ಲೆನೊವೊ ಲ್ಯಾಪ್‌ಟಾಪ್‌ಗಳಿಗೆ ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್‌; ಆಫರ್‌ ಮಿಸ್‌ ಮಾಡ್ಕೋಬೇಡಿ

|

ಪ್ರಮುಖ ಈ ಕಾಮರ್ಸ್‌ ತಾಣಗಳಲ್ಲಿ ಒಂದಾದ ಅಮೆಜಾನ್‌ನಲ್ಲಿ ಈಗಾಗಲೇ ಭರ್ಜರಿ ಆಫರ್‌ಗಳೊಂದಿಗೆ ಹಲವು ಗ್ಯಾಜೆಟ್‌ಗಳು ಮಾರಾಟ ಆಗುತ್ತಿವೆ. ಅದರಲ್ಲೂ ಸ್ಮಾರ್ಟ್‌ಫೋನ್‌ , ಇಯರ್‌ಬಡ್ಸ್‌ ಹಾಗೂ ಲ್ಯಾಪ್‌ಟಾಪ್‌ಗಳು ಆಕರ್ಷಕ ರಿಯಾಯಿತಿ ಪಡೆದುಕೊಂಡಿರುವುದು ವಿಶೇಷ. ಹಾಗೆಯೇ ಹಲವಾರು ಬ್ರ್ಯಾಂಡ್‌ಗಳ ಲ್ಯಾಪ್‌ಟಾಪ್‌ಗಳಲ್ಲಿ ಲೆನೊವೊ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಇವುಗಳ ದೀರ್ಘಕಾಲದ ಬ್ಯಾಟರಿ ಸಾಮರ್ಥ್ಯ ಹಾಗೂ ಕಾರ್ಯಕ್ಷಮತೆ ಬಳಕೆದಾರರಿಗೆ ವಿಶೇಷ ಅನುಭವ ನೀಡಲಿದೆ.

ಲೆನೊವೊ

ಹೌದು, ಲೆನೊವೊ ಕಂಪೆನಿಯ ಹಲವಾರು ಡಿವೈಸ್‌ಗಳಲ್ಲಿ ಲ್ಯಾಪ್‌ಟಾಪ್‌ಗಳು ಹೆಚ್ಚು ಜನಪ್ರಿಯವಾಗಿವೆ. ಅಂತೆಯೇ ನೀವೇನಾದರೂ ಆಫರ್‌ ಬೆಲೆಯಲ್ಲಿ ಲೆನೊವೊದ ಲ್ಯಾಪ್‌ಟಾಪ್‌ಗಳನ್ನೇ ಖರೀದಿ ಮಾಡಬೇಕು ಎಂದುಕೊಂಡರೆ ಅಮೆಜಾನ್‌ನಲ್ಲಿ ಭರ್ಜರಿ ಆಫರ್‌ ಘೋಷಣೆ ಮಾಡಲಾಗಿದೆ. ಈ ಪ್ಲಾಟ್‌ಫಾರ್ಮ್‌ ಮೂಲಕ ಖರೀದಿ ಮಾಡಿದರೆ ನೀವು ಸುಮಾರು 50% ವರೆಗೆ ಹಣ ಉಳಿತಾಯ ಮಾಡಬಹುದು. ಹಾಗಿದ್ರೆ, ಯಾವೆಲ್ಲಾ ವೇರಿಯಂಟ್‌ ಲ್ಯಾಪ್‌ಟಾಪ್‌ಗಳಿಗೆ ಏನೆಲ್ಲಾ ಆಫರ್‌ ಘೋಷಣೆ ಮಾಡಲಾಗಿದೆ?, ಪ್ರಮುಖ ಫೀಚರ್ಸ್‌ ಏನು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಲೆನೊವೊ ಐಡಿಯಾಪ್ಯಾಡ್ 3

ಲೆನೊವೊ ಐಡಿಯಾಪ್ಯಾಡ್ 3

ಲೆನೊವೊ ಐಡಿಯಾಪ್ಯಾಡ್ 3 ಲ್ಯಾಪ್‌ಟಾಪ್‌ 62,390 ರೂ.ಗಳ ಸಾಮಾನ್ಯ ದರ ಹೊಂದಿದ್ದು 43% ರಿಯಾಯಿತಿ ಪಡೆದುಕೊಂಡಿದೆ. ಈ ಮೂಲಕ ನೀವು 35,815 ರೂ. ಗಳಿಗೆ ಇದನ್ನು ಖರೀದಿ ಮಾಡಬಹುದು. ಹಾಗೆಯೇ ಈ ಲ್ಯಾಪ್‌ಟಾಪ್‌ 15.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಕೋರ್ i3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8 GB RAM ಆಯ್ಕೆ ಲ್ಯಾಪ್‌ಟಾಪ್‌ನ ಕಾರ್ಯಕ್ಷಮತೆಯನ್ನ ಹೆಚ್ಚಿಗೆ ಮಾಡುತ್ತದೆ. ಈ ಡಿವೈಸ್ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ.

