ಮುಂದಿನ ವರ್ಷದಲ್ಲಿ ಈ ಆಪ್‌ಗಳು ಫೋನ್‌ನಲ್ಲಿದ್ರೆ ನೀವು ಒತ್ತಡ ಮುಕ್ತರು; ಹೇಗೆ ಅಂತೀರಾ!?

|

ಈಗಂತೂ ಎಲ್ಲವೂ ಡಿಜಿಟಲ್‌ ಮಯ. ನಮಗೆ ಏನೇ ಅಗತ್ಯವಾದರೂ ಮೊದಲು ಅದರ ಬಗ್ಗೆ ಮಾಹಿತಿ ಪಡೆಯಲು ಮೊಬೈಲ್‌ ಬಳಕೆ ಮಾಡುತ್ತೇವೆ. ಹಿಂದೆ ಆರೋಗ್ಯ ಸರಿ ಇಲ್ಲವಾದರೆ ಆಸ್ಪತ್ರೆಗೆ ಹೋಗಬೇಕಿತ್ತು. ಈಗ ಆ ಸೇವೆ ಸಹ ಸ್ಮಾರ್ಟ್‌ಫೋನ್‌ನಲ್ಲೇ ಲಭ್ಯ. ಶಿಕ್ಷಣಕ್ಕಾಗಿ- ಶಾಲಾ ಕಾಲೇಜಿಗೆ ಹೋಗಬೇಕಿತ್ತು ಈಗ ಅದನ್ನೂ ಸ್ಮಾರ್ಟ್‌‌ ಡಿವೈಸ್‌ಗಳೇ ಆಕ್ರಮಿಸಿಕೊಂಡಿವೆ. ಅಷ್ಟೇ ಏಕೆ ಬ್ಯಾಂಕ್‌ನಲ್ಲಂತೂ ಕ್ಯೂ ನಿಲ್ಲುವ ಹಾಗೆಯೇ ಇಲ್ಲ. ಇದಿಷ್ಟೇ ಅಲ್ಲದೆ ಈ ಸ್ಮಾರ್ಟ್‌ ಡಿವೈಸ್‌ನಿಂದ ಸಾಕಷ್ಟು ಅನುಕೂಲದ ಜೊತೆಗೆ ಅಷ್ಟೇ ಅನಾನುಕೂಲ ಸಹ ಆಗುತ್ತಿದೆ.

ಸ್ಮಾರ್ಟ್‌

ಹೌದು, ಸ್ಮಾರ್ಟ್‌ ಜಗತ್ತಿನಲ್ಲಿ ಎಲ್ಲವೂ ಸ್ಮಾರ್ಟ್‌ ಆಗಿರುವ ಹಿನ್ನೆಲೆ ಬಳಕೆದಾರರ ಆರೋಗ್ಯವನ್ನು ಕಂಟ್ರೋಲ್‌ ಮಾಡುವ ಸ್ಮಾರ್ಟ್‌ ಆಪ್‌ಗಳು ಸಹ ಇಂದಿನ ಪರಿಸ್ಥಿತಿಯಲ್ಲಿ ಅತ್ಯಾವಶ್ಯಕ. ಯಾಕೆಂದರೆ ತಂತ್ರಜ್ಞಾನದ ಬಳಕೆ ಹೆಚ್ಚಾದಂತೆ ಸ್ಪ್ಯಾಮ್ ಕರೆಗಳು ಮತ್ತು ಸಂದೇಶಗಳು, ಟ್ರ್ಯಾಕ್ ಮಾಡುವುದು ಸಹ ಸಾಮಾನ್ಯವಾಗಿದೆ. ಹಾಗೆಯೇ ವೈ-ಫೈ ನೆಟ್‌ವರ್ಕ್‌ ಮೂಲಕ ಎಲ್ಲಾ ಡಿವೈಸ್‌ಗಳನ್ನು ನಿಯಂತ್ರಿಸುವ ಆಯ್ಕೆ ಸಹ ಈಗ ಲಭ್ಯ ಇದ್ದು, ಅದರ ಜೊತೆಗೆ ಹೊಸ ವರ್ಷಕ್ಕೆ ನಿಮ್ಮ ಮಾನಸಿಕ ಆರೋಗ್ಯವನ್ನೂ ಸಹ ನಿಯಂತ್ರಣ ಮಾಡುವುದು ಅನಿವಾರ್ಯ ಅಲ್ಲವೇ...? ಇದಕ್ಕಾಗಿಯೇ ಕೆಲವೊಂದಿಷ್ಟು ಆಪ್‌ಗಳ ಬಗ್ಗೆ ಸಲಹೆ ನೀಡಿದ್ದೇವೆ ಓದಿರಿ.

