ಅಮೆಜಾನ್ ಪ್ರೈಮ್ ವಿಡಿಯೊ ಆಪ್‌ ಇದೀಗ ವಿಂಡೋಸ್‌ನಲ್ಲಿಯೂ ಲಭ್ಯ!

|

ಪ್ರಸ್ತುತ ವಿಡಿಯೋ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳು ಹೆಚ್ಚು ಟ್ರೆಂಡ್ ಹುಟ್ಟುಹಾಕಿದ್ದು, ಮನರಂಜನೆಯ ಪ್ರಮುಖ ಕೇಂದ್ರಗಳಂತಾಗಿ ಬಿಂಬಿತವಾಗಿವೆ. ಅವುಗಳಲ್ಲಿ ಭಾರಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಆಪ್‌ಗಳಲ್ಲಿ ಅಮೆಜಾನ್ ಕೂಡಾ ಒಂದು. ಅಮೆಜಾನ್ ಹಲವು ಭಿನ್ನ ಕಂಟೆಂಟ್‌ ಒದಗಿಸುವ ಮೂಲಕ ಬಳಕೆದಾರರ ಮನ ಗೆದ್ದಿದೆ. ಇದೀಗ ಮೈಕ್ರೋಸಾಫ್ಟ್‌ ಸ್ಟೋರ್‌ನಲ್ಲಿ ಲಭ್ಯವಾಗಿದ್ದು, ವಿಂಡೋಸ್ ಬಳಕೆದಾರರಿಗೂ ಖುಷಿ ತಂದಿದೆ.

ವಿಡಿಯೊ

ಹೌದು, ಜನಪ್ರಿಯ ವಿಡಿಯೊ ಸ್ಟ್ರೀಮಿಂಗ್ ಆಪ್‌ ಅಮೆಜಾನ್ ಅಪ್ಲಿಕೇಶನ್ ಈಗ ಮೈಕ್ರೋಸಾಫ್ಟ್‌ ಸ್ಟೋರ್‌ನಲ್ಲಿಯೂ ಲಭ್ಯ. ಈ ಮೊದಲು ವಿಂಡೋಸ್ ಆಪರೇಟಿಂಗ್‌ನ ಜನಪ್ರಿಯ ವೆಬ್‌ಬ್ರೌಸರ್‌ಗಳ ಮೂಲಕ ಅಮೆಜಾನ್ ವೀಕ್ಷಿಸಬಹುದಾಗಿತ್ತು. ಆದರೆ ಈಗ ವಿಂಡೊಸ್‌ ಬಳಕೆದಾರರು ಅಮೆಜಾನ್ ಆಪ್‌ ಬಳಕೆಮಾಡಬಹುದಾಗಿದೆ. ಸದ್ಯ ಯುಎಸ್‌ ಬಳಕೆದಾರರಿಗೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಭಾರತದ ವಿಂಡೊಸ್‌ ಬಳಕೆದಾರರಿಗೂ ದೊರೆಯಲಿದೆ.

ವಿಂಡೋಸ್

ಅಮೆಜಾನ್ ಪ್ರೈಮ್ ವಿಂಡೋಸ್ ಸ್ಟೋರ್‌ನಲ್ಲಿ ನೆಟ್‌ಫ್ಲಿಕ್ಸ್ ಮತ್ತು ಉಲ್ಲು ಸೇರಿದಂತೆ ಇತರ ವಿಡಿಯೊ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳಿಗೆ ಸೇರುತ್ತದೆ. ಡಿಸ್ನಿ + ಹಾಟ್‌ಸ್ಟಾರ್ ಭಾರತದಿಂದ ಮತ್ತೊಂದು ವಿಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿದೆ, ಇದು ಇನ್ನೂ ವಿಂಡೋಸ್ ಸ್ಟೋರ್ ಮೂಲಕ ಲಭ್ಯವಿಲ್ಲ. ಆದರೆ ಶೀಘ್ರದಲ್ಲೇ ಬದಲಾಗಲಿದೆ. ಇನ್ನು ಅಮೆಜಾನ್ ಪ್ರೈಮ್ ವೀಡಿಯೊ ಆಪ್‌ನಲ್ಲಿ ಮತ್ತಷ್ಟು ಗುಣಮಟ್ಟದ ವೀಕ್ಷಣೆ ಸಾಧ್ಯವಾಗುತ್ತದೆ.

ಅಮೆಜಾನ್

ಇನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಜಿಯೋಫೈಬರ್ ಗ್ರಾಹಕರಿಗೆ ಈಗ ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ ಸಿಗಲಿದೆ ಎಂದು ರಿಲಯನ್ಸ್ ಜಿಯೋ ಅಧಿಕೃತವಾಗಿ ಘೋಷಿಸಿದೆ. ಅಮೆಜಾನ್ ಪ್ರೈಮ್ ಸದಸ್ಯತ್ವವು ಸಾಮಾನ್ಯವಾಗಿ ಒಂದು ವರ್ಷಕ್ಕೆ 999ರೂ., ಆದರೆ ಜಿಯೋ ಈ ಪ್ರಯೋಜನವನ್ನು ಈಗಾಗಲೇ ಗೋಲ್ಡ್ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಯೋಜನೆಯಲ್ಲಿ ಈ ಸೌಲಭ್ಯವನ್ನು ಎಲ್ಲ ಬಳಕೆದಾರರಿಗೆ ವಿಸ್ತರಿಸುತ್ತಿದೆ.

ಜಿಯೋ

ಇನ್ನು ಜಿಯೋ ಫೈಬರ್‌ಗಾಗಿ ಅಮೆಜಾನ್ ಪ್ರೈಮ್ ಕೊಡುಗೆ ಜನರು ಪ್ರೈಮ್ ಸದಸ್ಯತ್ವದ ಸಂಪೂರ್ಣ ಸೌಲಭ್ಯದ ಪ್ರಯೋಜನ ಪಡೆಯಲು ಅನುವು ಮಾಡಿಕೊಡುತ್ತದೆ. ಇದು ಪ್ರೈಮ್ ವಿಡಿಯೋ, ಉತ್ಪನ್ನಗಳ ಉಚಿತ ವೇಗದ ವಿತರಣೆ, ಉನ್ನತ ವ್ಯವಹಾರಗಳಿಗೆ ಆರಂಭಿಕ ಪ್ರವೇಶವನ್ನು ಒಳಗೊಂಡಿದೆ. ಈ ವಿಶೇಷ ಯೋಜನೆಯೊಂದಿಗೆ ನೀವು ಜಾಹೀರಾತು ರಹಿತ ಪ್ರೈಮ್ ಮ್ಯೂಸಿಕ್, ಪ್ರೈಮ್ ಗೇಮಿಂಗ್ ಮತ್ತು ಪ್ರೈಮ್ ರೀಡಿಂಗ್ ಅನ್ನು ಸಹ ಸ್ಟ್ರೀಮ್ ಮಾಡಬಹುದು.

Most Read Articles
Best Mobiles in India

English summary
The app is available in select countries through Windows app store for PC users right now.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X