ಅಮೆಜಾನ್‌ನಲ್ಲಿ ಆಕರ್ಷಕ ಆಫರ್: ಉಚಿತ ಸ್ಪಾಟಿಫೈ ಪ್ರೀಮಿಯಂ ಚಂದಾದಾರಿಕೆ ಆಯ್ಕೆ!

|

ಇ-ಕಾಮರ್ಸ್ ಸೈಟ್‌ಗಳಲ್ಲಿ ಪ್ರಮುಖವಾಗಿರುವ ಅಮೆಜಾನ್ ಈಗಾಗಲೇ ಫೆಸ್ಟಿವಲ್‌ ಸೇಲ್‌ ಸೇರಿದಂತೆ ಇನ್ನಿತರೆ ಸಂದರ್ಭದಲ್ಲಿ ಗ್ಯಾಜೆಟ್‌ಗಳಿಗೆ ಭರ್ಜರಿ ಆಫರ್‌ ಘೋಷಣೆ ಮಾಡಿತ್ತು. ಇದರಲ್ಲಿ ಸ್ಮಾರ್ಟ್‌ಟಿವಿ, ಸ್ಮಾರ್ಟ್‌ಫೋನ್ ಹಾಗೂ ಇನ್ನಿತರೆ ಡಿವೈಸ್‌ಗಳು ಹೆಚ್ಚಿನ ರಿಯಾಯಿತಿ ಪಡೆದುಕೊಂಡಿದ್ದವು. ಇದೀಗ ಅಮೆಜಾನ್‌ ಗ್ರಾಹಕರಿಗೆ ಮತ್ತೊಂದು ವಿಶೇಷ ಆಫರ್‌ ಘೋಷಣೆ ಮಾಡಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಇ- ಕಾಮರ್ಸ್‌ ತಾಣದ ಜೊತೆಗೆ ಓಟಿಟಿ ಪ್ಲಾಟ್‌ಫಾರ್ಮ್‌ ಆಗಿಯೂ ಸೇವೆ ನೀಡುತ್ತಿದೆ. ಇದರ ನಡುವೆ ಈಗ ಪ್ರತಿಸ್ಪರ್ಧಿ ಕಂಪೆನಿಗಳಿಗೆ ಪೈಪೋಟಿ ನೀಡಲು ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ ನಲ್ಲಿ ಉಚಿತ ಚಂದಾದಾರಿಕೆಗಳನ್ನು ನೀಡಲು ಮುಂದಾಗಿದೆ. ಈ ಉಚಿತ ಸೇವೆ ಪಡೆದುಕೊಳ್ಳಲು ನೀವು ಏನು ಮಾಡಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ, ಈ ಲೇಖನ ಓದಿ.

ಅಮೆಜಾನ್ ಇಂಡಿಯಾ

ಅಮೆಜಾನ್ ಇಂಡಿಯಾ ಗ್ರಾಹಕರಿಗೆ ಹೊಸ ಕೊಡುಗೆ ನೀಡಿದ್ದು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್ನಲ್ಲಿ ಇಯರ್‌ಫೋನ್‌, ಹೆಡ್‌ಫೋನ್‌ ಲ್ಯಾಪ್‌ಟಾಪ್‌ , ಟ್ಯಾಬ್ಲೆಟ್‌ಗಳು, ಸ್ಮಾರ್ಟ್‌ಫೋನ್ ಸೇರಿದಂತೆ ವಿವಿಧ ಆಯ್ದ ಎಲೆಕ್ಟ್ರಾನಿಕ್ ಉತ್ಪನ್ನಗಳ ಖರೀದಿಯ ಮೇಲೆ ಉಚಿತ ಮ್ಯೂಸಿಕ್ ಸ್ಟ್ರೀಮಿಂಗ್ ಚಂದಾದಾರಿಕೆಯನ್ನು ನೀಡಲು ಮುಂದಾಗಿದೆ.

