ಅಮೆಜಾನ್‌ ಪ್ರೈಮ್‌ ವಿಡಿಯೋ ಬಳಕೆದಾರರಿಗೆ ಇದು ಗುಡ್‌ನ್ಯೂಸ್‌!

|

ಅಮೆಜಾನ್‌ ಪರಿಚಯಿಸಿರುವ ಜನಪ್ರಿಯ ಸೇವೆಗಳಲ್ಲಿ ಅಮೆಜಾನ್‌ ಪ್ರೈಮ್‌ ವಿಡಿಯೋ ಕೂಡ ಒಂದಾಗಿದೆ. ಅಮೆಜಾನ್‌ ಈಗಾಗಲೇ ಪ್ರೈಮ್‌ ವಿಡಿಯೋ ಅಪ್ಲಿಕೇಶನ್‌ನಲ್ಲಿ ಹಲವು ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದೀಗ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ ಆಸಕ್ತರಿಗಾಗಿ ಪ್ರೈಮ್‌ ವಿಡಿಯೋ ಪ್ಲಾಟ್‌ರ್ಫಾ್‌ನಲ್ಲಿ ಹೊಸ ಚಾನಲ್‌ಗಳನ್ನು ಪರಿಚಯಿಸಿದೆ. ಅದರಲ್ಲೂ 8 OTT ಆಪ್ಲಿಕೇಶನ್‌ಗಳನ್ನು ಒಂದೇ ಬಂಡಲ್‌ನಲ್ಲಿ ಸೇರಿಸಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಭಾರತದಲ್ಲಿ ಹೊಸದಾಗಿ ಪ್ರೈಮ್ ವಿಡಿಯೋ ಚಾನೆಲ್‌ಗಳನ್ನು ಆರಂಭಿಸುವುದಾಗಿ ಘೋಷಿಸಿದೆ. ತನ್ನ ಪ್ರೈಮ್‌ ವೀಡಿಯೋ ಚಾನೆಲ್‌ಗಳು ಪ್ರೈಮ್‌ ಸದಸ್ಯರಿಗೆ 8 OTT ಅಪ್ಲಿಕೇಶನ್‌ಗಳನ್ನು ಒಳಗೊಂಡಿವೆ. ಈ ಅಪ್ಲಿಕೇಶನ್‌ಗಳು ಚಂದಾದಾರಿಕೆಯನ್ನು ಹೊಂದಿದ್ದು, ಒಂದೇ ಸೂರಿನಡಿಯಲ್ಲಿ ಪ್ರವೇಶಿಸಲು ಅನುಮತಿಸಲಿವೆ. ಇವುಗಳಲ್ಲಿ ಡಿಸ್ಕವರಿ+, ಲಯನ್ಸ್‌ಗೇಟ್ ಪ್ಲೇ, ಡಾಕ್ಯುಬೇ, ಇರೋಸ್ ನೌ, ಮುಬಿಐ, ಹೊಯಿಚೊಯ್, ಮನೋರಮಾ ಮ್ಯಾಕ್ಸ್, ಮತ್ತು ಶಾರ್ಟ್ಸ್ ಟಿವಿಯಂತಹ ಸ್ಟ್ರೀಮಿಂಗ್ ಆಪ್‌ಗಳು ಸೇರಿವೆ. ಹಾಗಾದ್ರೆ ಅಮೆಜಾನ್‌ ಹೊಸದಾಗಿ ಆರಂಬಿಸಿರುವ ಹೊಸ ಚಾನಲ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್

ಹೊಸದಾಗಿ ಪ್ರಾರಂಭವಾಗಲಿರುವ ಅಮೆಜಾನ್ ಚಾನೆಲ್ ಸೇವೆಯು ತನ್ನ ಪ್ರೈಮ್‌ ಸದ್ಯಸರಿಗೆ ಸಾಕಷ್ಟು ಉಪಯುಕ್ತವಾಗಿದೆ. ತನ್ನ ಪ್ರೈಮ್ ಫ್ಲ್ಯಾಗ್‌ಶಿಪ್ ಲಾಯಲ್ಟಿ ಪ್ರೋಗ್ರಾಂ ಅನ್ನು ಬಳಸುವ ಗ್ರಾಹಕರಿಗೆ ಒಂದೇ ಇಂಟರ್‌ಫೇಸ್‌ನಲ್ಲಿ ಮಲ್ಟಿ ಸ್ಟ್ರೀಮಿಂಗ್ ಆಪ್‌ಗಳಿಗೆ ಚಂದಾದಾರರಾಗಲು ಇದು ಸಹಾಯ ಮಾಡಲಿದೆ. ಇನ್ನು ಒಂದೇ ಸೂರಿನಡಿ ಒಟ್ಟುಗೂಡಿಸಲಾದ ಎಲ್ಲಾ ಅಪ್ಲಿಕೇಶನ್‌ಗಳಿಗೆ ಒಂದೇ ಬಿಲ್ಲಿಂಗ್ ಕಾರ್ಯವಿಧಾನ ಇರುತ್ತದೆ. ಈ ಪ್ರೈಮ್ ವಿಡಿಯೋ ಚಾನೆಲ್‌ಗಳು ಇಂದಿನಿಂದಲೇ ಎಲ್ಲರಿಗೂ ಲಭ್ಯವಾಗಲಿವೆ.

