ಐಫೋನ್ 14 ಬಿಡುಗಡೆ ಬೆನ್ನಲ್ಲೇ, ಗ್ರಾಹಕರಿಗೆ ಏಕಾಏಕಿ ಬಿಗ್‌ ಶಾಕ್‌!

|

ಆಪಲ್ ಸಂಸ್ಥೆಯು ತನ್ನ ಬಹುನಿರೀಕ್ಷಿತ ಐಫೋನ್ 14 ಸರಣಿಯಲ್ಲಿ ಒಟ್ಟು ನಾಲ್ಕು ಫೋನ್ ಲಾಂಚ್ ಮಾಡಿದೆ. ಅವುಗಳು ಕ್ರಮವಾಗಿ ಐಫೋನ್ 14, ಐಫೋನ್ 14 ಪ್ಲಸ್‌ ಐಫೋನ್‌ 14 ಪ್ರೊ ಮತ್ತು ಐಫೋನ್‌ 14 ಪ್ರೊ ಮ್ಯಾಕ್ಸ್‌ ಮಾಡೆಲ್‌ಗಳು ಆಗಿವೆ. ಇನ್ನು ಈ ನೂತನ ಸರಣಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಆಪಲ್‌ ಸಂಸ್ಥೆಯ ಐಫೋನ್‌ 12, ಐಫೋನ್‌ 13 ಫೋನ್‌ ಮಾಡೆಲ್‌ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದ್ದು, ಗ್ರಾಹಕರಿಗೆ ಖುಷಿ ನೀಡಿದೆ. ಇದರೊಂದಿಗೆ ಆಪಲ್‌ ಕಂಪನಿಯು ಇದೀಗ ದಿಢೀರ್‌ ಶಾಕಿಂಗ್ ಸಮಾಚಾರ ಹೊರಹಾಕಿದೆ.

ಐಫೋನ್

ಹೌದು, ಆಪಲ್‌ ಸಂಸ್ಥೆಯು ಐಫೋನ್ 14 ಸರಣಿ ಲಾಂಚ್ ಬೆನ್ನಲ್ಲೇ, ಭಾರತದಲ್ಲಿ ತನ್ನ ಅತ್ಯಂತ ಜನಪ್ರಿಯ ಎರಡು ಐಫೋನ್‌ ಮಾಡೆಲ್‌ಗಳನ್ನು ನಿಲ್ಲಿಸಲಿದೆ ಎಂದು ವರದಿಯಿಂದ ತಿಳಿದು ಬಂದಿದೆ. ಆಪಲ್ ಕಂಪೆನಿಯ ಹಲವು ಮಾಡೆಲ್‌ಗಳು ಗ್ರಾಹಕರನ್ನು ಸೆಳೆದಿದ್ದು, ಆ ಪೈಕಿ 2019 ರಲ್ಲಿ ಬಿಡುಗಡೆ ಆಗಿದ್ದ ಐಫೋನ್ 11 ಈಗ ಸ್ಥಗಿತವಾಗಿದೆ. ಇದರೊಂದಿಗೆ ಐಫೋನ್‌ 12 ಮಿನಿ ಮತ್ತು ಐಫೋನ್‌ 13 ಪ್ರೊ ಸಿರೀಸ್‌ ಸಹ ಅಲಭ್ಯ ಎನ್ನಲಾಗಿದೆ.

ಈ ಜನಪ್ರಿಯ ಐಫೋನ್‌ ಮಾಡೆಲ್‌ಗಳು ಇನ್ನು ಅಲಭ್ಯ

ಈ ಜನಪ್ರಿಯ ಐಫೋನ್‌ ಮಾಡೆಲ್‌ಗಳು ಇನ್ನು ಅಲಭ್ಯ

ಆಪಲ್‌ ಕಂಪನಿಯು 2019 ರಲ್ಲಿ ಲಾಂಚ್ ಮಾಡಿದ್ದ ಆಪಲ್‌ ಐಫೋನ್‌ 11 ಜೊತೆಗೆ ಜನಪ್ರಿಯ ಐಫೋನ್‌ 12 ಮಿನಿ ಮತ್ತು ಐಫೋನ್‌ 13 ಪ್ರೊ ಸಿರೀಸ್‌ ಮಾಡೆಲ್‌ಗಳನ್ನು ಈಗ ನಿಲ್ಲಿಸಿದೆ. ಆದರೆ ಐಫೋನ್‌ 13 ಮತ್ತು ಐಫೋನ್‌ 12 ಫೋನ್‌ಗಳು ಆಕರ್ಷಕ ಬೆಲೆ ಇಳಿಕೆ ಕಂಡಿವೆ.

ಸ್ಟಾಕ್‌ ಇರುವವರೆಗೂ ಲಭ್ಯ

ಸ್ಟಾಕ್‌ ಇರುವವರೆಗೂ ಲಭ್ಯ

ಆಪಲ್ ಕಂಪನಿಯು ತನ್ನ ಐಫೋನ್‌ 11 ಅನ್ನು ಸ್ಥಗಿತ ಮಾಡಿದ್ದರೂ, ಈ ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ ಇನ್ನು ಖರೀದಿಗೆ ಲಭ್ಯವಿದೆ. ಸ್ಟಾಕ್‌ ಇರುವವರೆಗೂ ಐಫೋನ್‌ 11 ಖರೀದಿಗೆ ದೊರೆಯುತ್ತದೆ. ಆ ಬಳಿಕ ಅಲಭ್ಯವಾಗಲಿದೆ. ಹಾಗೆಯೇ ಈಗಾಗಲೇ ಐಫೋನ್‌ 11 ಬಳಕೆ ಮಾಡುತ್ತಿರುವ ಗ್ರಾಹಕರು, ನಿರಾತಂಕವಾಗಿ ಬಳಕೆ ಮಾಡಬಹುದಾಗಿದೆ. ಅದರೊಂದಿಗೆ ಐಫೋನ್‌ 11 ಕೆಲವು ನೂತನ ಓಎಸ್‌ ಅಪ್‌ಡೇಟ್‌ಗೆ ಸಪೋರ್ಟ್‌ ಮಾಡಲಿದೆ.

