ಗೂಗಲ್ ಪಿಕ್ಸಲ್ ಫೋನ್‌ಗಳಲ್ಲಿ ನೂತನ ಆಂಡ್ರಾಯ್ಡ್‌ 11 ಬೀಟಾ ಓಎಸ್‌ ಲಭ್ಯ!

|

ಸ್ಮಾರ್ಟ್‌ಫೋನ್‌ಗಳ ಕಾರ್ಯವೈಖರಿಗೆ ಸಪೋರ್ಟ್‌ ನೀಡುವುದು ಅವುಗಳಲ್ಲಿನ ಆಪರೇಟಿಂಗ್ ಸಿಸ್ಟಮ್ ಆಗಿದೆ. ಆಂಡ್ರಾಯ್ಡ್‌ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಆಕರ್ಷಕ ಫೀಚರ್ಸ್‌ಗಳಿದ್ದು, ನೂತನ ಅಪ್‌ಡೇಟ್ ಕಾಣುತ್ತಲೇ ಇರುತ್ತದೆ ಈ ಕಾರಣಕ್ಕಾಗಿಯೇ ಬಹುತೇಕರಿಗೆ ಆಂಡ್ರಾಯ್ಡ್‌ ಓಎಸ್ ಇಷ್ಟವಾಗುತ್ತದೆ. ಅಂಡ್ರಾಯ್ಡ್‌ ಓಎಸ್‌ ಹಂತ ಹಂತವಾಗಿ ಅಪ್‌ಗ್ರೇಡ್ ಆಗಿದ್ದು, ಸದ್ಯ ನೂತನ ಆಂಡ್ರಾಯ್ಡ್‌ 10 ಓಎಸ್‌ ಚಾಲ್ತಿಯಲ್ಲಿದೆ. ಹಾಗೆಯೇ ಆಂಡ್ರಾಯ್ಡ್‌ 11 ಅವತರಿಣಿಕೆ ಸಹ ಎಂಟ್ರಿ ಕೊಟ್ಟಿದೆ.

ಆಂಡ್ರಾಯ್ಡ್‌ 11

ಹೌದು, ಆಂಡ್ರಾಯ್ಡ್‌ 11 ಆಪರೇಟಿಂಗ್ ಓಎಸ್‌ ಸಿಸ್ಟಮ್ ಆವೃತ್ತಿಯು ಅಧಿಕೃತವಾಗಿ ಬಿಡುಗಡೆಗೆ ಸಜ್ಜಾಗಿದ್ದು, ಸದ್ಯ ಬೀಟಾ ಆವೃತ್ತಿಯನ್ನು ಗ್ರಾಹಕರ ಬಳಕೆಗಾಗಿ ಬಿಡುಗಡೆ ಮಾಡಿದೆ. ಆದರೆ ಪ್ರಸ್ತುತ ಆಂಡ್ರಾಯ್ಡ್‌ 11 ಬೀಟಾ ಆವೃತ್ತಿಯು ಗೂಗಲ್ ಪಿಕ್ಸಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿದೆ. ಹಾಗಾದರೇ ಗೂಗಲ್‌ ಪಿಕ್ಸಲ್‌ ಫೋನ್‌ಗಳ ಡೌನ್‌ಲೋಡ್ ಮಾಡುವುದು ಹೇಗೆ ಮತ್ತು ಆಂಡ್ರಾಯ್ಡ್‌ 11 ಓಎಸ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯಿರಿ.

ಆಂಡ್ರಾಯ್ಡ್

ಆಂಡ್ರಾಯ್ಡ್ 11 ಬೀಟಾದೊಂದಲ್ಲಿ ಅನೇಕ ಫೀಚರ್ಸ್‌ಗಳು ಸೇರಿವೆ. ಮಲ್ಟಿಟಾಸ್ಕ್‌ ಕಾರ್ಯಗಳಿಗಾಗಿ ಸಂಭಾಷಣೆಗಳು ಬಬಲ್ಸ್‌/ಗುಳ್ಳೆಗಳಾಗಿ ಬದಲಾಗುತ್ತವೆ, ಆಂಡ್ರಾಯ್ಡ್ 11 ಆನ್-ಡಿವೈಸ್ ವಿಷುಯಲ್ ಕಾರ್ಟೆಕ್ಸ್ನೊಂದಿಗೆ ಬರುತ್ತಿದೆ. ಬಹುತೇಕ ಕೆಲಸಗಳನ್ನು ವಾಯಿಸ್‌ ಕಂಮಾಂಡ್‌ಗಳ ಮೂಲಕ ಮಾಡಬಹುದಾಗಿದೆ. ವಾಯಿಸ್‌ ಕಮಾಂಡ್ ಕಾರ್ಯವು ಸರಳ ಮತ್ತು ಸುಗಮವಾಗಿರಲಿದೆ. ಡಿವೈಸ್‌ಗಳ ನಿಯಂತ್ರಣವನ್ನು ಸೌಲಭ್ಯ ಅಧಿಕವಾಗಿದೆ. ಇದರಿಂದ ಉತ್ತಮವಾಗಿ ನಿಯಂತ್ರಿಸಲು ಮತ್ತು ಹೆಚ್ಚು ವೇಗವಾಗಿ ಮತ್ತು ಸುಲಭವಾಗಿ ಕೆಲಸ ಮಾಡಲು ನಿಮಗೆ ಸಾಧ್ಯವಾಗುತ್ತದೆ.

