ಅಬ್ಬಬ್ಬಾ... ಈ ಅಂಬ್ರೇನ್ ಪವರ್‌ ಬ್ಯಾಂಕ್‌ನ ಬ್ಯಾಕಪ್‌ ಎಷ್ಟಿದೆ ಗೊತ್ತಾ!?

|

ಅಂಬ್ರೇನ್ ಎಲೆಕ್ಟ್ರಾನಿಕ್ಸ್ ಡಿವೈಸ್‌ಗಳ ತಯಾರಿಕಾ ವಿಭಾಗದಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಅದರಲ್ಲೂ ಈ ಕಂಪೆನಿಯ ಚಾರ್ಜರ್‌ಗಳು, ಇಯರ್‌ಬಡ್ಸ್‌ ಹೆಚ್ಚು ಬೇಡಿಕೆ ಇರುವ ಡಿವೈಸ್‌ಗಳಾಗಿದ್ದು, ಇದರ ನಡುವೆ ಹೊಸ ಡಿವೈಸ್‌ವೊಂದರ ಬಗ್ಗೆ ಅಂಬ್ರೇನ್ ಘೋಷಣೆ ಮಾಡಿದೆ. ಅಂತೆಯೇ ನೀವು ಇದರ ಶಕ್ತಿ ಸಾಮರ್ಥ್ಯಕ್ಕೆ ಖಂಡಿತಾ ವಾವ್‌ ಅಂತೀರ. ಹಾಗೆಯೇ ಈ ಡಿವೈಸ್‌ ನಿಮಗೆ ಕೈಗೆಟಕುವ ದರದಲ್ಲಿ ಲಭ್ಯ ಆಗುತ್ತಿರುವುದು ಮತ್ತಷ್ಟು ವಿಶೇಷ.

ಅಬ್ಬಬ್ಬಾ... ಈ ಅಂಬ್ರೇನ್ ಪವರ್‌ ಬ್ಯಾಂಕ್‌ನ ಬ್ಯಾಕಪ್‌ ಎಷ್ಟಿದೆ ಗೊತ್ತಾ!?

ಹೌದು, ಅಂಬ್ರೇನ್‌ನಿಂದ ಈ 40,000mAh ಸಾಮರ್ಥ್ಯದ ಸ್ಟೈಲೋ ಬೂಸ್ಟ್ (Stylo Boost) ಪವರ್‌ ಬ್ಯಾಂಕ್ ಅನ್ನು ಅನಾವರಣ ಮಾಡಲಾಗುತ್ತಿದೆ. ಈ ಪವರ್‌ ಬ್ಯಾಂಕ್‌ 65W PD ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ಪಡೆದಿದ್ದು, ವಾರಂಟಿಯನ್ನೂ ಸಹ ಪಡೆದುಕೊಂಡಿದೆ. ಹಾಗಿದ್ರೆ, ಇದನ್ನು ಖರೀದಿಸುವುದು ಎಲ್ಲಿ?, ಇದರ ಪ್ರಮುಖ ಫೀಚರ್ಸ್‌ ಏನು, ಬೆಲೆ ಎಷ್ಟು ಎಂಬ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಆಂಬ್ರೇನ್ ನ ಸ್ಟೈಲೋ ಬೂಸ್ಟ್ ಪವರ್‌ಬ್ಯಾಂಕ್
ದೇಶೀಯ ಬ್ರ್ಯಾಂಡ್‌ ಆದ ಆಂಬ್ರೇನ್ 40,000mAh ಸಾಮರ್ಥ್ಯದ ಸ್ಟೈಲೋ ಬೂಸ್ಟ್ ಪವರ್‌ಬ್ಯಾಂಕ್ ಬಗ್ಗೆ ಘೋಷಣೆ ಮಾಡಿದೆ. ಅದರಂತೆ ಈ ಪವರ್‌ ಬ್ಯಾಂಕ್‌ 65W ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದ್ದು, ಲ್ಯಾಪ್‌ಟಾಪ್‌ಗಳನ್ನು ಚಾರ್ಜ್ ಮಾಡಲು ಇದು ಬಹಳ ಅನುಕೂಲ ಸೌಲಭ್ಯ ನೀಡಲಿದೆ. ಇದರೊಂದಿಗೆ ಸ್ಮಾರ್ಟ್‌ಫೋನ್‌ ಹಾಗೂ ಇನ್ನಿತರೆ ಸ್ಮಾರ್ಟ್‌ ಡಿವೈಸ್‌ಗಳನ್ನೂ ಸಹ ಬೇಕಾದಾಗ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಇನ್ನು ಚಾರ್ಜಿಂಗ್ ವಿಷಯಕ್ಕೆ ಬಂದರೆ 65W PD ಫಾಸ್ಟ್-ಚಾರ್ಜಿಂಗ್ ಔಟ್‌ಪುಟ್ ಮತ್ತು 20W QC 3.0 ಔಟ್‌ಪುಟ್ ಅನ್ನು ಇದು ಬೆಂಬಲಿಸಲಿದ್ದು, 65W ಔಟ್‌ಪುಟ್‌ನೊಂದಿಗೆ ಟೈಪ್-ಸಿ ಪೋರ್ಟ್‌ಗಳನ್ನು ಪಡೆದುಕೊಂಡಿದೆ. ಇದರ ಶಕ್ತಿಯನ್ನು ಉದಾಹರಣೆ ಸಹಿತ ಹೇಳುವುದಾದರೆ ಕೇವಲ 2 ಗಂಟೆ 20 ನಿಮಿಷಗಳಲ್ಲಿ ಮ್ಯಾಕ್‌ಬುಕ್ ಪ್ರೊ ಅನ್ನು 0% ರಿಂದ 100% ವರೆಗೆ ಚಾರ್ಜ್ ಮಾಡಬಹುದಾದ ಶಕ್ತಿ ಈ ಡಿವೈಸ್‌ಗೆ ಇದೆ.

