ಅಮೆಜಾನ್‌ ಸೇಲ್‌: ಬ್ಲೂಟೂತ್‌ ಕಾಲಿಂಗ್ ಫೀಚರ್‌ ಸ್ಮಾರ್ಟ್‌‌ವಾಚ್‌ಗಳಿಗೆ ಬಿಗ್‌ ಆಫರ್‌!

|

ಜನಪ್ರಿಯ ಇ - ಕಾಮರ್ಸ್‌ ತಾಣವಾದ ಅಮೆಜಾನ್‌ನಲ್ಲಿ ಹಲವು ಸ್ಮಾರ್ಟ್‌ವಾಚ್‌ಗಳು ಲಭ್ಯವಾಗುತ್ತಿದ್ದು, ಇದರ ಜೊತೆಗೆ ಅಮೆಜಾನ್‌ ಕಾಲ ಕಾಲಕ್ಕೆ ತಕ್ಕಂತೆ ಅಪ್‌ಡೇಟ್‌ ಮಾಡಲಾದ ಸ್ಮಾರ್ಟ್‌ವಾಚ್‌ಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ. ಇದೀಗ ಅಮೆಜಾನ್‌ ತನ್ನ ಗ್ರೇಟ್ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಮೂಲಕ ಹೆಚ್ಚಿನ ರಿಯಾಯಿತಿ ನೀಡಿ ಬ್ಲೂಟೂತ್‌ ಕಾಲಿಂಗ್‌ ಫೀಚರ್‌ ಇರುವ ಸ್ಮಾರ್ಟ್‌ವಾಚ್‌ಗಳನ್ನು ಮಾರಾಟ ಮಾಡುತ್ತಿದೆ.

ಅಮೆಜಾನ್‌

ಹೌದು, ಜನಪ್ರಿಯ ಅಮೆಜಾನ್‌ ತನ್ನ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್ ನಲ್ಲಿ 5,000ರೂ. ಒಳಗೆ ಲಭ್ಯವಾಗುವ ಸ್ಮಾರ್ಟ್‌ವಾಚ್‌ಗಳನ್ನು ಮಾರಾಟ ಮಾಡುತ್ತಿದೆ. ಈ ಸ್ಮಾರ್ಟ್‌ವಾಚ್‌ಗಲ್ಲಿ ಬ್ಲೂಟೂತ್‌ ಕಾಲಿಂಗ್‌ ಫೀಚರ್‌ ಇರುವುದು ವಿಶೇಷ. ಇನ್ನು ಬೋಟ್‌, ಝೆಬ್ರಾನಿಕ್ಸ ಹಾಗೂ ನಾಯ್ಸ್ ಕಂಪೆನಿಯ ಪ್ರಮುಖ ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಇರುವ ಸ್ಮಾರ್ಟ್‌ವಾಚ್‌ಗಳು ಡಿಸ್ಕೌಂಟ್‌ ಪಡೆದುಕೊಂಡಿವೆ. ಈ ಸ್ಮಾರ್ಟ್‌ವಾಚ್‌ಗಳನ್ನು ಕೆಲವು ಬ್ಯಾಂಕ್‌ಗಳ ಕಾರ್ಡ್‌ಗಳಲ್ಲಿ ಖರೀದಿ ಮಾಡಿದರೆ ತ್ವರಿತ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ ಯಾವ ಸ್ಮಾರ್ಟ್‌ವಾಚ್‌ಗೆ ಎಷ್ಟು ಬೆಲೆ?, ಏನೆಲ್ಲಾ ಫೀಚರ್ಸ್‌ ಪಡೆದಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ಅಮೆಜಾನ್‌ನಲ್ಲಿ ಆಫರ್‌ ಏನಿದೆ?

ಅಮೆಜಾನ್‌ನಲ್ಲಿ ಆಫರ್‌ ಏನಿದೆ?

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಈ ತಿಂಗಳ 30 ರವರೆಗೆ ಇರಲಿದ್ದು, ಈ ಸಂದರ್ಭದಲ್ಲಿ ಈ ಸ್ಮಾರ್ಟ್‌ವಾಚ್‌ಗಳನ್ನು ಕೊಂಡುಕೊಂಡರೆ ಉತ್ತಮ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.

 • ಎಸ್‌ಬಿಐ ಬ್ಯಾಂಕ್ ಕಾರ್ಡ್‌ಗಳಲ್ಲಿ ಖರೀದಿ ಮಾಡಿದರೆ 10% ತ್ವರಿತ ರಿಯಾಯಿತಿ ಸಿಗಲಿದೆ.
 • UPI ಪಾವತಿಗಳ ಮೇಲೆ 50ರೂ. ಗಳ ಕ್ಯಾಶ್‌ಬ್ಯಾಕ್ ಪಡೆಯಬಹುದು.
 • ಅಮೆಜಾನ್‌ ಪೇ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಿಗೆ ಅನಿಯಮಿತ ಕ್ಯಾಶ್‌ಬ್ಯಾಕ್ ಆಯ್ಕೆ ನೀಡಲಾಗಿದೆ.
 • ಬೋಟ್ ವೇವ್ ಕಾಲ್

  ಬೋಟ್ ವೇವ್ ಕಾಲ್

  ಬೋಟ್ ವೇವ್ ಕಾಲ್ ಸ್ಮಾರ್ಟ್ ವಾಚ್‌ನ್ನು ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ನಲ್ಲಿ ನೀವು ಕೇವಲ 1,798ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದರ ಸಾಮಾನ್ಯ ದರ 7,990ರೂ. ಗಳಾಗಿದ್ದು, ಇದಕ್ಕೆ 77% ರಿಯಾಯಿತಿ ಘೋಷಣೆ ಮಾಡಲಾಗಿದೆ. ಈ ಸ್ಮಾರ್ಟ್‌ವಾಚ್‌1.69 ಇಂಚಿನ HD ಡಿಸ್‌ಪ್ಲೇ ಜೊತೆಗೆ 550 nits ಬ್ರೈಟ್‌ನೆಸ್‌ ಹೊಂದಿದೆ. ಇದರಲ್ಲಿ ಗ್ರಾಹಕರು 150 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಕಾಣಬಹುದಾಗಿದೆ.

