ಆಪಲ್‌ ಪ್ರಿಯರಿಗೆ ದಿಢೀರ್ ಬಿಗ್ ಶಾಕ್‌!..ಖರೀದಿಸುವ ಮುನ್ನ ಎರಡು ಬಾರಿ ಯೋಚಿಸಿ!

|

ಜನಪ್ರಿಯ ಆಪಲ್‌ ಸಂಸ್ಥೆ ಉತ್ಪನ್ನಗಳು ಅಂದ್ರೆ, ಬಹುತೇಕ ಎಲ್ಲ ಗ್ರಾಹಕರ ಗಮನ ಸೆಳೆಯುತ್ತವೆ. ಹಾಗೆಯೇ ಮಾರುಕಟ್ಟೆಗೆ ಹೊಸ ಐಫೋನ್‌ ಅಥವಾ ಇತರೆ ಡಿವೈಸ್‌ ಬಿಡುಗಡೆ ಮಾಡಿದರೂ ಕುತೂಹಲದಿಂದ ನೋಡುತ್ತಾರೆ. ಅದೇ ರೀತಿ ಕೆಲವು ವೇಳೆ ತನ್ನ ಕೆಲವು ಐಫೋನ್‌ ಹಾಗೂ ಇತರೆ ಡಿವೈಸ್‌ಗಳಿಗೆ ಬೆಲೆ ಇಳಿಕೆ ನೀಡಿ ಗ್ರಾಹಕರನ್ನು ಸೆಳೆಯುತ್ತದೆ. ಆದರೆಆಪಲ್‌ ಗ್ರಾಹಕರಿಗೆ ಬಿಗ್ ಶಾಕಿಂಗ್ ಸ್ಯೂಸ್‌ ನೀಡಿದ್ದು, ಗ್ರಾಹಕರು OMG ಎನ್ನುವಂತಾಗಿದೆ.

ಆಪಲ್‌ ಪ್ರಿಯರಿಗೆ ದಿಢೀರ್ ಬಿಗ್ ಶಾಕ್‌!..ಖರೀದಿಸುವ ಮುನ್ನ ಎರಡು ಬಾರಿ ಯೋಚಿಸಿ!

ಹೌದು, ಆಪಲ್‌ ಸಂಸ್ಥೆಯ ಇದೀಗ ತನ್ನ ಹೋಮ್‌ಪಾಡ್‌ ಮಿನಿ (HomePod mini) ಮತ್ತು ಐಮ್ಯಾಕ್‌ (iMac) ಡಿವೈಸ್‌ಗಳ ಬೆಲೆಯಲ್ಲಿ ಭರ್ಜರಿ ಏರಿಕೆ ಮಾಡಿದೆ. ಗ್ಲೋಬಲ್‌ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳ ಮಾಡಿದ್ದು, ಭಾರತದಲ್ಲಿಯೂ ಇದು ಅನ್ವಯವಾಗಲಿದೆ. ಹೋಮ್‌ಪಾಡ್‌ ಮಿನಿ ಬೆಲೆಯಲ್ಲಿ 1,000ರೂ. ಏರಿಕೆ ಆಗಿದ್ದು, ಬೆಲೆಯು ಈಗ 10,900ರೂ. ಆಗಿದೆ. ಅದೇ ರೀತಿ ಐಮ್ಯಾಕ್‌ ಬೆಲೆಯಲ್ಲಿ 10,000ರೂ, ಹೆಚ್ಚಳ ಆಗಿದ್ದು, ದರವು ಈಗ 1,29,900ರೂ. ಆಗಿದೆ. ಹಾಗಾದರೆ ಈ ಎರಡು ಡಿವೈಸ್‌ಗಳ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಹೋಮ್‌ಪಾಡ್‌ ಮಿನಿ ಫೀಚರ್ಸ್‌
ಆಪಲ್‌ ಸಂಸ್ಥಯ ಹೋಮ್‌ಪಾಡ್‌ ಮಿನಿ (HomePod mini) ಡಿವೈಸ್‌ ಅನ್ನು 2020 ರಲ್ಲಿ ಭಾರತದಲ್ಲಿ ಪರಿಚಯಿಸಿಲಾಯಿತು. ಇದು ಮೆಶ್ ಫ್ಯಾಬ್ರಿಕ್ ವಿನ್ಯಾಸ ಅನ್ನು ಪಡೆದಿದೆ. ಹಾಗೆಯೇ ಇದು S5 ಚಿಪ್ ಮತ್ತು U1 ಚಿಪ್‌ಗೆ ಸಹ ಬೆಂಬಲವಿದೆ. ಇದು ಸಿರಿಗೆ ನಾಲ್ಕು ಮೈಕ್ರೊಫೋನ್ ಮತ್ತು ಬೆಂಬಲವನ್ನು ಪಡೆದಿದೆ. ಹೊಸ ಹೋಮ್‌ಪಾಡ್‌ನಂತೆಯೇ, ವಾಯಿಸ್‌ ಗುರುತಿಸುವಿಕೆ, ತಾಪಮಾನ ಮತ್ತು ತೇವಾಂಶ ಸಂವೇದಕಗಳು ಮತ್ತು ಸ್ಟಿರಿಯೊ ಆಯ್ಕೆಗಳನ್ನು ಬೆಂಬಲವಿದೆ. ಹೋಮ್‌ಪಾಡ್ ಮಿನಿ ನೀಲಿ, ಸ್ಪೇಸ್ ಗ್ರೇ, ಬಿಳಿ, ಹಳದಿ ಮತ್ತು ಕಿತ್ತಳೆ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

ಆಪಲ್‌ ಪ್ರಿಯರಿಗೆ ದಿಢೀರ್ ಬಿಗ್ ಶಾಕ್‌!..ಖರೀದಿಸುವ ಮುನ್ನ ಎರಡು ಬಾರಿ ಯೋಚಿಸಿ!