ಲೆನೊವೊ ಐಡಿಯಾಪ್ಯಾಡ್ ಸ್ಲಿಮ್‌ 3

ಲೆನೊವೊ ಐಡಿಯಾಪ್ಯಾಡ್ ಸ್ಲಿಮ್‌ 3

ಲೆನೊವೊ ಐಡಿಯಾಪ್ಯಾಡ್ ಸ್ಲಿಮ್‌ 3 ಲ್ಯಾಪ್‌ಟಾಪ್‌ 39,500 ರೂ. ಗಳ ಸಾಮಾನ್ಯ ದರ ಹೊಂದಿದ್ದು, 9% ಡಿಸ್ಕೌಂಟ್‌ ಪಡೆದಿದ್ದು, ಈ ಮೂಲಕ ನೀವು 36,000 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ ಈ ಲ್ಯಾಪ್‌ಟಾಪ್ 15.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 10 ನೇ ಜನ್ ಇಂಟೆಲ್ ಕೋರ್ i3-10110Uನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 4GB, 8GB, ಹಾಗೂ 12GB RAM ಆಯ್ಕೆ ಇದ್ದು, 256 GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿದೆ.

ಲೆನೊವೊ V15

ಲೆನೊವೊ V15

ಲೆನೊವೊ V15 ಲ್ಯಾಪ್‌ಟಾಪ್‌ 45,999 ರೂ. ಗಳ ಬೆಲೆ ಹೊಂದಿದ್ದು, 20% ರಿಯಾಯಿತಿ ಪಡೆದುಕೊಂಡಿದ್ದು, 37,000ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದು. ಹಾಗೆಯೇ 15.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇಂಟೆಲ್‌ ಇಂಟೆಲ್‌ I3-8130U ಪ್ರೊಸೆಸರ್‌ ನಲ್ಲಿ ಕೆಲಸ ಮಾಡಲಿದೆ. ಜೊತೆಗೆ 4GB RAM ಹಾಗೂ 256GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಈ ಲ್ಯಾಪ್‌ಟಾಪ್‌ ಪಡೆದುಕೊಂಡಿದೆ. ಇನ್ನುಳಿದಂತೆ 6 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್‌ ಇರಲಿದ್ದು, ಇದು ಹಗುರವಾದ ಲ್ಯಾಪ್‌ಟಾಪ್ ಆಗಿರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ.

ಲೆನೊವೊ ಐಡಿಯಾಪ್ಯಾಡ್‌ ಸ್ಲಿಮ್‌ 1

ಲೆನೊವೊ ಐಡಿಯಾಪ್ಯಾಡ್‌ ಸ್ಲಿಮ್‌ 1

ಲೆನೊವೊ ಐಡಿಯಾಪ್ಯಾಡ್‌ ಸ್ಲಿಮ್‌ 1 ಲ್ಯಾಪ್‌ಟಾಪ್‌ಗೆ 34,890 ರೂ. ಗಳ ಸಾಮಾನ್ಯ ದರ ನಿಗದಿ ಮಾಡಲಾಗಿದ್ದು, ಅಮೆಜಾನ್‌ನಲ್ಲಿ 30% ಆಫರ್‌ ಪಡೆದುಕೊಂಡು 24,290 ರೂ. ಗಳಿಗೆ ಲಭ್ಯವಿದೆ. ಇನ್ನು ಈ ಲ್ಯಾಪ್‌ಟಾಪ್‌ 11.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇಂಟೆಲ್ ಸೆಲೆರಾನ್ N4020 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4MB RAM ಹಾಗೂ 256GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಇದರಲ್ಲಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಿಗಳಿಗೆ ಅನುಕೂಲಕರವಾಗಿದೆ. ಈ ಡಿವೈಸ್‌ 6 ಗಂಟೆಗಳ ಬ್ಯಾಟರಿ ಬ್ಯಾಕಪ್‌ ನೀಡಲಿದೆ.

ಲೆನೊವೊ E41-55

ಲೆನೊವೊ E41-55

ಲೆನೊವೊ E41-55 ಲ್ಯಾಪ್‌ಟಾಪ್‌ 35,460ರೂ. ಗಳ ಸಾಮಾನ್ಯ ದರ ಹೊಂದಿದ್ದ, 46% ರಿಯಾಯಿತಿ ಪಡೆದುಕೊಂಡ ನಂತರ 18,990 ರೂ. ಗಳಿಗೆ ಮಾರಾಟ ಆಗುತ್ತಿದೆ. ಹಾಗೆಯೇ ಈ ಲ್ಯಾಪ್‌ಟಾಪ್‌ 14 ಇಂಚಿನ ಡಿಸ್‌ಪ್ಲೇ ಹೊಂದಿದ್ದು, AMD ಅಥ್ಲಾನ್ A3050U ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 4GB RAM ಹಾಗೂ 1TB ಇಂಟರ್ನಲ್‌ಸ್ಟೋರೇಜ್‌ ಸಾಮರ್ಥ್ಯ ಇದರಲ್ಲಿದ್ದು, ಬರೋಬ್ಬರಿ 11 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್‌ ಹೊಂದಿದೆ.

Best Mobiles in India

English summary
Amazon's 2022 sale: huge discount on Lenovo laptops.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X