ಅಮೆಜಾನ್‌ ಸೇಲ್‌: ಕೇವಲ 1,000 ರೂ.ಒಳಗೆ ಲಭ್ಯವಿರುವ ಕೀಬೋರ್ಡ್‌-ಮೌಸ್‌!

|

ಇದೇ ತಿಂಗಳ ಸೆಪ್ಟೆಂಬರ್‌ 23 ರಂದು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟ ಆರಂಭ ಆಗಿದ್ದು, ಈ ತಿಂಗಳ 30 ರ ವರೆಗೆ ಇರಲಿದೆ. ಈಗಾಗಲೇ ತನ್ನ ಪ್ರೊಡಕ್ಸ್ಟ್‌ಗಳ ಮೇಲೆ ಭರ್ಜರಿ ರಿಯಾಯಿತಿ ನೀಡಿ ಮಾರಾಟ ಮಾಡುತ್ತಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌, ಹೆಟ್‌ಫೋನ್‌, ಲ್ಯಾಪ್‌ಟಾಪ್‌, ಸ್ಮಾರ್ಟ್‌ ಟಿವಿ ಸೇರಿದಂತೆ ಪ್ರಮುಖ ಗ್ಯಾಜೆಟ್ಸ್‌ಗಳಿಗೆ ಹೆಚ್ಚಿನ ಡಿಸ್ಕೌಂಟ್‌ ನೀಡಲಾಗಿದೆ.

ಅಮೆಜಾನ್‌

ಹೌದು, ಅಮೆಜಾನ್‌ ತನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮೂಲಕ ಗ್ಯಾಜೆಟ್‌ಗಳಿಗೆ ಹೆಚ್ಚಿನ ರಿಯಾಯಿತಿ ನೀಡಿದೆ. ಉತ್ತಮ ಶ್ರೇಣಿಯ ಕೀಬೋರ್ಡ್ಗ ಮತ್ತು ಮೌಸ್‌ಗಳಿಗೆ ಆಕರ್ಷಕ ಡಿಸ್ಕೌಂಟ್‌ ನೀಡಿದೆ. ಪ್ರಮುಖವಾಗಿ ಹೆಚ್‌ಪಿ, ಡೆಲ್‌, ಲಾಜಿಟೆಕ್, ಝೆಬ್ರೋನಿಕ್ಸ್ ಸೇರಿದಂತೆ ಇನ್ನಿತರೆ ಕಂಪೆನಿಯ ಕೀಬೋರ್ಡ್‌ ಹಾಗೂ ಮೌಸ್‌ ಅತ್ಯಾಕರ್ಷಕ ರಿಯಾಯಿತಿಯನ್ನು ಪಡೆದುಕೊಂಡಿವೆ. ಈ ಲೇಖನದಲ್ಲಿ 1,000 ರೂ. ಒಳಗೆ ಲಭ್ಯವಿರುವ ಕೀಬೋರ್ಡ್ ಮತ್ತು ಮೌಸ್ ಕಾಂಬೊಗಳ ಮಾಹಿತಿ ನೀಡಲಾಗಿದೆ ಓದಿರಿ.

ಹೆಚ್‌ಪಿ USB ವಾಯರ್‌ಲೆಸ್‌ ಕೀಬೋರ್ಡ್ ಮತ್ತು ಮೌಸ್

ಹೆಚ್‌ಪಿ USB ವಾಯರ್‌ಲೆಸ್‌ ಕೀಬೋರ್ಡ್ ಮತ್ತು ಮೌಸ್

ಈ ಡಿವೈಸ್‌ಗಳಿಗೆ 100 ರೂ.ಗಳ ರಿಯಾಯಿತಿ ನೀಡಿಲಾಗಿದ್ದು, ಇದನ್ನು ನೀವು ಕೇವಲ 998ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಈ ವಾಯರ್‌ಲೆಸ್‌ ಕೀಬೋರ್ಡ್ ಮತ್ತು ಮೌಸ್ ಕಾಂಬೊ 10 ಮೀಟರ್‌ಗಳ 2.4GHz ವೈರ್‌ಲೆಸ್ ಆಯ್ಕೆ ಪಡೆದಿವೆ.

