ಅಮೆಜಾನ್‌ನಿಂದ ಮೂರನೇ ಆವೃತ್ತಿಯ ಫೈರ್ ಟಿವಿ ಕ್ಯೂಬ್ ಲಾಂಚ್‌!

|

ಅಮೆಜಾನ್ ಇ-ಕಾಮರ್ಸ್‌ ತಾಣ ಕೆಲವು ಸ್ಮಾರ್ಟ್‌ ಉತ್ಪನ್ನಗಳನ್ನು ಪರಿಚಯಿಸಿ ಈಗಾಗಲೇ ಮಾರುಕಟ್ಟೆಯಲ್ಲಿ ಸೈ ಎನಿಸಿಕೊಂಡಿದೆ. ಅದೇ ರೀತಿ ಅಮೆಜಾನ್‌ನ ಫೈರ್‌ ಟಿವಿ ಕ್ಯೂಬ್‌ ಡಿವೈಸ್‌ ಆಕರ್ಷಕ ಎನಿಸಿದೆ. ಈ ಡಿವೈಸ್‌ನ ಮುಂದುವರೆದ ಭಾಗವಾಗಿ ಅಮೆಜಾನ್‌ ಇದೀಗ ಹೊಸದಾಗಿ ಮೂರನೇ ಆವೃತ್ತಿಯ ಫೈರ್ ಟಿವಿ ಕ್ಯೂಬ್ ಲಾಂಚ್‌ ಮಾಡಿದೆ. ಇದು ಈ ಹಿಂದಿನ ಆವೃತ್ತಿಗಳ ಡಿವೈಸ್‌ಗಳಿಗಿಂತ 20 ರಷ್ಟು ಹೆಚ್ಚು ವೇಗವಾಗಿ ಕೆಲಸ ಮಾಡುತ್ತದೆ ಎಂದು ಅಮೆಜಾನ್‌ ಹೇಳಿಕೊಂಡಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಮೂರನೇ ಆವೃತ್ತಿಯ ಫೈರ್ ಟಿವಿ ಕ್ಯೂಬ್ ಅನ್ನು ಅನಾವರಣಗೊಳಿಸಿದೆ. ಇದರ ಜೊತೆಗೆ ಹೊಸ ಕಿಂಡಲ್ ಸ್ಕ್ರೈಬ್ ಇ-ರೀಡರ್ ಮತ್ತು ಅಲೆಕ್ಸಾ ವಾಯ್ಸ್ ರಿಮೋಟ್ ಪ್ರೊ ಸೇರಿದಂತೆ ಇನ್ನಿತರ ಉತ್ಪನ್ನಗಳ ಶ್ರೇಣಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಫೈರ್ ಟಿವಿ ಕ್ಯೂಬ್ ವಿಡಿಯೋ ಕರೆಗಾಗಿ ವೆಬ್‌ಕ್ಯಾಮ್‌ಗಳಿಗೆ ಅಲೆಕ್ಸಾ ಮೂಲಕ ಸಂಪರ್ಕ ಕಲ್ಪಿಸುತ್ತದೆ ಹಾಗೆಯೇ ಬ್ಲೂಟೂತ್ ಶ್ರವಣ ಗ್ಯಾಜೆಟ್ಸ್‌ಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಹಾಗಿದ್ರೆ ಫೈರ್ ಟಿವಿ ಕ್ಯೂಬ್ ಹಾಗೂ ರಿಮೋಟ್‌ನ ವಿಶೇಷತೆ ಏನು, ಹೇಗೆಲ್ಲಾ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಈ ಲೇಖನದಲ್ಲಿ ನೀಡಿದ್ದೇವೆ ಓದಿರಿ.

