ಆಪಲ್ ಐಪ್ಯಾಡ್‌ ಏರ್‌ (2022) ಮತ್ತು ಐಪ್ಯಾಡ್‌ ಮಿನಿ ಬೆಲೆಯಲ್ಲಿ ದಿಢೀರ್‌ ಏರಿಕೆ!

|

ಆಪಲ್ ಸಂಸ್ಥೆಯು ಭಾರತದಲ್ಲಿ ಎರಡು ಐಪ್ಯಾಡ್ (iPad) ಮಾದರಿಗಳ ಬೆಲೆಯಲ್ಲಿ ಸದ್ದಿಲ್ಲದೆ ಏರಿಕೆ ಮಾಡಿದ್ದು, ಗ್ರಾಹಕರಿಗೆ ಅಚ್ಚರಿ ತಂದಿದೆ. ಸಂಸ್ಥೆಯು ತನ್ನ ಐಪ್ಯಾಡ್‌ ಏರ್‌ (iPad Air) ಮತ್ತು ಐಪ್ಯಾಡ್‌ ಮಿನಿ (iPad mini) ಡಿವೈಸ್‌ಗಳ ಬೆಲೆಯಲ್ಲಿ ಹೆಚ್ಚಳ ಮಾಡಿದೆ. ಆಪಲ್‌ ಸಂಸ್ಥೆಯ ಅಧಿಕೃತ ಆನ್‌ಲೈನ್‌ ಸ್ಟೋರ್‌ನಲ್ಲಿ ಹೊಸ ಬೆಲೆ ಬದಲಾವಣೆ ಕಾಣಿಸಿಕೊಂಡಿದೆ.

ಐಪ್ಯಾಡ್‌ ಏರ್‌

2021 ರಲ್ಲಿ ಬಿಡುಗಡೆಯಾದ ಐಪ್ಯಾಡ್‌ ಮಿನಿ ಈಗ 64GB + Wi-Fi ಮಾದರಿಗೆ 49,900ರೂ. ಆಗಿದೆ. ಅದೇ ರೀತಿ ಐಪ್ಯಾಡ್‌ ಏರ್‌ (iPad Air 2022) ಈಗ 64GB+Wi-Fi ಮಾದರಿಗೆ 59,900ರೂ. ಆಗಿದೆ. ಈ ಎರಡು ಡಿವೈಸ್‌ಗಳ ಇತರೆ ವೇರಿಯಂಟ್‌ ಆಯ್ಕೆಗಳ ಬೆಲೆಯಲ್ಲಿಯೂ ಬದಲಾವಣೆ ಆಗಿದೆ. ಹಾಗಾದರೇ ಆಪಲ್ ಐಪ್ಯಾಡ್‌ ಏರ್‌ (2022) ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಪ್ಯಾಡ್‌ ಏರ್‌ (2022)

ಐಪ್ಯಾಡ್‌ ಏರ್‌ (2022) 2360 x 1640 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 10.9 ಇಂಚಿನ LED ಬ್ಯಾಕ್‌ಲಿಟ್ ಲಿಕ್ವಿಡ್ ರೆಟಿನಾ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 500 ವರೆಗಿನ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಜೊತೆಗೆ ನಿಟ್ಸ್ ಮತ್ತು P3 ವೈಡ್-ಕಲರ್ ಗ್ಯಾಮಟ್ ಜೊತೆಗೆ ಟ್ರೂ ಟೋನ್ ವೈಟ್ ಬ್ಯಾಲೆನ್ಸ್ ಬೆಂಬಲವನ್ನು ಹೊಂದಿದೆ. ಇನ್ನು ಈ ಹೊಸ ಐಪ್ಯಾಡ್ ಏರ್ ಟಚ್ ಐಡಿ ಬೆಂಬಲವನ್ನು ಹೊಂದಿದೆ.

2022

ಆಪಲ್ ಐಪ್ಯಾಡ್ ಏರ್ (2022) ಆಕ್ಟಾ-ಕೋರ್ M1 ಚಿಪ್ ಹೊಂದಿದ್ದು, ಇದು ಐಪ್ಯಾಡ್‌OS 15ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದಲ್ಲದೆ ಈ ಹೊಸ ಐಪ್ಯಾಡ್‌ ಏರ್‌ (2022) ಹೊಂದಿರುವ ಚಿಪ್‌ ಹಿಂದಿನ ಐಪ್ಯಾಡ್‌ ಏರ್‌ಗಿಂತ 60% ವೇಗವಾದ CPU ಕಾರ್ಯಕ್ಷಮತೆ ಮತ್ತು ಎರಡು ಪಟ್ಟು ವೇಗದ ಗ್ರಾಫಿಕ್ಸ್ ಕಾರ್ಯಕ್ಷಮತೆಯನ್ನು ನೀಡುತ್ತದೆ.