ಝೆಬ್ರೋನಿಕ್ಸ್ ಝೆಬ್-ಕಂಪ್ಯಾನಿಯನ್ ಕೀಬೋರ್ಡ್ ಮತ್ತು ಮೌಸ್

ಝೆಬ್ರೋನಿಕ್ಸ್ ಝೆಬ್-ಕಂಪ್ಯಾನಿಯನ್ ಕೀಬೋರ್ಡ್ ಮತ್ತು ಮೌಸ್

ಈ ಕಾಂಬೊ ಆಫರ್‌ 599 ರೂ. ಗಳಲ್ಲಿ ಲಭ್ಯವಿದೆ. ಇದಕ್ಕೆ ಅಮೆಜಾನ್‌ 400ರೂ. ಗಳ ರಿಯಾಯಿತಿ ನೀಡಿದೆ. ವಾಯರ್‌ಲೆಸ್‌ ಕೀಬೋರ್ಡ್ 104 ಕೀಗಳನ್ನು ಹೊಂದಿದ್ದು, ಕಡಿಮೆ ಬ್ಯಾಟರಿ ಶಕ್ತಿಯಿಂದಲೇ ಕೆಲಸ ಮಾಡುತ್ತದೆ. ಮೌಸ್ 1200 DPI (dots per linear inch) ಆಯ್ಕೆ ಪಡೆದಿದೆ.

ಲಾಜಿಟೆಕ್ MK215 ವಾಯರ್‌ಲೆಸ್‌ ಕೀಬೋರ್ಡ್ ಮತ್ತು ಮೌಸ್

ಲಾಜಿಟೆಕ್ MK215 ವಾಯರ್‌ಲೆಸ್‌ ಕೀಬೋರ್ಡ್ ಮತ್ತು ಮೌಸ್

ಈ ಗ್ಯಾಜೆಟ್‌ಗಳು 999ರೂ. ಗಳಲ್ಲಿ ಲಭ್ಯ ಇವೆ. ಇವು 796ರೂ.ಗಳ ರಿಯಾಯಿತಿ ಪಡೆದಿವೆ. ಈ ಕಾಂಬೋ ಸಾಧನಗಳು 10 ಮೀಟರ್‌ಗಳ ವಾಯರ್‌ಲೆಸ್‌ ವ್ಯಾಪ್ತಿಯನ್ನು ಹೊಂದಿವೆ. ಕೀಬೋರ್ಡ್‌ನ ಬ್ಯಾಟರಿ ಬಾಳಿಕೆ ಎರಡು ವರ್ಷಗಳವರೆಗೆ ಇರಲಿದ್ದು, ಮೌಸ್‌ ಬ್ಯಾಟರಿ ಅವಧಿ ಐದು ತಿಂಗಳು ಇರಲಿದೆ.

ಝೆಬ್ರೋನಿಕ್ಸ್ ಝೆಬ್-ವಾರ್ ಗೇಮಿಂಗ್ ಕೀಬೋರ್ಡ್ ಮತ್ತು ಮೌಸ್

ಝೆಬ್ರೋನಿಕ್ಸ್ ಝೆಬ್-ವಾರ್ ಗೇಮಿಂಗ್ ಕೀಬೋರ್ಡ್ ಮತ್ತು ಮೌಸ್

ಈ ಡಿವೈಸ್‌ಗಳನ್ನು 799ರೂ.ಗಳಿಗೆ ಕೊಂಡುಕೊಳ್ಳಬಹುದು. ಇದಕ್ಕೆ 1,200ರೂ. ಗಳ ರಿಯಾಯಿತಿ ನೀಡಲಾಗಿದೆ. ಬ್ಯಾಕ್‌ಲಿಟ್ ಗೇಮಿಂಗ್ ಕೀಬೋರ್ಡ್ ಮತ್ತು ಗೇಮಿಂಗ್ ಮೌಸ್ ಫಾರ್ವರ್ಡ್ ಮತ್ತು ಬ್ಯಾಕ್‌ವರ್ಡ್ ಗಾಗಿ ಮೀಸಲಾದ ಬಟನ್‌ಗಳನ್ನು ಹೊಂದಿವೆ. ಹಾಗೆಯೇ ಕೀಬೋರ್ಡ್ ಇಂಟಿಗ್ರೇಟೆಡ್ ಮೀಡಿಯಾ ಕಂಟ್ರೋಲ್ ಕೀಗಳನ್ನು ಹೊಂದಿದೆ.

