'ಆಂಡ್ರಾಯ್ಡ್ 10' ಓಎಸ್‌ ಅಧಿಕೃತವಾಗಿ ಬಿಡುಗಡೆ!..ಸಂಪೂರ್ಣ ಹೊಸ ಫೀಚರ್ಸ್!

|

ಗೂಗಲ್‌ ಸಂಸ್ಥೆಯ ಬಹುನಿರೀಕ್ಷಿತ 'ಅಂಡ್ರಾಯ್ಡ್‌ 10 ಆಪರೇಟಿಂಗ್ ಸಿಸ್ಟಮ್' ಅಧಿಕೃತವಾಗಿ ಬಿಡುಗಡೆ ಆಗಿದೆ. ಈಗಾಗಲೇ ಹಲವು ಅಪ್‌ಡೇಟ್‌ ಹಂತಗಳನ್ನು ಕಂಡಿರುವ ಆಂಡ್ರಾಯ್ಡ್‌ ಓಎಸ್‌ ಸ್ಮಾರ್ಟ್‌ಫೋನ್‌ಗಳಿಗೆ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದೀಗ ಹೊಸ ಆಂಡ್ರಾಯ್ಡ್‌ 10 ಓಎಸ್‌ ಸ್ಮಾರ್ಟ್‌ಫೋನ್‌ಗಳಿಗೆ ಮತ್ತಷ್ಟು ಹೊಸ ಫೀಚರ್ಸ್‌ಗಳನ್ನು ಲಭ್ಯವಾಗಿಸಲಿದೆ. ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಆಂಡ್ರಾಯ್ಡ್‌ 10 ಓಎಸ್‌ನಲ್ಲಿ ಯಾವೆಲ್ಲಾ ಫೀಚರ್ಸ್‌ ಇರಲಿವೆ ಮತ್ತು ಯಾವ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌ 10 ಓಎಸ್‌ ಹೊಂದಿರಲಿವೆ ಎನ್ನುವ ಕುತೂಹಲ ಮೂಡಿರುವುದು ಅಂತು ನಿಜ.

'ಆಂಡ್ರಾಯ್ಡ್‌ 10' ಓಎಸ್‌ ಲಾಂಚ್

ಹೌದು, ಗೂಗಲ್ ಸಂಸ್ಥೆಯ ಆಂಡ್ರಾಯ್ಡ್ 10 ಓಎಸ್‌ ಆವೃತ್ತಿಯ ಲಾಂಚ್ ಆಗಿದೆ. ಈ ಹಿಂದಿನ ಓಎಸ್‌ಗಳು ಜೆಲ್ಲಿಬಿನ್‌, ಕಿಟ್‌ಕ್ಯಾಟ್‌, ಓರಿಯೊ, ಹೀಗೆ ಸಿಹಿ ತಿನಿಸುಗಳಿಂದ ಗುರುತಿಸಿಕೊಂಡಿದ್ದವು. ಆದ್ರೆ ಆ ಟ್ರಾಕ್‌ಗೆ ಫುಲ್‌ಸ್ಟಾಪ್‌ ಹಾಕಿರುವ ಗೂಗಲ್ ಈ ಬಾರಿ (ಆಂಡ್ರಾಯ್ಡ್ 10) ಅಂಕಿಗಳಲ್ಲಿ ಓಎಸ್‌ ಆವೃತ್ತಿಗಳನ್ನು ಪರಿಚಯಿಸಿದೆ. ಹಾಗೆಯೇ ಮುಂದಿನ ಆವೃತ್ತಿ ಆಂಡ್ರಾಯ್ಡ್ 11 ಆಗಿರಲಿದೆ ಎಂದಿದೆ. ಹಾಗಾದರೇ ಗೂಗಲ್‌ನ ಹೊಸ ಆಂಡ್ರಾಯ್ಡ್‌ 10 ಓಎಸ್‌ನಲ್ಲಿ ಯಾವೆಲ್ಲಾ ನೂತನ ಫೀಚರ್ಸ್‌ಗಳು ಇವೆ ಮತ್ತು ಯಾವ ಫೋನ್‌ಗಳಿಗೆ ಬೆಂಬಲಿಸಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಲೊಕೇಶನ್ ಪರ್ಮಿಶನ್‌ ಆಯ್ಕೆ

