ಅಮೆಜಾನ್ ಸ್ಮಾರ್ಟ್‌ಫೋನ್‌ ಅಪ್‌ಗ್ರೇಡ್‌ ಸೇಲ್‌ನಲ್ಲಿ ಸಿಗಲಿದೆ 40% ಆಫರ್‌!

|

ಇ-ಕಾಮರ್ಸ್‌ ದೈತ್ಯ ಎನಿಸಿಕೊಂಡಿರುವ ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣ ಎನಿಸಿಕೊಂಡಿದೆ. ತನ್ನ ಗ್ರಾಹಕರಿಗೆ ವಿಶೇಷ ಸೇಲ್‌ಗಳನ್ನು ನಡೆಸುವ ಮೂಲಕ ಬಿಗ್‌ ಡಿಸ್ಕೌಂಟ್‌ಗಳನ್ನು ನೀಡುತ್ತಾ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸ್ಮಾರ್ಟ್‌ಫೋನ್‌ ಅಪ್‌ಗ್ರೇಡ್‌ ಡೇಸ್‌ಸೇಲ್‌ ಪ್ರಕಟಿಸಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಪರಿಕರಗಳ ಮೇಲೆ ಬಿಗ್‌ ಆಫರ್‌ ಅನ್ನು ಘೋಷಿಸಲಾಗಿದೆ. ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಇದು ಬೆಸ್ಟ್‌ ಟೈಂ ಆಗಿದೆ.

ಅಮೆಜಾನ್‌

ಹೌದು, ಅಮೆಜಾನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸ್ಮಾರ್ಟ್‌ಫೋನ್‌ ಅಪ್‌ಗ್ರೇಡ್‌ ಡೇಸ್‌ ಸೇಲ್‌ ನಡೆಸುತ್ತಿದೆ. ಈ ಸೇಲ್‌ನಲ್ಲಿ ಒನ್‌ಪ್ಲಸ್‌, ಶಿಯೋಮಿ, ಸ್ಯಾಮ್‌ಸಂಗ್‌, ಐಕ್ಯೂ, ರಿಯಲ್‌ಮಿ, ಟೆಕ್ನೋ ಮತ್ತು ಒಪ್ಪೋ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳಲ್ಲಿ 40% ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G, ರಿಯಲ್‌ಮಿ ನಾರ್ಜೊ 50A, ರೆಡ್ಮಿ 10 ಸರಣಿ ಮತ್ತು ಐಕ್ಯೂ ನಿಯೋ 6 5G ಫೋನ್‌ಗಳು ಡಿಸ್ಕೌಂಟ್‌ ಪಡೆದಿವೆ. ಹಾಗಾದ್ರೆ ಅಮೆಜಾನ್‌ ಸ್ಮಾರ್ಟ್‌ಫೋನ್‌ ಅಪ್‌ಗ್ರೇಡ್‌ ಡೇಸ್‌ ಸೇಲ್‌ನಲ್ಲಿ ಯಾವೆಲ್ಲಾ ಫೋನ್‌ಗಳು ಆಫರ್‌ ಪಡೆದುಕೊಂಡಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್

ಅಮೆಜಾನ್ ಸ್ಮಾರ್ಟ್‌ಫೋನ್‌ ಅಪ್‌ಗ್ರೇಡ್‌ ಸೇಲ್‌ ಸೆಪ್ಟೆಂಬರ್ 5 ರವರೆಗೆ ಲೈವ್ ಆಗಿರಲಿದೆ. ಈ ಸೇಲ್‌ನಲ್ಲಿ ಬ್ಯಾಂಕ್ ಮತ್ತು ಎಕ್ಸ್‌ಚೇಂಜ್‌ ಆಫರ್‌ಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಅದರಂತೆ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಗ್ರಾಹಕರು 10% ಡಿಸ್ಕೌಂಟ್‌ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಗ್ರಾಹಕರು ಕನಿಷ್ಠ 7,000 ರೂಪಾಯಿಗಳ ವಹಿವಾಟಿಗೆ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳ ಮೇಲೆ 750 ರೂಪಾಯಿಗಳ ತನಕ ಡಿಸ್ಕೌಂಟ್‌ ದೊರೆಯಲಿದೆ. ಅಲ್ಲದೆ ಕ್ರೆಡಿಟ್ ಕಾರ್ಡ್ EMI ನಲ್ಲಿ 10% ರಷ್ಟು ರಿಯಾಯಿತಿಯನ್ನು ಪಡೆಯಬಹುದು. ತಮ್ಮ ನೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ 9 ತಿಂಗಳವರೆಗೆ ಎಕ್ಸ್‌ಚೇಂಜ್ ಆಫರ್‌ಗಳು ದೊರೆಯಲಿದೆ.

