ಆಂಡ್ರಾಯ್ಡ್ 10 ಮತ್ತು ಪಿಕ್ಸೆಲ್ 4 ಫೋನ್‌ಗಳ ಬಿಡುಗಡೆ ಯಾವಾಗ?

|

ಗೂಗಲ್ ತನ್ನ ಮುಂದಿನ ಪೀಳಿಗೆಯ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ 10 ಅನ್ನು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಗೂಗಲ್‌ನ ಮುಂಬರುವ ಪಿಕ್ಸೆಲ್ ಸರಣಿ 'ಗೂಗಲ್ ಪಿಕ್ಸೆಲ್ 4'ಸ್ಮಾರ್ಟ್‌ಫೋನ್‌ಗಳ ಜೊತೆಗೆ ಆಂಡ್ರಾಯ್ಡ್ 10 ನಿರೀಕ್ಷೆಗಿಂತ ಬೇಗ ಬಿಡುಗಡೆಯಾಗಬಹುದು ಎಂದು ಕ್ಯಾಲಿಫೋರ್ನಿಯಾ ಮೂಲದ ಟೆಕ್ ದೈತ್ಯ ಫೋನ್ ಅರೆನಾ, ಮೌಂಟೇನ್ ವ್ಯೂನ ವರದಿಯು ತಿಳಿಸಿದೆ.

ಆಂಡ್ರಾಯ್ಡ್ 10 ಮತ್ತು ಪಿಕ್ಸೆಲ್ 4 ಫೋನ್‌ಗಳ ಬಿಡುಗಡೆ ಯಾವಾಗ?

ಹೌದು, ವರದಿಯ ಪ್ರಕಾರ ಸೆಪ್ಟೆಂಬರ್ 3, 2019 ರಂದು ಆಂಡ್ರಾಯ್ಡ್ 10 ಅನ್ನು ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಿಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಕಂಪನಿಯ ಇಬ್ಬರು ಏಜೆಂಟರು ವಿವರವನ್ನು ಬಹಿರಂಗಪಡಿಸಿದ್ದಾರೆ. "ಸೆಪ್ಟೆಂಬರ್ 3, 2019 ರಿಂದ ಆಂಡ್ರಾಯ್ಡ್ ಕ್ಯೂ ಅನ್ನು ಸಾಧನಗಳಿಗೆ ತರಲಾಗುವುದು ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ" ಎಂದು ಪಿಕ್ಸೆಲ್ 3ಎ ನಲ್ಲಿ ಆಂಡ್ರಾಯ್ಡ್ 10 ಲಭ್ಯತೆಯ ಕುರಿತ ಪ್ರಶ್ನೆಗೆ ಗೂಗಲ್ ಏಜೆಂಟ್ ಓರ್ವರು ಹೇಳಿರುವುದು ವರದಿಯಾಗಿದೆ.

ಮತ್ತೊಂದು ಕುತೂಹಲಕಾರಿಯಾಗಿ, ಆಂಡ್ರಾಯ್ಡ್ 10 ರ ಬಿಡುಗಡೆಯ ದಿನಾಂಕದ ಕುರಿತಾದ ವರದಿಯು ಟೆಕ್ ದೈತ್ಯ ತನ್ನ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ನಾಮಕರಣಕ್ಕಾಗಿ ಸಿಹಿ ಹೆಸರುಗಳನ್ನು ತ್ಯಜಿಸುವುದಾಗಿ ಘೋಷಿಸಿದೆ. ಆಂಡ್ರಾಯ್ಡ್ ಕ್ಯೂ ಅನ್ನು ಆಂಡ್ರಾಯ್ಡ್ 10 ಎಂದು ಕರೆಯಲಾಗುವುದು ಎಂದು ಕಂಪನಿ ಕಳೆದ ವಾರ ತಿಳಿಸಿದೆ. ಈ ಆಂಡ್ರಾಯ್ಡ್ 10 ಆಪರೇಟಿಂಗ್ ಸಿಸ್ಟಮ್ ಬಹಳಷ್ಟು ವಿಶೇಷ ಫೀಚರ್ಸ್ ಹೊತ್ತು ಬರುತ್ತಿರುವುದನ್ನು ಮುಂದಿನ ಸ್ಲೈಡರ್‌ಗಳನ್ನು ನೀವು ಓದಿ ತಿಳಿಯಬಹುದು.

