ಅಮೆಜಾನ್‌ ಸೇಲ್‌ : 40,000ರೂ. ಒಳಗೆ ಲಭ್ಯ ಹೆಚ್‌ಪಿ, ಲೆನೊವೊ ಲ್ಯಾಪ್‌ಟಾಪ್‌ಗಳು!

|

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಗ್ರಾಹಕರು ರಿಯಾಯಿತಿ ಬೆಲೆಗೆ ಸ್ಮಾರ್ಟ್‌ ಉತ್ಪನ್ನಗಳನ್ನು ಕೊಂಡುಕೊಳ್ಳಬಹುದಾಗಿದೆ. ಈ ಸೇಲ್‌ ಇದೇ ಸೆ. 23 ರಂದು ಪ್ರಾರಂಭವಾಗಿದ್ದು, ಸೆ. 30 ರವರೆಗೆ ಇರಲಿದೆ. ಈ ಮಾರಾಟ ಮೇಳದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಕೆಲವು ಹೊಸ ಲ್ಯಾಪ್‌ಟಾಪ್‌ಗಳು ಭಾರೀ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿವೆ.

ಅಮೆಜಾನ್‌

ಹೌದು, ಅಮೆಜಾನ್‌ ಸೇಲ್‌ನಲ್ಲಿ, ಲ್ಯಾಪ್‌ಟಾಪ್‌ಗಳು ಆಕರ್ಷಕ ರಿಯಾಯಿತಿಯಲ್ಲಿ ಲಭ್ಯ ಇವೆ. ಜೊತೆಗೆ ಎಸ್‌ಬಿಐ ಕಾರ್ಡ್‌ ಮೂಲಕ ಮಾಡುವ ಖರೀದಿಯಲ್ಲಿ 10% ತ್ವರಿತ ರಿಯಾಯಿತಿ ಸಿಗಲಿದೆ. ಹೀಗಾಗಿ ಆಫರ್‌ನಲ್ಲಿ ನೀವೇನಾದರೂ ಲ್ಯಾಪ್‌ಟಾಪ್‌ ಖರೀದಿಸಬೇಕಿದ್ದರೆ ಇದು ಸೂಕ್ತ ಸಮಯ. ಈ ಲೇಖನದಲ್ಲಿ 40,000ರೂ. ಒಳಗೆ ಲಭ್ಯವಿರುವ ಹೆಚ್‌ಪಿ, ಏಸರ್‌, ಲೆನೊವೊ ಸೇರಿದಂತೆ ಪ್ರಮುಖ ಕಂಪೆನಿಯ ಲ್ಯಾಪ್‌ಟಾಪ್‌ಗಳ ಆಫರ್‌ ಬೆಲೆ ಹಾಗೂ ಫೀಚರ್ಸ್‌ಗಳನ್ನು ನೀಡಿದ್ದೇವೆ ಓದಿರಿ.

ಹೆಚ್‌ಪಿ 15s-Ryzen 3 5300U

ಹೆಚ್‌ಪಿ 15s-Ryzen 3 5300U

ಈ ಲ್ಯಾಪ್‌ಟಾಪ್‌ 29% ರಿಯಾಯಿತಿ ಪಡೆದಿದ್ದು, 33,990ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ 15.6 ಇಂಚಿನ FHD ಡಿಸ್‌ಪ್ಲೇ ಜೊತೆಗೆ ವಿಂಡೋಸ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಜೊತೆಗೆ ಫಾಸ್ಟ್‌ ಚಾರ್ಜಿಂಗ್‌ ಬೆಂಬಲ ಇದರಲ್ಲಿದೆ. ಜೊತೆಗೆ ಸೂಪರ್‌ಸ್ಪೀಡ್ ಯುಎಸ್‌ಬಿ ಟೈಪ್-ಸಿ, 2 ಸೂಪರ್‌ಸ್ಪೀಡ್ ಯುಎಸ್‌ಬಿ ಟೈಪ್-ಎ, 1 ಹೆಡ್‌ಫೋನ್/ಮೈಕ್ರೋಫೋನ್ ಕಾಂಬೊ, 1 ಎಸಿ ಸ್ಮಾರ್ಟ್ ಪಿನ್, 1 ಎಚ್‌ಡಿಎಂಐ ಕನೆಕ್ಟಿವಿಟಿ ಆಯ್ಕೆ ಪಡೆದಿದೆ.

ಏಸರ್ ಆಸ್ಪೈರ್ 3

ಏಸರ್ ಆಸ್ಪೈರ್ 3

ಏಸರ್ ಆಸ್ಪೈರ್ 3 ಲ್ಯಾಪ್‌ಟಾಪ್‌ 31% ರಿಯಾಯಿತಿ ಪಡೆದಿದ್ದು, 35,990ರೂ. ಗಳಿಗೆ ಲಭ್ಯ ಇದೆ. ಈ ಡಿವೈಸ್‌ 15.6 ಇಂಚಿನ IPS ಡಿಸ್‌ಪ್ಲೇ ಜೊತೆಗೆ FHD ರೆಸಲ್ಯೂಶನ್ ಆಯ್ಕೆ ಪಡೆದಿದೆ. ಹಾಗೆಯೇ ಇಂಟೆಲ್ ಕೋರ್ i3 1115G4 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. 8GB RAM ಹಾಗೂ 16GB ಇಂಟರ್‌ ಸ್ಟೋರೇಜ್‌ ಅಯ್ಕೆ ಪಡೆದಿದ್ದು, ಇದನ್ನು ಅಪ್‌ಗ್ರೇಡ್ ಮಾಡಬಹುದಾಗಿದೆ. ಇದರಲ್ಲಿ ವೈ-ಫೈ 5 (802.11ac) ಆಯ್ಕೆ ಇದ್ದು, ವೇಗದ ಇಂಟರ್‌ನೆಟ್‌ ಫೀಚರ್‌ನ್ನು ನೀಡಲಿದೆ ಮತ್ತು ಕ್ಯಾಮೆರಾ ಮತ್ತು ಮೈಕ್ರೊಫೋನ್‌ಗಳನ್ನು ಸಹ ಒಳಗೊಂಡಿದೆ.

