ಇಯರ್‌ಫೋನ್‌, ಇಯರ್‌ಬಡ್ಸ್‌ಗಳಿಗೆ ಅಮೆಜಾನ್‌ನಿಂದ ಭರ್ಜರಿ ಡಿಸ್ಕೌಂಟ್!

|

ಅಮೆಜಾನ್‌ ಕಿಕ್‌ಸ್ಟಾರ್ಟರ್ ಡೀಲ್‌ಗಳು ಆರಂಭ ಆಗಿದ್ದು, ಸ್ಮಾರ್ಟ್‌ ಡಿವೈಸ್‌ಗಳ ಮೇಲೆ ಭಾರೀ ರಿಯಾಯಿತಿ ನೀಡಿದೆ. TWS ಇಯರ್‌ಬಡ್ಸ್‌ ಹಾಗೂ ಸ್ಯಾಮ್‌ಸಂಗ್, ಜೆಬಿಎಲ್‌, ಮಿವಿ ಹಾಗೂ ಇನ್ನಿತರ ಕಂಪೆನಿಯ ನೆಕ್‌ಬ್ಯಾಂಡ್ ಇಯರ್‌ಫೋನ್‌ಗಳಿಗೆ ಡಿಸ್ಕೌಂಟ್ ಘೋಷಣೆ ಮಾಡಿದೆ.

ಅಮೆಜಾನ್‌

ಹೌದು, ನಾಳೆಯಿಂದ (ಸೆ.23) ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಆರಂಭ ಆಗಲಿದೆ. ಈ ಸೇಲ್‌ ಮೇಳದಲ್ಲಿ ಆಫರ್ ಬೆಲೆಗೆ ಲಭ್ಯ ಇರುವ ಪ್ರಮುಖ ಬ್ರಾಂಡ್‌ಗಳ ಇಯರ್‌ಬಡ್ಸ್‌ಗಳು ಹಾಗೂ ನೆಕ್‌ಬ್ಯಾಂಡ್ ಇಯರ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಷಿ ಬಡ್ಸ್

ಸ್ಯಾಮ್‌ಸಂಗ್‌ ಗ್ಯಾಲಕ್ಷಿ ಬಡ್ಸ್

ಸ್ಯಾಮ್‌ಸಂಗ್‌ ಗ್ಯಾಲಕ್ಷಿ ಬಡ್ಸ್‌ ಗೆ ಅಮೆಜಾನ್‌ ಭಾರೀ ಡಿಸ್ಕೌಂಟ್‌ ನೀಡಿದೆ. ಈ ಡಿವೈಸ್‌ನಲ್ಲಿ ಮೂರು ಅಂತರ್ನಿರ್ಮಿತ ಮೈಕ್ರೊಫೋನ್‌ಗಳನ್ನು ನೀಡಲಾಗಿದೆ. ಹಾಗೆಯೇ 21 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಆಯ್ಕೆಯನ್ನು ಪಡೆದಿದ್ದು, ಈ ಬಡ್ಸ್‌ 12mm ಸ್ಪೀಕರ್‌ಗಳಿಂದ ಚಾಲಿತವಾಗಿದೆ. ಇನ್ನು ಈ ಇಯರ್‌ಪಾಡ್ಸ್‌ಅಮೆಜಾನ್‌ನಲ್ಲಿ 11,200 ರೂ.ಗಳ ರಿಯಾಯಿತಿ ಪಡೆದಿದ್ದು, 4,790 ರೂ.ನಲ್ಲಿ ಲಭ್ಯವಿದೆ.