ಬಹುತೇಕ ಆಪ್‌ಗಳು ಲೊಕೇಶನ್ ಆಕ್ಸಸ್ ಬೇಡುತ್ತವೆ. ಬಳಕೆದಾರರು ಸಹ ಆಕ್ಸಸ್ ನೀಡಿರುತ್ತಾರೆ. ಆದ್ರೆ ಆಪ್‌ ಬಳಕೆ ಮಾಡದಿದ್ದಾಗೂ ಆಪ್‌ಗಳ ಬ್ಯಾಕ್‌ಗ್ರೌಂಡ್‌ನಲ್ಲಿ ಬಳಕೆದಾರರ ಲೊಕೇಶನ್ ಟ್ರಾಕ್ ಮಾಡುತ್ತಿರುತ್ತವೆ. ಹೊಸ ಆಂಡ್ರಾಯ್ಡ್ 10 ಓಎಸ್‌ ಬಳಕೆದಾರರಿಗೆ ಲೊಕೇಶನ್ ಕಂಟ್ರೋಲ್ ಮಾಡುವ ಹೆಚ್ಚಿನ ಆಯ್ಕೆಗಳನ್ನು ಒದಗಿಸಲಿದ್ದು, ಆಪ್‌ ಬಳಸದಿದ್ದಾಗ ಲೊಕೇಶನ್ ಟ್ರಾಕ್ ಮಾಡುವುದಿಲ್ಲ.

ಓದಿರಿ : ಬೆಂಗಳೂರಿನ ಶಾಲೆಯೊಂದರಲ್ಲಿ ಟೀಚರ್‌ ಆದ 'ರೋಬೋಟ್‌'!ಓದಿರಿ : ಬೆಂಗಳೂರಿನ ಶಾಲೆಯೊಂದರಲ್ಲಿ ಟೀಚರ್‌ ಆದ 'ರೋಬೋಟ್‌'!

ಹೊಸ ಪ್ರೈವಸಿ ಫೀಚರ್

ಆಂಡ್ರಾಯ್ಡ್‌ 10 ಓಎಸ್‌ ಪ್ರೈವಸಿ ಆಯ್ಕೆಯಲ್ಲಿಯೂ ಹೊಸ ಬದಲಾವಣೆಯ ಆಯ್ಕೆಗಳು ಸೇರಲಿವೆ. ಕೆಲವು ಆಪ್‌ಗಳು ಅನಗತ್ಯವಾಗಿ ಸ್ಮಾರ್ಟ್‌ಫೋನ್‌ನ ಕಾಂಟ್ಯಾಕ್ಟ್‌ ಮತ್ತು ಗ್ಯಾಲರಿ ಆಕ್ಸಸ್‌ ಕೇಳುತ್ತವೆ. ಅನಗತ್ಯ ಆಸ್ಸಸ್‌ ನಿಯಂತ್ರಿಸುವ ಆಯ್ಕೆಗಳು ಇರಲಿವೆ. ಹಾಗೆಯೇ ಸ್ಮಾರ್ಟ್‌ಫೋನಿನಲ್ಲಿ ಏನೇ ಬದಲಾವಣೆ ಮಾಡಿದರೂ, ಬಳಕೆದಾರ ಪರ್ಮಿಶನ್ ಕೇಳುವ ಆಯ್ಕೆ ಇರಲಿದೆ.

ವಿಶೇಷ ಆಡಿಯೊ ಫೀಚರ್

ಸ್ಮಾರ್ಟ್‌ಫೋನ್‌ನಲ್ಲಿ ಆಡಿಯೊ ಕೇಳುತ್ತಿರುವಾಗ, ಅದೇ ಸಮಯಕ್ಕೆ ಆಡಿಯೊ ರೆಕಾರ್ಡ್‌ ಮಾಡಿಕೊಳ್ಳಬೇಕಾದರೇ ರೆಕಾರ್ಡಿಂಗ್ ಸರಿಯಾಗಿ ಆಗುವುದಿಲ್ಲ. ಆದ್ರೆ ಆಂಡ್ರಾಯ್ಡ್‌ 10 ಓಎಸ್‌ನಲ್ಲಿ ಒಂದೇ ವೇಳೆಗೆ ಆಡಿಯೊ ಕೇಳಲೂ ಬಹುದು ಮತ್ತು ಆಡಿಯೊ ರೆಕಾರ್ಡ್‌ ಸಹ ಮಾಡಬಹುದಾದ ಆಯ್ಕೆ ಸೇರಿಕೊಳ್ಳಲಿದೆ. ವಾಯಿಸ್‌ ರೆಕಾರ್ಡಿಂಗ್ ಆಪ್‌ ಮತ್ತು ಗೂಗಲ್ ಅಸಿಸ್ಟಂಟ್ ಒಟ್ಟಿಗೆ ಬಳಸಬಹುದಾಗಿದೆ.

