ಇದೇ ಮಾರ್ಚ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್!

|

ಮಕ್ಕಳ ಅಪೌಷ್ಠಿಕತೆಯ ನಿಖರ ಅಂಕಿ-ಸಂಖ್ಯೆಯ ಮಾಹಿತಿ ಮತ್ತು ಗರ್ಭಿಣಿ ಮಹಿಳೆಯರ ಪೌಷ್ಠಿಕ ಆಹಾರ ಮಾಹಿತಿ ಹಾಗೂ ಅಂಗನವಾಡಿ ದಾಖಲಾತಿ, ಸೇರಿದಂತೆ ವಿವಿಧ ಅಗತ್ಯ ಮಾಹಿತಿ ಡಿಜಿಟಲ್ ರೂಪದಲ್ಲಿ ದಾಖಲಿಸಲು ಅನುಕೂಲವಾಗಲೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ಸ್ಮಾರ್ಟ್‌ಫೋನ್‌ ನೀಡಲು ಮುಂದಾಗಿದೆ.

ಕೇಂದ್ರ ಸರ್ಕಾರದ

ಹೌದು, ಕೇಂದ್ರ ಸರ್ಕಾರದ ಪೋಷಣ್‌ ಅಭಿಯಾನ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ಮಾರ್ಟ್‌ಫೋನ್ ನೀಡಲಿದೆ. 2020-21ರ ಕೇಂದ್ರ ಬಜೆಟ್‌ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್‌ನ ಈ ಬಗ್ಗೆ ಹೇಳಿದ್ದರು. ಇದೇ ಮಾರ್ಚ್ ಅಂತ್ಯದ ವೇಳೆಗೆ ರಾಜ್ಯದ ಸುಮಾರು 66,000 ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್ ನೀಡುವ ಯೋಜನೆ ಇದೆ ಎಂದು ಇತ್ತೀಚಿಗೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಯಾವ ಸ್ಮಾರ್ಟ್‌ಫೋನ್ ಕಾರ್ಯಕರ್ತೆಯರ ಕೈ ಸೇರಲಿದೆ ಮತ್ತು ಏನೆಲ್ಲಾ ಫೀಚರ್ಸ್‌ ಇರಲಿವೆ ಎಂಬುದನ್ನು ಮುಂದೆ ತಿಳಿಯೋಣ.

ಸ್ನೇಹ ಅಪ್ಲಿಕೇಶನ್ ಇರಲಿದೆ

ಸ್ನೇಹ ಅಪ್ಲಿಕೇಶನ್ ಇರಲಿದೆ

ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವ ಪ್ರತಿಯೊಂದು ಸ್ಮಾರ್ಟ್‌ಫೋನ್‌ ಸಹ ಸ್ನೇಹ ಆಪ್‌ ಅನ್ನು ಒಳಗೊಂಡಿರಲಿದೆ. ಈ ಆಪ್ ಅಗತ್ಯ ಮಾಹಿತಿಗಳನ್ನು ದಾಖಲು ಮಾಡಲು ರೂಪಿಸಲಾಗಿದೆ. ಹಾಗೆಯೇ ಸ್ಮಾರ್ಟ್‌ಫೋನ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಒಳಗೊಂಡಿರಲಿದೆ.

ಎರಡು ಹಂತಗಳಲ್ಲಿ ವಿತರಣೆ

ಎರಡು ಹಂತಗಳಲ್ಲಿ ವಿತರಣೆ

ರಾಜ್ಯದಲ್ಲಿ ಸುಮಾರು 60,000ಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳಿವೆ. ಹಾಗೆಯೇ ಸುಮಾರು 66 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಎರಡು ಹಂತಗಳಲ್ಲಿ ಫೋನ್ ವಿತರಣೆ ಮಾಡುವ ಯೋಜನ ಇದ್ದು, ಮೊದಲ ಹಂತದಲ್ಲಿ 19 ಜಿಲ್ಲೆಗಳ ಕಾರ್ಯಕರ್ತರಿಗೆ ಸ್ಮಾರ್ಟ್‌ಫೋನ್ ಲಭ್ಯವಾಗಲಿದೆ. ಎರಡನೇ ಹಂತದಲ್ಲಿ 11 ಜಿಲ್ಲೆಗಳ ಕಾರ್ಯಕರ್ತೆರಿಗೆ ಸ್ಮಾರ್ಟ್‌ಫೋನ್ ವಿತರಣೆ ಮಾಡುವರು ಎಂದು ಹೇಳಲಾಗಿದೆ.

ಯಾವ ಸ್ಮಾರ್ಟ್‌ಫೋನ್?

ಯಾವ ಸ್ಮಾರ್ಟ್‌ಫೋನ್?

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ A10s ಸ್ಮಾರ್ಟ್‌ಫೋನ್‌ ನೀಡುವ ಸಾಧ್ಯತೆಗಳು ಹೆಚ್ಚಿವೆ. ಈ ಸ್ಮಾರ್ಟ್‌ಫೋನ್ ಬೆಲೆಯು 10,000ರೂ. ಪ್ರೈಸ್‌ಟ್ಯಾಗ್‌ ಹೊಂದಿದೆ.

Best Mobiles in India

English summary
Anganwadi Workers To Get Smartphones In March.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X