ಉಚಿತ ಸ್ಪಾಟಿಫೈ ಪ್ರೀಮಿಯಂ

ಉಚಿತ ಸ್ಪಾಟಿಫೈ ಪ್ರೀಮಿಯಂ

ಅಮೆಜಾನ್‌ನಲ್ಲಿ ಆಯ್ದ ಆಡಿಯೋ ಹಾಗೂ ವಿಡಿಯೋ ಡಿವೈಸ್‌ಗಳನ್ನು ಖರೀದಿ ಮಾಡಿದರೆ ಆರು ತಿಂಗಳವರೆಗೆ ಉಚಿತವಾಗಿ ಸ್ಪಾಟಿಫೈ ಪ್ರೀಮಿಯಂ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ. ಇದು ಒಂದೇ ಬಳಕೆದಾರ ಪ್ಲ್ಯಾನ್‌ ಆಗಿದ್ದು, ನೀವು ಖಾಸಗಿಯಾಗಿ ಪ್ಲ್ಯಾನ್‌ ಖರೀದಿ ಮಾಡಬೇಕು ಎಂದುಕೊಂಡರೆ ತಿಂಗಳಿಗೆ 129 ರೂ. ಗಳನ್ನು ಪಾವತಿ ಮಾಡಬೇಕಿದೆ.

ಆಫರ್‌ ಪಡೆಯಲು ನಿಯಮಗಳೇನು?

ಆಫರ್‌ ಪಡೆಯಲು ನಿಯಮಗಳೇನು?

ಅಮೆಜಾನ್‌ ಈ ಆಫರ್‌ಗೆ ಕೆಲವು ನಿಯಮಗಳನ್ನು ರೂಪಿಸಿದೆ. ಅದರಂತೆ ಆಯ್ದ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಮೊಬೈಲ್ ಡಿವೈಸ್, ಹೆಡ್‌ಫೋನ್‌, ಸ್ಪೀಕರ್‌ಗಳನ್ನು ಖರೀದಿಸಬೇಕಿದೆ. ಹಾಗೆಯೇ 1,000 ರೂ. ಗಳಿಂದ 5,000 ರೂ. ವರೆಗಿನ ಡಿವೈಸ್‌ಗಳನ್ನು ಖರೀದಿ ಮಾಡಿದರೆ ಮೂರು ತಿಂಗಳ ವರೆಗೆ ಸ್ಪಾಟಿಫೈ ಪ್ರೀಮಿಯಂ ಚಂದಾದಾರಿಕೆ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ 5,000ರೂ. ಗಳಿಗೂ ಮೇಲ್ಪಟ್ಟ ಡಿವೈಸ್‌ಗಳನ್ನು ಖರೀದಿ ಮಾಡಿದರೆ ಆರು ತಿಂಗಳ ಉಚಿತ ಸ್ಪಾಟಿಫೈ ಪ್ರೀಮಿಯಂಚಂದಾದಾರಿಕೆ ಪಡೆದುಕೊಂಡು ಉತ್ತಮ ಕ್ವಾಲಿಟಿಯ ಆಡಿಯೋ ಕೇಳಬಹುದಾಗಿದೆ.

ಆಫರ್ ಅವಧಿ

ಆಫರ್ ಅವಧಿ

ಅಮೆಜಾನ್‌ನ ಈ ಆಫರ್‌ನಲ್ಲಿ ಸ್ಪಾಟಿಫೈ ಉಚಿತ ಚಂದಾದಾರಿಕೆ ಪಡೆಯಲು ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಅಕ್ಟೋಬರ್ 24 ರಂದು ಪ್ರಾರಂಭವಾಗಿ ನವೆಂಬರ್ 30 ರ ವರೆಗೆ ಇರಲಿದೆ. ಈ ದಿನಾಂಕದ ಒಳಗೆ ಅಮೆಜಾನ್‌ನಲ್ಲಿ ಆಯ್ದ ಆಡಿಯೋ ಹಾಗೂ ವಿಡಿಯೋ ಸಂಬಂಧಿತ ಗ್ಯಾಜೆಟ್‌ಗಳನ್ನು ಖರೀದಿ ಮಾಡಿದರೆ ಈ ಆಫರ್‌ ಅನ್ವಯ ಆಗಲಿದೆ.