ಬಬಲ್ಸ್ ನೋಟಿಫಿಕೇಶನ್

ಆಂಡ್ರಾಯ್ಡ್‌ 10 ಓಎಸ್‌ ನೋಟಿಫೀಕೇಶನ್ ಆಯ್ಕೆಯಲ್ಲಿ ಹೊಸದಾಗಿ ಬಬಲ್ಸ್ ಆಯ್ಕೆ ಪರಿಚಯವಾಗಲಿದೆ. ಮಲ್ಟಿಟಾಸ್ಕ್ ಕೆಲಸಗಳ ನಡುವೆಯೂ ನೋಟಿಫಿಕೇಶನ್ ನೋಡುವ ಆಯ್ಕೆ ಇರಲಿದೆ. ಹಾಗೂ ನೋಟಿಫಿಕೇಶನ್‌ಗಳ ಕಿರಿಕಿರಿ ಬೇಡವಾಗದರೇ ಸೆಟ್ಟಿಂಗ್‌ನಲ್ಲಿ ಆಫ್ ಮಾಡಿಕೊಳ್ಳುವ ಆಯ್ಕೆ ಸಹ ಇರಲಿದೆ. ಬಳಕೆದಾರರಿಗೆ ನೋಟಿಫಿಕೇಶನ್ ಈಗ ಮತ್ತಷ್ಟು ಸುಲಭವಾಗಲಿದೆ.

ಪೋಲ್ಡೆಬಲ್‌ ಡಿವೈಸ್‌

ಮಾರುಕಟ್ಟೆಗೆ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳು ಎಂಟ್ರಿಕೊಡಲಿವೆ ಈ ಫೋನ್‌ಗಳಿಗೆ ಆಂಡ್ರಾಯ್ಡ್ 10 ಓಎಸ್‌ ಪೂರಕವಾಗಿ ಕಾರ್ಯಮಾಡಲಿದ್ದು, ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಫೋಲ್ಡೆ, ಹುವಾವೆ ಮೇಟ್‌ ಎಕ್ಸ್‌ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಆಪ್‌ಗಳ ಸ್ಕ್ರೀನ್ ಗಾತ್ರ ಬದಲಿಸಬಹುದು, ಮಲ್ಟಿವಿಂಡೊದಲ್ಲಿ ಕೆಲಸ ಮಾಡಬಹುದು ಮತ್ತು ಡಿಸ್‌ಪ್ಲೇಯಲ್ಲಿ ಮತ್ತಷ್ಟು ಬದಲಾವಣೆ ಕಾಣಬಹುದಾಗಿದೆ.

ಓದಿರಿ : ಫೇಸ್‌ಬುಕ್ ಸೇರಿದ ಮತ್ತೊಂದು ಫೀಚರ್!..ಅಕೌಂಟ್ ಪ್ರೈವೆಸಿಗೆ ಮತ್ತಷ್ಟು ಬಲ!ಓದಿರಿ : ಫೇಸ್‌ಬುಕ್ ಸೇರಿದ ಮತ್ತೊಂದು ಫೀಚರ್!..ಅಕೌಂಟ್ ಪ್ರೈವೆಸಿಗೆ ಮತ್ತಷ್ಟು ಬಲ!

ಡಾರ್ಕ್ ಮೋಡ್ ಆಯ್ಕೆ

ಸದ್ಯ ಜನಪ್ರಿಯ ಆಪ್ಸ್‌ಗಳು ಸಹ ಡಾರ್ಕ್‌ಮೋಡ್ ಫೀಚರ್ ಅನ್ನು ಅಳವಡಿಸಿಕೊಳ್ಳುತ್ತಿದ್ದು, ಕೆಲವು ಸ್ಮಾರ್ಟ್‌ಫೋನ್‌ಗಳ ಸೆಟ್ಟಿಂಗ್‌ನಲ್ಲಿಯೂ ನೋಡಬಹುದಾಗಿದೆ. ಹೊಸ ಆಂಡ್ರಾಯ್ಡ್ 10 ಓಎಸ್‌ಬಲ್ಲಿಯೂ ಈ ಫೀಚರ್ ಸೇರಲಿದ್ದು, ಫೋನ್ ಮತ್ತು ಆಪ್ಸ್‌ಗಳಲ್ಲಿ ಡಾರ್ಕ್‌ಮೋಡ್ ಆಯ್ಕೆ ಬಳಸಬಹುದಾಗಿದೆ. ಈ ಆಯ್ಕೆಯು ಬ್ಯಾಟರಿ ಉಳಿಕೆಗೆ ಮತ್ತು ರಾತ್ರಿ ಸಮಯದಲ್ಲಿ ಅನುಕೂಲಕರ ಎನಿಸಲಿದೆ.