ಹಾನರ್ ಮ್ಯಾಜಿಕ್‌ಬುಕ್ 14

ಹಾನರ್ ಮ್ಯಾಜಿಕ್‌ಬುಕ್ 14

ಹಾನರ್ ಮ್ಯಾಜಿಕ್‌ಬುಕ್ 14 ಲ್ಯಾಪ್‌ಟಾಪ್ 41% ರಿಯಾಯಿತಿ ಪಡೆದುಕೊಂಡಿದ್ದು, 38,990ರೂ. ಗಳಲ್ಲಿ ಮಾರಾಟಕ್ಕೆ ಲಭ್ಯವಾಗಿದೆ. ಇದು 14 ಇಂಚಿನ FHD ಹಾಗೂ IPS ಡಿಸ್‌ಪ್ಲೇ ಜೊತೆಗೆ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಪಡೆದಿದೆ. ಈ ಲ್ಯಾಪ್‌ಟಾಪ್‌ AMD Ryzen 5 5500U ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ 56 Wh ನ ಬ್ಯಾಟರಿ ಸಾಮರ್ಥ್ಯ ಇದ್ದು, ಸುಮಾರು 11 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಿದೆ. ಬ್ಯಾಕ್‌ಲಿಟ್ ಕೀಬೋರ್ಡ್ ಫೀಚರ್ಸ್‌ ಹೊಂದಿರುವ ಈ ಲ್ಯಾಪ್‌ಟಾಪ್‌ನಲ್ಲಿ ಕತ್ತಲೆಯಲ್ಲಿಯೂ ಟೈಪ್ ಮಾಡಲು ಅನುವು ಮಾಡಿಕೊಡುತ್ತದೆ.

ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 3

ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 3

ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 3 ಲ್ಯಾಪ್‌ಟಾಪ್‌ 43% ರಿಯಾಯಿತಿ ಪಡೆದುಕೊಂಡಿದೆ. ಈ ಮೂಲಕ ಇದು 34,990ರೂ. ಗಳಿಗೆ ಲಭ್ಯವಾಗಿದೆ. ಈ ಲ್ಯಾಪ್‌ಟಾಪ್‌ 14 ಇಂಚಿನ 220nits FHD ಡಿಸ್‌ಪ್ಲೇ ಹೊಂದಿದ್ದು, ಇಂಟೆಲ್‌ ಕೋರ್‌ i3 11th Gen ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಹಾಗೂ 512GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ. ಈ ಡಿವೈಸ್‌ 45Wh ಬ್ಯಾಟರಿ ಸಾಮರ್ಥ್ಯ ಪಡೆದಿದ್ದು, 10 ಗಂಟೆಗಳವರೆಗೆ ಬ್ಯಾಕ್‌ಅಪ್‌ ನೀಡಲಿದೆ.

ರೆಡ್ಮಿ ಬುಕ್ ಪ್ರೊ

ರೆಡ್ಮಿ ಬುಕ್ ಪ್ರೊ

ರೆಡ್ಮಿ ಬುಕ್ ಪ್ರೊ 33% ರಿಯಾಯಿತಿ ಪಡೆದುಕೊಂಡಿದ್ದು, 39,990ರೂ.ಗಳಲ್ಲಿ ಖರೀದಿ ಮಾಡಬಹುದಾಗಿದೆ. ಈ ಲ್ಯಾಪ್‌ಟಾಪ್‌ 15.6 ಇಂಚಿನ FHD ಆಂಟಿ-ಗ್ಲೇರ್ ಡಿಸ್‌ಪ್ಲೇ ಹೊಂದಿದೆ. ಜೊತೆಗೆ 8GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಇದರಲ್ಲಿದೆ. ಹಾಗೆಯೇ 2 ಸೂಪರ್‌ಸ್ಪೀಡ್ USB ಟೈಪ್-A, HDMI ಪೋರ್ಟ್, 1 SD ಕಾರ್ಡ್ ರೀಡರ್, 1 ಹೆಡ್‌ಫೋನ್/ಮೈಕ್ರೋಫೋನ್ ಕಾಂಬೊ, 1 USB 2.0 ಟೈಪ್ A ಸೇರಿದಂತೆ ಇನ್ನಿತರೆ ಕನೆಕ್ಟಿವಿಟಿ ಆಯ್ಕೆಗಳನ್ನು ಪಡೆದುಕೊಂಡಿದೆ.

Best Mobiles in India

English summary
Amazon Great Indian Festival Sale allows customers to buy items at low prices. here we describe laptop features and price.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X