ಅಮೆಜಾನ್‌ನಿಂದ 'ಸ್ಮಾರ್ಟ್‌ ಕಾಮರ್ಸ್‌' ಪ್ರೋಗ್ರಾಂ ಬಿಡುಗಡೆ! ಇದರ ವಿಶೇಷತೆ ಏನು?

|

ಅಮೆಜಾನ್‌ ಇಂಡಿಯಾ ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣ ಎನಿಸಿಕೊಂಡಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಗ್ರಾಹಕರಿಗೆ ಅನುಕೂಲವಾಗುವ ಹಲವು ಸೇವೆಗಳನ್ನು ಪರಿಚಯಿಸಿದೆ. ಸದ್ಯ ಇದೀಗ ಭಾರತದಲ್ಲಿರುವ ಲೋಕಲ್‌ ಸ್ಟೋರ್‌ಗಳ ದೈನಂದಿನ ಕಾರ್ಯಾಚರಣೆಗಳನ್ನು ಡಿಜಿಟಲೀಕರಣಗೊಳಿಸಲು ಹೊಸ ಸೇವೆಯನ್ನು ಪರಿಚಯಿಸಿದೆ. ಅಂದರೆ ಆನ್‌ಲೈನ್‌ ಸ್ಟೋರ್‌ಫ್ರಂಟ್‌ಗಳನ್ನು ರಚಿಸಲು ಸಹಾಯ ಮಾಡಲು ಹೊಸ ಉಪಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.

ಅಮೆಜಾನ್‌

ಹೌದು, ಅಮೆಜಾನ್‌ "ಸ್ಮಾರ್ಟ್ ಕಾಮರ್ಸ್" ಎನ್ನುವ ಹೊಸ ಪ್ರೋಗ್ರಾಂ ಅನ್ನು ಲಾಂಚ್ ಮಾಡಿದೆ. ಇದು ದೇಶದಲ್ಲಿನ ಮಾಮ್ ಮತ್ತು ಪಾಪ್ ಸ್ಟೋರ್‌ಗಳಿಗೆ ಡಿಜಿಟಲ್ ಅನುಭವಗಳನ್ನು ಹೊಂದಲು ಸಹಾಯ ಮಾಡಲಿದೆ. ಅಮೆಜಾನ್‌.ಇನ್‌ ವೆಬ್‌ಸೈಟ್ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಆಯ್ಕೆಯನ್ನು ಸಹ ಲಭ್ಯವಾಗಲಿದೆ. ಇದು ಆಫ್‌ಲೈನ್ ಸ್ಟೋರ್‌ಗಳೊಂದಿಗೆ ಕೆಲಸ ಮಾಡಲು ಅಮೆಜಾನ್‌ ಇಟ್ಟಿರುವ ಹೊಸ ಹೆಜ್ಜೆಯಾಗಿದೆ. ಇನ್ನುಳಿದಂತೆ ಈ ಹೊಸ ಸೇವೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ ಕಾಮರ್ಸ್‌

ಅಮೆಜಾನ್ ಪರಿಚಯಿಸಿರುವ ಸ್ಮಾರ್ಟ್‌ ಕಾಮರ್ಸ್‌ ಲೋಕಲ್‌ ಸ್ಟೋರ್‌ಗಳನ್ನು ಡಿಜಿಟಲೀಕರಗೊಳಿಸುವುದಕ್ಕೆ ಅವಕಾಶ ನೀಡಲಿದೆ. ಆಫ್‌ಲೈನ್‌ ನಲ್ಲಿ ಮಾರಾಟ ಮಾಡುವ ಸ್ಟೋರ್‌ಗಳು ಅಮೆಜಾನ್‌ ವೆಬ್‌ಸೈಟ್‌ ಮೂಲಕ ತಮ್ಮ ಉತ್ಫನ್ನಗಳನ್ನು ಮಾರಾಟ ಮಾಡುವುದಕ್ಕೆ ಸಹಾಯ ಮಾಡಲಿದೆ. ಅಲ್ಲದೆ ಬಿಲ್ಲಿಂಗ್ ಮತ್ತು ದಾಸ್ತಾನು ನಿರ್ವಹಣೆಯನ್ನು ಡಿಜಿಟಲೀಕರಣಗೊಳಿಸಲು ಸಹಾಯ ಮಾಡಲಿದೆ. ಅಲ್ಲದೆ ಈ ಪ್ರೋಗ್ರಾಂ ಮೂಲಕ ಸ್ಥಳಿಯ ಅಂಗಡಿಗಳು ಕೂಡ ತಮ್ಮ ಆನ್‌ಲೈನ್ ಸ್ಟೋರ್‌ಫ್ರಂಟ್‌ಗಳನ್ನು ರಚಿಸಲು ಅನುಮತಿಸುತ್ತದೆ. ಅಲ್ಲದೆ ಧ್ವನಿ ಮತ್ತು ಚಾಟ್ ಆಧಾರಿತ ಶಾಪಿಂಗ್ ಅನುಭವದ ಮೂಲಕ ತಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸಲಿದೆ.