ದೂಸ್ರಾ(Doosra)

ದೂಸ್ರಾ(Doosra)

ಆಂಡ್ರಾಯ್ಡ್‌ ಡಿವೈಸ್‌ಗೆ ಅಗತ್ಯವಾಗಿ ಬೇಕಾದ ಆಪ್‌ ಇದು. ಈ ಮೂಲಕ ಹೊಸ ವರ್ಷದಲ್ಲಿ ಹೊಸತನಕ್ಕೆ ಕಾಲಿಡಿ. ಇನ್ನು ಈ ಆಪ್‌ ಬಳಕೆ ಮೂಲಕ ಹಲವಾರು ಪ್ರಯೋಜನ ಪಡೆದುಕೊಳ್ಳಬಹುದು. ಹೇಗೆಂದರೆ ರೆಸ್ಟೋರೆಂಟ್‌ಗಳು, ಮಾಲ್ ಹಾಗೂ ಇತರೆ ಪ್ರದೇಶಗಳಲ್ಲಿ ನಿಮ್ಮ ನೈಜ ಮೊಬೈಲ್ ಫೋನ್ ಸಂಖ್ಯೆಯನ್ನು ಹಂಚಿಕೊಳ್ಳಲು ಬಯಸದಿದ್ದಲ್ಲಿ ದ್ವಿತೀಯ ಫೋನ್ ಸಂಖ್ಯೆಯನ್ನು ಬಳಸಲು ದೂಸ್ರಾ ಅನುವು ಮಾಡಿಕೊಡುತ್ತದೆ. ನಮ್ಮ ಫೋನ್ ಸಂಖ್ಯೆಗಳು ಬ್ಯಾಂಕ್ ಖಾತೆಗಳಿಂದ ಹಿಡಿದು ಆಧಾರ್ ಖಾತೆಗಳವರೆಗೆ ಲಿಂಕ್ ಆಗಿರುವ ಆಧುನಿಕ ಯುಗದಲ್ಲಿ ಈ ಆಪ್‌ ಅತ್ಯಗತ್ಯ.

ನೇಟಿವ್‌ ಆಲ್ಫಾ

ನೇಟಿವ್‌ ಆಲ್ಫಾ

ನೇಟಿವ್‌ ಆಲ್ಫಾ ಎಂಬುದು ಒಂದು ವೆಬ್‌ಪುಟದ ಶಾರ್ಟ್‌ಕಟ್‌ನಂತೆ ಕೆಲಸ ಮಾಡುತ್ತದೆ. ನೀವು ನಿರಂತರವಾಗಿ ಬಳಕೆ ಮಾಡುವ ಆಪ್‌ಗಳನ್ನು ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ರಚಿಸುವ ಮೂಲಕ ಸುಲಭವಾಗಿ ಅವುಗಳನ್ನು ಬಳಕೆ ಮಾಡಬಹುದಾಗಿದೆ. ಇದರಲ್ಲಿ ಬ್ರೌಸರ್ ವಿಂಡೋದ ಗೊಂದಲವಿಲ್ಲದೆಯೇ ಪೂರ್ಣ-ಪರದೆಯ ವೀಕ್ಷಣೆಯಲ್ಲಿ ನಿಮ್ಮನ್ನು ನೇರವಾಗಿ ಬೇಕಾದ ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ.

