ಬಳಕೆದಾರರಿಗೆ ‍Shuffle ಬಟನ್‌ ಪರಿಚಯಿಸಿದ ಅಮೆಜಾನ್‌ ಪ್ರೈಮ್‌ ವಿಡಿಯೋ!

|

ಜನಪ್ರಿಯ ವೀಡಿಯೋ ಸ್ಟ್ರೀಮಿಂಗ್‌ ಆಪ್‌ ಅಮೆಜಾನ್ ಪ್ರೈಮ್ ವಿಡಿಯೋ ಬಳಕೆದಾರರಿಗೆ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ತನ್ನ ಬಳಕೆದಾರರಿಗೆ ಹೊಸ ಷಫಲ್ ಬಟನ್ ಅನ್ನು ಪರಿಚಯಿಸಿದೆ. ಟಿವಿ ಕಂತುಗಳ ಶಫಲ್ ಬಟನ್ ಬಳಕೆದಾರರಿಗೆ ಎಪಿಸೋಡ್‌ಗಳನ್ನು ನೋಡಲು ಅನುವು ಮಾಡಿಕೊಡುತ್ತದೆ. ಇನ್ನು ಈ ಫೀಚರ್ಸ್‌ ಇದೀಗ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ನಲ್ಲಿ ಮಾತ್ರ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ಡೌನ್‌ಲೋಡ್ ಮತ್ತು ಮೋರ್‌ ಆಯ್ಕೆಯ ನಡುವೆ ಶಫಲ್ ಬಟನ್ ಅನ್ನು ಹುದುಗಿಸಲಾಗಿದೆ ಎನ್ನಲಾಗಿದೆ.

ಅಮೆಜಾನ್‌ ಪ್ರೈಮ್‌ ವಿಡಿಯೋ

ಹೌದು, ಅಮೆಜಾನ್‌ ಪ್ರೈಮ್‌ ವಿಡಿಯೋ ಬಳಕೆದಾರರಿಗೆ ‍ಫಲ್‌ ಬಟನ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈ ಹೊಸ ಆಯ್ಕೆಯನ್ನು ಟ್ಯಾಪ್ ಮಾಡುವಾಗ, ಕಂತುಗಳನ್ನು ಯಾದೃಚ್ಛಿಕ ಕ್ರಮದಲ್ಲಿ ಬದಲಾಯಿಸಲಾಗುತ್ತದೆ. ಪ್ಲಾಟ್‌ಫಾರ್ಮ್‌ನಲ್ಲಿ ಈಗಾಗಲೇ ವೀಕ್ಷಿಸಿದ ವಿಷಯವನ್ನು ಹೆಚ್ಚಿಸಲು ಶಫಲ್ ಬಟನ್ ಸೂಕ್ತವಾಗಿದ್ದರೂ, ಇದು ಸೀಮಿತ ಕ್ರಿಯಾತ್ಮಕತೆಯನ್ನು ಹೊಂದಿದೆ. ಹಾಗಾದ್ರೆ ಈ ಫೀಚರ್ಸ್‌ ಇನ್ನಷ್ಟು ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಶಫಲ್

ಹೊಸ ಶಫಲ್ ಫೀಚರ್ಸ್‌ ಹಂತ ಹಂತವಾಗಿ ಪರಿಚಯಿಸಲಾಗುತ್ತಿದೆ. ಏಕೆಂದರೆ ಇದು ಜಗತ್ತಿನಾದ್ಯಂತ ಪ್ರೈಮ್ ವಿಡಿಯೋ ಬಳಕೆದಾರರನ್ನು ಆಯ್ಕೆ ಮಾಡಲು ಲಭ್ಯವಾಗಿದೆ. ಶೀಘ್ರದಲ್ಲೇ ಫೈರ್ ಟ್ಯಾಬ್ಲೆಟ್‌ಗಳಲ್ಲಿ ಶಫಲ್ ಬಟನ್ ಬರಲಿದೆ ಎಂದು ಆಂಡ್ರಾಯ್ಡ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇನ್ನು ವಿಶೇಷವೆಂದರೆ, ನೆಟ್‌ಫ್ಲಿಕ್ಸ್ ಕೂಡ ‘Random order' ಫೀಚರ್ಸ್‌ ಅನ್ನು ಪ್ರಯೋಗಿಸುತ್ತಿದೆ. ಇದರ ನಡುವೆ ಅಮೆಜಾನ್‌ ಪ್ರೈಮ್ ವಿಡಿಯೋ ಶಫಲ್ ಬಟನ್ ಅನ್ನು ಪರಿಚಯಿಸಿದೆ.