ಸ್ಮಾರ್ಟ್‌ಫೋನ್‌

ಐಕ್ಯೂ
ಅಮೆಜಾನ್‌ ಸ್ಮಾರ್ಟ್‌ಫೋನ್‌ ಅಪ್‌ಗ್ರೇಡ್‌ ಸೇಲ್‌ನಲ್ಲಿ ಐಕ್ಯೂ ಬ್ರ್ಯಾಂಡ್‌ನ ಸ್ಮಾರ್ಟ್‌ಫೋನ್‌ಗಳಲ್ಲಿ ವಿಶೇಷ ಡಿಸ್ಕೌಂಟ್‌ ಅನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಬ್ಯಾಂಕ್ ಮತ್ತು EMI ಆಯ್ಕೆಗಳನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಐಕ್ಯೂ Z6 44W ಸ್ಮಾರ್ಟ್‌ಫೋನ್‌ ಈ ಸೇಲ್‌ನಲ್ಲಿ ಆಯ್ದ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ 1,250ರೂ ವರೆಗೆ ಡಿಸ್ಕೌಂಟ್‌ ಪಡೆದಿದೆ. ಇದರಿಂದ ಈ ಸ್ಮಾರ್ಟ್‌ಫೋನ್‌ ನಿಮಗೆ ಕೇವಲ 14,499ರೂ. ಗಳಿಗೆ ದೊರೆಯಲಿದೆ.

ಒನ್‌ಪ್ಲಸ್‌

ಒನ್‌ಪ್ಲಸ್‌

ಈ ಸೇಲ್‌ನಲ್ಲಿ ಒನ್‌ಪ್ಲಸ್‌ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೂ ಕೂಡ ವಿಶೇಷ ಆಫರ್‌ ದೊರೆಯಲಿದೆ. ಅದರಂತೆ ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G ಮತ್ತು ಒನ್‌ಪ್ಲಸ್‌ 9 ಪ್ರೊ ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ 18,999ರೂ. ಮತ್ತು 49,999ರೂ. ಗಳಿಗೆ ಲಭ್ಯವಾಗಲಿದೆ. ಇದರಲ್ಲಿ 3, 6 ಮತ್ತು 9 ತಿಂಗಳ ನೋ ಕಾಸ್ಟ್‌ EMI ಆಫರ್‌ ಮತ್ತು 1,250ರೂ. ವರೆಗೆ ಬ್ಯಾಂಕ್ ಕ್ಯಾಶ್‌ಬ್ಯಾಕ್ ಆಫರ್‌ ಕೂಡ ಸೇರಿದೆ.

ಶಿಯೋಮಿ

ಶಿಯೋಮಿ

ಇನ್ನು ಈ ಸೇಲ್‌ನಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳು ಹೆಚ್ಚುವರಿ ಬ್ಯಾಂಕ್ ಕೊಡುಗೆಗಳೊಂದಿಗೆ ಲಭ್ಯವಿರುತ್ತವೆ. ಇದರಲ್ಲಿ ಗ್ರಾಹಕರು ಶಿಯೋಮಿ 11T ಪ್ರೊ 5G ಸ್ಮಾರ್ಟ್‌ಫೋನ್‌ ಅನ್ನು 37,999ರೂ. ಗಳಿಗೆ ಖರೀದಿಸಬಹುದಾಗಿದೆ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ M ಸರಣಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ M32 ಮತ್ತು ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13 ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ 12,499ರೂ. ಮತ್ತು 11,999ರೂ.ಗಳಿಗೆ ಬ್ಯಾಂಕ್ ಕ್ಯಾಶ್‌ಬ್ಯಾಕ್ ಸೇರಿದಂತೆ 1,500 ರೂ. ಆಫರ್‌ ಲಭ್ಯವಾಗಲಿದೆ.

ರಿಯಲ್‌ಮಿ

ರಿಯಲ್‌ಮಿ

ರಿಯಲ್‌ಮಿ ನಾರ್ಜೊ 50A ಸ್ಮಾರ್ಟ್‌ಫೋನ್‌ 5,000ರೂ ವರೆಗಿನ ಕ್ಯಾಶ್‌ಬ್ಯಾಕ್ ಸೇರಿದಂತೆ 10,999 ರೂ.ಗಳಿಗೆ ಲಭ್ಯವಿರುತ್ತದೆ.

Best Mobiles in India

English summary
Amazon Smartphone Upgrade Days sale with offers on smartphones and accessories

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X