ಹಿಂಬದಿ ಬಟನ್ ಇರುವುದಿಲ್ಲ

ಹಿಂಬದಿ ಬಟನ್ ಇರುವುದಿಲ್ಲ

10ನೇ ಆವೃತ್ತಿಯಲ್ಲಿ ಕಂಪ್ಯೂಟರ್‌ನಲ್ಲಿ ಬ್ಯಾಕ್‌ಸ್ಪೇಸ್‌ ಬಟನ್ ರೀತಿ ಕಾರ್ಯಾಚರಿಸುತ್ತಿದ್ದ ಹಿಂಬರುವ ಬಟನ್ ಇರುವುದಿಲ್ಲ. ಅಂದರೆ, ನೀವು ಆಪ್‌ಗಳನ್ನು ನೋಡುತ್ತಾ ಹಿಂದೆ ಬರಲು ಇದ್ದ ಬಾಣದ ಗುರುತು ಇನ್ನು ಇರುವುದಿಲ್ಲ. ಅದರ ಬದಲು ಗೆಸರ್ ಆಧಾರಿತ ನ್ಯಾವಿಗೇಷನ್ ಆಯ್ಕೆ ಇರಲಿದೆ. ಅಂದರೆ, ನಿಮ್ಮ ಬೆರಳಿನ ಚಲನೆಗೆ ತಕ್ಕಂತೆ ನಿರ್ದೇಶನಗಳು ನೀಡಲ್ಪಡುತ್ತವೆ.

ಲೊಕೇಶನ್ ಅನುಮತಿ

ಲೊಕೇಶನ್ ಅನುಮತಿ

ಇಂದಿನ ಬಹುತೇಕ ಆಪ್ಗಳು ಲೊಕೇಶನ್ ಎನೆಬಲ್ ಮಾಡುವಂತೆ ಕೇಳುತ್ತವೆ. ಇಂತಹ ಸಮಯದಲ್ಲಿ ಲೊಕೇಶನ್ ಟ್ರ್ಯಾಕ್ ಆಗಿ ಖಾಸಗಿ ಮಾಹಿತಿ ಸೋರಿಕೆಯಾಗುವ ಅಪಾಯ ಹೆಚ್ಚು. ಆದರೆ, ಆಂಡ್ರಾಯ್ಡ್ 10 ಓಎಸ್ ಬಳಕೆದಾರರಿಗೆ ಲೊಕೇಶನ್ ಕಂಟ್ರೋಲ್ ಮಾಡುವ ಹೆಚ್ಚಿನ ಅವಕಾಶಗಳನ್ನು ಒದಗಿಸಲಿದೆ. ಆಪ್ ಬಳಸದಿದ್ದಾಗ ಲೊಕೇಶನ್ ಅನ್ನು ಟ್ರ್ಯಾಕ್ ಆಗುವುದಿಲ್ಲ.

ಸುಧಾರಿತ ಪ್ರೈವೆಸಿ ಸೆಟ್ಟಿಂಗ್

ಸುಧಾರಿತ ಪ್ರೈವೆಸಿ ಸೆಟ್ಟಿಂಗ್

ಬರಲಿರುವ ಹೊಸ ಆಂಡ್ರಾಯ್ಡ್‌ 10 ಓಎಸ್‌ ಪ್ರೈವೆಸಿ ಸೆಟ್ಟಿಂಗ್ ಆಯ್ಕೆಗಳಲ್ಲಿ ಹೆಚ್ಚಿನ ಭದ್ರತೆಯ ಅಂಶಗಳನ್ನು ಹೊಂದಿರಲಿದೆ. ಬಳಕೆದಾರರ ಮಾಹಿತಿ ಸುರಕ್ಷತೆ ಒತ್ತು ನೀಡುವ ಸಲುವಾಗಿ ಅನಗತ್ಯವಾಗಿ ಲೊಕೇಶನ್ ಮತ್ತು ಗ್ಯಾಲರಿಗಳ ಆಕ್ಸ್‌ಸ್‌ಗಳಿಗೆ ತಡೆತರುವ ಕೆಲಸ ಮಾಡಲಿದೆ. ವಿಳಾಸದ ಬಗ್ಗೆ ಗೌಪ್ಯತೆ ಕಾಯ್ದುಕೊಳ್ಳುವಂತಹ ಸುಧಾರಿತ ಆಯ್ಕೆಗಳು ಇರಲಿವೆ ಎನ್ನಲಾಗಿದೆ.