ಫೈರ್ ಟಿವಿ ಕ್ಯೂಬ್ ಫೀಚರ್ಸ್‌

ಫೈರ್ ಟಿವಿ ಕ್ಯೂಬ್ ಫೀಚರ್ಸ್‌

ಈ ಸ್ಮಾರ್ಟ್‌ ಫೈರ್ ಟಿವಿ ಕ್ಯೂಬ್ ಅಲೆಕ್ಸಾ ಆಯ್ಕೆಯನ್ನು ಒಗೊಂಡಿದೆ. ಇದರಲ್ಲಿ ವೇಗವಾದ ಆಕ್ಟಾ ಕೋರ್ ಪ್ರೊಸೆಸರ್ ಮತ್ತು ಇತ್ತೀಚಿನ ವೈ-ಫೈ 6 ಬೆಂಬಲದ ಆಯ್ಕೆ ನೀಡಲಾಗಿದ್ದು, ಅತ್ಯಾಕರ್ಷಕ ನೋಟದಿಂದ ಕೂಡಿದೆ. ಈ ಡಿವೈಸ್‌ 4K ಅಲ್ಟ್ರಾ ಹೆಚ್‌ಡಿ, ಡಾಲ್ಬಿ ವಿಷನ್, ಹೆಚ್‌ಡಿಆರ್‌, ಇಮ್ಮೆರ್ಸಿವ್‌ ಡಾಲ್ಬಿ ಅಟ್ಮಾಸ್ ಆಡಿಯೋಗೆ ಬೆಂಬಲ ಪಡೆದುಕೊಂಡಿದೆ. ಜೊತೆಗೆ ಸೂಪರ್ ರೆಸಲ್ಯೂಶನ್ ಅಪ್‌ ಸ್ಕೇಲಿಂಗ್ ಆಯ್ಕೆಯನ್ನು ಪಡೆದಿದ್ದು, ಈ ಮೂಲಕ ಕ್ವಾಲಿಟಿಯ ವಿಡಿಯೋ ವೀಕ್ಷಣೆಗೆ ಅನುವು ಮಾಡಿಕೊಡುತ್ತದೆ.

ಕನೆಕ್ಟಿವಿಟಿ

ಇನ್ನು ಕನೆಕ್ಟಿವಿಟಿ ಆಯ್ಕೆಯಲ್ಲಿ ಹೆಚ್‌ಡಿಎಮ್ಐ ಇನ್‌ಪುಟ್ ಪೋರ್ಟ್‌ ಪಡೆದಿದೆ. ಹಾಗೆಯೇ ಹೆಚ್ಚುವರಿ ಯುಎಸ್‌ಬಿ ಪೋರ್ಟ್ ಆಯ್ಕೆ ಸಹ ಇದರಲ್ಲಿದೆ. ಇನ್ನು ವೈ-ಫೈ ಬೆಂಬಲದ ಜೊತೆಗೆ ವೈರ್ಡ್ ನೆಟ್‌ವರ್ಕ್ ಸಂಪರ್ಕವನ್ನು ಪಡೆದುಕೊಳ್ಳಲು ಎತರ್ನೆಟ್ ಪೋರ್ಟ್‌ ಆಯ್ಕೆಯನ್ನೂ ಈ ಡಿವೈಸ್‌ನಲ್ಲಿ ನೀಡಲಾಗಿದೆ.

ವೆಬ್‌ಕ್ಯಾಮ್‌

ಈ ಸಾಧನದ ಮೂಲಕ ಗ್ರಾಹಕರು ತಮ್ಮ ಟಿವಿಯನ್ನು ನಿಯಂತ್ರಿಸಬಹುದಾಗಿದೆ. ಅಷ್ಟೇ ಅಲ್ಲದೆ, ವಿಡಿಯೋ ಕರೆಗಾಗಿ ವೆಬ್‌ಕ್ಯಾಮ್‌ಗಳಿಗೂ ಅಲೆಕ್ಸಾ ಮೂಲಕ ಸಂಪರ್ಕ ಕಲ್ಪಿಸುತ್ತದೆ. ಈ ಫೈರ್ ಟಿವಿ ಬ್ಲೂಟೂತ್ ಶ್ರವಣ ಸಾಧನಗಳನ್ನು ಸಂಪರ್ಕಿಸಲು ಸುಲಭವಾಗಿ ಅನುವು ಮಾಡಿಕೊಡುತ್ತದೆ. ಇದರಿಂದ ಬೇಕಾದ ಮ್ಯೂಸಿಕ್ ಸ್ಟ್ರೀಮಿಂಗ್ ಮಾಡಬಹುದಾಗಿದೆ.