ಕ್ರಾಸ್‌ ಬೀಟ್ಸ್ ಟಾರ್ಕ್

ಕ್ರಾಸ್‌ ಬೀಟ್ಸ್ ಟಾರ್ಕ್

ಕ್ರಾಸ್‌ ಬೀಟ್ಸ್ ಟಾರ್ಕ್ ಇಯರ್‌ಬಡ್ಸ್ ನಾಲ್ಕು ಇನ್‌ಬಿಲ್ಟ್‌ ಮೈಕ್ರೊಫೋನ್‌ಗಳನ್ನು ಹೊಂದಿದೆ. ಇದರ ಮತ್ತೊಂದು ವಿಶೇಷ ಎಂದರೆ ನಾಲ್ಕು ಸ್ಪೀಕರ್‌ ಆಯ್ಕೆ ಪಡೆದಿದ್ದು, ಸ್ವಯಂ ಸಂಗೀತ ಪತ್ತೆ ಕಾರ್ಯ ಮಾಡುತ್ತದೆ. ಇನ್ನುಳಿದಂತೆ ಒಮ್ಮೆ ಚಾರ್ಜ್‌ ಮಾಡಿದರೆ 12 ಗಂಟೆಗಳ ಪ್ಲೇಟೈಮ್ ನೀಡಲಿದೆ. ಈ ಇಯರ್‌ಬಡ್ಸ್‌ 8,000 ರೂ.ಗಳ ರಿಯಾಯಿತಿ ಪಡೆದು 3,999 ರೂ.ಗಳಲ್ಲಿ ಮಾರಾಟವಾಗಲಿದೆ.

ಜೆಬಿಎಲ್ ಟ್ಯೂನ್‌‌ 130NC

ಜೆಬಿಎಲ್ ಟ್ಯೂನ್‌‌ 130NC

ಈ ಹೊಸ ಜೆಬಿಎಲ್ ಟ್ಯೂನ್‌‌ 130NC TWS ನಾಲ್ಕು ಮೈಕ್ ರಚನೆಯನ್ನು ಹೊಂದಿದೆ. ಇದು 10mm ಆಡಿಯೊ ಡ್ರೈವರ್ ಘಟಕವನ್ನು ಒಳಗೊಂಡಿದ್ದು, 40dB ANC ವರೆಗೆ ಬೆಂಬಲಿಸುತ್ತದೆ. 40 ಗಂಟೆಗಳ ಒಟ್ಟು ಬ್ಯಾಟರಿ ಬ್ಯಾಕ್‌ಅಪ್‌ ಅವಧಿಯನ್ನು ಈ ಡಿವೈಸ್‌ ನೀಡಲಿದೆ. ಇದು 3,200 ರೂ. ಗಳ ರಿಯಾಯಿತಿ ಪಡೆದು 3,799 ರೂ. ಗಳಲ್ಲಿ ಲಭ್ಯ ಇದೆ.

ಮಿವಿ ಡ್ಯುಯೋಪಾಡ್ಸ್ A25

ಮಿವಿ ಡ್ಯುಯೋಪಾಡ್ಸ್ A25

ಮಿವಿ ಡ್ಯುಯೋಪಾಡ್ಸ್ A25 TWS ಇಯರ್‌ಬಡ್ಸ್‌ ಟಚ್ ಕಂಟ್ರೋಲ್ ಜೊತೆಗೆ ಎರಡು ಇಯರ್‌ ಬಡ್ಸ್‌ಗಳಲ್ಲಿ ಕರೆಗಳು ಮತ್ತು ಧ್ವನಿ ನಿಯಂತ್ರಣಕ್ಕಾಗಿ ಉತ್ತಮ ಮೈಕ್ರೊಫೋನ್ ಆಯ್ಕೆ ಪಡೆದಿದೆ. ಇದರಲ್ಲಿ ಇಯರ್‌ಬಡ್ಸ್‌ಗಳಿಗೆ 7.5 ಗಂಟೆಗಳವರೆಗೆ ಬ್ಯಾಟರಿ ಬ್ಯಾಕ್‌ಅಪ್‌ ಅವಧಿ ನೀಡಲಾಗಿದೆ. ಈ ಡಿವೈಸ್‌ 2,100 ರೂ.ಗಳ ರಿಯಾಯಿತಿಯ ನಂತರ 899 ರೂ. ಗಳಲ್ಲಿ ಇದು ಲಭ್ಯವಿದೆ.

