ಸ್ವದೇಶಿ ಬ್ರ್ಯಾಂಡ್‌ ಅಂಬ್ರೇನ್‌ನಿಂದ ಹೊಸ ಸ್ಮಾರ್ಟ್‌ವಾಚ್‌ ಬಿಡುಗಡೆ! ಫೀಚರ್ಸ್‌ ಹೇಗಿದೆ?

|

ಸ್ಮಾರ್ಟ್‌ವಾಚ್‌ ವಲಯದಲ್ಲಿ ಅಂಬ್ರೇನ್‌ ಕಂಪೆನಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ತನ್ನ ಭಿನ್ನ ಮಾದರಿಯ ಫೀಚರ್ಸ್‌ಗಳಿಂದಾಗಿ ಅಂಬ್ರೆನ್‌ ವಾಚ್‌ಗಳು ಗಮನಸೆಳೆದಿವೆ. ಸದ್ಯ ಇದೀಗ ಭಾರತದಲ್ಲಿ ಅಂಬ್ರೇನ್‌ ಕಂಪೆನಿ ತನ್ನ ಹೊಸ ಅಂಬ್ರೇನ್ ವೈಸ್ ಗ್ಲೇಜ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಎಂಟ್ರಿಲೆವೆಲ್‌ ಪ್ರೈಸ್‌ಟ್ಯಾಗ್‌ ಹೊಂದಿದ್ದು, ಪ್ರಭಾವಶಾಲಿ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಇನ್‌ಬಿಲ್ಟ್‌ ಮೈಕ್ ಮತ್ತು ಬ್ಲೂಟೂತ್ ಕಾಲ್‌ಗಾಗಿ ಸ್ಪೀಕರ್ ಅನ್ನು ಕೂಡ ಹೊಂದಿದೆ.

ಅಂಬ್ರೇನ್‌

ಹೌದು, ಸ್ವದೇಶಿ ಬ್ರ್ಯಾಂಡ್‌ ಅಂಬ್ರೇನ್‌ ಭಾರತದಲ್ಲಿ ಹೊಸ ವೈಸ್‌ ಗ್ಲೇಜ್‌ ವಾಚ್‌ ಪರಿಚಯಿಸಿದೆ. ಇದು ಆಲ್‌ವೇಸ್‌ ಆನ್‌ ಡಿಸ್‌ಪ್ಲೇ ಮೋಡ್‌ನಲ್ಲಿ ಬರಲಿದೆ. ಈ ಸ್ಮಾರ್ಟ್‌ವಾಚ್‌ ಹಾಟ್‌ಬೀಟ್‌ ಸೆನ್ಸಾರ್‌, ಎಸ್‌ಪಿಒಟು ಸೆನ್ಸಾರ್‌, ನಿದ್ರೆ ಮತ್ತು ಒತ್ತಡದ ಟ್ರ್ಯಾಕರ್‌ ಅನ್ನು ಒಳಗೊಂಡಿದೆ. ಜೊತೆಗೆ 100 ಸ್ಪೋರ್ಟ್ಸ್‌ ಮೋಡ್‌ಗಳಿಗೆ ಬೆಂಬಲವನ್ನು ನೀಡಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಮಾರ್ಟ್‌ವಾಚ್‌

ಅಂಬ್ರೇನ್‌ ವೈಸ್‌ ಗ್ಲೇಜ್‌ ಸ್ಮಾರ್ಟ್‌ವಾಚ್‌ ಸ್ಕ್ವೇರ್‌ ಡಯಲ್‌ ಮಾಡ್ಯೂಲ್‌ ಹೊಂದಿದೆ. ಈ ಸ್ಮಾರ್ಟ್‌ವಾಚ್‌ 1.78 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದ್ದು, 368 x 448 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಈ ಡಿಸ್‌ಪ್ಲೇ 1,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಪಡೆದುಕೊಂಡಿದೆ. ಜೊತೆಗೆ ಈ ಡಿಸ್‌ಪ್ಲೇ ಆಲ್‌ವೇಸ್‌ ಆನ್ ಡಿಸ್‌ಪ್ಲೇ ಮೋಡ್ ಅನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ಡಿಸ್‌ಪ್ಲೇ IP68 ವಾಟರ್‌ ಪ್ರೂಫ್‌ ವ್ಯವಸ್ಥೆಯನ್ನು ಒಳಗೊಂಡಿದೆ.

