ಭಾರತದಲ್ಲಿ ಹೊಸ ಅಮೆಜಾನ್‌ ಕಿಂಡಲ್ ಲಾಂಚ್‌; 16 GB ಸ್ಟೋರೇಜ್‌ ಆಯ್ಕೆ

|

ಪುಸ್ತಕ ಓದಲು ಇಷ್ಟಪಡುವವರಿಗಾಗಿಯೇ ಪೋರ್ಟಬಲ್ ವಾಯರ್‌ಲೆಸ್‌ ಎಲೆಕ್ಟ್ರಾನಿಕ್ ಇ-ರೀಡರ್‌ ಡಿವೈಸ್‌ಗಳನ್ನು ಅಮೆಜಾನ್‌ ಮಾರುಕಟ್ಟೆಗೆ ಈ ಹಿಂದಿನಿಂದಲೂ ಪರಿಚಯಿಸಿಕೊಂಡು ಬರುತ್ತಿದೆ. ಅದರಲ್ಲೂ ಸಾಮಾನ್ಯವಾಗಿ ಈ ರೀಡರ್‌ ಡಿವೈಸ್‌ ಬಳಕೆದಾರರಿಗೆ ಪುಸ್ತಕವನ್ನು ಹಿಡಿದಷ್ಟೇ ಅನುಭವ ನೀಡುವುದು ವಿಶೇಷದ ಸಂಗತಿ. ಇದರ ಬೆನ್ನಲ್ಲೇ ಈಗ ಅಮೆಜಾನ್‌ ಮತ್ತೊಂದು ಆಕರ್ಷಕ ಫೀಚರ್ಸ್‌ ಇರುವ ಅಮೆಜಾನ್‌ ಕಿಂಡಲ್‌ (11 ನೇ ಜನ್) (Amazon Kindle 11th Gen) ಅನ್ನು ಭಾರತದಲ್ಲಿ ಲಾಂಚ್‌ ಮಾಡಲಾಗಿದೆ. ಇದು ಕಳೆದ ಬಾರಿ ಲಾಂಚ್‌ ಮಾಡಲಾದ ಕಿಂಡಲ್ ಡಿವೈಸ್‌ಗಿಂತ ಸ್ವಲ್ಪ ಹೆಚ್ಚಿನ ಬೆಲೆ ಹೊಂದಿದೆ.

ಅಮೆಜಾನ್‌

ಹೌದು, ಭಾರತದಲ್ಲಿ ಅಮೆಜಾನ್‌ ಕಂಪೆನಿಯು ತನ್ನ ಅಮೆಜಾನ್ ಕಿಂಡಲ್ (11 ನೇ ಜನ್) ಲಾಂಚ್‌ ಮಾಡಿದೆ. ಈ ಡಿವೈಸ್‌ ಬರೋಬ್ಬರಿ ಆರು ವಾರಗಳ ವರೆಗಿನ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಿದ್ದು, 16GB ಆನ್‌ಬೋರ್ಡ್ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ವಿವಿಧ ಬಣ್ಣದ ವೇರಿಯಂಟ್‌ನಲ್ಲಿ ಇದು ಲಭ್ಯವಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಏನು?, ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಅಮೆಜಾನ್‌ ಕಿಂಡಲ್ (11ನೇ ಜನ್) 6 ಇಂಚಿನ ಡಿಸ್‌ಪ್ಲೇ ಆಯ್ಕೆಯನ್ನು ಪಡೆದುಕೊಂಡಿದ್ದು, ಇದು 300 ಪಿಪಿಐ ಜೊತೆಗೆ ಆಕರ್ಷಕ ಪಠ್ಯ ಮತ್ತು ಚಿತ್ರಗಳನ್ನು ಒದಗಿಸುತ್ತದೆ. ಮತ್ತು ಹಗಲು ಮತ್ತು ರಾತ್ರಿ ವೇಳೆಯಲ್ಲಿ ಓದುವಾಗ ಕಣ್ಣಿಗೆ ಯಾವುದೇ ತೊಂದರೆಯಾಗಬಾರದ ಹಾಗೆ ಇರಲು ಡಾರ್ಕ್‌ ಮೋಡ್‌ ಪರಿಚಯಿಸಲಾಗಿದ್ದು, ಈ ಡಿವೈಸ್‌ನ ಫೀಚರ್ಸ್‌ನಲ್ಲಿ ಪ್ರಮುಖವೆನಿಸಿದೆ.