ಒಪ್ಪೊ ಎನ್ಕೋ ಬಡ್ಸ್

ಒಪ್ಪೊ ಎನ್ಕೋ ಬಡ್ಸ್

ಒಪ್ಪೊ ಎನ್ಕೋ ಬಡ್ಸ್ ಬ್ಲೂಟೂತ್ v5.2 ಬೆಂಬಲದ ಆಯ್ಕೆ ಪಡೆದಿದೆ. ಈ ಇಯರ್‌ಬಡ್‌ಗಳು ಕರೆ ಸಂದರ್ಭದಲ್ಲಿ ನಾಯ್ಸ್‌ ಕ್ಯಾನ್ಸಲೇಶನ್‌ ವಿಶೇಷತೆ ಹೊಂದಿವೆ. ಒಂದೇ ಚಾರ್ಜ್‌ನೊಂದಿಗೆ ಸುಮಾರು 24 ಗಂಟೆಗಳ ಬ್ಯಾಕ್‌ಅಪ್‌ ಸಾಮರ್ಥ್ಯ ಪಡೆದಿದೆ. ಇದು 2,500 ರೂ.ಗಳ ರಿಯಾಯಿತಿ ಪಡೆದು 1,499 ರೂ.ಗಳಲ್ಲಿ ಇದು ಲಭ್ಯವಿದೆ.

ಬೌಲ್ಟ್ ಆಡಿಯೊ ಒಮೆಗಾ

ಬೌಲ್ಟ್ ಆಡಿಯೊ ಒಮೆಗಾ

ಬೌಲ್ಟ್ ಆಡಿಯೊ ಒಮೆಗಾ ಇಯರ್‌ಬಡ್ಸ್‌ 30dB ANC ಮತ್ತು ನಾಲ್ಕು ಮೈಕ್ ರಚನೆಯಲ್ಲಿವೆ. 32 ಗಂಟೆಗಳ ಪ್ಲೇಟೈಮ್ ಸಾಮರ್ಥ್ಯ ಈ ಇಯರ್‌ ಬಡ್ಸ್‌ಗಳಿಗೆ ನೀಡಲಾಗಿದ್ದು, ಯುಎಸ್‌ಬಿ ಟೈಪ್-C ಫಾಸ್ಟ್ ಚಾರ್ಜಿಂಗ್ ಬೆಂಬಲದ ಆಯ್ಕೆ ಪಡೆದಿದೆ. ಈ ಸಾಧನ 7,500ರೂ.ಗಳ ರಿಯಾಯಿತಿ ಪಡೆದು 2,499 ರೂ. ಗಳಿಗೆ ಲಭ್ಯ ಇದೆ.

ಝೆಬ್ರೋನಿಕ್ಸ್ ಝೆಬ್-ಸೌಂಡ್ ಬಾಂಬ್ 1 (Zebronics Zeb-Sound Bomb 1)

ಝೆಬ್ರೋನಿಕ್ಸ್ ಝೆಬ್-ಸೌಂಡ್ ಬಾಂಬ್ 1 (Zebronics Zeb-Sound Bomb 1)

ಈ ಝೆಬ್ರೋನಿಕ್ಸ್ ಝೆಬ್-ಸೌಂಡ್ ಬಾಂಬ್ 1 ಇಯರ್‌ಬಡ್‌ ಕರೆಗಳು ಮತ್ತು ಧ್ವನಿ ಸಹಾಯಕ್ಕಾಗಿ ಸ್ಪರ್ಶ ನಿಯಂತ್ರಣವನ್ನು ಪಡೆದಿದೆ ಇದು 6mm ಆಡಿಯೊ ಡ್ರೈವರ್ ಯೂನಿಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಬ್ಲೂಟೂತ್ v5.0 ಅನ್ನು ಬೆಂಬಲಿಸಲಿದ್ದು, 12 ಗಂಟೆಗಳವರೆಗೆ ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಇದರಲ್ಲಿದೆ. ಹಾಗೆಯೇ ಟೈಪ್-ಸಿ ಪೋರ್ಟಬಲ್ ಚಾರ್ಜಿಂಗ್ ಕೇಸ್‌ ಆಯ್ಕೆ ಪಡೆದಿದೆ. ಈ ಡಿವೈಸ್‌ 1,850 ರೂ.ಗಳ ರಿಯಾಯಿತಿ ಪಡೆದು 649 ರೂ.ಗಳಲ್ಲಿ ಲಭ್ಯವಿದೆ.