QR ಕೋಡ್ ಮತ್ತು ವೈಫೈ

ಪ್ರಸ್ತುತ ಇತರರ ಸ್ಮಾರ್ಟ್‌ಫೋನ್‌ ಮೂಲಕ ವೈಫೈ ಕನೆಕ್ಟ್‌ ಮಾಡಿಕೊಳ್ಳಬೇಕಿದ್ದರೇ ಅವರ ಪಾಸ್‌ವರ್ಡ್‌ ಎಂಟ್ರಿ ಮಾಡಬೇಕಿದೆ. ಆದ್ರೆ ಹೊಸ ಆಂಡ್ರಾಯ್ಡ್ 10 ಓಎಸ್‌ ಫೋನ್‌ನಲ್ಲಿ ವೈಫೈ ಕನೆಕ್ಟ್ ಬಳಸಲು ಪಾಸ್‌ವರ್ಡ್‌ ಬದಲು QR ಕೋಡ್ ಸ್ಕ್ಯಾನ್‌ ಮಾಡುವ ಆಯ್ಕೆ ಕಾಣಿಸಿಕೊಳ್ಳಲಿದೆ. ಹೊಸ ಓಎಸ್‌ ಬೆಂಬಲಿತ ಸ್ಮಾರ್ಟ್‌ಫೋನಿನ ವೈಫೈ ಕೋಡ್ ಜನರೇಟ್ ಆಗುತ್ತದೆ, ಆ ಕೋಡ್ ಸ್ಕ್ಯಾನ್ ಮಾಡಿ ವೈಫೈ ಕನೆಕ್ಟ್‌ ಮಾಡಬಹುದು.

ಆಂಡ್ರಾಯ್ಡ್‌ 10 ಓಎಸ್‌ ಬೆಂಬಲಿತ ಸ್ಮಾರ್ಟ್‌ಫೋನ್‌ಗಳು

ಗೂಗಲ್ ಆರಂಭದಲ್ಲಿ ತನ್ನ ಪಿಕ್ಸಲ್ ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಆಂಡ್ರಾಯ್ಡ್‌ 10 ಓಎಸ್‌ ಆವೃತ್ತಿಯನ್ನು ಲಭ್ಯವಾಗಿಸಿದೆ. ಅವುಗಳೊಂದಿಗೆ ಗೂಗಲ್ ಹೊರತುಪಡಿಸಿ ಶಿಯೋಮಿಯ ಇತ್ತೀಚಿನ ರೆಡ್ಮಿ ಕೆ 20 ಪ್ರೊ ಸ್ಮಾರ್ಟ್‌ಫೋನ್‌ನಿಗೆ ಸಹ ಆಂಡ್ರಾಯ್ಡ್ 10 ಓಎಸ್ ಆವೃತ್ತಿಯನ್ನು ಒಳಗೊಂಡಿದೆ. ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌ 10 ಒಎಸ್‌ ಪಡೆದಿವೆ ಎಂಬುದನ್ನು ಪಟ್ಟಿ ಈ ಕೆಳಗೆ ನೀಡಲಾಗಿದೆ.

* ಗೂಗಲ್ ಪಿಕ್ಸೆಲ್
* ಗೂಗಲ್ ಪಿಕ್ಸೆಲ್ ಎಕ್ಸ್‌ಎಲ್
* ಗೂಗಲ್ ಪಿಕ್ಸೆಲ್ 2
* ಗೂಗಲ್ ಪಿಕ್ಸೆಲ್ 2 ಎಕ್ಸ್ಎಲ್
* ಗೂಗಲ್ ಪಿಕ್ಸೆಲ್ 3
* ಗೂಗಲ್ ಪಿಕ್ಸೆಲ್ 3 ಎಕ್ಸ್‌ಎಲ್
* ಗೂಗಲ್ ಪಿಕ್ಸೆಲ್ 3 ಎ
* ಗೂಗಲ್ ಪಿಕ್ಸೆಲ್ 3 ಎ ಎಕ್ಸ್‌ಎಲ್
* ರೆಡ್ಮಿ ಕೆ 20 ಪ್ರೊ

ಓದಿರಿ : ಈ ತಿಂಗಳು ಫೋನ್ ಖರೀದಿಸುವ ಪ್ಯ್ಲಾನ್‌ ಇದೆಯಾ?.ಹಾಗಿದ್ರೆ ಸ್ವಲ್ಪ ಕಾಯಿರಿ!ಓದಿರಿ : ಈ ತಿಂಗಳು ಫೋನ್ ಖರೀದಿಸುವ ಪ್ಯ್ಲಾನ್‌ ಇದೆಯಾ?.ಹಾಗಿದ್ರೆ ಸ್ವಲ್ಪ ಕಾಯಿರಿ!

Best Mobiles in India

English summary
Most expected Google Android 10 os officially rolling out to all the Pixel phones. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X