ಡೆಲ್‌ USB ವೈರ್ಡ್ ಕೀಬೋರ್ಡ್‌ ಹಾಗೂ ಮೌಸ್‌ KB216MS116

ಡೆಲ್‌ USB ವೈರ್ಡ್ ಕೀಬೋರ್ಡ್‌ ಹಾಗೂ ಮೌಸ್‌ KB216MS116

ಈ ಡಿವೈಸ್‌ಗಳು 1,566ರೂ. ಗಳ ರಿಯಾಯಿತಿ ಪಡೆದಿದ್ದು, 933ರೂ. ಗಳಲ್ಲಿ ಲಭ್ಯವಿದೆ. ಮೌಸ್ 1000 DPI ಸೆನ್ಸಿಟಿವಿಟಿಯಲ್ಲಿ ಕೆಲಸ ಮಾಡಲಿದ್ದು, ಎರಡೂ ಸಾಧನಗಳು ಸರಳವಾದ ಪ್ಲಗ್ ಮತ್ತು ಪ್ಲೇ ಕಾರ್ಯ ವಿಧಾನವನ್ನು ಪಡೆದಿವೆ.

HP 150 ವೈರ್ಡ್ ಕೀಬೋರ್ಡ್ ಮತ್ತು ಮೌಸ್

HP 150 ವೈರ್ಡ್ ಕೀಬೋರ್ಡ್ ಮತ್ತು ಮೌಸ್

ಈ ಕೀಬೋರ್ಡ್ ಮತ್ತು ಮೌಸ್ 849ರೂ.ಗಳಲ್ಲಿ ಲಭ್ಯ ಇವೆ. ಇದಕ್ಕೆ 150ರೂ. ಗಳ ರಿಯಾಯಿತಿ ನೀಡಲಾಗಿದೆ. ಕೀಬೋರ್ಡ್ ಮತ್ತು ಮೌಸ್ ಯುಎಸ್‌ಬಿ ಪ್ಲಗ್ ಮತ್ತು ಪ್ಲೇ ಸೆಟಪ್ ಆಯ್ಕೆ ಹೊಂದಿದ್ದು, ಕೀಬೋರ್ಡ್ 12 ಶಾರ್ಟ್‌ಕಟ್ ಕೀಗಳನ್ನು ಪಡೆದಿದೆ.

ಲಾಜಿಟೆಕ್ MK270r ವೈರ್‌ಲೆಸ್ ಕೀಬೋರ್ಡ್ ಮತ್ತು ಮೌಸ್

ಲಾಜಿಟೆಕ್ MK270r ವೈರ್‌ಲೆಸ್ ಕೀಬೋರ್ಡ್ ಮತ್ತು ಮೌಸ್

ಈ ಕಾಂಬೋ ಆಫರ್‌ 849ರೂ. ಗಳಿಗೆ ಲಭ್ಯವಿದೆ. ಇದಕ್ಕೆ ಅಮೆಜಾನ್‌ 150ರೂ. ಗಳ ರಿಯಾಯಿತಿ ಘೋಷಣೆ ಮಾಡಿದೆ. ಇದು ಇಮೇಲ್, ಪ್ಲೇ/ಪಾಸ್, ವಾಲ್ಯೂಮ್ ಮುಂತಾದ ಕಾರ್ಯಗಳಿಗಾಗಿ ಎಂಟು ಮಲ್ಟಿಮೀಡಿಯಾ ಕೀಗಳ ಆಯ್ಕೆ ಪಡೆದಿದೆ. ಇವೆರಡೂ 10 ಮೀಟರ್‌ಗಳ ವೈರ್‌ಲೆಸ್ ಶ್ರೇಣಿಯನ್ನು ಹೊಂದಿವೆ.