ತಮ್ಮ ಡಿವೈಸ್‌

ಬಳಕೆದಾರರು ತಮ್ಮ ಡಿವೈಸ್‌ನಲ್ಲಿ ಏನನ್ನಾದರೂ ವೀಕ್ಷಿಸುತ್ತಿರುವಾಗ ಅಥವಾ ಕೇಳುವಾಗ ಅದನ್ನು ಹೆಚ್ಚು ಅನುಕೂಲಕರವಾಗಿಸಲು ಮಾಧ್ಯಮ ನಿಯಂತ್ರಣವಿದೆ. ಅಲ್ಲದೆ, ಅಪ್ಲಿಕೇಶನ್‌ಗಳಿಗೆ ಒದಗಿಸಲಾದ ಅನುಮತಿಯು ಒಂದು-ಬಾರಿ ಅನುಮತಿಯಾಗಲಿದೆ. ಮುಂದಿನ ಬಾರಿ ನೀವು ಅಪ್ಲಿಕೇಶನ್‌ಗೆ ಪ್ರವೇಶಿಸಿದಾಗ, ನಿಮ್ಮ ಅನುಮತಿಗಾಗಿ ಅಪ್ಲಿಕೇಶನ್ ಮತ್ತೆ ವಿನಂತಿಸಬಹುದು, ಇದು ಅನೇಕ ಬಳಕೆದಾರರು ಮುಂದೆ ಹೋಗಲು ಬಯಸುತ್ತದೆ. ಬಳಕೆದಾರರು ಅದನ್ನು ಹೆಚ್ಚು ಸಮಯದವರೆಗೆ ಬಳಸದಿದ್ದರೆ ಎಲ್ಲಾ ಅನುಮತಿಗಳು ಅಪ್ಲಿಕೇಶನ್‌ಗಾಗಿ ಸ್ವಯಂಚಾಲಿತವಾಗಿ ಮರು ಹೊಂದಿಸುತ್ತದೆ.

ಆಂಡ್ರಾಯ್ಡ್‌ 11 ಬೀಟಾ ಓಎಸ್‌ ಅನ್ನು ಡೌನ್‌ಲೋಡ್ ಮಾಡುವದು ಹೇಗೆ

ಆಂಡ್ರಾಯ್ಡ್‌ 11 ಬೀಟಾ ಓಎಸ್‌ ಅನ್ನು ಡೌನ್‌ಲೋಡ್ ಮಾಡುವದು ಹೇಗೆ

ಆಂಡ್ರಾಯ್ಡ್ 11 ಬೀಟಾದ ಡೌನ್‌ಲೋಡ್ ಮಾಡಲು ಬಳಕೆದಾರರು ಆಂಡ್ರಾಯ್ಡ್‌ ವೆಬ್‌ಸೈಟ್‌ಗೆ ಭೇಟಿ ನೀಡಬೇಕಿದೆ. ಆದ್ರೆ ಸದ್ಯ ಗೂಗಲ್ ಪಿಕ್ಸಲ್ ಫೋನ್‌ಗಳಿಗೆ ಮಾತ್ರ ಬೀಟಾ ಆವೃತ್ತಿ ಲಭ್ಯ ಮಾಡಲಾಗಿದೆ. ಗೂಗಲ್ ಪಿಕ್ಸಲ್ ಫೋನ್‌ಗಳಾದ ಪಿಕ್ಸಲ್ 2, ಪಿಕ್ಸಲ್ 3, ಪಿಕ್ಸಲ್ 3A ಮತ್ತು ಪಿಕ್ಸಲ್ 4 ಸ್ಮಾರ್ಟ್‌ಫೋನ್‌ಗಳಲ್ಲಿ ಈ ಓಎಸ್ ಪಡೆಯಬಹುದಾಗಿದೆ. ಇನ್ನು ಮುಂಬರುವ ದಿನಗಳಲ್ಲಿ ಇತರೆ ಆಂಡ್ರಾಯ್ಡ್ ಓಎಸ್‌ ಫೋನ್‌ಗಳಿಗೂ ಲಭ್ಯವಾಗಲಿದೆ ಎನ್ನಲಾಗಿದೆ.

Most Read Articles
Best Mobiles in India

English summary
Google has released the Android 11 beta update for Pixel device users and it enhances the already existing features of Android 10.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X