ರಿಯಲ್‌ಮಿ ಬಡ್ಸ್‌ ವಯರ್‌ಲೆಸ್‌ ಪ್ರೊ

ರಿಯಲ್‌ಮಿ ಬಡ್ಸ್‌ ವಯರ್‌ಲೆಸ್‌ ಪ್ರೊ

ರಿಯಲ್‌ಮಿ ಬಡ್ಸ್‌ ವಯರ್‌ಲೆಸ್‌ ಪ್ರೊ ನೆಕ್‌ಬ್ಯಾಂಡ್ ಇಯರ್‌ಫೋನ್‌ ಸೋನಿ LDAC ಹೈ-ರೆಸ್ ಆಡಿಯೋನಲ್ಲಿ ಕಾರ್ಯನಿರ್ವಹಿಸಲಿವೆ. 13.6mm ಆಡಿಯೋ ಡ್ರೈವರ್ ಯೂನಿಟ್‌ನೊಂದಿಗೆ ಇವು ಬರುತ್ತವೆ. ನೆಕ್‌ಬ್ಯಾಂಡ್ ಇಯರ್‌ಫೋನ್‌ಗಳು ಕ್ರಮವಾಗಿ ANC ಆಫ್ ಮತ್ತು ಆನ್‌ನಲ್ಲಿ 17 ಗಂಟೆಗಳು ಮತ್ತು 13 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಿದೆ. ಇದು 3,500 ರೂ. ಗಳ ರಿಯಾಯಿತಿ ಪಡೆದು 2,499 ರೂ.ಗಳ ಬೆಲೆಯಲ್ಲಿ ಇದು ಲಭ್ಯವಿದೆ .

ಮಿವಿ ಕಾಲರ್ ಫ್ಲ್ಯಾಶ್ ಪ್ರೊ

ಮಿವಿ ಕಾಲರ್ ಫ್ಲ್ಯಾಶ್ ಪ್ರೊ

ಮಿವಿ ಕಾಲರ್ ಫ್ಲ್ಯಾಶ್ ಪ್ರೊ ನೆಕ್‌ಬ್ಯಾಂಡ್ ಇಯರ್‌ಫೋನ್‌ 13mm ಡೈನಾಮಿಕ್ ಆಡಿಯೊ ಡ್ರೈವರ್ ಘಟಕ ಹೊಂದಿದೆ. ಇದು ವೇಗದ ಚಾರ್ಜಿಂಗ್ ವ್ಯವಸ್ಥೆ ಬೆಂಬಲಿಸಲಿದ್ದು, 10 ನಿಮಿಷಗಳ ಕಾಲ ಚಾರ್ಜ್‌ ಮಾಡಿದರೆ ಬರೋಬ್ಬರಿ 10 ಗಂಟೆಗಳವರೆಗೆ ಬಳಕೆ ಮಾಡಬಹುದಾಗಿದೆ. ಈ ಸಾಧನ 1,499 ರೂ.ಗಳ ರಿಯಾಯಿತಿ ಪಡೆದು 1,499 ರೂ.ಗಳಲ್ಲಿ ಲಭ್ಯವಿದೆ.

ಒಪ್ಪೊ ಎನ್ಕೊ ಏರ್‌ 2

ಒಪ್ಪೊ ಎನ್ಕೊ ಏರ್‌ 2

ಈ ಒಪ್ಪೊ ಎನ್ಕೊ ಏರ್‌ 2 TWS ಇಯರ್‌ಬಡ್‌ ಪ್ರಮುಖ ಫೀಚರ್ಸ್‌ಗಳನ್ನು ಒಳಗೊಂಡಿವೆ. ಇದರಲ್ಲಿ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ನಿಯಂತ್ರಣವನ್ನೂ ಮಾಡಬಹುದಾಗಿದೆ. 80ms ಕಡಿಮೆ ಲೇಟೆನ್ಸಿ ಗೇಮ್ ಮೋಡ್ ಆಯ್ಕೆ ಹೊಂದಿದ್ದು, ಕರೆಗಳಿಗೆ AI ನಾಯ್ಸ್ ಕ್ಯಾನ್ಸಲೇಶನ್ ಆಯ್ಕೆ ಪಡೆದಿದೆ. ಇನ್ನುಳಿದಂತೆ 24 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಇರಲಿದೆ. ಈ ಸ್ಮಾರ್ಟ್‌ ಇಯರ್‌ಬಡ್ಸ್‌ಗೆ 1,999 ರೂ.ಗಳ ರಿಯಾಯಿತಿ ಪಡೆದು 1,999 ರೂ.ಗಳ ಬೆಲೆ ಇದೆ.