ಪ್ರೋಗ್ರಾಂ

ಈ ಪ್ರೋಗ್ರಾಂ ಅಮೆಜಾನ್‌ಗೆ ದೇಶದಲ್ಲಿ ಆಫ್‌ಲೈನ್ ಸ್ಟೋರ್‌ಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ಮತ್ತೊಂದು ಅವಕಾಶವನ್ನು ನೀಡುತ್ತದೆ ಎನ್ನಲಾಗಿದೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ಅಮೆಜಾನ್ ಜೂನ್ 2020 ರಲ್ಲಿ 'ಸ್ಮಾರ್ಟ್ ಸ್ಟೋರ್ಸ್' ಎಂಬ ಉಪಕ್ರಮವನ್ನು ಪ್ರಾರಂಭಿಸಿತು. ಇದು ಗೂಗಲ್‌ನ ಸ್ಪಾಟ್ ಪ್ಲಾಟ್‌ಫಾರ್ಮ್‌ಗೆ ಪರ್ಯಾಯವಾಗಿದೆ. ಇದರಿಂದ ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳು ಡಿಜಿಟಲ್ ಸ್ಟೋರ್ಸ್‌ ಅನುಭವ ಪಡೆಯಲು, ತಮ್ಮ ಗ್ರಾಹಕರಿಗೆ ಉತ್ಪನ್ನಗಳನ್ನು ಅನ್ವೇಷಿಸಲು ಅವಕಾಶ ಕಲ್ಪಿಸಲಿದೆ.

ಪ್ರೋಗ್ರಾಂ

ಸ್ಮಾರ್ಟ್ ಕಾಮರ್ಸ್ ಪ್ರೋಗ್ರಾಂ ಈ ಕಾರ್ಯಕ್ರಮದ ಮುಂದುವರೆದ ಭಾಗವಾಗಿದೆ. ಈ ಹೊಸ ಪ್ರೋಗ್ರಾಂನಲ್ಲಿ ಭಾಗವಹಿಸುವ ಅಂಗಡಿಗಳು ತಮ್ಮದೇ ಆದ ಅಂಗಡಿಯ ಮುಂಭಾಗಗಳನ್ನು ರಚಿಸುವ ಆಯ್ಕೆಯನ್ನು ಹೊಂದಿರುತ್ತದೆ. ಅಂದರೆ ತಮ್ಮದೇ ಆದ ವೆಬ್‌ಸೈಟ್‌ಗಳು ಅಥವಾ ಆನ್‌ಲೈನ್ ಉತ್ಪನ್ನಗಳನ್ನು ಮಾರಾಟ ಮಾಡಲು ಅಪ್ಲಿಕೇಶನ್‌ಗಳನ್ನು ಕ್ರಿಯೆಟ್‌ ಮಾಡಬಹುದು. ಇದರಿಂದ ಲೋಕಲ್‌ ಸ್ಟೋರ್‌ಗಳು ಕೂಡ ಆನ್‌ಲೈನ್‌ನಲ್ಲಿ ವ್ಯವಹಾರ ಮಾಡಲು ಸಾಧ್ಯವಾಗಲಿದೆ. ಅಲ್ಲದೆ ಬಿಲ್ಲಿಂಗ್‌ ಅನ್ನು ಕೂಡ ಆನ್‌ಲೈನ್‌ನಲ್ಲಿಯೆ ನಿರ್ವಹಿಸಲು ಸಾಧ್ಯವಾಗಲಿದೆ.