ಅಮೆಜಾನ್‌

ಅಮೆಜಾನ್‌ನ ಪ್ರೈಮ್ ಲಾಯಲ್ಟಿ ಪ್ರೋಗ್ರಾಂಗೆ ಭಾರತದಲ್ಲಿ ವಾರ್ಷಿಕ 999ರೂ, ಬೆಲೆ ನಿಗಧಿ ಪಡಿಸಲಾಗಿದೆ. ಇದು ಗ್ರಾಹಕರಿಗೆ ಉಚಿತ ವಿತರಣೆ, ಮಾರಾಟದ ಸಮಯದಲ್ಲಿ ಡೀಲ್‌ಗಳಿಗೆ ಆರಂಭಿಕ ಪ್ರವೇಶ ಮತ್ತು ಉಚಿತ ಸಂಗೀತ ಮತ್ತು ವಿಡಿಯೋ ಸ್ಟ್ರೀಮಿಂಗ್ ನೀಡುತ್ತದೆ. ಇನ್ನು ಈ ಪ್ರೈಮ್ ವೀಡಿಯೋ ಚಾನೆಲ್‌ಗಳ ಮೂಲಕ ಜಾಗತಿಕ ಮತ್ತು ಲೋಕಲ್‌ ಶೋಗಳು, ಚಲನಚಿತ್ರಗಳು, ರಿಯಾಲಿಟಿ ಟಿವಿ, ಡಾಕ್ಯುಮೆಂಟರಿಗಳನ್ನು ವೀಕ್ಷಿಸಬಹುದಾಗಿದೆ. ಜೊತೆಗೆ ಎಂಟು ವೀಡಿಯೋ-ಸ್ಟ್ರೀಮಿಂಗ್ ಸೇವೆಗಳಾದ ಡಿಸ್ಕವರಿ+, ಲಯನ್ಸ್‌ಗೇಟ್ ಪ್ಲೇ, ಡಾಕ್ಯೂಬೇ ಇರೋಸ್ ನೌ, MUBI, hoichoi, manoramaMAX, ಮತ್ತು ShortsTV ಗೆ ಪ್ರವೇಶ ಪಡೆಯುವುದು ಸುಲಭವಾಗಿದೆ.

ಅಮೆಜಾನ್‌

ಇನ್ನು ಅಮೆಜಾನ್‌ ಪ್ರೈಮ್‌ ವೀಡಿಯೋ ಚಾನಲ್‌ನಲ್ಲಿ ಗ್ರಾಹಕರು ತಾವು ಆಯ್ಕೆ ಮಾಡಿದ ಸೇವೆಗಳಿಗೆ ಮಾತ್ರ ಹಣ ಪಾವತಿಸಬೇಕಾಗುತ್ತದೆ. ಪ್ರಧಾನ ಸದಸ್ಯರು OTT ಚಾನೆಲ್ ಪಾಲುದಾರರಿಂದ ಲಭ್ಯವಿರುವ ವಿಶೇಷ ವಾರ್ಷಿಕ ಚಂದಾದಾರಿಕೆ ಆಫರ್ ಅನ್ನು ಕೂಡ ಪಡೆದುಕೊಳ್ಳಬಹುದಾಗಿದೆ. "ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ಮಲ್ಟಿ ಆಪ್ಲಿಕೇಶನ್‌ಗಳಿಗೆ ಲಾಗ್‌ ಇನ್‌ ಆಗಲು ನಾವು ಅವಕಾಶ ನೀಡುತ್ತಿದ್ದೆವೇ ಅನ್ನೊದನ್ನ ಭಾರತದಲ್ಲಿ ಅಮೆಜಾನ್ ಪ್ರೈಮ್ ವೀಡಿಯೋ ಮುಖ್ಯಸ್ಥರಾಗಿರುವ ಗೌರವ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಪ್ರೈಮ್ ವಿಡಿಯೋ ಚಾನೆಲ್ ಮೂಲಕ ಲಭ್ಯವಾಗುವ ಪ್ರಯೋಜನಗಳು!