ಸ್ಮಾರ್ಟ್‌ವಾಚ್‌

ಇನ್ನು ಆಂಬ್ರೇನ್ ವೈಸ್ ಗ್ಲೇಜ್ ಸ್ಮಾರ್ಟ್‌ವಾಚ್‌ ಹಾರ್ಟ್‌ಬೀಟ್‌ ಸೆನ್ಸಾರ್‌ ಮತ್ತು SpO2 ಸೆನ್ಸಾರ್‌, ನಿದ್ರೆ ಮತ್ತು ಒತ್ತಡ ಟ್ರ್ಯಾಕರ್ ಅನ್ನು ಹೊಂದಿದೆ. ಇದಲ್ಲದೆ ಋತುಚಕ್ರದ ಮಾನಿಟರ್ ಅನ್ನು ಕೂಡ ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ ಸ್ವಿಮ್ಮಿಂಗ್‌, ಬ್ರೀತ್‌ ಟ್ರೈನಿಂಗ್‌, ವಾಟರ್‌ ರಿಮೈಂಡರ್‌ಗಳನ್ನು ನೀಡುತ್ತದೆ. ಇದು ರನ್ನಿಂಗ್‌, ವಾಕಿಂಗ್‌, ಸೈಕ್ಲಿಂಗ್, ಮತ್ತು ಜಿಮ್ನಾಸ್ಟಿಕ್ಸ್, ಯೋಗ, ಹೈಕಿಂಗ್, ಕ್ರಾಸ್ ಫಿಟ್, ನೃತ್ಯ, ಕರಾಟೆ, ಟೇಕ್ವಾಂಡೋ, ಕುದುರೆ ಸವಾರಿ ಸೇರಿದಂತೆ 100 ಸ್ಪೋರ್ಟ್ಸ್‌ ಮೋಡ್‌ಗಳನ್ನು ಒಳಗೊಂಡಿದೆ.

ಸ್ಮಾರ್ಟ್‌ವಾಚ್‌

ಅಂಬ್ರೇನ್ ವೈಸ್ ಗ್ಲೇಜ್ ಸ್ಮಾರ್ಟ್‌ವಾಚ್‌ ಚಿಪ್‌ಸೆಟ್, ಇನ್‌ಬಿಲ್ಟ್‌ ಮೈಕ್ ಮತ್ತು ಬ್ಲೂಟೂತ್ ಕಾಲ್‌ಗಾಗಿ ಸ್ಪೀಕರ್ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್ ವಾಚ್ 280mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ 7 ದಿನಗಳವರೆಗೆ ಬಾಳಿಕೆ ಬರಲಿದೆ ಎಂದು ಅಂಬ್ರೇನ್‌ ಕಂಪೆನಿ ಹೇಳಿಕೊಂಡಿದೆ. ಇದರೊಂದಿಗೆ ಈ ಸ್ಮಾರ್ಟ್‌ವಾಚ್‌ ನೋಟಿಫಿಕೇಶನ್‌, ವಾಯ್ಸ್‌ ಅಸಿಸ್ಟೆಂಟ್‌, ವೆದರ್‌ ಅಪ್ಡೇಟ್‌, ಫೈಂಡ್‌ ಮೈ ಫೋನ್‌ ಮತ್ತು ಎರಡು ಇನ್‌ಬಿಲ್ಟ್‌ ಗೇಮ್‌ಗಳು ಸೇರಿದಂತೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಸ್ಮಾರ್ಟ್‌ವಾಚ್‌

ಇನ್ನು ಅಂಬ್ರೇನ್ ವೈಸ್ ಗ್ಲೇಜ್ ಸ್ಮಾರ್ಟ್‌ವಾಚ್‌ ಭಾರತದಲ್ಲಿ 2,999ರೂ.ಬೆಲೆಯಲ್ಲಿ ಬರಲಿದೆ. ಈ ಸ್ಮಾರ್ಟ್‌ವಾಚ್‌ ಕಪ್ಪು, ಬೂದು, ಹಸಿರು ಮತ್ತು ನೀಲಿ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇದು ಫ್ಲಿಪ್‌ಕಾರ್ಟ್ ಮತ್ತು ಅಂಬ್ರೇನ್‌ ಕಂಪನಿಯ ಅಧಿಕೃತ ವೆಬ್‌ಸೈಟ್‌ ಮೂಲಕ ಖರೀದಿಸಲು ಲಭ್ಯವಿದೆ.

ಅಂಬ್ರೇನ್‌

ಇದಲ್ಲದೆ ಅಂಬ್ರೇನ್‌ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ತನ್ನ ಮೊದಲ ಸ್ಮಾರ್ಟ್‌ಗ್ಲಾಸ್‌ ಗ್ಲೇರ್ಸ್‌ ಅನ್ನು ಪರಿಚಯಿಸಿದೆ. ಇದು ಆಡಿಯೋ ಸನ್‌ಗ್ಲಾಸ್‌ ಆಗಿದ್ದು ತನ್ನ ವಿನ್ಯಾಸದಿಂದ ಎಲ್ಲರ ಗಮನಸೆಳೆದಿದೆ. ಇನ್ನು ಈ ಸ್ಮಾರ್ಟ್‌ಗ್ಲಾಸ್‌ ಗೈಡೆಡ್‌ ಆಡಿಯೋ ಡಿಸೈನ್‌ ಹೊಂದಿದ್ದು, ಸ್ಪೀಕರ್‌ಗಳನ್ನು ಒಳಗೊಂಡಿದೆ. ಈ ಸನ್‌ಗ್ಲಾಸ್‌ಗಳನ್ನು ಸ್ಕ್ವೇರ್‌ ಮತ್ತು ರೌಂಡೆಡ್‌ ಫ್ರೇಮ್ಸ್‌ ಮೂಲಕ ವಿನ್ಯಾಸಗೊಳಿಸಲಾಗಿದೆ.

Best Mobiles in India

English summary
Ambrane Wise Glaze With 7-day Battery Life Launched In India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X