ಅಮೆಜಾನ್‌ ವೇದಿಕೆಯಲ್ಲಿ ಅಕ್ರಮ ಬಯಲು..! ನಕಲಿ ವಿಮರ್ಶೆ ಖರೀದಿಸುತ್ತಿರುವ ಸೆಲ್ಲರ್ಸ್‌..!

By Gizbot Bureau
|

ಜನಪ್ರಿಯ ಇ-ಕಾಮರ್ಸ್‌ ತಾಣ ಅಮೆಜಾನ್‌ ವೇದಿಕೆಯಲ್ಲಿ ನಡೆಯುತ್ತಿರುವ ದೊಡ್ಡ ಅಕ್ರಮವೊಂದು ಹೊರಬಿದ್ದಿದೆ. ಅಮೆಜಾನ್‌ ಕಟ್ಟುನಿಟ್ಟಿನ ನಿಯಮಗಳ ನಡುವೆಯೂ ಪ್ಲಾಟ್‌ಫಾರ್ಮ್‌ನಲ್ಲಿನ ಮಾರಾಟಗಾರರು ನಕಲಿ ವಿಮರ್ಶೆಗಳನ್ನು ಖರೀದಿಸುತ್ತಿದ್ದಾರೆ. ಒಂದು ನಕಲಿ ವಿಮರ್ಶೆಗೆ 15 ಯೂರೋ (ಸುಮಾರು 1,200 ರೂ.) ಬೆಲೆಯಿದೆ ಎಂದು ಡೈಲಿ ಮೇಲ್ ತನಿಖೆಯಲ್ಲಿ ದೃಢಪಟ್ಟಿದೆ.

ಟೆಸ್ಟರ್ಸ್‌ ಸಮೂಹ

ಟೆಸ್ಟರ್ಸ್‌ ಸಮೂಹ

ಮಾರಾಟಗಾರರಿಗೆ ನಕಲಿ ವಿಮರ್ಶೆಗಳನ್ನು ಮಾರಾಟ ಮಾಡುವ ಕಂಪನಿಗಳು 4 ಮತ್ತು 5 ಸ್ಟಾರ್ ವಿಮರ್ಶೆಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲು ಉತ್ಪನ್ನಗಳನ್ನು ಖರೀದಿಸುವ "ಟೆಸ್ಟರ್ಸ್‌" ಸಮೂಹವನ್ನು ಅವಲಂಬಿಸಿವೆ ಎಂದು ವರದಿ ತಿಳಿಸಿದೆ. ಸಣ್ಣ ಶುಲ್ಕದ ಜೊತೆಗೆ, ಉತ್ಪನ್ನಗಳನ್ನು ಖರೀದಿಸುವ ವೆಚ್ಚಕ್ಕೆ ಟೆಸ್ಟರ್ಸ್‌ ಮರುಪಾವತಿ ಪಡೆಯುತ್ತಾರೆ. ಟೆಸ್ಟರ್ಸ್ ಉತ್ಪನ್ನಗಳನ್ನು ಖರೀದಿಸುವುದರಿಂದ ಅವರು ಪೋಸ್ಟ್‌ ಮಾಡುವ ವಿಮರ್ಶೆಗಳನ್ನು "ಅಮೆಜಾನ್ ಪರಿಶೀಲಿಸಿದ ಖರೀದಿಗಳು" ಎಂದು ವರ್ಗೀಕರಿಸಲಾಗುತ್ತದೆ.

AMZTigers ವಿಮರ್ಶಾ ಸಂಸ್ಥೆ

AMZTigers ವಿಮರ್ಶಾ ಸಂಸ್ಥೆ

ಜರ್ಮನಿಯ AMZTigers ವಿಮರ್ಶಾ ಸಂಸ್ಥೆ, ಇಂಗ್ಲೆಂಡ್‌ನಲ್ಲಷ್ಟೇ 3,000 ಟೆಸ್ಟರ್‌ಗಳನ್ನು ಹೊಂದಿರುವ ಹೆಗ್ಗಳಿಕೆ ಪಡೆದಿದೆ. ನಾವಯ ನಿಮಗೆ ನೈಜ ಜನರಿಂದ ಪರಿಶೀಲಿಸಿದ ವಿಮರ್ಶೆಗಳನ್ನು ಪಡೆಯಲು ಸಹಾಯ ಮಾಡುತ್ತೇವೆ. ಯುರೋಪಿನಾದ್ಯಂತ ನಮ್ಮ 60,000 ಕ್ಕೂ ಹೆಚ್ಚು ಉತ್ಪನ್ನ ಟೆಸ್ಟರ್ಸ್ ವಿಮರ್ಶೆಗಳನ್ನು ತ್ವರಿತ ಹಾಗೂ ವಿಶ್ವಾಸಾರ್ಹ ರೀತಿಯಲ್ಲಿ ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಕಂಪನಿಯ ವೆಬ್‌ಸೈಟ್‌ನಲ್ಲಿ ಹೇಳಲಾಗಿದದೆ.

ಸಮಗ್ರತೆ ರಕ್ಷಣೆಗೆ ಬದ್ಧ

ಸಮಗ್ರತೆ ರಕ್ಷಣೆಗೆ ಬದ್ಧ

ಅಮೆಜಾನ್‌ ವಿಮರ್ಶೆಗಳ ಸಮಗ್ರತೆಯನ್ನು ರಕ್ಷಿಸಲು ಬದ್ಧವಾಗಿದೆ. ಕಳೆದ ವರ್ಷ ದುರುಪಯೋಗ, ವಂಚನೆ ಮತ್ತು ಇತರ ರೀತಿಯ ದುಷ್ಕೃತ್ಯಗಳಿಂದ ಗ್ರಾಹಕರನ್ನು ರಕ್ಷಿಸಲು ಅಮೆಜಾನ್ 300 ಮಿಲಿಯನ್ ಪೌಂಡ್‌ಗಳನ್ನು ಖರ್ಚು ಮಾಡಿದೆ.

ಶೇ.99ರಷ್ಟು ವಿಮರ್ಶೆಗಳು ಅಧಿಕೃತ

ಶೇ.99ರಷ್ಟು ವಿಮರ್ಶೆಗಳು ಅಧಿಕೃತ

ಗ್ರಾಹಕರು ನೋಡುವ ಮೊದಲು ನಕಲಿ ವಿಮರ್ಶೆಗಳನ್ನು ತೆಗೆದುಹಾಕುವುದು ನಮ್ಮ ಉದ್ದೇಶ ಎಂದು ಅಮೆಜಾನ್‌ ಹೇಳಿದೆ. ಕಳೆದ ತಿಂಗಳಲ್ಲಿ, ಗ್ರಾಹಕರು ಓದಿದ ಶೇ.99ರಷ್ಟು ವಿಮರ್ಶೆಗಳು ಅಧಿಕೃತವಾಗಿವೆ ಎಂದು ಅಮೆಜಾನ್ ವಕ್ತಾರರು ಹೇಳಿದ್ದಾರೆ.

Best Mobiles in India

Read more about:
English summary
Amazon Sellers Are Getting Fake Reviewers For Just Rs. 1,200.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X