ಅಬ್ಬಬ್ಬಾ... ಈ ಅಂಬ್ರೇನ್ ಪವರ್‌ ಬ್ಯಾಂಕ್‌ನ ಬ್ಯಾಕಪ್‌ ಎಷ್ಟಿದೆ ಗೊತ್ತಾ!?

ಏಕಕಾಲದಲ್ಲಿ ಮೂರು ಡಿವೈಸ್‌ ಚಾರ್ಜ್‌ ಮಾಡುತ್ತದೆ ಸ್ಟೈಲೋ ಬೂಸ್ಟ್
ಈ ಪವರ್‌ಬ್ಯಾಂಕ್ ಮೂರು ಔಟ್‌ಪುಟ್ ಪೋರ್ಟ್‌ಗಳ ಆಯ್ಕೆ ಹೊಂದಿರುವುದರಿಂದ ಏಕಕಾಲದಲ್ಲಿ ಮೂರು ಡಿವೈಸ್‌ಗಳನ್ನು ಚಾರ್ಜ್‌ ಮಾಡಬಹುದಾಗಿದೆ. ಹಾಗೆಯೇ 60W ವೇಗದ ಚಾರ್ಜಿಂಗ್ ಇನ್‌ಪುಟ್ ಆಯ್ಕೆ ಇದರಲ್ಲಿದ್ದು, ವೇಗವಾಗಿ ಚಾರ್ಜ್‌ ಆಗಲಿದೆ.

12 ಲೇಯರ್‌ಗಳ ಸುಧಾರಿತ ಚಿಪ್‌ಸೆಟ್ ರಕ್ಷಣೆಯೊಂದಿಗೆ ಸ್ಟೈಲೋ ಬೂಸ್ಟ್
ಸ್ಟೈಲೋ ಬೂಸ್ಟ್ ಪವರ್‌ ಬ್ಯಾಂಕ್‌ 12 ಲೇಯರ್‌ಗಳ ಸುಧಾರಿತ ಚಿಪ್‌ಸೆಟ್ ರಕ್ಷಣೆಯೊಂದಿಗೆ ಪ್ಯಾಕ್‌ ಆಗಿದೆ. ಈ ಮೂಲಕ ಇದನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಪ್ರಮಾಣೀಕರಿಸಿದೆ. ಹಾಗೆಯೇ ಪ್ರಭಾವಶಾಲಿ ವಿನ್ಯಾಸವನ್ನು ಎಬಿಎಸ್ ಪ್ಲಾಸ್ಟಿಕ್‌ನೊಂದಿಗೆ ನಿರ್ಮಿಸಲಾಗಿದ್ದು, ಇದು ಹಗುರವಾದ ಅನುಭವವನ್ನು ನೀಡುತ್ತದೆ. ಇದರೊಂದಿಗೆ ಬ್ಯಾಟರಿ ಸಾಮರ್ಥ್ಯವನ್ನು ತೋರಿಸುವ ಎಲ್‌ಇಡಿ ಸೂಚಕಗಳು ಈ ಡಿವೈಸ್‌ ಅನ್ನು ಇನ್ನಷ್ಟು ಆಕರ್ಷಕವನ್ನಾಗಿ ಮಾಡುತ್ತವೆ.

