ಆಪಲ್‌ ಮತ್ತು ಗೂಗಲ್‌ ಸಂಸ್ಥೆಯಿಂದ ಕೋವಿಡ್‌-19 ಪತ್ತೆ ಹಚ್ಚುವ ತಂತ್ರಜ್ಞಾನ ಅಭಿವೃದ್ದಿ!

|

ನಿಮಗೆಲ್ಲಾ ತಿಳಿದಿರುವಂತೆ ಇಡೀ ಜಗತ್ತೇ ಇದೀಗ ಕೊರೊನಾ ವೈರಸ್‌ನಿಂದ ತತ್ತರಿಸಿ ಹೋಗಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳು ಕೋವಿಡ್‌-19 ತಡೆಗಟ್ಟಲು ಲಾಕ್‌ಡೌನ್‌ ಆದೇಶವನ್ನ ಪಾಲಿಸುತ್ತಿವೆ. ಸದ್ಯ ಕೊರೊನಾ ವೈರಸ್‌ ವಿರುದ್ದ ಸಮರ ಸಾರಿರುವ ರಾಷ್ಟ್ರಗಳಿಗೆ ಮದ್ದು ಕಂಡುಹಿಡಿಯುವುದೇ ದೊಡ್ಡ ಸಮಸ್ಯೆಯಾಗಿದೆ. ಆದರು ಸಹ ಎಲ್ಲಾ ರಾಷ್ಟ್ರಗಳು ಕೊರೊನಾ ವಿರುದ್ದದ ಹೊರಾಟದಲ್ಲಿ ಮುನ್ನುಗ್ಗುತ್ತಿವೆ. ಇನ್ನು ಈ ಹೋರಾಟಕ್ಕೆ ಹಲವು ವಲಯಗಳು ಕೈ ಜೋಡಿಸಿದ್ದು, ಟೆಕ್‌ ವಲಯವು ಕೂಡ ಇದಕ್ಕೆ ಹೊರತಾಗಿಲ್ಲ.

ಕೊರೊನಾ

ಹೌದು, ಕೊರೊನಾ ವಿರುದ್ದದ ಹೋರಾಟದಲ್ಲಿ ಟೆಕ್‌ವಲಯವೂ ಕೂಡ ಕೈ ಜೋಡಿಸಿದೆ. ಈಗಾಗಲೇ ಹಲವು ಕಂಪೆನಿಗಳು ಸಹಾಯ ಹಸ್ತವನ್ನ ಚಾಚಿವೆ. ಇನ್ನು ಕೆಲವು ಸಂಸ್ಥೆಗಳು ತಮ್ಮದೇ ಆದ ವೆಬ್‌ಸೈಟ್‌, ಜಾಗೃತಿ ಮೂಡಿಸುವ ಆಪ್‌ಗಳನ್ನ ಲಾಂಚ್‌ ಮಾಡಿವೆ. ಇದೀಗ ಕೋವಿಡ್‌-19 ಪತ್ತೆ ಹಚ್ಚುವ ತಂತ್ರಜ್ಞಾನವನ್ನ ಗೂಗಲ್‌ ಮತ್ತು ಆಪಲ್‌ ಕಂಪೆನಿಗಳು ಅಭಿವರದ್ದಿ ಪಡಿಸುವತ್ತ ಹೆಚ್ಚೆ ಹಾಕಿವೆ. ಸದ್ಯಕ್ಕೆ ಲಬ್ಯವಿರುವ ಟೆಕ್ನಾಲಜಿಯನ್ನ ಇನ್ನಷ್ಟು ಅಭಿವೃದ್ದಿ ಪಡಿಸಿ ವೇಗವಾಗಿ ಫಲಿತಾಂಶ ದೊರೆಯುವಂತೆ ಮಾಡುವ ಕಾರ್ಯತಂತ್ರಕ್ಕೆ ಮುಂದಾಗಿವೆ.

ಆಪಲ್

ಇದೀಗ ಆಪಲ್ ಮತ್ತು ಗೂಗಲ್ ಎರಡೂ ಸಂಸ್ಥೆಗಳು ಕೋವಿಡ್ -19 ಹರಡುವುದನ್ನು ತಡೆಯಲು ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಪ್ರಮುಖ ಘೋಷಣೆಯನ್ನ ಹೊರಡಿಸಿವೆ. ಎರಡು ಟೆಕ್ ದೈತ್ಯರು ಸೇರಿ ಕೋವಿಡ್ -19 ಕಾಂಟ್ಯಾಕ್ಟ್ ಟ್ರೇಸಿಂಗ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವತ್ತ ಹೆಜ್ಜೆ ಹಾಕಿದ್ದಾರೆ. ಈ ಟ್ರೇಸಿಂಗ್‌ ತಂತ್ರಜ್ಞಾನದಿಂದ ವೈರಸ್ ಹರಡುವುದನ್ನು ಕಡಿಮೆ ಮಾಡಲು ಬಳಸಬಹುದಾಗಿದೆ. ಆಪಲ್ ಮತ್ತು ಗೂಗಲ್ ತನ್ನ ಸಂಪರ್ಕ ಪತ್ತೆ ತಂತ್ರಜ್ಞಾನವನ್ನು ಕಾರ್ಯಗತಗೊಳಿಸುವುದಕ್ಕೆ ಎರಡು ಹಂತಗಳಲ್ಲಿ ಪ್ಲ್ಯಾನ್‌ ರೂಪಿಸಿಕೊಂಡಿವೆ.