ರಿಯ್‌ಮಿ ಬಡ್ಸ್‌ ಏರ್‌ 2

ರಿಯ್‌ಮಿ ಬಡ್ಸ್‌ ಏರ್‌ 2

ರಿಯ್‌ಮಿ ಬಡ್ಸ್‌ ಏರ್‌ 2 ಇಯರ್‌ಬಡ್‌ಗಳು 25dB ವರೆಗಿನ ANC ಬೆಂಬಲ ಹೊಂದಿದೆ. ಹಾಗೆಯೇ ಇಯರ್‌ಬಡ್‌ 88ms ಕಡಿಮೆ ಲೇಟೆನ್ಸಿ ಗೇಮ್ ಮೋಡ್ ಪಡೆದಿವೆ. ಒಮ್ಮೆ ಚಾರ್ಜ್‌ ಮಾಡಿದರೆ 25 ಗಂಟೆಗಳ ಬ್ಯಾಕ್‌ಅಪ್‌ ನೀಡಲಿದೆ. ಇದು 2,399 ರೂ.ಗಳ ರಿಯಾಯಿತಿ ಪಡೆದು 2,599 ರೂ.ಗಳಲ್ಲಿ ಲಭ್ಯವಿದೆ.

ಲಾವಾ ಪ್ರೊ ಬಡ್ಸ್ N3

ಲಾವಾ ಪ್ರೊ ಬಡ್ಸ್ N3

ಲಾವಾ ಪ್ರೊ ಬಡ್ಸ್ N3 ಬ್ಲೂಟೂತ್ v5.0 ಬೆಂಬಲ ಮತ್ತು ಡ್ಯುಯಲ್ ಡಿವೈಸ್ ಪೇರಿಂಗ್ ಆಯ್ಕೆಯನ್ನು ಪಡೆದಿವೆ. 9 ಗಂಟೆಗಳವರೆಗೆ ಪ್ಲೇಟೈಮ್‌ ಇದ್ದು, ವೇಗದ ಚಾರ್ಜಿಂಗ್‌ ಆಯ್ಕೆ ಪಡೆದಿದೆ. ಇದರ ಬೆಲೆ 999ರೂ.ಗಳಾಗಿದೆ. ಇದಕ್ಕೆ 1,000 ರೂ. ಗಳ ರಿಯಾಯಿತಿ ನೀಡಲಾಗಿದೆ.

ಟ್ರೂಕ್ ಬಡ್ಸ್ ಪ್ರೊ (Truke Buds Pro)

ಟ್ರೂಕ್ ಬಡ್ಸ್ ಪ್ರೊ (Truke Buds Pro)

ಟ್ರೂಕ್ ಬಡ್ಸ್ ಪ್ರೊ TWS ಇಯರ್‌ಬಡ್‌ ಹೈಬ್ರಿಡ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್‌ ಆಯ್ಕೆ ಇರುವ ಮೈಕ್ರೊಫೋನ್ ಅನ್ನು ಒಳಗೊಂಡಿದೆ. 12.4 ಎಂಎಂ ಆಡಿಯೊ ಡ್ರೈವರ್ ಯೂನಿಟ್‌ನೊಂದಿಗೆ ಇದು ಸಜ್ಜುಗೊಂಡಿದ್ದು, 48 ಗಂಟೆಗಳವರೆಗೆ ಪ್ಲೇಟೈಮ್ ನೀಡಲಿದೆ. ಇದು 2,800 ರೂ.ಗಳ ರಿಯಾಯಿತಿ ಪಡೆದು 1,699 ರೂ.ಗಳಲ್ಲಿ ಲಭ್ಯವಿದೆ.

Best Mobiles in India

English summary
Amazon Kickstarter deals already started. Offering discounts on smart devices such as TWS earbuds, Neckband earphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X