ಅಮೆಜಾನ್‌ ಪ್ರೈಮ್‌ ವಿಡಿಯೋ

ಇನ್ನು ಅಮೆಜಾನ್‌ ಪ್ರೈಮ್‌ ವಿಡಿಯೋ ಶಫಲ್‌ ಬಟನ್‌ ನೆಟ್‌ಫ್ಲಿಕ್ಸ್‌ನ ಶಫಲ್ ಪ್ಲೇ ಗಿಂತ ವಿಭಿನ್ನವಾಗಿರುತ್ತದೆ. ಏಕೆಂದರೆ ಇದು ಬಳಕೆದಾರರಿಗೆ ಸಂಪೂರ್ಣ ವಿಷಯ ಫೀಡ್‌ನ ಕಂತುಗಳನ್ನು ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಸದ್ಯ ಈ ಹೊಸ ಫೀಚರ್ಸ್‌ ಅನ್ನು ಪ್ರಸ್ತುತ ಟಿವಿ ಡಿವೈಸ್‌ಗಳಲ್ಲಿ ಮಾತ್ರ ಪರೀಕ್ಷಿಸಲಾಗುತ್ತಿದೆ ಎಂದು ವರದಿಗಳು ಉಲ್ಲೇಖಿಸಿವೆ. ನೀವು ನೋಡುವ ವಿಷಯದ ಆಧಾರದ ಮೇಲೆ ಒಟಿಟಿ ಪ್ಲಾಟ್‌ಫಾರ್ಮ್ ಈಗಾಗಲೇ ನಿಮ್ಮ ಖಾತೆಗೆ ಶಿಫಾರಸುಗಳ ಪಟ್ಟಿಯನ್ನು ಹೊಂದಿರುವುದರಿಂದ ಹೊಸತು ಎನಿಸುವುದಿಲ್ಲ.

ಫೀಚರ್ಸ್‌

ಸದ್ಯ ಈ ಹೊಸ ಫೀಚರ್ಸ್‌ ಬಿಡುಗಡೆ ಆದ ನಂತರ ಬಳಕೆದಾರರಿಗೆ ಹೊಸ ಆಯ್ಕೆ ಸಿಗುವುದು ಖಂಡಿತ. ನಿಮ್ಮ ಆಯ್ಕೆಯ ಎಪಿಸೋಡ್‌ಗಳನ್ನು ನೋಡುವಾಗ ‍ಷಫಲ್‌ ಬಟನ್‌ ನಿಮಗೆ ಉಪಯುಕ್ತ ಎನಿಸಲಿದೆ. ಇನ್ನು ಈ ಶಫಲ್ ಬಟನ್ ನಿಮಗೆ ಸೂಕ್ತವಾಗಿದ್ದರೂ, ಇದು ಸೀಮಿತ ಕ್ರಿಯಾತ್ಮಕತೆಯನ್ನು ಹೊಂದಿದೆ. ಸದ್ಯ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ನೆಟ್‌ಫ್ಲಿಕ್ಸ್‌ ಮತ್ತು ಅಮೆಜಾನ್‌ ಪ್ರೈಮ್‌ ವಿಡಿಯೋ ನಡುವೆ ಸಾಕಷ್ಟು ಸ್ಪರ್ಧೆ ಏರ್ಪಟ್ಟಿದೆ. ಆದರಿಂದ ಬಳಕೆದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ತನ್ನತ್ತ ಆಕರ್ಷಿಸಲು ಪರಸ್ಪರ ಪೈಪೋಟಿಗಿಳಿದಿವೆ.

Most Read Articles
Best Mobiles in India

English summary
Amazon Prime Video gets a new shuffle button that will shuffle episodes in a random order, the feature is currently rolling out only on Android platform.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X