡೆಸಿದೆ. ಈ ಸೇಲ್‌ ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಇದರ ನಡುವೆ ಅಮೆಜಾನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅಮೆಜಾನ್ ಕಿಕ್‌ಸ್ಟಾರ್ಟರ್ ಡೀಲ್ಸ್‌ ನಡೆಸುತ್ತಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಕಿಕ್‌ ಸ್ಟಾರ್ಟರ್‌ ಡೀಲ್ಸ್‌ನಲ್ಲಿ ಹಲವು ಗ್ಯಾಜೆಟ್ಸ್‌ಗಳ ಮೇಲೆ ಡಿಸ್ಕೌಂಟ್‌ ಅನ್ನು ನೀಡುತ್ತಿದೆ. ಇದರಲ್ಲಿ ಐಕ್ಯೂ, ಒಪ್ಪೋ, ರಿಯಲ್‌ಮಿ ಮತ್ತು ಹಲವು ಜನಪ್ರಿಯ ಬ್ರ್ಯಾಂಡ್‌ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿ ದೊರೆಯುತ್ತಿದೆ. ಜೊತೆಗೆ, ಸ್ಮಾರ್ಟ್‌ವಾಚ್‌ಗಳು, ಟಿವಿಗಳು, ಟ್ರೂಲಿ ವಾಯರ್‌ಲೆಸ್‌ ಸ್ಟಿರಿಯೊ (TWS) ಇಯರ್‌ಫೋನ್‌ಗಳ ಮೇಲೆ ವಿಶೇಷ ಆಫರ್‌ಗಳನ್ನು ಪ್ರಕಟಿಸಿದೆ. ಹಾಗಾದ್ರೆ ಅಮೆಜಾನ್‌ ಕಿಕ್‌ ಸ್ಟಾರ್ಟ್‌ರ್‌ನಲ್ಲಿ ಏನೆಲ್ಲಾ ಆಫರ್‌ಗಳು ದೊರೆಯುತ್ತಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್‌

ಅಮೆಜಾನ್‌ ತನ್ನ ಕಿಕ್‌ ಸ್ಟಾರ್ಟರ್‌ ಡೀಲ್ಸ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಎಲೆಕ್ಟ್ರಾನಿಕ್ಸ್ ಶ್ರೇಣಿಯ ಮೇಲೆ ಹಲವಾರು ಆಫರ್‌ಗಳನ್ನು ಪ್ರಕಟಿಸಿದೆ. ಇದಕ್ಕಾಗಿ ಅಮೆಜಾನ್‌ SBI ಕಾರ್ಡ್ ಮೂಲಕ ಖರೀದಿಸುವವರಿಗೆ 10% ಡಿಸ್ಕೌಂಟ್‌ ನಿಡುತ್ತಿದೆ. ಇದಲ್ಲದೆ, ಪ್ರೈಮ್‌ ಸದಸ್ಯರು ಕನಿಷ್ಠ ಒಂದು ಸಾವಿರ ರೂ ಮೌಲ್ಯದ ಖರೀದಿಗಳ ಮೇಲೆ ಹೆಚ್ಚುವರಿ ಬೋನಸ್‌ಗಳನ್ನು ಪಡೆಯುವುದಕ್ಕೆ ಸಾಧ್ಯವಿದೆ. ಸದ್ಯ ಅಮೆಜಾನ್ ಕಿಕ್‌ಸ್ಟಾರ್ಟರ್ ಡೀಲ್‌ಗಳಲ್ಲಿ ಪ್ರಸ್ತುತ ಲೈವ್ ಆಗಿರುವ ಕೆಲವು ಆರಫರ್‌ಗಳ ವಿವರ ಈ ಕೆಳಗಿನಂತಿದೆ.

ಒನ್‌ಪ್ಲಸ್‌ 9 ಪ್ರೊ

ಒನ್‌ಪ್ಲಸ್‌ 9 ಪ್ರೊ

ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ ಒನ್‌ಪ್ಲಸ್‌ 9 ಪ್ರೊ ಸ್ಮಾರ್ಟ್‌ಫೋನ್‌ 12GB + 256GB ಸ್ಟೋರೇಜ್ ಮಾದರಿಯು 54,999ರೂ.ಗಳಿಗೆ ಲಭ್ಯವಾಗುತ್ತಿದೆ. ಇದರಿಂದ ನಿಮಗೆ 15,000ರೂ. ಗಳ ಡಿಸ್ಕೌಂಟ್‌ ದೊರೆಯಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 120Hz ರಿಫ್ರೆಶ್ ರೇಟ್‌ ಬೆಂಬಲಿಸುವ 6.7 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸ್ನಾಪ್‌ಡ್ರಾಗನ್‌ 888 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಪಡೆದಿದೆ.

ಐಕ್ಯೂ 9

ಐಕ್ಯೂ 9

ಐಕ್ಯೂ 9 ಸ್ಮಾರ್ಟ್‌ಫೋನ್‌ ಅಮೆಜಾನ್‌ ಕಿಕ್‌ ಸ್ಟಾರ್ಟರ್‌ ಡೀಲ್ಸ್‌ನಲ್ಲಿ ಕೇವಲ 39,999ರೂ ಬೆಲೆಗೆ ಲಭ್ಯವಾಗುತ್ತಿದೆ. ಇದರಿಂದ ಈ ಸ್ಮಾರ್ಟ್‌ಫೋನ್‌ ಮೇಲೆ 10,000ರೂ. ವರೆಗೆ ಡಿಸ್ಕೌಂಟ್‌ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.56 ಇಂಚಿನ ಫುಲ್‌ HD+ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 888+ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಪ್ರೈಮೆರಿ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದಿದೆ. ಜೊತೆಗೆ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಹಿಸೆನ್ಸ್ 65-ಇಂಚಿನ 4K QLED ಆಂಡ್ರಾಯ್ಡ್‌ ಟಿವಿ

ಹಿಸೆನ್ಸ್ 65-ಇಂಚಿನ 4K QLED ಆಂಡ್ರಾಯ್ಡ್‌ ಟಿವಿ

ಹಿಸೆನ್ಸ್‌ ಕಂಪೆನಿಯ 65 ಇಂಚಿನ QLED ಆಂಡ್ರಾಯ್ಡ್‌ ಟಿಟಿ ಅಮೆಜಾನ್‌ನಲ್ಲಿ ವಿಶೇಷ ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ ಈ ಸ್ಮಾರ್ಟ್‌ಟಿವಿ 1,09,990ರೂ ಬದಲಿಗೆ ನಿಮಗೆ 67,990ರೂ. ಬೆಲೆಗೆ ಲಭ್ಯವಾಗಲಿದೆ. ಇನ್ನು ಸ್ಮಾರ್ಟ್‌ಟಿವಿ 60Hz ರಿಫ್ರೆಶ್ ರೇಟ್‌ ಬೆಂಬಲಿಸುವ 65 ಇಂಚಿನ 4K QLED ಡಿಸ್‌ಪ್ಲೇ ಹೊಂದಿದೆ. ಇದು ಮಲ್ಟಿ-ಚಾನೆಲ್ ಸರೌಂಡ್ ಸೌಂಡ್ ಅನ್ನು ನೀಡಬಲ್ಲ ಡಾಲ್ಬಿ ಅಟ್ಮಾಸ್ ಟೆಕ್ನಾಲಜಿಯನ್ನು ಹೊಂದಿದೆ.

ಮಿ LED TV 4C

ಮಿ LED TV 4C

ಮಿ LED TV 4C ಅಮೆಜಾನ್‌ನಲ್ಲಿ ನಿಮಗೆ ಡಿಸ್ಕೌಮಟ್‌ನಲ್ಲಿ ಲಭ್ಯವಾಗಲಿದೆ. 34,999ರೂ. ಬದಲಿಗೆ 21,999ರೂ ಬೆಲೆಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ 60Hz ರಿಫ್ರೆಶ್ ರೇಟ್‌ ಬೆಂಬಲಿಸುವ 43 ಇಂಚಿನ ಫುಲ್‌ HD ಡಿಸ್‌ಪ್ಲೇಯನ್ನು ಹೊಂದಿದೆ. ಇದು ಇಂಟರ್‌ಬಿಲ್ಟ್‌ ಕ್ರೋಮ್‌ಕಾಸ್ಟ್‌ ಮತ್ತು ಪ್ಯಾಚ್‌ವಾಲ್‌ 4 ಅನ್ನು ಹೊಂದಿದೆ. ಇದು DTS-HD ತಂತ್ರಜ್ಞಾನದಿಂದ ಚಾಲಿತವಾಗಿರುವ 20W ಸ್ಟೀರಿಯೋ ಸ್ಪೀಕರ್‌ಗಳೊಂದಿಗೆ ಈ ಟಿವಿಯನ್ನು ಅಳವಡಿಸಲಾಗಿದೆ.

Best Mobiles in India

English summary
Amazon Kickstarter Deals: Best Deals on Smartphones and SmartTVs

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X