ಅಮೆಜಾನ್‌ ಸಮ್ಮರ್‌ ಸೇಲ್‌ 2022:ಸ್ಮಾರ್ಟ್‌ಫೋನ್‌ಗಳ ಮೇಲೆ ಸಿಗಲಿದೆ ಭರ್ಜರಿ ಆಫರ್‌!

|

ಅಮೆಜಾನ್‌ ಪ್ಲಾಟ್‌ಫಾರ್ಮ್‌ ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣ ಎನಿಸಿಕೊಂಡಿದೆ. ತನ್ನ ವಿಶೇಷ ಸೇಲ್‌ಗಳ ಮೂಲಕ ಗ್ರಾಹಕರಿಗೆ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಾ ಬಂದಿದೆ. ಸದ್ಯ ಇದೀಗ ಅಮೆಜಾನ್‌ ಇದೇ ಮೇ 4 ರಿಂದ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸಮ್ಮರ್‌ ಸೇಲ್‌ ಅನ್ನು ಆಯೋಜಿಸುತ್ತಿದೆ. ಈ ಸೇಲ್‌ನಲ್ಲಿ ಗ್ರಾಹಕರು ಹಲವಾರು ಗ್ಯಾಜೆಟ್‌ಗಳು ಮತ್ತು ಎಲೆಕ್ಟ್ರಾನಿಕ್ಸ್‌ ಡಿವೈಸ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಸೇಲ್‌ನಲ್ಲಿ ಏನೆಲ್ಲಾ ಡಿಲ್‌ಗಳು, ಆಫರ್‌ ದೊರೆಯಲಿದೆ ಎಂಬುದನ್ನು ಅಮೆಜಾನ್‌ ಘೋಷಣೆ ಮಾಡಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಸಮ್ಮರ್‌ ಸೇಲ್‌ ಮೇ 4 ರಿಂದ ಪ್ರಾರಂಭವಾಗಲಿದೆ. ಈ ಸೇಲ್‌ನಲ್ಲಿ ಅನೇಕ ಗ್ಯಾಜೆಟ್ಸ್‌ಗಳ ಬೆಲೆಯಲ್ಲಿ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ICICI ಬ್ಯಾಂಕ್, ಕೊಟಕ್ ಬ್ಯಾಂಕ್, RBL ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವ ಗ್ರಾಹಕರು ಆಯ್ದ ವಸ್ತುಗಳ ಮೇಲೆ 10% ರಿಯಾಯಿತಿಯನ್ನು ಪಡೆಯಬಹುದು. ಜೊತೆಗೆ ಅಮೆಜಾನ್‌ ಪ್ರೈಮ್‌ ಗ್ರಾಹಕರು ಅರ್ಹ ವಸ್ತುಗಳ ಮೇಲೆ ಫ್ರೀ ಡೆಲಿವರಿಯನ್ನು ಕೂಡ ಪಡೆಯಬಹುದು. ಹಾಗಾದ್ರೆ ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಏನೆಲ್ಲಾ ಆಫರ್‌ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸಮ್ಮರ್‌

ಅಮೆಜಾನ್‌ ಸಮ್ಮರ್‌ ಸೇಲ್‌ ಮೇ 4 ರಿಂದ ನಡೆಯಲಿದೆ. ಆದರೆ ಈ ಸೇಲ್‌ ಯಾವಾಗ ಕೊನೆಯಾಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಅಧಿಕೃತವಾಗಿಲ್ಲ. ಇನ್ನು ಈ ಸೇಲ್‌ ಲೈವ್ ಆದ ತಕ್ಷಣ ಗ್ರಾಹಕರು ತಮ್ಮ ಶಾಪಿಂಗ್ ಲಿಸ್ಟ್‌ನೊಂದಿಗೆ ಸಿದ್ದರಿದ್ದರೆ ಅನೇಕ ರಿಯಾಯಿತಿ ಪಡೆದುಕೊಳ್ಳಬಹುದು. ಇದರಲ್ಲಿ ನೀವು ಆಪಲ್‌, ಒನ್‌ಪ್ಲಸ್‌, ಶಿಯೋಮಿ ಮತ್ತು ಸ್ಯಾಮ್‌ಸಂಗ್‌ನಂತಹ ದೊಡ್ಡ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು 40% ರಷ್ಟು ರಿಯಾಯಿತಿಯನ್ನು ಪಡೆಯಲಿವೆ ಎಂದು ಅಮೆಜಾನ್‌ ಹೇಳಿದೆ. ರಿಯಾಐಇತಿಯಲ್ಲಿ ದೊರೆಯುವ ಸ್ಮಾರ್ಟ್‌ಫೋನ್‌ ವಿವರವನ್ನು ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಆಪಲ್‌ ಐಫೋನ್‌ 13