ಪೋರ್ಟ್ರೋನಿಕ್ಸ್ Key2-A ಮಲ್ಟಿಮೀಡಿಯಾ ವೈರ್‌ಲೆಸ್ ಕೀಬೋರ್ಡ್ ಮತ್ತು ಮೌಸ್

ಪೋರ್ಟ್ರೋನಿಕ್ಸ್ Key2-A ಮಲ್ಟಿಮೀಡಿಯಾ ವೈರ್‌ಲೆಸ್ ಕೀಬೋರ್ಡ್ ಮತ್ತು ಮೌಸ್

ಈ ಸ್ಮಾರ್ಟ್‌ ಡಿವೈಸ್‌ಗಳನ್ನು ನೀವು 999ರೂ. ಗಳಲ್ಲಿ ಕೊಂಡುಕೊಳ್ಳಬಹುದಾಗಿದೆ. 500ರೂ. ಗಳ ರಿಯಾಯಿತಿಯನ್ನು ಇವುಗಳಿಗೆ ನೀಡಲಾಗಿದೆ. ಈ ಕಿಟ್‌ 2.4GHz ವೈರ್‌ಲೆಸ್ ಸಂಪರ್ಕದೊಂದಿಗೆ ಕೆಲಸ ಮಾಡುತ್ತವೆ. ಮೌಸ್ 1,500 ಡಿಪಿಐ ಆಪ್ಟಿಕಲ್ ಸೆನ್ಸಾರ್‌ ಆಯ್ಕೆ ಪಡೆದಿದೆ.

ಕ್ವಾಂಟಮ್ ವೈರ್‌ಲೆಸ್ ಕೀಬೋರ್ಡ್ ಮತ್ತು ಮೌಸ್

ಕ್ವಾಂಟಮ್ ವೈರ್‌ಲೆಸ್ ಕೀಬೋರ್ಡ್ ಮತ್ತು ಮೌಸ್

ಈ ಕಾಂಬೊ ಆಫರ್‌ 799ರೂ. ಗಳಿಗೆ ಲಭ್ಯ ಇದ್ದು, ಇದು 800ರೂ. ಗಳ ರಿಯಾಯಿತಿ ಪಡೆದಿದೆ. ಕೀಬೋರ್ಡ್ ಸ್ಪಿಲ್‌ ರೆಸಿಸ್ಟೆಂಟಟ್‌ನಿಂದ ಕೂಡಿದ್ದು, ಮೌಸ್ ಮೂರು DPI ಸೆಟ್ಟಿಂಗ್‌ಗ ಆಯ್ಕೆ ಪಡೆದಿದೆ. ಹಾಗೆಯೇ ಈ ಎರಡೂ ಸಾಧನಗಳಿಗೆ ಕೇವಲ ಒಂದು ಯುಎಸ್‌ಬಿ ರಿಸೀವರ್ ಸಾಕು.

ಅಮೆಜಾನ್ ಬೇಸಿಕ್ಸ್ ವೈರ್ಡ್ ಕೀಬೋರ್ಡ್ ಮತ್ತು ಆಪ್ಟಿಕಲ್ ಮೌಸ್

ಅಮೆಜಾನ್ ಬೇಸಿಕ್ಸ್ ವೈರ್ಡ್ ಕೀಬೋರ್ಡ್ ಮತ್ತು ಆಪ್ಟಿಕಲ್ ಮೌಸ್

ಈ ಗ್ಯಾಜೆಟ್ಸ್‌ಗಳನ್ನು 699ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದಕ್ಕೆ 1900ರೂ. ಗಳ ರಿಯಾಯಿತಿ ನೀಡಲಾಗಿದೆ. ಎರಡೂ ಡಿವೈಸ್‌ಗಳು USB 2.0 ಕೇಬಲ್‌ನೊಂದಿಗೆ ಬರುತ್ತವೆ. ಮೌಸ್ 1000 DPI ಸೆನ್ಸಾರ್‌ನಲ್ಲಿ ಕೆಲಸ ಮಾಡಲಿದೆ.

Best Mobiles in India

English summary
Amazon's Great Indian Festival Sale is on till the 30th of this month, offering attractive discounts on a wide range of keyboards and Mouse.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X