ಆಪಲ್‌ iOS 16 ಹೊಂದಿರುವ ಈ ವಿಶೇಷ ಫೀಚರ್ಸ್‌ ನಿಮಗೆ ಅಚ್ಚರಿ ಎನಿಸಲಿದೆ!

|

ಆಪಲ್‌ ಕಂಪೆನಿ ಇತ್ತೀಚಿಗೆ iOS 16 ಸಾಫ್ಟ್‌ವೇರ್‌ ಅನ್ನು ಅನಾವರಣಗೊಳಿಸಿದೆ. ಇನ್ನು iOS 16 ಹೊಸ ಮಾದರಿಯ ಫೀಚರ್ಸ್‌ಗಳ ಕಾರಣದಿಂದಾಗಿ ಸಾಕಷ್ಟು ಗಮನಸೆಳೆದಿದೆ. ಇವುಗಳಲ್ಲಿ ಹೊಸ ಲಾಕ್ ಸ್ಕ್ರೀನ್ ಕಸ್ಟಮೈಸೇಶನ್, ನ್ಯೂ ಲಾಕ್ ಸ್ಕ್ರೀನ್ ನೋಟೀಫಿಕೇಶನ್, ಲೈವ್ ಆಕ್ಟಿವಿಟಿ, ಫೋಕಸ್ ಫಿಲ್ಟರ್, ಫೋಕಸ್ ಮೋಡ್‌ನಂತಹ ಫೀಚರ್ಸ್‌ಗಳು ಸೇರಿವೆ. ಇವುಗಳ ನಡುವೆ iOS 16 ನೀವು ಡಿವೈಸ್‌ನಲ್ಲಿ ಸೆಲ್ಯುಲಾರ್ ಸೇವೆಯನ್ನು ಸೆಟ್‌ ಮಾಡುವಾಗ ಬ್ಲೂಟೂತ್ ಮೂಲಕ ಐಫೋನ್‌ಗಳ ನಡುವೆ eSIM ಅನ್ನು ವರ್ಗಾಯಿಸಲು ಇದು ಅನುಮತಿಸುತ್ತದೆ.

iOS

ಹೌದು, iOS 16 ತನ್ನ ವಿಶೇಷ ಫೀಚರ್ಸ್‌ಗಳಿಂದ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಇದರಲ್ಲಿ ಬ್ಲೂಟೂತ್‌ ಮೂಲಕ ಐಫೋನ್‌ಗಳ ನಡುವೆ ಇ-ಸಿಮ್‌ ಅನ್ನು ಟ್ರಾನ್ಸಫರ್‌ ಮಾಡಲು ಅವಕಾಶ ನೀಡಲಿದೆ. ಇದರಿಂದ ಇ-ಸಿಮ್‌ ಅನ್ನು ಬಳಸುವುದು ಸುಲಭವಾಗಲಿದೆ. ಒಂದು ಐಫೋನ್‌ನಿಂದ ಮತ್ತೊಂದ ಐಫೋನ್‌ಗೆ ಬ್ಲೂಟೂತ್‌ ಮೂಲಕ ಇ-ಸಿಮ್‌ ಅನ್ನು ಸಂಬಂಧಿತ ಸಂಖ್ಯೆಗೆ ವರ್ಗಾಯಿಸಬಹುದಾಗಿದೆ. ಹಾಗಾದ್ರೆ iOS 16 ನಲ್ಲಿ ಇ-ಸಿಮ್‌ ಅನ್ನು ವರ್ಗಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಐಫೋನ್‌

iOS 16 ಹೊಂದಿರುವ ಐಫೋನ್‌ ಬಳಕೆದಾರರು ಬ್ಲೂಟೂತ್‌ ಬಳಕೆಯ ಮೂಲಕ ಒಂದು ಐಫೋನ್‌ನಿಂದ ಮತ್ತೊಂದು ಐಫೋನ್‌ಗೆ ಇ-ಸಿಮ್‌ ಅನ್ನು ವರ್ಗಾಯಿಸಬಹುದು. ಇದಕ್ಕೂ ಮೊದಲು ಬಳಕೆದಾರರು ಹೊಸ eSIM ಕಾರ್ಡ್ ಅನ್ನು ಸಂಬಂಧಪಟ್ಟ ವಾಹಕದಿಂದ ಪಡೆಯಬೇಕಾಗಿತ್ತು. ಆದರೆ ಇದೀಗ ಬ್ಲೂಟೂತ್‌ ಮೂಲಕವೇ ಇ-ಸಿಮ್‌ ಅನ್ನು ಬೇರೆ ಡಿವೈಸ್‌ಗೆ ವರ್ಗಾಯಿಸಬಹುದಾಗಿದೆ. ಇದನ್ನು ಮೊದಲು ಟ್ವಿಟರ್‌ನಲ್ಲಿ ಕಾರ್ಸನ್ ವಾಲ್‌ಡ್ರಾಪ್ ಗುರುತಿಸಿದ್ದಾರೆ. ಈ ಟ್ವಿಟ್‌ನಲ್ಲಿ "ಇನ್ನೊಂದು ಐಫೋನ್‌ನಿಂದ ಇ-ಸಿಮ್‌ ವರ್ಗಾವಣೆ" ಆಯ್ಕೆಯನ್ನು ತೋರಿಸುವ ಸ್ಕ್ರೀನ್‌ಶಾಟ್ ಅನ್ನು ಅವರು ಪೋಸ್ಟ್‌ ಮಾಡಿದ್ದಾರೆ.