ಮೆಗಾಪಿಕ್ಸೆಲ್

ಇನ್ನು ಆಪಲ್ ಐಪ್ಯಾಡ್ ಏರ್‌ (2022) 12 ಮೆಗಾಪಿಕ್ಸೆಲ್ ವೈಡ್ ಲೆನ್ಸ್‌ ಹೊಂದಿರುವ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಇದು ಫೋಕಸ್ ಪಿಕ್ಸೆಲ್‌ಗಳೊಂದಿಗೆ ಆಟೋಫೋಕಸ್, ಪನೋರಮಾ (63-ಮೆಗಾಪಿಕ್ಸೆಲ್ ವರೆಗೆ), ಸ್ಮಾರ್ಟ್ ಎಚ್‌ಡಿಆರ್ 3, ಫೋಟೋ ಜಿಯೋಟ್ಯಾಗಿಂಗ್, ಆಟೋ ಇಮೇಜ್ ಸ್ಟೆಬಿಲೈಸೇಶನ್ ಮತ್ತು ಬರ್ಸ್ಟ್ ಮೋಡ್ ಸೇರಿದಂತೆ ಅನೇಕ ಫೀಚರ್ಸ್‌ಗಳನ್ನು ಬೆಂಬಲಿಸಲಿದೆ.

ಬೆಂಬಲವನ್ನು

ಇದಲ್ಲದೆ, ಇದು 24, 25, 30, ಮತ್ತು 60fps ಫ್ರೇಮ್ ದರದಲ್ಲಿ 4K ವೀಡಿಯೊ ರೆಕಾರ್ಡಿಂಗ್ ಬೆಂಬಲವನ್ನು ಹೊಂದಿದೆ. ಜೊತೆಗೆ ಈ ಕ್ಯಾಮರಾ 120fps ಅಥವಾ 240fps ನಲ್ಲಿ 1080p ಗಾಗಿ ಸ್ಲೋ ಮೋಷನ್‌ ವೀಡಿಯೊ ಬೆಂಬಲವನ್ನು ಹೊಂದಿದೆ. ಹಾಗೆಯೇ 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಸೆಲ್ಫಿ ಕ್ಯಾಮೆರಾವನ್ನು ಕೂಡ ಹೊಂದಿದೆ. ಇದು ಮೆಷಿನ್ ಲರ್ನಿಂಗ್-ಬೆಂಬಲಿತ ಸೆಂಟರ್ ಸ್ಟೇಜ್ ಅನ್ನು ಬೆಂಬಲಿಸುತ್ತದೆ.

ಸಿಂಗಲ್‌ ಚಾರ್ಜ್‌ನಲ್ಲಿ

ಐಪ್ಯಾಡ್‌ ಏರ್‌(2022) 28.6Wh ಲಿಥಿಯಂ ಪಾಲಿಮರ್ ಬ್ಯಾಟರಿಯನ್ನು ಹೊಂದಿದೆ. ಇದು 10 ಗಂಟೆಗಳವರೆಗೆ ವೆಬ್ ಬ್ರೌಸಿಂಗ್ ಅಥವಾ ವೈಫೈನಲ್ಲಿ ವೀಡಿಯೊ ಪ್ಲೇಬ್ಯಾಕ್ ಅನ್ನು ನೀಡಲಿದೆ. ಇದಲ್ಲದೆ ವೈ-ಫೈ + ಸೆಲ್ಯುಲಾರ್ ರೂಪಾಂತರವು ಸಿಂಗಲ್‌ ಚಾರ್ಜ್‌ನಲ್ಲಿ ಒಂಬತ್ತು ಗಂಟೆಗಳವರೆಗೆ ವೆಬ್ ಬ್ರೌಸಿಂಗ್ ಅನ್ನು ನೀಡಲಿದೆ. ಈ ಹೊಸ ಐಪ್ಯಾಡ್ ಏರ್‌ನಲ್ಲಿನ ಅಂತರ್ನಿರ್ಮಿತ ಬ್ಯಾಟರಿಯು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಹಾಗೆಯೇ ಇದು 20W USB-C ಪವರ್ ಅಡಾಪ್ಟರ್ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G (ಐಚ್ಛಿಕ), Wi-Fi 6, ಬ್ಲೂಟೂತ್ v5, GPS/ A-GPS (ಸೆಲ್ಯುಲಾರ್ ಆವೃತ್ತಿಯಲ್ಲಿ ಮಾತ್ರ), ಮತ್ತು USB ಟೈಪ್-C ಕನೆಕ್ಟರ್ ಸೇರಿವೆ.

Best Mobiles in India

English summary
Apple Increases the Prices of iPad mini and iPad Air 2022 in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X