ಲಾಂಚ್‌

ಅಂತೆಯೇ ಈ ವರೆಗೂ ಲಾಂಚ್‌ ಆದ ಕಿಂಡಲ್‌ಗಳಲ್ಲಿ ಈ ಡಿವೈಸ್‌ ಹಗುರವಾದ ಮತ್ತು ಹೆಚ್ಚು ಸಾಂದ್ರವಾದ ಡಿವೈಸ್‌ ಎನಿಸಿಕೊಂಡಿದೆ. ಇನ್ನು ಗ್ಲೇರ್ ಫ್ರೀ ಮತ್ತು ಐ ಪ್ರೊಟೆಕ್ಷನ್ ಬೆಂಬಲದ ಆಯ್ಕೆ ನೀಡಲಾಗಿದ್ದು, ಹೊಸ ಆವೃತ್ತಿಯ ಡಿವೈಸ್‌ ಆಗಿರುವ ಇದು ಹಳೆಯ ವೇರಿಯಂಟ್‌ಗಿಂತ ಸುಮಾರು 3 ಪಟ್ಟು ಹೆಚ್ಚು ಪಿಕ್ಸೆಲ್ ರೆಸಲ್ಯೂಶನ್‌ಗೆ ಬೆಂಬಲ ನೀಡುತ್ತದೆ ಎಂದು ತಿಳಿದುಬಂದಿದೆ.

16 GB

ಇದರೊಂದಿಗೆ 16 GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆ ಪಡೆದುಕೊಂಡಿದೆ. ಆದರೆ, ಈ ಡಿವೈಸ್‌ನ ಹಿಂದಿನ ವೇರಿಯಂಟ್‌ ಕೇವಲ 8 GB ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿತ್ತು. ಈ ಡಿವೈಸ್‌ ಅನ್ನು 30-75% ಮರುಬಳಕೆಯ ಪ್ಲಾಸ್ಟಿಕ್‌ಗಳು ಮತ್ತು 90% ಮರುಬಳಕೆಯ ಮೆಗ್ನೀಸಿಯಮ್‌ನೊಂದಿಗೆ ನಿರ್ಮಾಣ ಮಾಡಲಾಗಿದೆ. ಇನ್ನು ಈ ಡಿವೈಸ್‌ನಲ್ಲಿ ವೈ ಫೈ ಮತ್ತು ಉಚಿತ ಕ್ಲೌಡ್ ಸಂಗ್ರಹಣೆಗೆ ಬೆಂಬಲದ ಆಯ್ಕೆ ನೀಡಲಾಗಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಈ ಹೊಸ ಕಿಂಡಲ್‌ ಡಿವೈಸ್‌ ಅನ್ನು ಒಮ್ಮೆ ಪೂರ್ಣ ಚಾರ್ಜ್‌ ಮಾಡಿದರೆ ಆರು ವಾರಗಳವರೆಗೆ ಬಳಕೆ ಮಾಡಬಹುದಾಗಿದೆ. ಚಾರ್ಜಿಂಗ್‌ಗಾಗಿ ಈ ರೀಡರ್ ಯುಎಸ್‌ಬಿ ಟೈಪ್-ಸಿ ಪೋರ್ಟ್‌ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಕಿಂಡಲ್ ನಲ್ಲಿ 2 ಮಿಲಿಯನ್ ಪುಸ್ತಕಗಳನ್ನು ಓದಬಹುದಾಗಿದ್ದು, ಅನಿಯಮಿತ ಪ್ರವೇಶದ ಆಯ್ಕೆಯನ್ನು ಪಡೆದುಕೊಳ್ಳಲು ಚಂದಾದಾರಿಕೆ ಹಣ ಪಾವತಿಸಬೇಕಾಗುತ್ತದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಭಾರತದಲ್ಲಿ ಹೊಸ ಕಿಂಡಲ್ (11 ನೇ ಜನ್) ಆಫರ್‌ ಬೆಲೆ 8,999 ರೂ. ಗಳಿಗೆ ನಿಗದಿ ಮಾಡಲಾಗಿದೆ. ಈ ಡಿವೈಸ್‌ ಬ್ಲ್ಯಾಕ್‌ ಮತ್ತು ಡೆನಿಮ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಈ ಹೊಸ ಇ-ರೀಡರ್ ಅಮೆಜಾನ್‌ನಲ್ಲಿ ಲಭ್ಯವಿದ್ದು, ನೀವು ಈಗಲೇ ಖರೀದಿ ಮಾಡಬಹುದಾಗಿದೆ. ಇನ್ನು ಇದರ ಸಾಮಾನ್ಯ ದರ 9,999 ರೂ. ಗಳಾಗಿದೆ. ಆಸಕ್ತ ಖರೀದಿದಾರರು ಕೆಲವು ಕಾರ್ಡ್‌ಗಳಲ್ಲಿ ನೋ ಕಾಸ್ಟ್‌ ಇಎಮ್‌ಐ ಸೌಲಭ್ಯ ಪಡೆಯಬಹುದಾಗಿದೆ. ಜೊತೆಗೆ ಹೆಚ್‌ಎಸ್‌ಬಿಸಿ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ವಹಿವಾಟುಗಳಲ್ಲಿ 250 ವರೆಗೆ ಕ್ಯಾಶ್‌ಬ್ಯಾಕ್‌ ಅಥವಾ 5% ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

Best Mobiles in India

Read more about:
English summary
Amazon Kindle (11th Gen) Launched in India at an offer Price .

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X