ಈ ಆಫರ್‌ ಯಾರಿಗೆ ಲಭ್ಯ?

ಈ ಆಫರ್‌ ಯಾರಿಗೆ ಲಭ್ಯ?

ಈ ಆಫರ್‌ ಅಮೆಜಾನ್‌ನಲ್ಲಿ ಖರೀದಿ ಮಾಡುವ ಎಲ್ಲಾ ಗ್ರಾಹಕರಿಗೂ ಅನ್ವಯ ಆಗುವುದಿಲ್ಲ ಹಾಗೆಯೇ ಈ ಮೊದಲೇ ಸ್ಪಾಟಿಫೈ ಚಂದಾದಾರಿಕೆ ಇರುವವರಿಗೂ ಈ ಆಫರ್‌ ಸೌಲಭ್ಯ ಸಿಗುವುದಿಲ್ಲ. ಯಾರು ಈ ಮೊದಲು ಸ್ಪಾಟಿಫೈ ಉಚಿತ ಚಂದಾದಾರಿಕೆ ಪಡೆದಿರುವುದಿಲ್ಲವೋ ಅವರಿಗೆ ಮಾತ್ರ ಈ ಆಫರ್‌ ಅನ್ವಯ ಆಗಲಿದೆ. ಈ ಸೇವೆ ಪಡೆದುಕೊಳ್ಳಲು ಕಡ್ಡಾಯವಾಗಿ ನೀವು ಇ-ಮೇಲ್‌ ಖಾತೆಯನ್ನು ನಮೂದು ಮಾಡಬೇಕಿದೆ.

ಸ್ಪಾಟಿಫೈ

ಸ್ಪಾಟಿಫೈ ಆಪ್‌ ನಲ್ಲಿ ಈ ಹಿಂದೆ ಅಂದರೆ, ಅಂದರೆ ದೀಪಾವಳಿ ಸಂದರ್ಭದಲ್ಲಿ ಗ್ರಾಹಕರಿಗೆ ಉಚಿತ ಆಫರ್‌ ನೀಡಿತ್ತು. ಜಾಹಿರಾತು ಮುಕ್ತ ಸ್ಟ್ರೀಮಿಂಗ್‌ ಗಾಗಿ ನಾಲ್ಕು ತಿಂಗಳ ವರೆಗೆ ಉಚಿತ ಪ್ರೀಮಿಯಂ ಸೇವೆಯನ್ನು ನೀಡಿತ್ತು. ಅದರಲ್ಲೂ ಪ್ರಮುಖವಾಗಿ ಈ ಆಫರ್‌ ಕೇವಲ ಭಾರತೀಯರಿಗೆ ಮಾತ್ರ ಅನ್ವಯ ಮಾಡಲಾಗಿದ್ದು, ನಾಲ್ಕು ತಿಂಗಳ ನಂತರ ತಿಂಗಳಿಗೆ 119ರೂ. ಗಳನ್ನು ಪಾವತಿ ಮಾಡಬೇಕು ಎಂದು ತಿಳಿಸಿತ್ತು. ಜೊತೆಗೆ ಬೇಡವಾದರೆ ಚಂದಾದಾರಿಕೆ ರದ್ದು ಮಾಡಬಹುದಾದ ಆಯ್ಕೆಯನ್ನೂ ಸಹ ನೀಡಲಾಗಿತ್ತು. ಇನ್ನು ಈ ಕೊಡುಗೆಯನ್ನು ಸ್ಪಾಟಿಫೈ ಅಕ್ಟೋಬರ್‌ 24ರ ವರೆಗೆ ನೀಡಿತ್ತು.

Best Mobiles in India

English summary
Amazon, one of the leading e-commerce sites, has already announced huge offers for many gadgets. Meanwhile, amazon offering a Spotify premium subscription option for free.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X