ಆಪಲ್‌ ಐಮ್ಯಾಕ್ (24 ಇಂಚು) ಫೀಚರ್ಸ್‌

ಆಪಲ್‌ ಐಮ್ಯಾಕ್‌ 24 ಡಿವೈಸ್‌ 4480 x 2520 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 24 ಇಂಚಿನ 4.5K ರೆಟಿನಾ ಡಿಸ್‌ಪ್ಲೇ ಹೊಂದಿದೆ. M1 ಆಧಾರಿತ ಐಮ್ಯಾಕ್ ಹೊಚ್ಚ ಹೊಸ ವಿನ್ಯಾಸವನ್ನು ಹೊಂದಿದೆ. ಮುಂಭಾಗದಲ್ಲಿ ಡಿಸ್ಟ್ರಕ್ಷನ್‌-ಫ್ರೀ-ಮ್ಯೂಟೆಡ್‌ ಕಲರ್‌ ಮತ್ತು ಹಿಂಭಾಗದಲ್ಲಿ ಬ್ರೈಟ್‌ನೆಸ್‌ ಕಲರ್‌ ಅನ್ನು ಒಳಗೊಂಡಿದೆ. ಇನ್ನು ಈ ಐಮ್ಯಾಕ್ ಆಪಲ್‌ನ ಟ್ರೂ ಟೋನ್ ಟೆಕ್ ಫಾರ್ ಕಲರ್ ಬ್ಯಾಲೆನ್ಸ್, P3 ವೈಡ್ ಕಲರ್ ಗ್ಯಾಮಟ್, 500 ನಿಟ್ಸ್ ಪೀಕ್ ಬ್ರೈಟ್‌ನೆಸ್ ಮತ್ತು ಲೋ ರಿಫ್ಲೆಕ್ಟಿವಿಟಿ ಲೇಪನ ಹೊಂದಿದೆ.

ಆಪಲ್‌ ಪ್ರಿಯರಿಗೆ ದಿಢೀರ್ ಬಿಗ್ ಶಾಕ್‌!..ಖರೀದಿಸುವ ಮುನ್ನ ಎರಡು ಬಾರಿ ಯೋಚಿಸಿ!

ಅಲ್ಲದೆ 24 ಇಂಚಿನ ಈ ಡಿಸ್‌ಪ್ಲೇ ಹಿಂದಿನ 21.5 ಮಾದರಿಗಿಂತ ಸ್ವಲ್ಪ ದೊಡ್ಡದಾದ ಚೌಕಟ್ಟಿನಲ್ಲಿ ಹೊಂದಿಕೊಳ್ಳುತ್ತದೆ. ಆಲ್-ಇನ್-ಒನ್ ಪಿಸಿ ಸಹ ಹೆಚ್ಚು ಸಾಂದ್ರವಾಗಿರುತ್ತದೆ, ಕೇವಲ 11.5 ಎಂಎಂ ತೆಳ್ಳಗಿರುತ್ತದೆ. ಇದರ ಮೂಲ ಮಾದರಿ ನೀಲಿ, ಹಸಿರು, ಕೆಂಪು, ಬೆಳ್ಳಿ ಎಂಬ ನಾಲ್ಕು ಬಣ್ಣಗಳಲ್ಲಿ ಮಾತ್ರ ಲಭ್ಯವಿದೆ. ಆದರೆ ಎರಡು ಉನ್ನತ ಮಾದರಿಗಳು ಹಳದಿ, ಕಿತ್ತಳೆ ಮತ್ತು ನೇರಳೆ ಬಣ್ಣಗಳಲ್ಲಿ ಲಭ್ಯವಿದೆ.

ಐಮ್ಯಾಕ್‌ನಲ್ಲಿ 1080p ವೆಬ್‌ಕ್ಯಾಮ್ ಅನ್ನು ಒದಗಿಸಲಾಗಿದ್ದು, ಇದು ಫೇಸ್‌ ಡಿಟೆಕ್ಷನ್‌ ಮತ್ತು ಬೆಟರ್‌ ಎಕ್ಸಪೋಸರ್‌ ಮತ್ತು ಕಲರ್‌ ಬ್ಯಾಲೆನ್ಸ್‌ಗಾಗಿ M1 ನ್ಯೂರಲ್‌ ಇಂಜಿನ್‌ ಸಹಾಯ ಮಾಡಲಿದೆ. ಆಪಲ್‌ ಕಂಪನಿಯು ಬೀಮ್‌ಫಾರ್ಮಿಂಗ್ ತಂತ್ರಜ್ಞಾನದೊಂದಿಗೆ ಸ್ಟುಡಿಯೋ ಗುಣಮಟ್ಟದ 3-ಮೈಕ್ ಅರೇ ಮತ್ತು ಡಾಲ್ಬಿ ಅಟ್ಮೋಸ್-ಪ್ರಮಾಣೀಕೃತ 6-ಸ್ಪೀಕರ್ ವ್ಯವಸ್ಥೆಯನ್ನು ಸಹ ಒಳಗೊಂಡಿದೆ. ಇದರಲ್ಲಿ ಹೆಚ್ಚಿನ ಕಾರ್ಯಕ್ಷಮತೆಯ ಟ್ವೀಟರ್‌ಗಳ ಜೊತೆಗೆ ಫೋರ್ಸ್‌-ಕ್ಯಾನ್ಸಲ್‌ ವೂಫರ್‌ಗಳು ಕೂಡ ಸೇರಿವೆ.

Best Mobiles in India

English summary
Apple Hikes Prices Of HomePod Mini and 24 inch iMac in India; Know more details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X