  ನಾಯ್ಸ್ ಪಲ್ಸ್ ಗೋ ಬಜ್ (Noise Pulse Go Buzz)

  ನಾಯ್ಸ್ ಪಲ್ಸ್ ಗೋ ಬಜ್ (Noise Pulse Go Buzz)

  ಈ ಸ್ಮಾರ್ಟ್‌ವಾಚ್‌ 64% ರಷ್ಟು ರಿಯಾಯಿತಿ ಪಡೆದಿದ್ದು, 1,799ರೂ. ಗಳಿಗೆ ಲಭ್ಯವಾಗಲಿದೆ. ಈ ಡಿವೈಸ್ 1.69 ಇಂಚಿನ TFT ಡಿಸ್‌ಪ್ಲೇ ಹೊಂದಿದ್ದು, ಇದು 240x280 ಪಿಕ್ಸೆಲ್ ರೆಸಲ್ಯೂಶನ್ ಪಡೆದಿದೆ. ಇದರಲ್ಲಿ 150+ ಕ್ಲೌಡ್ ಆಧಾರಿತ ಮತ್ತು ಕಸ್ಟಮೈಸ್ ಮಾಡಿದ ವಾಚ್ ಫೇಸ್‌ಗಳ ಆಯ್ಕೆಯನ್ನು ನೀಡಲಾಗಿದೆ. ಹಾಗೆಯೇ ಇದು ಆಟೋ ಡಿಟೆಕ್ಷನ್‌ ಫೀಚರ್ಸ್‌ನೊಂದಿಗೆ ಸುಮಾರು 100 ಸ್ಪೋರ್ಟ್ಸ್ ಮೋಡ್‌ಗಳನ್ನ ಮೇಲ್ವಿಚಾರಣೆ ಮಾಡುತ್ತದೆ.

  ಫೈರ್ ಬೋಲ್ಟ್ ರಿಂಗ್ 3 ಬ್ಲೂಟೂತ್ ಕಾಲಿಂಗ್

  ಫೈರ್ ಬೋಲ್ಟ್ ರಿಂಗ್ 3 ಬ್ಲೂಟೂತ್ ಕಾಲಿಂಗ್

  ಫೈರ್-ಬೋಲ್ಟ್ ರಿಂಗ್ 3 ಬ್ಲೂಟೂತ್ ಕಾಲಿಂಗ್ ಸ್ಮಾರ್ಟ್‌ವಾಚ್ 70% ರಿಯಾಯಿತಿ ಪಡೆದಿದ್ದು, ಇದನ್ನು ಅಮೆಜಾನ್‌ 2,997ರೂ. ಗಳಿಗೆ ಮಾರಾಟ ಮಾಡುತ್ತಿದೆ. ಇದರಲ್ಲಿ 1.8 ಇಂಚಿನ TFT LCD ಡಿಸ್‌ಪ್ಲೇ ಇದ್ದು, 240x286 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಪಡೆದಿದೆ. ಹಾಗೆಯೇ 118 ಸ್ಪೋರ್ಟ್ಸ್ ಮೋಡ್ ಆಯ್ಕೆಯನ್ನು ಇದು ಹೊಂದಿದೆ.

  ಝೆಬ್ರಾನಿಕ್ಸ್ DRIP ಸ್ಮಾರ್ಟ್ ವಾಚ್

  ಝೆಬ್ರಾನಿಕ್ಸ್ DRIP ಸ್ಮಾರ್ಟ್ ವಾಚ್

  ಈ ಸ್ಮಾರ್ಟ್‌ವಾಚ್‌ 77% ರಿಯಾಯಿತಿ ಪಡೆದುಕೊಂಡಿದೆ. ಈ ಮೂಲಕ ಅಮೆಜಾನ್‌ ಇದನ್ನು 1,499ರೂ. ಗಳಿಗೆ ಮಾರಾಟ ಮಾಡುತ್ತಿದೆ. ಇದು 1.7 ಇಂಚಿನ ಡಿಸ್‌ಪ್ಲೇ ಹೊಂದಿದ್ದು, iOS ಮತ್ತು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಿಗೆ ಹೊಂದಿಕೊಳ್ಳುತ್ತದೆ. ಈ ಸ್ಮಾರ್ಟ್‌ವಾಚ್‌ ಆರೋಗ್ಯ ವಿಷಯಗಳ ಜೊತೆಗೆ 100 ಕ್ಕೂ ಸ್ಪೋರ್ಟ್ಸ್ ಮೋಡ್ ಆಯ್ಕೆ ಹೊಂದಿದೆ. ಈ ಡಿವೈಸ್‌ 250mAh ಇನ್‌ಬಿಲ್ಟ್‌ ಬ್ಯಾಟರಿ ಆಯ್ಕೆ ಪಡೆದಿದೆ.

Best Mobiles in India

English summary
Smartwatch with Bluetooth calling features have been available in huge discount in Amazon sale.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X