ಆಪಲ್‌ನಿಂದ ಬ್ಯಾಕ್‌ ಟು ಸ್ಕೂಲ್‌ ಪ್ರೋಗ್ರಾಂ ಘೋಷಣೆ! ಏನೆಲ್ಲಾ ಡಿಸ್ಕೌಂಟ್‌?

|

ಟೆಕ್‌ ದೈತ್ಯ ಎನಿಸಿಕೊಂಡಿರುವ ಆಪಲ್‌ ಕಂಪೆನಿ ತನ್ನ ಗುಣಮಟ್ಟದ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾಗಿದೆ. ಆಪಲ್‌ ಕಂಪೆನಿಯ ಪ್ರಾಡಕ್ಟ್‌ಗಳನ್ನು ಖರೀದಿಸುವುದು ಕೂಡ ಹೆಮ್ಮೆಯ ವಿಚಾರವೇ ಸರಿ. ಅದರಲ್ಲೂ ರಿಯಾಯಿತಿ ದರದಲ್ಲಿ ಆಪಲ್‌ ಕಂಪೆನಿಯ ಪ್ರಾಡಕ್ಟ್‌ಗಳು ದೊರೆಯುತ್ತವೆ ಎಂದರೆ ಖರೀದಿದಾರರು ಮುಗಿಬಿಳುತ್ತಾರೆ. ಇದೇ ಕಾರಣಕ್ಕೆ ಗ್ರಾಹಕರಿಗಾಗಿ ಆಪಲ್‌ ಕಂಪೆನಿ ಕೂಡ ಆಗಾಗ ವಿಶೇಷ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಆಫರ್‌ಗಳನ್ನು ನೀಡುತ್ತಾ ಬಂದಿದೆ. ಸದ್ಯ ಇದೀಗ ಭಾರತದಲ್ಲಿನ ಗ್ರಾಹಕರಿಗಾಗಿ ಬ್ಯಾಕ್‌ ಟು ಸ್ಕೂಲ್‌ ಎನ್ನುವ ಕಾರ್ಯಕ್ರಮವನ್ನು ಘೋಷಿಸಿದೆ.

ಆಪಲ್

ಹೌದು, ಆಪಲ್ ಕಂಪೆನಿ ಭಾರತದಲ್ಲಿ ಬ್ಯಾಕ್ ಟು ಸ್ಕೂಲ್ ಪ್ರೋಗ್ರಾಂ ಘೋಷಣೆ ಮಾಡಿದೆ. ಈ ಪ್ರೋಗ್ರಾಂ ಅಡಿಯಲ್ಲಿ ಗ್ರಾಹಕರು ಅನೇಕ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಹೆಸರೇ ಸೂಚಿಸುವಂತೆ ಬ್ಯಾಕ್‌ ಟು ಸ್ಕೂಲ್‌ ಪ್ರೋಗ್ರಾಂ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿದೆ. ಅದರಂತೆ ಈ ಪ್ರೋಗ್ರಾಂನಲ್ಲಿ ಶಿಕ್ಷಣಕ್ಕೆ ಸೂಕ್ತವಾಗುವ ಐಪ್ಯಾಡ್‌ ಮತ್ತು ಮ್ಯಾಕ್‌ ಅನ್ನು ಖರೀದಿಸಬಹುದಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ರಿಯಾಯಿತಿ ದರದಲ್ಲಿ ಇವುಗಳನ್ನು ಖರೀದಿಸಬಹುದು.

ಆಪಲ್‌

ಆಪಲ್‌ ಕಂಪೆನಿಯ ಬ್ಯಾಕ್‌ ಟು ಸ್ಕೂಲ್‌ ಕಾರ್ಯಕ್ರಮದಲ್ಲಿ ಐಪ್ಯಾಡ್‌ ಮತ್ತು ಮ್ಯಾಕ್‌ ಡಿವೈಸ್‌ಗಳಿಗೆ ಬಿಗ್‌ ಆಫರ್‌ ದೊರೆಯಲಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಈ ಡಿಸ್ಕೌಂಟ್‌ ಪ್ರೋಗ್ರಾಂ ಅನ್ನು ಘೋಷಿಸಲಾಗಿದೆ. ಇದಲ್ಲದೆ ಈ ಪ್ರೋಗ್ರಾಂನಲ್ಲಿ ರಿಯಾಯಿತಿಯ ಜೊತೆಗೆ ಅರ್ಹ ಗ್ರಾಹಕರು 6 ತಿಂಗಳ ಉಚಿತ ಆಪಲ್ ಮ್ಯೂಸಿಕ್ ಹಾಗೂ ಉಚಿತವಾಗಿ ಏರ್‌ಪಾಡ್‌ಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ. ಇನ್ನುಳಿದಂತೆ ಈ ಪ್ರೋಗ್ರಾಂನಲ್ಲಿ ಏನೆಲ್ಲಾ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್‌