ಅಮೆಜಾನ್‌

ಇನ್ನು ಅಮೆಜಾನ್‌ನಲ್ಲಿ ನಿಮ್ಮ ಸ್ಥಳೀಯ ಭಾಷೆಯನ್ನು ಬಳಸುವುದು ಸುಲಭವಿದೆ. ಅಮೆಜಾನ್‌ ನಲ್ಲಿ ಇಂಗ್ಲಿಷ್‌ ಭಾಷೆಯಲ್ಲಿ ವ್ಯವಹರಿಸುವುದು ನಿಮಗೆ ತಿಳಿಯದಿದ್ದಲ್ಲಿ ನೀವು ನಿಮ್ಮ ಭಾಷಗೆ ಬದಲಾಯಿಸಿಕೊಳ್ಳಬಹುದು. ಇದರಿಂದ ಅಮೆಜಾನ್‌ನಲ್ಲಿ ಶಾಪಿಂಗ್‌ ಮಾಡುವುದು ತುಂಬಾ ಸುಲಭವಾಗಲಿದೆ. ನೀವು ನಿಮ್ಮ ಆದ್ಯತೆಯ ಭಾಷೆಯನ್ನು ಅಮೆಜಾನ್‌ನಲ್ಲಿ ಬದಲಾಯಿಸಲು ಬಯಸಿದರೆ ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.

ಅಮೆಜಾನ್ ವೆಬ್‌ಸೈಟ್‌ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ?

ಅಮೆಜಾನ್ ವೆಬ್‌ಸೈಟ್‌ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ?

ಹಂತ:1 ಮೊದಲಿಗೆ ಅಮೆಜಾನ್‌ ವೆಬ್‌ಸೈಟ್ ತೆರೆಯಿರಿ ಮತ್ತು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ
ಹಂತ:2 ಇದರಲ್ಲಿ ನೀವು ಲ್ಯಾಂಗ್ವೇಜ್‌ ಪೇಜ್‌ ತೆರೆಯಿರಿ
ಹಂತ:3 ನಂತರ ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
ಹಂತ:4 ಭಾಷೆ ಆಯ್ಕೆ ಮಾಡಿದ ನಂತರ, "ಸೇವ್‌" ಬಟನ್‌ ಒತ್ತಿರಿ

ಒಮ್ಮೆ ನೀವು ಅಮೆಜಾನ್‌ ವೆಬ್‌ಸೈಟ್‌ನಲ್ಲಿ ಭಾಷೆಯನ್ನು ಬದಲಾಯಿಸಿದರೆ, ನಿಮ್ಮ ಸ್ವಂತ ಖಾತೆಗೆ ನೀವು ಲಾಗ್ ಇನ್ ಮಾಡಿದಾಗ ನಿಮ್ಮ ಬ್ರೌಸಿಂಗ್ ಮತ್ತು ಶಾಪಿಂಗ್ ಅನುಭವಕ್ಕಾಗಿ ಇದು ಡೀಫಾಲ್ಟ್ ಭಾಷೆಯಾಗುತ್ತದೆ. ಅಂದರೆ ನೀವು ವೆಬ್‌ಸೈಟ್‌ನಲ್ಲಿ ಭಾಷೆಯನ್ನು ಬದಲಾಯಿಸಿದರೆ ನಿಮ್ಮ ಮೊಬೈಲ್‌ನಲ್ಲಿರುವ ಅಮೆಜಾನ್‌ ಅಪ್ಲಿಕೇಶನ್‌ನಲ್ಲಿ ಭಾಷೆ ಬದಲಾಗುವುದಿಲ್ಲ.

Best Mobiles in India

English summary
Amazon launched its "Smart Commerce" programme in india

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X