15M+ ಪವರ್‌ಬ್ಯಾಂಕ್‌ ಮಾರಾಟ
ಅಂಬ್ರೇನ್ ಹೆಮ್ಮೆಯ ಭಾರತೀಯ ಬ್ರಾಂಡ್ ಆಗಿದ್ದು, ಭಾರತದಲ್ಲಿ ಈವರೆಗೆ 15M+ ಪವರ್‌ಬ್ಯಾಂಕ್‌ಗಳನ್ನು ಮಾರಾಟ ಮಾಡಿದೆ ಎನ್ನುವುದು ವಿಶೇಷ. ಈ ಕಂಪೆನಿಯ ಪವರ್‌ ಬ್ಯಾಂಕ್‌ಗಳು ದೀರ್ಘ ಬಾಳಿಕೆ ಹಾಗೂ ಹೆಚ್ಚಿನ ಕಾರ್ಯಕ್ಷಮತೆ ಹೊಂದಿರುವುದರಿಂದ ಭಾರತೀಕರನ್ನು ಹೆಚ್ಚಿಗೆ ಆಕರ್ಷಿಸುತ್ತಿವೆ. ಅದರಲ್ಲೂ ಈ ಬ್ರ್ಯಾಂಡ್‌ನ ಪವರ್‌ಬ್ಯಾಂಕ್‌ಗಳು ಲ್ಯಾಪ್‌ಟಾಪ್‌ ಹಾಗೂ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಶಕ್ತಿ ನೀಡುತ್ತವೆ.

ಅಬ್ಬಬ್ಬಾ... ಈ ಅಂಬ್ರೇನ್ ಪವರ್‌ ಬ್ಯಾಂಕ್‌ನ ಬ್ಯಾಕಪ್‌ ಎಷ್ಟಿದೆ ಗೊತ್ತಾ!?

ಸ್ಟೈಲೋ ಬೂಸ್ಟ್ ಪವರ್‌ ಬ್ಯಾಂಕ್‌ ಬೆಲೆ ಹಾಗೂ ಲಭ್ಯತೆ
ಸ್ಟೈಲೋ ಬೂಸ್ಟ್ ಪವರ್‌ ಬ್ಯಾಂಕ್‌ ಅನ್ನು ಫ್ಲಿಪ್‌ಕಾರ್ಟ್, ಅಮೆಜಾನ್‌ನಲ್ಲಿ ಆಫರ್‌ ಬೆಲೆ 3,999 ರೂ. ಗಳಲ್ಲಿ ಖರೀದಿ ಮಾಡಬಹುದಾಗಿದೆ. ಹಾಗೆಯೇ ಅಂಬ್ರೇನ್ ವೆಬ್‌ಸೈಟ್‌ ಮೂಲಕವೂ ಖರೀದಿಗೆ ಲಭ್ಯ. ಈ ಡಿವೈಸ್‌ ಇಂದಿನಿಂದ (1ನೇ ಫೆಬ್ರವರಿ 2023) ರಿಂದ ಖರೀದಿ ಮಾಡಬಹುದಾಗಿದೆ. ಈ ಡಿವೈಸ್‌ಗೆ 180 ದಿನಗಳ ವಾರಂಟಿಯನ್ನೂ ಸಹ ನೀಡಲಾಗಿದೆ.

Best Mobiles in India

English summary
Ambrane has already introduced several types of power banks. As part of this, it has now announced a new 40,000mAh capacity Stylo Boost Power Bank, which will be available to consumers at an affordable price.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X