ಪ್ರೈಮ್ ವಿಡಿಯೋ ಚಾನೆಲ್ ಮೂಲಕ ಲಭ್ಯವಾಗುವ ಪ್ರಯೋಜನಗಳು!

* ಎಂಟು ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಒಂದೇ ಸೂರಿನಡಿ ವೀಕ್ಷಿಬಹುದು. ಜೊತೆಗೆ ಎಲ್ಲಾ ಸೇವೆಗಳನ್ನು ಪಡೆಯುವುದಕ್ಕಾಗಿ ಬಳಕೆದಾರರು ಒಂದೇ ಪಾವತಿ ಚಾನಲ್ ಅನ್ನು ಹೊಂದಿರುತ್ತಾರೆ.
* ಬಳಕೆದಾರರು ಎಲ್ಲಾ ಬೆಂಬಲಿತ OTT ಪ್ಲಾಟ್‌ಫಾರ್ಮ್‌ಗಳನ್ನು ಒಂದೇ ಕಡೆ ಬ್ರೌಸ್ ಮಾಡುವುದಕ್ಕೆ ಅವಕಾಶ.
* ಪ್ರೈಮ್‌ ಸದಸ್ಯರು OTT ಚಾನೆಲ್ ಪಾಲುದಾರರಿಂದ ಲಭ್ಯವಿರುವ ವಿಶೇಷ ಪರಿಚಯಾತ್ಮಕ ವಾರ್ಷಿಕ ಚಂದಾದಾರಿಕೆ ಕೊಡುಗೆಗಳನ್ನು ಆನಂದಿಸಬಹುದು.

ಪ್ರೈಮ್ ವಿಡಿಯೋ ಚಾನೆಲ್‌ನಲ್ಲಿರುವ OTT ಆಪ್‌ಗಳ ಚಂದಾದಾರಿಕೆ ಬೆಲೆ ಎಷ್ಟು?

ಪ್ರೈಮ್ ವಿಡಿಯೋ ಚಾನೆಲ್‌ನಲ್ಲಿರುವ OTT ಆಪ್‌ಗಳ ಚಂದಾದಾರಿಕೆ ಬೆಲೆ ಎಷ್ಟು?

* ಡಿಸ್ಕವರಿ+ ವಾರ್ಷಿಕ ಚಂದಾದಾರಿಕೆ 299ರೂ.ಬೆಲೆ ಹೊಂದಿದೆ.
* DocuBay ವಾರ್ಷಿಕ ಚಂದಾದಾರಿಕೆ 499ರೂ.ಬೆಲೆ ಹೊಂದಿದೆ.
* ಇರೋಸ್ ನೌ ವಾರ್ಷಿಕ ಚಂದಾದಾರಿಕೆ 299ರೂ.ಗಳಿಗೆ ಖರೀದಿಸಬಹುದು.
* ಹೋಯ್ಚೊಯ್ ವಾರ್ಷಿಕ ಚಂದಾದಾರಿಕೆ 599ರೂ,ಗಳಿಗೆ ಖರೀದಿಸಬಹುದು
* ಲಯನ್ಸ್‌ಗೇಟ್ ಗೇಮ್‌ ವಾರ್ಷಿಕ ಚಂದಾದಾರಿಕೆ 699ರೂ ಆಗಿದೆ.
* ಮನೋರಮಾಮ್ಯಾಕ್ಸ್ ವಾರ್ಷಿಕ ಚಂದಾದಾರಿಕೆ 699ರೂ ಬೆಲೆ ಹೊಂದಿದೆ.
* ಮುಬಿ ವಾರ್ಷಿಕ ಚಂದಾದಾರಿಕೆ 1999ರೂ ಬೆಲೆಗೆ ಖರೀದಿಸಬಹುದು
* ಶಾರ್ಟ್ಸ್ ಟಿವಿ ವಾರ್ಷಿಕ ಚಂದಾದಾರಿಕೆ 299ರೂ,ಗಳಿಗೆ ಖರೀದಿಸಬಹುದು.

Best Mobiles in India

English summary
Amazon Prime members can use Prime Video Channels to subscribe to multiple streaming apps on a single interface.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X