ಆಪಲ್‌ ಐಫೋನ್‌ 13

ಅಮೆಜಾನ್ ಸಮ್ಮರ್‌ ಸೇಲ್‌ ಸಮಯದಲ್ಲಿ ಆಪಲ್‌ ಐಫೋನ್‌ 13 (128GB) 66,900ರೂ.ಬೆಲೆಯಿಂದ ಪ್ರಾರಂಭವಾಗುತ್ತದೆ. ಅಲ್ಲದೆ ಬಳಕೆದಾರರು ತಮ್ಮ ಹಳೆಯ ಫೋನ್ ಅನ್ನು 11,300ರೂ.ಗಳ ವರೆಗೆ ಎಕ್ಸ್‌ಚೇಂಜ್‌ ಆಫರ್‌ ದೊರೆಯಲಿದೆ. ಹಾಗೆಯೇ ನೋ ಕಾಸ್ಟ್‌ EMI ಕೂಡ ದೊರೆಯಲಿದೆ. ಇನ್ನು ಐಫೋನ್ 13 ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್‌ ಹೊಂದಿದ್ದು, 1200 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ.

ರೆಡ್ಮಿ ನೋಟ್ 11

ರೆಡ್ಮಿ ನೋಟ್ 11

ಅಮೆಜಾನ್ ಸಮ್ಮರ್ ಸೇಲ್ ಸಮಯದಲ್ಲಿ ರೆಡ್ಮಿ ನೋಟ್‌ 11 ಫೋನ್‌ 12,999ರೂ.ಗಳಿಗೆ ಲಭ್ಯವಾಗಲಿದೆ. ಅಲ್ಲದೆ ಈ ಫೋನ್‌ ಖರೀದಿಸುವವರು 1,250ರೂ ಬೆಲೆಯ ವೋಚರ್‌ ಅನ್ನು ಕೂಡ ಬಳಸಬಹುದಾಗಿದೆ. ಹಾಗೆಯೇ 11,300ರೂ ವರೆಗೆ ಎಕ್ಸ್‌ಚೇಂಜ್‌ ಆಫರ್‌ ಹಾಗೂ ನೋ ಕಾಸ್ಟ್‌ ಇಎಂಐ ಸೌಲಭ್ಯ ಸಿಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.43 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತಹೊಂದಿದೆ. ಈ ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾ 50MP ಸೆನ್ಸಾರ್‌ ಹೊಂದಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಐಕ್ಯೂ Z6

ಐಕ್ಯೂ Z6

ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ ಐಕ್ಯೂ Z6 ಫೋನ್‌ 12,000ರೂ.ಗಳಿಗೆ ಲಭ್ಯವಾಗಲಿದೆ. ಅಲ್ಲದೆ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವ ಬಳಕೆದಾರರು 1000ರೂ. ರಿಯಾಯಿತಿಯನ್ನು ಪಡೆಯಲಿದ್ದಾರೆ. ಜೊತೆಗೆ 1000 ವೋಚರ್‌ ಕೂಡ ದೊರೆಯಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.58 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್‌ ISOCELL JN1 ಸೆನ್ಸಾರ್‌ ಹೊಂದಿದೆ.

ಅಮೆಜಾನ್

ಇದಲ್ಲದೆ ಅಮೆಜಾನ್ ಸಮ್ಮರ್ ಸೇಲ್ ಫೆಸ್ಟ್‌ನಲ್ಲಿ ಸ್ಮಾರ್ಟ್‌ಫೋನ್ ಆಕ್ಸಿಸರೀಸ್‌ ಮತ್ತು ಇಯರ್‌ಫೋನ್‌ಗಳು ಸಹ ರಿಯಾಯಿತಿ ಪಡೆದುಕೊಂಡಿವೆ. ಅದರಲ್ಲೂ ವಾಯರ್‌ಲೆಸ್ ಇಯರ್‌ಫೋನ್‌ಗಳು 78% ಡಿಸ್ಕೌಂಟ್‌ ಪಡೆದುಕೊಂಡಿವೆ.

Best Mobiles in India

English summary
Amazon is hosting a Summer Sale on its platform from May 4 onwards, where customers can enjoy temporary price cuts on a host of gadgets and electronics.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X