ವಿಶೇಷ ಆಡಿಯೋ ಫೀಚರ್

ವಿಶೇಷ ಆಡಿಯೋ ಫೀಚರ್

ಆಂಡ್ರಾಯ್ಡ್ 10 ಓಎಸ್ ನಲ್ಲಿ ಒಂದೇ ವೇಳೆಗೆ ಆಡಿಯೋ ಕೇಳುವ ಮತ್ತು ಆಡಿಯೋ ರೆಕಾರ್ಡ್ ಮಾಡಬಹುದಾದ ಆಯ್ಕೆ ಇರಲಿದೆ ಎಂದು ತಿಳಿದುಬಮದಿದೆ. ವಾಯ್ಸ್ ರೆಕಾರ್ಡಿಂಗ್ ಮತ್ತು ಗೂಗಲ್ ವಾಯ್ಸ್ ಅಸಿಸ್ಟೆಂಟ್ ಅನ್ನು ಒಟ್ಟಿಗೆ ಬಳಸಬಹುದಾದ ಆಯ್ಕೆ ಇರಲಿದೆ. ಇದರಿಂದ ಒಂದೇ ಫೋನಿನಲ್ಲಿ ಸರಾಗವಾಗಿ ಹಲವು ಕೆಲಸಗಳು ಆಯಲಿವೆ ಎಂದು ನಾವು ಹೇಳಬಹುದು..

ಶೇರ್‌ಗೆ ಶಾರ್ಟ್‌ಕಟ್‌

ಶೇರ್‌ಗೆ ಶಾರ್ಟ್‌ಕಟ್‌

ಆಂಡ್ರಾಯ್ಡ್ 10ನಲ್ಲಿ ಶೇರ್‌ ಮಾಡಲು ಸರಳ ಶಾರ್ಟ್‌ಕಟ್‌ ಮಾರ್ಗಗಳು ಇರಲಿವೆ. ಯಾವುದೇ ಮಾಹಿತಿಯನ್ನು ಇತರರಿಗೆ ಶೇರ್‌ ಮಾಡಲು ಇಂದು ಆಪ್‌ನಲ್ಲಿ ಸೇಲೆಕ್ಟ್ ಮಾಡಿಕೊಂಡು ಇನ್ನೊಂದು ಆಪ್‌ಗೆ ಹೋಗಿ ಶೇರ್‌ ಮಾಡುವ ಅಗತ್ಯ ಇರುವುದಿಲ್ಲ. ಬದಲಿಗೆ ಸೆಲೆಕ್ಟ್ ಮಾಡಿರುವ ಅಲ್ಲಿಯೇ ಹಂಚಿಗೆಯ ಆಯ್ಕೆ ನೀಡಲಾಗಿರುತ್ತದೆ, ನೇರವಾಗಿ ಶೇರ್‌ ಮಾಡಬಹುದಾಗಿದೆ.

ಫೋಲ್ಡೇಬಲ್ ಸಪೋರ್ಟ್

ಫೋಲ್ಡೇಬಲ್ ಸಪೋರ್ಟ್

ಫೋಲ್ಡೇಬಲ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವುದನ್ನು ಅರಿತಿರುವ ಗೂಗಲ್ ತನ್ನ ಆಂಡ್ರಾಯ್ಡ್ 10 ಫೋಲ್ಡೇಬಲ್ ಫೋನ್‌ಗಳಿಗೆ ಸಪೋರ್ಟ್ ನೀಡುವಂತೆ ರಚಿಸಿದೆ. Onresume ಮತ್ತು onPause ನಂತಹ ಆಯ್ಕೆಗಳ ಇರಲಿದ್ದು, ಮಲ್ಟಿ ಆಪ್‌ ಬಳಕೆ ಸುಲಭವಾಗಿರುತ್ತದೆ ಮತ್ತು ಆಪ್‌ಗಳ ರೀಸೈಜ್ ಮಾಡಿಕೊಳ್ಳುವ ಆಯ್ಕೆ ಸಹ ಇರಲಿದೆ ಎನ್ನಲಾಗಿದೆ.

ಡಾರ್ಕ್ ಮೋಡ್‌

ಡಾರ್ಕ್ ಮೋಡ್‌

ಆಂಡ್ರಾಯ್ಡ್ 10 ಗ್ರಾಹಕರ ಬಹುನಿರೀಕ್ಷಿತ ಡಾಕರ್ ಮೋಡ್‌ ಫೀಚರ್ಸ್ ಹೊತ್ತು ತರಲಿದೆ. ರಾತ್ರಿ ವೇಳೆ ಫೋನಿನ ಬೆಳಕಿನ ಪ್ರಖರತೆಯನ್ನು ತಗ್ಗಿಸಿ ಬ್ಯಾಟರಿ ಬಾಳಿಕೆಯನ್ನು ಉಳಿಸಲು ಈ ಫೀಚರ್ಸ್ ಉಪಯುಕ್ತವಾಗಿದೆ ಈ ಡಾರ್ಕ್‌ ಮೋಡ್‌ ಆಯ್ಕೆಯನ್ನು ಪಡೆದುಕೊಳ್ಳಲು ಫೋನಿನ ಸೆಟ್ಟಿಂಗ್‌ನಲ್ಲಿ ನೇರವಾಗಿ ಆಯ್ಕೆ ನೀಡಬಹುದು ಅಥವಾ ಪರ್ಯಾಯ ದಾರಿ ನೀಡಬಹುದು.