ಆಪಲ್‌ ಕಂಪೆನಿಯ ಬ್ಯಾಕ್ ಟು ಸ್ಕೂಲ್ ಕಾರ್ಯಕ್ರಮದ ಅಡಿಯಲ್ಲಿ ಎಜುಕೇಶನ್‌ ಪ್ರೈಸ್‌ ಮತ್ತು ಆಫರ್‌ಗಳು ಈಗಾಗಲೇ ಲೈವ್‌ ಆಗಿದೆ. ಈ ಪ್ರೋಗ್ರಾಂ ಸೆಪ್ಟೆಂಬರ್ 22 ರವರೆಗೆ ಮುಂದುವರಿಯುತ್ತದೆ. ಇದರಲ್ಲಿ ನೀವು ಖರೀದಿಸಬಹುದಾದ ಅರ್ಹ ಡಿವೈಸ್‌ಗಳ ಪಟ್ಟಿಯನ್ನು ಬಹಿರಂಗಪಡಿಸಿದೆ. ಇದಲ್ಲದೆ ಗ್ರಾಹಕರು ಆಪಲ್‌ಕೇರ್‌+ ನಲ್ಲಿ 20% ರಷ್ಟು ರಿಯಾಯಿತಿಯನ್ನು ಸಹ ಪಡೆಯಬಹುದು.

ಐಪ್ಯಾಡ್‌ ಏರ್‌

ಐಪ್ಯಾಡ್‌ ಏರ್‌

ಆಪಲ್‌ ಕಂಪೆನಿ ಬ್ಯಾಕ್‌ ಟು ಸ್ಕೂಲ್‌ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಅರ್ಹ ಸಿಬ್ಬಂದಿ ಐಪ್ಯಾಡ್ ಏರ್ 5 ನೇ ತಲೆಮಾರು ಅನ್ನು ಕೇವಲ 50,780 ರೂ.ಗಳಿಗೆ ಖರೀದಿಸಬಹುದು. ಇನ್ನು ಐಪ್ಯಾಡ್‌ ಏರ್‌ Gen 5 ಭಾರತದಲ್ಲಿ ಅಧಿಕೃತವಾಗಿ 54,900ರೂ.ಬೆಲೆಯನ್ನು ಹೊಂದಿದೆ. ಇನ್ನು ಐಪ್ಯಾಡ್‌ ಏರ್‌ 5th Gen M1 ಚಿಪ್ ಆಕ್ಟಾ-ಕೋರ್ CPU ಮತ್ತು ಏಳು-ಕೋರ್ GPU ಅನ್ನು ನೀಡುತ್ತದೆ. ಇದು ಕಾಂಪ್ಯಾಕ್ಟ್ 10-ಇಂಚಿನ ಟ್ಯಾಬ್ಲೆಟ್‌ನಲ್ಲಿ ಲ್ಯಾಪ್‌ಟಾಪ್ ಕ್ಲಾಸ್ ಕಾರ್ಯಕ್ಷಮತೆಯನ್ನು ನೀಡುತ್ತದೆ.

ಐಪ್ಯಾಡ್‌ ಪ್ರೊ

ಐಪ್ಯಾಡ್‌ ಪ್ರೊ

ಆಪಲ್‌ ಬ್ಯಾಕ್‌ ಟು ಸ್ಕೂಲ್‌ ಕಾರ್ಯಕ್ರಮದಲ್ಲಿ ಗ್ರಾಹಕರು 11 ಇಂಚಿನ ಐಪ್ಯಾಡ್‌ ಪ್ರೊ Gen 3 ಮತ್ತು 12.9 ಇಂಚಿನ ಐಪ್ಯಾಡ್‌ ಪ್ರೊ Gen 5 ಅನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು. ಇದರಲ್ಲಿ ನಿಮಗೆ 11 ನೇ ತಲೆಮಾರಿನ ಐಪ್ಯಾಡ್‌ ಪ್ರೊ ಕೇವಲ 68,300ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿದೆ.