ಅಲೆಕ್ಸಾ ವಾಯ್ಸ್ ರಿಮೋಟ್

ಅಲೆಕ್ಸಾ ವಾಯ್ಸ್ ರಿಮೋಟ್

ನೂತನ ಅಲೆಕ್ಸಾ ವಾಯ್ಸ್ ರಿಮೋಟ್ ಪ್ರೊ ಹೊಸ ಪ್ರೀಮಿಯಂ ರಿಮೋಟ್ ಆಗಿದೆ. ಇದು ಗ್ರಾಹಕರು ಸಮಯವನ್ನು ವ್ಯರ್ಥ ಮಾಡದಂತೆ ತಕ್ಷಣಕ್ಕೆ ಬೇಕಾದ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ನೀಡುತ್ತದೆ ಎಂದು ಅಮೆಜಾನ್‌ ಹೇಳಿಕೊಂಡಿದೆ. ಈ ಸ್ಮಾರ್ಟ್‌ ರಿಮೋಟ್ ಫೈರ್ ಟಿವಿ ಸ್ಟ್ರೀಮಿಂಗ್ ಮೀಡಿಯಾ ಪ್ಲೇಯರ್‌ ಮತ್ತು ಫೈರ್ ಟಿವಿ ಇನ್‌ಬಿಲ್ಟ್‌ ಸ್ಮಾರ್ಟ್ ಟಿವಿಗಳೊಂದಿಗೆ ಹೊಂದಿಕೊಳ್ಳುತ್ತದೆ.

ರಿಮೋಟ್

ಈ ರಿಮೋಟ್‌ನಲ್ಲಿ ರಿಮೋಟ್ ಫೈಂಡರ್ ವೈಶಿಷ್ಟ್ಯ ವನ್ನು ನೀಡಲಾಗಿದ್ದು, ಈ ರಿಮೋಟ್‌ ಅನ್ನು ಮರೆತು ಎಲ್ಲಾದರೂ ಇಟ್ಟಿದ್ದರೆ ಅದನ್ನು ಪತ್ತೆ ಮಾಡಲು ಸಹಕಾರಿಯಾಗಲಿದೆ. ಇನ್ನು ನೆಚ್ಚಿನ ವಿಷಯವನ್ನು ಸುಲಭವಾಗಿ ಪ್ರವೇಶಿಸಲು ರಿಮೋಟ್‌ನಲ್ಲಿ ಎರಡು ಹೊಸ ಬಟನ್‌ಗಳ ಆಯ್ಕೆಯನ್ನು ನೀಡಲಾಗಿದೆ. ಇಷ್ಟೇ ಅಲ್ಲದೆ, ಅಲೆಕ್ಸಾ ವಾಯ್ಸ್ ರಿಮೋಟ್ ಪ್ರೊ ಮೋಷನ್-ಆಕ್ಟಿವೇಟೆಡ್ ಬ್ಯಾಕ್‌ಲಿಟ್ ಬಟನ್‌ಗಳನ್ನು ಹೊಂದಿದ್ದು, ಕಡಿಮೆ ಬೆಳಕಿನ ಸಮಯದಲ್ಲಿ ರಿಮೋಟ್ ಅನ್ನು ಬಳಕೆ ಮಾಡಲು ಮುಂದಾದಾಗ ಸ್ವಯಂಚಾಲಿತವಾಗಿ ಅದರಲ್ಲಿ ಬೆಳಕು ಬರುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಅಮೆಜಾನ್ ಥರ್ಡ್ ಜೆನ್ ಫೈರ್ ಟಿವಿ ಕ್ಯೂಬ್ ಅನ್ನು ಭಾರತದಲ್ಲಿ 13,999ರೂ. ಗಳಿಗೆ ಪರಿಚಯಿಸಿರುವ ಅಮೆಜಾನ್‌ ಅಲೆಕ್ಸಾ ವಾಯ್ಸ್ ರಿಮೋಟ್ ಪ್ರೊ ಗೆ 2,499ರೂ. ನಿಗದಿ ಮಾಡಿದೆ. ಶೀಘ್ರದಲ್ಲೇ ಅಮೆಜಾನ್‌ನಲ್ಲಿಇವು ಮಾರಾಟಕ್ಕೆ ಲಭ್ಯವಾಗುತ್ತವೆ ಎಂದು ಕಂಪೆನಿ ತಿಳಿಸಿದೆ.

Best Mobiles in India

English summary
Amazon has unveiled the third-generation Fire TV Cube. and also introduced a range of other products, including the new Kindle Scribe e-reader and the Alexa Voice Remote Pro.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X