ಆಪಲ್‌ ಗ್ರಾಹಕರಿಗೆ ಬಿಗ್‌ ಶಾಕ್‌; ಆದ್ರೂ, ಗ್ರಾಹಕರಿಗೆ ಕೊನೆಯ ಅವಕಾಶ ನೀಡಿದೆ!

|

ಜನಪ್ರಿಯ ಆಪಲ್ ಸಂಸ್ಥೆಯು ಐಫೋನ್‌ಗಳು, ಮ್ಯಾಕ್‌ಬುಕ್‌ ಲ್ಯಾಪ್‌ಟಾಪ್‌ಗಳು ಸೇರಿದಂತೆ ಹಲವು ಉತ್ಪನ್ನಗಳಿಂದ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆದಿದೆ. ಆದರೆ ಆಪಲ್‌ ಸಂಸ್ಥೆಯು ಇದೀಗ ಗ್ರಾಹಕರಿಗೆ ಬಿಗ್ ಶಾಕ್‌ ನೀಡಿದೆ. ಆಪಲ್‌ M1 ಪ್ರೊ ಮತ್ತು ಆಪಲ್‌ M1 ಮ್ಯಾಕ್ಸ್ ಚಿಪ್‌ಸೆಟ್‌ ಒಳಗೊಂಡ ಮ್ಯಾಕ್‌ಬುಕ್ ಪ್ರೊ 14 ಇಂಚಿನ ಮತ್ತು 16 ಇಂಚಿನ ಲ್ಯಾಪ್‌ಟಾಪ್‌ಗಳನ್ನು ಸ್ಥಗಿತಗೊಳಿಸಿದೆ.

ಆಪಲ್‌ ಗ್ರಾಹಕರಿಗೆ ಬಿಗ್‌ ಶಾಕ್‌; ಆದ್ರೂ, ಗ್ರಾಹಕರಿಗೆ ಕೊನೆಯ ಅವಕಾಶ ನೀಡಿದೆ!

ಹೌದು, ಆಪಲ್‌ ಸಂಸ್ಥೆಯು ತನ್ನ ಆಪಲ್‌ M1 ಪ್ರೊ ಮತ್ತು ಆಪಲ್‌ M1 ಮ್ಯಾಕ್ಸ್‌ ಚಿಪ್‌ಸೆಟ್‌ ಪ್ರೊಸೆಸರ್‌ ಒಳಗೊಂಡ 14 ಇಂಚಿನ ಮತ್ತು 16 ಇಂಚಿನ ಮ್ಯಾಕ್‌ಬುಕ್ ಮಾಡೆಲ್‌ಗಳನ್ನು ಇದೀಗ ಸ್ಥಗಿತ ಮಾಡಿದೆ. ಅಂದಹಾಗೆ ಈ ಎರಡು ಮಾಡೆಲ್‌ಗಳನ್ನು ಸಂಸ್ಥೆಯು 2021 ರಲ್ಲಿ ಪರಿಚಯಿಸಲಾಯಿತು. ಭಾರತದಲ್ಲಿನ ತನ್ನ ಆನ್‌ಲೈನ್ ಸ್ಟೋರ್‌ನಿಂದ ಗ್ರಾಹಕರಿಗೆ ಆಪಲ್‌ M1 ಪ್ರೊ ಮತ್ತು ಆಪಲ್‌ M1 ಮ್ಯಾಕ್ಸ್ ಮ್ಯಾಕ್‌ಬುಕ್‌ ಲ್ಯಾಪ್‌ಟಾಪ್‌ಗಳನ್ನು ಖರೀದಿಸುವ ಆಯ್ಕೆಯನ್ನು ಕಂಪನಿಯು ತೆಗೆದುಹಾಕಿದೆ.

ಆಪಲ್‌ M1 ಪ್ರೊ ಮತ್ತು ಆಪಲ್‌ M1 ಮ್ಯಾಕ್ಸ್‌ ಇಲ್ಲಿ ಲಭ್ಯ?