ಮ್ಯಾಕ್‌ಬುಕ್‌ ಏರ್‌ M2

ಮ್ಯಾಕ್‌ಬುಕ್‌ ಏರ್‌ M2

ಆಪಲ್‌ ಮ್ಯಾಕ್‌ಬುಕ್‌ ಏರ್‌ M2 ಬ್ಯಾಕ್ ಟು ಸ್ಕೂಲ್ ಪ್ರೋಗ್ರಾಂನಲ್ಲಿ ರಿಯಾಯಿತಿ ಪಡೆದುಕೊಂಡಿದೆ. ಇದರಲ್ಲಿ ಮ್ಯಾಕ್‌ಬುಕ್‌ ಏರ್‌ M2 ಅನ್ನು ನೀವು ಕೇವಲ 1,09,900ರೂ. ಗೆ ಖರೀದಿಸಬಹುದು. ಆಪಲ್‌ ಮ್ಯಾಕ್‌ಬುಕ್‌ ಏರ್‌ (2022) M2 ಚಿಪ್‌ಸೆಟ್‌ ಅನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ 13.6 ಇಂಚಿನ ಲಿಕ್ವಿಡ್ ರೆಟಿನಾ ಡಿಸ್‌ಪ್ಲೇಯನ್ನು ಹೊಂದಿದೆ. ಈ ಆಪಲ್‌ ಮ್ಯಾಕ್‌ಬುಕ್‌ ಏರ್‌ (2022) 2TB ಸ್ಟೋರೇಜ್‌ ಅನ್ನು ಹೊಂದಿದೆ.

ಮ್ಯಾಕ್‌ಬುಕ್‌ ಪ್ರೊ M2

ಮ್ಯಾಕ್‌ಬುಕ್‌ ಪ್ರೊ M2

ಬ್ಯಾಕ್‌ ಟು ಸ್ಕೂಲ್‌ ಕಾರ್ಯಕ್ರಮದಲ್ಲಿ ನೀವು ರಿಯಾಯಿತಿ ದರದಲ್ಲಿ ಖರೀದಿಸಬಹುದಾದ ಡಿವೈಸ್‌ಗಳಲ್ಲಿ ಮ್ಯಾಕ್‌ಬುಕ್‌ ಪ್ರೊ M2 ಕೂಡ ಸೇರಿದೆ. ಇದನ್ನು ಈ ಕಾರ್ಯಕ್ರಮದ ಅಡಿಯ್ಲಿ ನೀವು ಕೇವಲ 1,19,900ರೂ.ಗಳಿಗೆ ಖರೀದಿಸಬಹುದು. ಇನ್ನು ಮ್ಯಾಕ್‌ಬುಕ್ ಪ್ರೊ (2022) ಕೂಡ ಹೊಸ M2 ಚಿಪ್‌ಸೆಟ್‌ ಅನ್ನು ಒಳಗೊಂಡಿದೆ. ಈ ಮ್ಯಾಕ್‌ಬುಕ್ ಪ್ರೊ (2022) 13 ಇಂಚಿನ ಲಿಕ್ವಿಡ್ ರೆಟಿನಾ ಡಿಸ್‌ಪ್ಲೇಯನ್ನು ಹೊಂದಿದೆ. ಇದರಲ್ಲಿ ಬಳಕೆದಾರರು 24GB ವರೆಗೆ ಏಕೀಕೃತ ಮೆಮೊರಿ ಜೊತೆಗೆ 2TB ಸ್ಟೋರೇಜ್‌ ಅನ್ನು ಆರಿಸಿಕೊಳ್ಳಬಹುದಾಗಿದೆ.