ಇದಲ್ಲದೆ

ಇದಲ್ಲದೆ ಇ-ಸಿಮ್‌ ಅನ್ನು ಟ್ರಾನ್ಸಫರ್‌ ಮಾಡುವ ಆಯ್ಕೆಯನ್ನು ಸೆಟ್ಟಿಂಗ್ಸ್‌ ಅಪ್ಲಿಕೇಶನ್‌ನಲ್ಲಿ ಆಯ್ಕೆಯನ್ನು ಕಾಣಬಹುದು. ಇದಕ್ಕಾಗಿ ನೀವು "ಸೆಟಪ್ eSIM" ಅನ್ನು ಟ್ಯಾಪ್ ಮಾಡಬೇಕಾಗುತ್ತದೆ. ನಂತರ ಬ್ಲೂಟೂತ್ ಮೂಲಕ ಮತ್ತೊಂದು ಐಫೋನ್‌ನಿಂದ eSIM ಮತ್ತು ಸಂಬಂಧಿತ ಸಂಖ್ಯೆಯನ್ನು ವರ್ಗಾಯಿಸಬಹುದಾಗಿದೆ. ಹೀಗೆ ಇ-ಸಿಮ್‌ ಅನ್ನು ಬೇರೊಂದು ಡಿವೈಸ್‌ಗೆ ವರ್ಗಾವಣೆಯನ್ನು ಮಾಡುವಾಗ, ನೀವು ವರ್ಗಾಯಿಸುತ್ತಿರುವ ಡಿವೈಸ್‌ ಅನ್ನು ಸಮೀಪದಲ್ಲಿಯೇ ಇಡಬೇಕಾಗುತ್ತದೆ. ಅಲ್ಲದೆ ಡಿವೈಸ್‌ ಅನ್ನು ಅನ್‌ಲಾಕ್ ಮಾಡಬೇಕು ಹಾಗೂ ಬ್ಲೂಟೂತ್ ಆನ್ ಮಾಡಬೇಕಾಗಿರುತ್ತದೆ.

ಫೀಚರ್ಸ್‌

ಇನ್ನು ಈ ಫೀಚರ್ಸ್‌ ಪ್ರಸ್ತುತ ಯುಎಸ್ ಮತ್ತು ಯುಕೆ ಸೇರಿದಂತೆ ಕೆಲವು ದೇಶಗಳಲ್ಲಿ ಲಭ್ಯವಿದೆ ಎಂದು ವರದಿಯಾಗಿದೆ. ಆದರೆ ಈ ವೈಶಿಷ್ಟ್ಯ ಕೆಲಸ ಮಾಡಲು, ವಾಹಕವು ಅದನ್ನು ಬೆಂಬಲಿಸುವ ಅಗತ್ಯವಿದೆ. ಇದನ್ನು ಹೊರತುಪಡಿಸಿ, ವಾಹಕದಿಂದ ಒದಗಿಸಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಬಳಕೆದಾರರು eSIM ಅನ್ನು ಸೆಟ್‌ ಮಾಡಬಹುದು. eSIM ಆಯ್ಕೆಯು ಐಫೋನ್‌ XS ಮತ್ತು ಡ್ಯುಯಲ್ eSIM ಗಳನ್ನು ಬೆಂಬಲಿಸುವ ಐಫೋನ್‌ 13 ಮಾದರಿಗಳನ್ನು ಒಳಗೊಂಡಿರುವ ಹೊಸ ಐಫೋನ್‌ಗಳಲ್ಲಿ ಲಭ್ಯವಿದೆ.

iOS 16 ಅಪ್ಡೇಟ್‌ ಪಡೆಯುವ ಡಿವೈಸ್‌ಗಳು

iOS 16 ಅಪ್ಡೇಟ್‌ ಪಡೆಯುವ ಡಿವೈಸ್‌ಗಳು

ಐಫೋನ್ 13, ಐಫೋನ್ 13 ಮಿನಿ, ಐಫೋನ್‌ 13 ಪ್ರೊ, ಐಫೋನ್‌ 13 ಪ್ರೊ ಮ್ಯಾಕ್ಸ್‌, ಐಫೋನ್ 12, ಐಫೋನ್ 12 ಮಿನಿ, ಐಫೋನ್‌ 12 ಪ್ರೊ, ಐಫೋನ್‌ 12 ಪ್ರೊ ಮ್ಯಾಕ್ಸ್‌, ಐಫೋನ್ 11, ಐಫೋನ್‌ 11 ಪ್ರೊ, ಐಫೋನ್‌ 11 ಪ್ರೊ ಮ್ಯಾಕ್ಸ್‌, ಐಫೋನ್ XS, ಐಫೋನ್ XS ಮ್ಯಾಕ್ಸ್, ಐಫೋನ್‌ XR, ಐಫೋನ್ X, ಐಫೋನ್‌ 8, ಐಫೋನ್‌ 8 ಪ್ಲಸ್‌, ಐಫೋನ್‌ SE (2 ನೇ ತಲೆಮಾರು ಅಥವಾ ನಂತರದ) ಈ ಎಲ್ಲಾ ಡಿವೈಸ್‌ಗಳಿಗೆ ಐಒಎಸ್‌ 16 ಅಪ್ಡೇಟ್‌ ಬೆಂಬಲಿಸಲಿದೆ.

Best Mobiles in India

Read more about:
English summary
Apple iOS 16 Update Lets Users Transfer eSIM via Bluetooth

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X