ಬಬಲ್ಸ್ ನೋಟಿಫಿಕೇಶನ್

ಬಬಲ್ಸ್ ನೋಟಿಫಿಕೇಶನ್

ಸ್ಮಾರ್ಟ್‌ಫೋನ್‌ಗಳಿಗೆ ಬರುವ ನೋಟಿಫಿಕೇಶನ್ ಗಳ ಕಿರಿಕಿರಿ ತಪ್ಪಿಸುವ ಉದ್ದೇಶದಿಂದ ಬಬಲ್ಸ್ ನೋಟಿಫೀಕೇಶನನ್ನು ಪರಿಚಯಿಸಲಾಗಿದೆ ಎಂದು ತಿಳಿದುಬಂದಿದೆ. ಇದರಲ್ಲಿ ಮಲ್ಟಿ ಟಾಸ್ಕ್‌ಗಳ ನಡುವೆಯೂ ಕೂಡ ನೋಟಿಫಿಕೇಶನನ್ನು ನೋಡುವ ಆಯ್ಕೆ ಇರಲಿದೆ. ಅದರ ಜೊತೆಗೆ ನೋಟಿಫಿಕೇಶನನ್ನು ಆಫ್ ಮಾಡುವ ಸ್ವತಂತ್ರ್ಯವೂ ಇನ್ನು ಬಳಕೆದಾರರಿಗೆ ಸಿಗಲಿದೆ.

QR ಕೋಡ್ ಮತ್ತು WIFI

QR ಕೋಡ್ ಮತ್ತು WIFI

ಪ್ರಸ್ತುತ ಸ್ಮಾರ್ಟ್ ಫೋನ್‌ಗಳಲ್ಲಿ WIFI ಕನೆಕ್ಟ್ ಮಾಡಿಕೊಳ್ಳಬೇಕಿದ್ದರೆ ಪಾಸ್‌ವರ್ಡ್ ಆಗತ್ಯವಾಗಿ ಬೇಕಿದೆ. ಆದರೆ, ಹೊಸ ಆಂಡ್ರಾಯ್ಡ್ 10 ಓಎಸ್ ನಲ್ಲಿ ಪಾಸ್‌ವರ್ಡ್ ಬದಲು QR ಕೋಡ್ ಕಾಣಿಸಿಕೊಳ್ಳಲಿದೆ. ಇದನ್ನು ಸ್ಕ್ಯಾನ್ ಮಾಡಿ ಸುಲಭವಾಗಿ ವೈಫೈ ಕನೆಕ್ಟ್ ಮಾಡಿಕೊಳ್ಳಬಹುದು. ಇದರಿಂದ ಪಾಸ್‌ವರ್ಡ್‌ ಅನ್ನು ನೆನಪಿಟ್ಟುಕೊಳ್ಳುವ ಅಗತ್ಯ ಇರುವುದಿಲ್ಲ ಎಂದು ಹೇಳಬಹುದು.

ಮೊಬೈಲ್‌ ಥೀಮ್‌

ಮೊಬೈಲ್‌ ಥೀಮ್‌

ಆಂಡ್ರಾಯ್ಡ್ 10 ಹೊಸ ಆವೃತ್ತಿಯ ಇನ್ನೊಂದು ಹೊಸ ಬದಲಾವಣೆ ಎಂದರೆ ಮೊಬೈಲ್‌ನ ಥೀಮ್‌ ಗಾಢ ಬಣ್ಣದಲ್ಲಿರುತ್ತದೆ ಎನ್ನಲಾಗಿದೆ. ಎಡದಿಂದ ಬಲಕ್ಕೆ ಮೊಬೈಲ್ ಅನ್ನು ಅಲುಗಾಡಿಸಿದರೆ ಮೊಬೈಲ್‌ನ ಥೀಮ್‌ ಬದಲಾಗಲಿದೆ ಎಂದು ಹೇಳಲಾಗಿದೆ. ಹೊಸ ಆವೃತ್ತಿ ಬಂದಾಗಲಷ್ಟೇ ಹೆಚ್ಚಿನ ಮಾಹಿತಿ ತಿಳಿಯಲಿದೆ. ಆದರೆ, ಸಾಕಷ್ಟು ಬದಲಾವಣೆಗಳು ಮಾತ್ರ ಈಗ ಖಾತ್ರಿಯಾಗಿವೆ.

Best Mobiles in India

English summary
Google last week announced that it was abandoning the dessert names for a simpler nomenclature. Google said that Android Q will be called Android 10. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X