ಐಫೋನ್ 11 ಫೀಚರ್ಸ್‌ಗಳು

ಐಫೋನ್ 11 ಫೀಚರ್ಸ್‌ಗಳು

ಆಪಲ್ ಸಂಸ್ಥೆಯ ಐಫೋನ್ 11 ಫೋನ್ 6.1 ಇಂಚಿನ ಡಿಸ್‌ಪ್ಲೇ ಮತ್ತು ಡ್ಯುಯಲ್ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. ವೇಗದ ಚಿಪ್‌ಸೆಟ್‌ ಬೆಂಬಲದೊಂದಿಗೆ A13 ಬಯೋನಿಕ್ ಪ್ರೊಸೆಸರ್‌ ಪಡೆದುಕೊಂಡಿದೆ. ಆಪಲ್‌ ಎಕ್ಸ್‌ಆರ್‌ಗಿಂತ ಇದರ ಬ್ಯಾಟರಿ ಲೈಫ್ ಅಧಿಕವಾಗಿದೆ. ಹಿಂಬದಿಯ ಎರಡು ಕ್ಯಾಮೆರಾಗಳು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಬೆಂಬಲವನ್ನು ಪಡೆದಿದ್ದು, ಇದರೊಂದಿಗೆ ನೈಟ್‌ಮೋಡ್‌, 4K ವಿಡಿಯೊ, ಸ್ಲೋ ಮೋಶನ್ ಫೀಚರ್ಸ್‌ಗಳನ್ನು ಈ ಫೋನ್ ಪಡೆದಿದೆ.

ಭಾರತದಲ್ಲಿ ಐಫೋನ್‌ 14 ಬೆಲೆ ಎಷ್ಟು?

ಭಾರತದಲ್ಲಿ ಐಫೋನ್‌ 14 ಬೆಲೆ ಎಷ್ಟು?

ಐಫೋನ್‌ 14 ಬೆಲೆ ವಿವರ
ಐಫೋನ್‌ 14 (128 GB) 79,900ರೂ. ಆಗಿದೆ
ಐಫೋನ್‌ 14 (256GB) 89,900ರೂ. ಆಗಿದೆ
ಐಫೋನ್‌ 14 (512GB) 1,09,900ರೂ. ಆಗಿದೆ

ಐಫೋನ್‌ 14 ಪ್ಲಸ್‌ ಬೆಲೆ ವಿವರ

ಐಫೋನ್‌ 14 ಪ್ಲಸ್‌ ಬೆಲೆ ವಿವರ

ಐಫೋನ್‌ 14 ಪ್ಲಸ್‌ (128 GB) 89,900ರೂ. ಆಗಿದೆ
ಐಫೋನ್‌ 14 ಪ್ಲಸ್‌ (256GB) 99,900ರೂ. ಆಗಿದೆ
ಐಫೋನ್‌ 14 ಪ್ಲಸ್‌ (512GB) 1,19,900ರೂ. ಆಗಿದೆ

ಐಫೋನ್‌ 14 ಪ್ರೊ ಬೆಲೆ ವಿವರ

ಐಫೋನ್‌ 14 ಪ್ರೊ ಬೆಲೆ ವಿವರ

ಐಫೋನ್‌ 14 ಪ್ರೊ (128 GB) 1,29,900ರೂ. ಆಗಿದೆ
ಐಫೋನ್‌ 14 ಪ್ರೊ (256GB) 1,39,900ರೂ. ಆಗಿದೆ
ಐಫೋನ್‌ 14 ಪ್ರೊ (512GB) 1,59,900ರೂ. ಆಗಿದೆ
ಐಫೋನ್‌ 14 ಪ್ರೊ (1TB) 1,79,900ರೂ. ಆಗಿದೆ

ಐಫೋನ್‌ 14 ಪ್ರೊ ಮ್ಯಾಕ್ಸ್‌ ಬೆಲೆ ವಿವರ

ಐಫೋನ್‌ 14 ಪ್ರೊ ಮ್ಯಾಕ್ಸ್‌ ಬೆಲೆ ವಿವರ

ಐಫೋನ್‌ 14 ಪ್ರೊ ಮ್ಯಾಕ್ಸ್‌ (128 GB) 1,39,900ರೂ. ಆಗಿದೆ
ಐಫೋನ್‌ 14 ಪ್ರೊ ಮ್ಯಾಕ್ಸ್‌ (256GB) 1,49,900ರೂ. ಆಗಿದೆ
ಐಫೋನ್‌ 14 ಪ್ರೊ ಮ್ಯಾಕ್ಸ್‌ (512GB) 1,69,900ರೂ. ಆಗಿದೆ
ಐಫೋನ್‌ 14 ಪ್ರೊ ಮ್ಯಾಕ್ಸ್‌ (1TB) 1,89,900ರೂ. ಆಗಿದೆ

Best Mobiles in India

English summary
Apple Discontinued iPhone 11, but it is still available on Flipkart: Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X