ಮೊದಲ ಹಂತ

ಮೊದಲ ಹಂತ

ಆಂಡ್ರಾಯ್ಡ್ ಮತ್ತು ಐಒಎಸ್ ನಡುವೆ ಪರಸ್ಪರ ಕಾರ್ಯಸಾಧ್ಯತೆಯನ್ನು ಸಕ್ರಿಯಗೊಳಿಸಲು ಆಪಲ್ ಮತ್ತು ಗೂಗಲ್ "ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (API) ಮತ್ತು ಆಪರೇಟಿಂಗ್ ಸಿಸ್ಟಮ್-ಲೆವೆಲ್ ಟೆಕ್ನಾಲಜಿ" ಅನ್ನು ಬಿಡುಗಡೆ ಮಾಡುತ್ತದೆ. ಇದು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ಕೋವಿಡ್ -19 ಅಪ್ಲಿಕೇಶನ್‌ಗಳ ಉತ್ತಮ ಕ್ರಾಸ್‌-ಪ್ಲಾಟ್‌ಫಾರ್ಮ್ ಕಾರ್ಯನಿರ್ವಹಣೆಯನ್ನು ಶಕ್ತಗೊಳಿಸುತ್ತದೆ. ಈ ಅಪ್ಲಿಕೇಶನ್‌ಗಳು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಕ್ರಮವಾಗಿ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಲ್ಲಿ ಲಭ್ಯವಿರುತ್ತವೆ.

ಎರಡನೇ ಹಂತ

ಎರಡನೇ ಹಂತ

ಇದರ ನಂತರ, ಬ್ಲೂಟೂತ್ ತಂತ್ರಜ್ಞಾನವನ್ನು ಬಳಸಿಕೊಂಡು ಕಾಂಟ್ರಾಕ್ಟ್ ಟ್ರೇಸಿಂಗ್ ಪ್ಲಾಟ್‌ಫಾರ್ಮ್ ನಿರ್ಮಿಸಲು ಆಪಲ್ ಮತ್ತು ಗೂಗಲ್ ಒಟ್ಟಾಗಿ ಕೆಲಸ ಮಾಡುತ್ತವೆ. ಈ ತಂತ್ರಜ್ಞಾನವನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಸಕ್ರಿಯಗೊಳಿಸಲಾಗುತ್ತದೆ. ಇದು ಎಪಿಐಗಿಂತ ಹೆಚ್ಚು ದೃಡವಾದ ಪರಿಹಾರ ಎಂದು ಹೇಳಲಾಗುತ್ತದೆ. ಈ ಕಾಂಟ್ಯಾಕ್ಟ್ ಟ್ರೇಸಿಂಗ್ ಟೆಕ್ ಬಳಕೆದಾರರು ಅಪ್ಲಿಕೇಶನ್‌ಗಳ ದೊಡ್ಡ ಪರಿಸರ ವ್ಯವಸ್ಥೆಯೊಂದಿಗೆ ಮತ್ತು ಸರ್ಕಾರಿ ಆರೋಗ್ಯ ಸಂಸ್ಥೆಗಳೊಂದಿಗೆ ತೊಡಗಿಸಿಕೊಳ್ಳಲು ಸಹ ಸುಲಭಗೊಳಿಸುತ್ತದೆ.

ಬಳಕೆದಾರರ ಗೌಪ್ಯತೆ

ಬಳಕೆದಾರರ ಗೌಪ್ಯತೆ

ಇನ್ನು ಆಪಲ್ ಮತ್ತು ಗೂಗಲ್‌ನ ಸಂಯೋಜಿತ ಬಳಕೆದಾರರ ಸಂಖ್ಯೆಯೊಂದಿಗೆ, ಈ ಸಂಪರ್ಕವನ್ನು ಪತ್ತೆಹಚ್ಚುವ ತಂತ್ರಜ್ಞಾನದ ವ್ಯಾಪ್ತಿಯು ವಿಸ್ತಾರವಾಗಿರುತ್ತದೆ. ಆದರೆ ಇದು ಬಳಕೆದಾರರ ಗೌಪ್ಯತೆಯ ಪ್ರಶ್ನೆಯನ್ನು ಬಳಕೆದಾರರ ದತ್ತಾಂಶ ಮತ್ತು ಲಭ್ಯವಿರುವ ಮಾಹಿತಿಯೊಂದಿಗೆ ತರುತ್ತದೆ. ಆಪಲ್ ಮತ್ತು ಗೂಗಲ್ ಎರಡೂ ಅದರ ಸಂಪರ್ಕ ಪತ್ತೆಹಚ್ಚುವ ತಂತ್ರಜ್ಞಾನವು "ಬಳಕೆದಾರರ ಗೌಪ್ಯತೆಯ ಸುತ್ತ ಬಲವಾದ ರಕ್ಷಣೆಗಳನ್ನು" ಹೊಂದಿದೆ ಎಂದು ನಿರ್ದಿಷ್ಟಪಡಿಸಿವೆ.

Best Mobiles in India

English summary
Apple and Google’s co-development of Covid-19 tracing technology will be available in two stages.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X