ಯೂನಿಫೈಯ್ಡ್‌ ರಿಮೋಟ್

ಯೂನಿಫೈಯ್ಡ್‌ ರಿಮೋಟ್

ಯೂನಿಫೈಯ್ಡ್‌ ರಿಮೋಟ್ ಆಪ್‌ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಹೊಂದಿರುವವರಿಗೆ ಅನುಕೂಲ ಆಗಲಿದೆ. ಡೆಸ್ಕ್‌ಟಾಪ್/ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್‌ಫೋನ್ ಒಂದೇ ವೈ-ಫೈ ನೆಟ್‌ವರ್ಕ್‌ನಲ್ಲಿರುವಾಗ ಪಿಸಿ ಅಥವಾ ಲ್ಯಾಪ್‌ಟಾಪ್‌ ಅನ್ನು ದೂರದಿಂದಲೇ ಕಂಟ್ರೋಲ್‌ ಮಾಡಬಹುದು.

ಗೆಸ್ಚರ್ ಬೈ ಡಾಗ್‌ಪೂ

ಗೆಸ್ಚರ್ ಬೈ ಡಾಗ್‌ಪೂ

ಈ ರೀತಿಯ ಸೇವೆ ನೀಡುವ ಫೀಚರ್ಸ್‌ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಇನ್‌ಬಿಲ್ಟ್‌ ಆಗಿಯೇ ಇದೆಯಾದರೂ ಈ ಆಪ್‌ ನಿಮಗೆ ಮತ್ತಷ್ಟು ಅನುಕೂಲ ಮಾಡಿಕೊಡಲಿದೆ. ಅಪ್ಲಿಕೇಶನ್ ಲಾಂಚ್‌ಗಳು, ಸಂಪರ್ಕಗಳನ್ನು ಆಯ್ಕೆ ಮಾಡಲು, ಕರೆ ಮಾಡಲು ಮತ್ತು ಹೆಚ್ಚಿನದನ್ನು ತ್ವರಿತವಾಗಿ ಮಾಡಲು ಈ ಆಪ್‌ ಬಳಕೆ ಮಾಡಬಹುದು. ಇದು ಮನರಂಜನಾತ್ಮಕವಾಗಿದ್ದು, ಬಳಕೆ ಮಾಡಲು ಸುಲಭವಾಗಿದೆ.

ವಾಯ್ಸ್‌

ವಾಯ್ಸ್‌

ಪ್ರಮುಖವಾಗಿ ಡಿಜಿಟಲ್‌ ಯುಗದಲ್ಲಿ ಈ ಆಪ್‌ ಬಳಕೆ ಅಗತ್ಯ ಎಂದೇ ಹೇಳಬಹುದು. ನಿಮ್ಮಲ್ಲಿ ಹತಾಶೆ, ಸ್ವಯಂ ನಿಯಂತ್ರಣ ಅಥವಾ ಪ್ರೇರಣೆ ಸಂಬಂಧ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ವಾಯ್ಸ್‌ ನಿಮ್ಮ ಮಾನಸಿಕ ಆರೋಗ್ಯವನ್ನು ಮೌಲ್ಯಮಾಪನ ಮಾಡಲಿದೆ. ಆಡಿಯೊ ಸೆಷನ್‌ಗಳ ಮೂಲಕ ಇದು ಸಹಾಯ ಮಾಡಲಿದ್ದು, ಯಾವುದೇ ಕೆಲಸ ಮಾಡಬೇಕಾದರೂ ಸುಲಭ ಹಾಗೂ ಸರಳ ಮಾರ್ಗವನ್ನು ಸೂಚಿಸುತ್ತದೆ. ಆದರೆ ಬಳಕೆದಾರರು ಪ್ರತಿ 12 ವಾರಗಳಿಗೆ 899 ಅಥವಾ ವರ್ಷಕ್ಕೆ 1,499 ರೂ. ಪಾವತಿ ಮಾಡಬೇಕಿದೆ.

Best Mobiles in India

English summary
Android apps to help you gain control over your digital life in 2023.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X