ಮ್ಯಾಕ್‌ಬುಕ್‌ ಪ್ರೊ M1

ಮ್ಯಾಕ್‌ಬುಕ್‌ ಪ್ರೊ M1

ಮ್ಯಾಕ್‌ಬುಕ್‌ ಪ್ರೊ M1 ಕೂಡ ವಿಶೇಷ ರಿಯಾಯಿತಿಯನ್ನು ಪಡೆದುಕೊಂಡಿದೆ. ಇದರಲ್ಲಿ ಮ್ಯಾಕ್‌ಬುಕ್‌ ಪ್ರೊ 14 ಇಂಚಿನ ಆರಂಭಿಕ ಬೆಲೆ 1,75,410 ರೂ.ಆಗಿದೆ. ಇನ್ನು 14 ಇಂಚಿನ ಮ್ಯಾಕ್‌ಬುಕ್ ಪ್ರೊ ಮಾಡೆಲ್‌ 14.2 ಇಂಚಿನ ಆಕ್ಟಿವ್‌ ಏರಿಯಾ ಹೊಂದಿದ್ದು, ಒಟ್ಟು 5.9 ಮಿಲಿಯನ್ ಪಿಕ್ಸೆಲ್‌ ಸಾಮರ್ಥ್ಯ ಹೊಂದಿದೆ. ಈ ಡಿಸ್‌ಪ್ಲೇ ಮಿನಿ-ಎಲ್ಇಡಿ ಟೆಕ್ನಾಲಜಿ ಜೊತೆಗೆ ಲಿಕ್ವಿಡ್ ರೆಟಿನಾ ಎಕ್ಸ್‌ಡಿಆರ್ ಯನ್ನು ಒಳಗೊಂಡಿದೆ.

ಐಮ್ಯಾಕ್‌ M1

ಐಮ್ಯಾಕ್‌ M1

ಇನ್ನು ಬ್ಯಾಕ್‌ ಟು ಸ್ಕೂಲ್‌ ಕಾರ್ಯಕ್ರಮದಲ್ಲಿ ಖರೀದಿಸಬಹುದಾದ ಮತ್ತೊಂದು ಡಿವೈಸ್‌ ಐಮ್ಯಾಕ್‌ ಕೂಡ ಸೇರಿದೆ. 24-ಇಂಚಿನ ಐಮ್ಯಾಕ್‌ ಬ್ಯಾಕ್ ಟು ಸ್ಕೂಲ್ ಪ್ರೋಗ್ರಾಂ ಆಫರ್‌ನಲ್ಲಿ ನಿಮಗೆ ಕೇವಲ 1,07,910 ರೂ.ಗಳಿಗೆ ದೊರೆಯಲಿದೆ. ಇನ್ನು ಆಪಲ್‌ ಐಮ್ಯಾಕ್‌ 24 4480x2520 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 24 ಇಂಚಿನ 4.5K ರೆಟಿನಾ ಡಿಸ್‌ಪ್ಲೇ ಹೊಂದಿದೆ. ಈ ಐಮ್ಯಾಕ್ ಆಪಲ್‌ನ ಟ್ರೂ ಟೋನ್ ಟೆಕ್ ಫಾರ್ ಕಲರ್ ಬ್ಯಾಲೆನ್ಸ್, P3 ವೈಡ್ ಕಲರ್ ಗ್ಯಾಮಟ್, 500 ನಿಟ್ಸ್ ಪೀಕ್ ಬ್ರೈಟ್‌ನೆಸ್ ಮತ್ತು ಲೋ ರಿಫ್ಲೆಕ್ಟಿವಿಟಿ ಲೇಪನ ಹೊಂದಿದೆ.

ಬ್ಯಾಕ್‌ ಟು ಸ್ಕೂಲ್‌

ಇನ್ನು ಆಪಲ್‌ನ ಬ್ಯಾಕ್‌ ಟು ಸ್ಕೂಲ್‌ ಕಾರ್ಯಕ್ರಮದಲ್ಲಿ ನೀವು ಖರೀದಿಸುವ ಯಾವುದೇ ಮ್ಯಾಕ್‌ ಅಥವಾ ಐಪ್ಯಾಡ್‌ ಅನ್ನು ಖರೀದಿಸುವ ಗ್ರಾಹಕರು ಒಂದು ಜೋಡಿ ಏರ್‌ಪಾಡ್‌ಗಳನ್ನು ಫ್ರೀಯಾಗಿ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಹೆಚ್ಚುವರಿ 6,400ರೂ. ಪಾವತಿಸುವ ಮೂಲಕ ಏರ್‌ಪಾಡ್ಸ್‌ Gen 3 ಗೆ ಅಪ್‌ಗ್ರೇಡ್ ಮಾಡಬಹುದು.

Best Mobiles in India

Read more about:
English summary
Apple 'Back to School' offer on iPad Air 5, MacBook Air M2, and more

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X