ಶಿಯೋಮಿಯ ಫ್ಲ್ಯಾಗ್‌ಶಿಪ್‌ ಫೋನ್‌ ಖರೀದಿಸಬೇಕೆ?..ಈ ಆಫರ್ ಮಿಸ್‌ ಮಾಡ್ಕೋಬೇಡಿ!

|

ಭರ್ಜರಿ ಡಿಸ್ಕೌಂಟ್‌ನಲ್ಲಿ ನೀವೇನಾದರೂ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ, ನಿಮಗೆ ಇಲ್ಲಿದೆ ಒಂದೊಳ್ಳೆಯ ಸಮಾಚಾರ. ಅದೆನೆಂದರೇ ಇ ಕಾಮರ್ಸ್ ದಿಗ್ಗಜ ಸಂಸ್ಥೆ ಅಮೆಜಾನ್ ಸದ್ಯ ಶಿಯೋಮಿ ಫ್ಲ್ಯಾಗ್‌ಶಿಪ್ ಡೇಸ್ ಸೇಲ್ ಅನ್ನು ಆಯೋಜಿಸಿದೆ. ಈ ವಿಶೇಷ ಮಾರಾಟವು ಇದೇ ಆಗಸ್ಟ್ 16 ರಂದು ಪ್ರಾರಂಭವಾಗಿದ್ದು, ಆಗಸ್ಟ್ 20 ರವರೆಗೆ ಮುಂದುವರಿಯುತ್ತದೆ.

ಶಿಯೋಮಿ

ಶಿಯೋಮಿ ಫ್ಲ್ಯಾಗ್‌ಶಿಪ್‌ ಸೇಲ್‌ ಅಮೆಜಾನ್‌ನಲ್ಲಿ ಪ್ಲಾಟ್‌ಫಾರ್ಮ್‌ ನಲ್ಲಿ ಲೈವ್ ಆಗಿದೆ. ಈ ಸೇಲ್‌ನಲ್ಲಿ ಶಿಯೋಮಿ ಆಯ್ದ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌ಗಳನ್ನು ಭರ್ಜರಿ ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾಗಿದೆ. ಮುಖ್ಯವಾಗಿ ಶಿಯೋಮಿ 12 ಪ್ರೊ 5G, ಶಿಯೋಮಿ 11T ಪ್ರೊ 5G, ಶಿಯೋಮಿ 11 ಲೈಟ್‌ NE 5G, ಶಿಯೋಮಿ ಮಿ 11X ಪ್ರೊ 5G ಸೇರಿದಂತೆ ಮತ್ತಷ್ಟು ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿಗಳನ್ನು ಗಮನಿಸಬಹುದು.

ಕೊಡುಗೆಗಳನ್ನು

ಹಾಗೆಯೇ ಹೆಚ್ಚುವರಿಯಾಗಿ 11,000 ರೂ ಮೌಲ್ಯದ ಪ್ರಯೋಜನಗಳನ್ನು ಲಭ್ಯವಾಗುತ್ತವೆ. ಅಮೆಜಾನ್ ಕೆಲವು ಬ್ಯಾಂಕ್ ಕೊಡುಗೆಗಳನ್ನು ಸಹ ನೀಡುತ್ತಿದೆ. ನೀವು ICICI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಹೊಂದಿದ್ದರೆ, ನೀವು ಸಹ ಪಡೆಯಬಹುದು. ಹಾಗಾದರೇ ಶಿಯೋಮಿ 12 ಪ್ರೊ 5G, ಶಿಯೋಮಿ 11T ಪ್ರೊ 5G, ಶಿಯೋಮಿ 11 ಲೈಟ್‌ NE 5G ಫೋನ್‌ಗಳ ಫೀಚರ್ಸ್‌ ಬಗ್ಗೆ ತಿಳಿಯೋಣ ಬನ್ನಿರಿ.

ಶಿಯೋಮಿ 12 ಪ್ರೊ 5G ಸ್ಮಾರ್ಟ್‌ಫೋನ್‌

ಶಿಯೋಮಿ 12 ಪ್ರೊ 5G ಸ್ಮಾರ್ಟ್‌ಫೋನ್‌

ಶಿಯೋಮಿ 12 ಪ್ರೊ 5G ಸ್ಮಾರ್ಟ್‌ಫೋನ್‌ 1,440 x 3,200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.73-ಇಂಚಿನ WQHD+ Samsung E5 ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಹೊಂದಿರಲಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಹೊಂದಿದ್ದು, ಜೊತೆಗೆ 4,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 120W ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಶಿಯೋಮಿ 11T ಪ್ರೊ 5G ಸ್ಮಾರ್ಟ್‌ಫೋನ್‌

ಶಿಯೋಮಿ 11T ಪ್ರೊ 5G ಸ್ಮಾರ್ಟ್‌ಫೋನ್‌

ಶಿಯೋಮಿ 11T ಪ್ರೊ 5G ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67 ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ಡೈನಾಮಿಕ್ ರಿಫ್ರೆಶ್ ರೇಟ್‌ ಹೊಂದಿದೆ. ಹಾಗೆಯೇ ಶಿಯೋಮಿ 11T ಪ್ರೊ 5G ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 888 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 11 ನಲ್ಲಿ MIUI 12.5 ಜೊತೆಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB + 128GB, 8GB + 256GB ಮತ್ತು 12GB + 256GB ಸಾಮರ್ಥ್ಯದ ವೇರಿಯಂಟ್‌ ಆಯ್ಕೆಗಳನ್ನು ಹೊಂದಿದೆ. ಜೊತೆಗೆ 3GB ವರ್ಚುವಲ್ RAM ವಿಸ್ತರಣೆಗೆ ಸಹ ಬೆಂಬಲಿಸಲಿದೆ.

ಶಿಯೋಮಿ ಮಿ 11 ಲೈಟ್ 5G NE ಸ್ಮಾರ್ಟ್‌ಫೋನ್‌

ಶಿಯೋಮಿ ಮಿ 11 ಲೈಟ್ 5G NE ಸ್ಮಾರ್ಟ್‌ಫೋನ್‌

ಶಿಯೋಮಿ ಮಿ 11 ಲೈಟ್ 5G NE ಸ್ಮಾರ್ಟ್‌ಫೋನ್‌ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.55 ಇಂಚಿನ ಫುಲ್‌ ಹೆಚ್‌ಡಿ + OLED ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದ್ದು ಜೊತೆಗೆ 90Hz ರಿಫ್ರೆಶ್ ರೇಟ್‌ ಹೊಂದಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 780G SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಬೆಂಬಲವನ್ನು ಒಳಗೊಂಡಿದೆ.

ಮತ್ತು

ಹಾಗೆಯೇ 6GB RAM ಮತ್ತು 128GB ಹಾಗೂ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಯನ್ನು ಹೊಂದಿದೆ. ಇದು ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಹಾಗೆಯೇ ಸ್ಮಾರ್ಟ್‌ಫೋನ್‌ 4,250mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಈ ಫೋನ್ 33W ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Most Read Articles
Best Mobiles in India

English summary
Amazon Xiaomi Flagship Days Sale: Offers and more: deatails.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X