ಕ್ರೋಮಾ, ರಿಲಯನ್ಸ್ ಡಿಜಿಟಲ್ ಮತ್ತು ಇಮ್ಯಾಜಿನ್ ಸ್ಟೋರ್ ನಂತಹ ಸ್ಟೋರ್‌ಗಳಲ್ಲಿ, 14 ಇಂಚಿನ ಮತ್ತು 16 ಇಂಚಿನ ಸ್ಕ್ರೀನ್‌ ಗಾತ್ರಗಳಲ್ಲಿ ಆಪಲ್‌ M1 ಪ್ರೊ ಚಾಲಿತ ಮ್ಯಾಕ್‌ಬುಕ್‌ಗಳನ್ನು ಖರೀದಿ ಮಾಡಬಹುದು. ಈ ತಾಣಗಳ ಮೂಲಕ ಉತ್ಪನ್ನ ಖರೀದಿಸಲು ಕೊನೆಯ ಅವಕಾಶ ನೀಡಿದೆ ಎನ್ನಬಹುದು.

ಆಪಲ್‌ ಗ್ರಾಹಕರಿಗೆ ಬಿಗ್‌ ಶಾಕ್‌; ಆದ್ರೂ, ಗ್ರಾಹಕರಿಗೆ ಕೊನೆಯ ಅವಕಾಶ ನೀಡಿದೆ!

ಆಪಲ್ ಮ್ಯಾಕ್ ಬುಕ್ ಪ್ರೊ (2021) ಫೀಚರ್ಸ್‌

ಆಪಲ್ ಮ್ಯಾಕ್‌ಬುಕ್ ಪ್ರೊ (2021) ಮಾಡೆಲ್‌ಗಳು 14 ಇಂಚು ಮತ್ತು 16 ಇಂಚಿನ ಗಾತ್ರದಲ್ಲಿ ಲಭ್ಯವಾಗಲಿದೆ. ಈ ಮ್ಯಾಕ್‌ಬುಕ್‌ ಮಾಡೆಲ್‌ ಡಿಸ್‌ಪ್ಲೇ ವಿನ್ಯಾಸವನ್ನು ಹೊಸದಾಗಿ ವಿನ್ಯಾಸಗೊಳಿಸಲಾಗಿದ್ದು, ಟಚ್ ಬಾರ್ ಅನ್ನು ತೆಗೆದುಹಾಕಿದೆ. ಇದರಲ್ಲಿ ಮತ್ತೆ SDXC ಕಾರ್ಡ್ ಸ್ಲಾಟ್ ಹಾಗೂ HDMI ಪೋರ್ಟ್‌ ಅನ್ನು ಸೇರಿಸಲಾಗಿದೆ. ಇದರಿಂದ ಬೆಜೆಲ್‌ಗಳನ್ನು ಕಡಿಮೆ ಮಾಡಬಹುದಾಗಿದೆ. ಹಾಗೆಯೇ ಬಳಕೆದಾರರಿಗೆ ಹೆಚ್ಚಿನ ಸ್ಕ್ರೀನ್ ರಿಯಲ್ ಎಸ್ಟೇಟ್ ಅನ್ನು ಒದಗಿಸಲು ಸಹಾಯವಾಗಲಿದೆ. ಇನ್ನು ಈ ಮಾಡೆಲ್‌ನಲ್ಲಿ 1080p ಸಾಮರ್ಥ್ಯದ ಫೇಸ್‌ಟೈಮ್ ವೆಬ್‌ಕ್ಯಾಮ್ ಅನ್ನು ನೀಡಲಾಗಿದೆ. ಆದರೆ ಈ ಮ್ಯಾಕ್‌ಬುಕ್‌ ಪ್ರೊ ನಲ್ಲಿ ಫೇಸ್ ಐಡಿಯನ್ನು ಒದಗಿಸಿಲ್ಲ ಅನ್ನೊದನ್ನ ಗಮನಿಸಬೇಕಿದೆ.

14 ಇಂಚಿನ ಮತ್ತು 16 ಇಂಚಿನ ಆಯ್ಕೆ

ಇನ್ನು 14 ಇಂಚಿನ ಮ್ಯಾಕ್‌ಬುಕ್ ಪ್ರೊ ಮಾಡೆಲ್‌ 14.2 ಇಂಚಿನ ಆಕ್ಟಿವ್‌ ಏರಿಯಾ ಹೊಂದಿದ್ದು, ಒಟ್ಟು 5.9 ಮಿಲಿಯನ್ ಪಿಕ್ಸೆಲ್‌ ಸಾಮರ್ಥ್ಯ ಹೊಂದಿದೆ. ಆದರೆ 16 ಇಂಚಿನ ಮಾಡೆಲ್‌ 7.7 ಮಿಲಿಯನ್ ಪಿಕ್ಸೆಲ್‌ ಸಾಮರ್ಥ್ಯದ 16.2 ಇಂಚಿನ ಏರಿಯಾವನ್ನು ಹೊಂದಿದೆ ಎಂದು ಆಪಲ್ ಹೇಳಿಕೊಂಡಿದೆ. ಇನ್ನು ಈ ಡಿಸ್‌ಪ್ಲೇ ಮಿನಿ ಎಲ್ಇಡಿ ಟೆಕ್ನಾಲಜಿ ಜೊತೆಗೆ ಲಿಕ್ವಿಡ್ ರೆಟಿನಾ ಎಕ್ಸ್‌ಡಿಆರ್ ಯನ್ನು ಒಳಗೊಂಡಿದೆ. ಇನ್ನು ಈ ಹೊಸ ಡಿಸ್‌ಪ್ಲೇ ಟೆಕ್ನಾಲಜಿ 1,000 ನಿಟ್ಸ್‌ ಫುಲ್‌-ಸ್ಕ್ರೀನ್‌ ಬ್ರೈಟ್‌ನೆಸ್‌, 1,600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಮತ್ತು 1,000,000:1 ಕಾಂಟ್ರಾಸ್ಟ್ ಅನುಪಾತವನ್ನು ಹೊಂದಿದೆ.

ಆಪಲ್‌ ಗ್ರಾಹಕರಿಗೆ ಬಿಗ್‌ ಶಾಕ್‌; ಆದ್ರೂ, ಗ್ರಾಹಕರಿಗೆ ಕೊನೆಯ ಅವಕಾಶ ನೀಡಿದೆ!

ಆಪಲ್‌ M1 ಮ್ಯಾಕ್ಸ್ ಚಿಪ್‌ಸೆಟ್‌ ಪ್ರೊಸೆಸರ್‌ ಆಧಾರಿತ ಮ್ಯಾಕ್‌ಬುಕ್ ಪ್ರೊ ನಲ್ಲಿ ಏಕಕಾಲದಲ್ಲಿ ಮೂರು ಪ್ರೊ ಡಿಸ್‌ಪ್ಲೇ ಎಕ್ಸ್‌ಡಿಆರ್‌ಗಳು ಮತ್ತು 4 ಕೆ ಟಿವಿಯನ್ನು ಸಂಪರ್ಕಿಸಬಹುದು. ಮತ್ತೊಂದೆಡೆ, ಆಪಲ್ M1 ಪ್ರೊ ಚಿಪ್ ಏಕಕಾಲದಲ್ಲಿ ಎರಡು ಪ್ರೊ ಡಿಸ್‌ಪ್ಲೇ XDR ಗಳನ್ನು ಬೆಂಬಲಿಸುತ್ತದೆ. ಹೊಸ ಮ್ಯಾಕ್‌ಬುಕ್ ಪ್ರೊ ಮಾದರಿಗಳು ಆರು ಸ್ಪೀಕರ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿವೆ. ಸರೌಂಡ್ ಸೌಂಡ್ ಅನುಭವಕ್ಕಾಗಿ ಡಾಲ್ಬಿ ಅಟ್ಮಾಸ್ ಮತ್ತು ಪ್ರಾದೇಶಿಕ ಆಡಿಯೋ ಬೆಂಬಲಿಸಲಿದೆ.

Best Mobiles in India

English summary
Apple MacBook Pro with an older M1 Pro chip would be a more affordable option for consumers as the MacBook Pro 16-inch with M2 Pro chip starts at Rs 2,49,900 in India. more details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X