ಇಂದಿನಿಂದ ಆಪಲ್ ಐಪ್ಯಾಡ್‌ 10ನೇ ಜೆನ್‌ ಮತ್ತು ಐಪ್ಯಾಡ್‌ ಪ್ರೊ M2 ಸೇಲ್‌!

|

ಟೆಕ್ ದಿಗ್ಗಜ ಆಪಲ್ (Apple) ಇತ್ತೀಚಿಗೆ ತನ್ನ ಐಪ್ಯಾಡ್‌ (iPad) ಆವೃತ್ತಿಗಳನ್ನು ರಿಫ್ರೆಶ್ ಮಾಡಿದ್ದು, ಆಪಲ್ ಐಪ್ಯಾಡ್‌ 10ನೇ ಜೆನ್‌ ಮತ್ತು ಆಪಲ್ ಐಪ್ಯಾಡ್‌ ಪ್ರೊ M2 ಚಿಪ್ ಅನ್ನು ಪರಿಚಯಿಸಿತು. ರಿಫ್ರೆಶ್ ಬಳಿಕ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡು ಗ್ರಾಹಕರನ್ನು ಸೆಳೆದಿರುವ ಈ ಐಪ್ಯಾಡ್‌ಗಳು ಭಾರತದಲ್ಲಿ ಇಂದಿನಿಂದ ಮಾರಾಟವಾಗಲಿದೆ. ಇನ್ನು ಕಳೆದ ಜೆನ್‌ (Gen) ಗೆ ಹೋಲಿಸಿದರೆ, ಅಪ್‌ಡೇಟ್‌ ಆವೃತ್ತಿಗಳ ಬೆಲೆಯಲ್ಲಿ ಏರಿಕೆ ಕಂಡಿವೆ.

ಐಪ್ಯಾಡ್‌

ಹೌದು, ಭಾರತದಲ್ಲಿ ಇಂದಿನಿಂದ (ಅ 28) ಐಪ್ಯಾಡ್‌ 10ನೇ ಜೆನ್‌ ಮತ್ತು ಐಪ್ಯಾಡ್‌ ಪ್ರೊ M2 ಮಾರಾಟ ಪ್ರಾರಂಭಿಸಲಿವೆ. ಐಪ್ಯಾಡ್‌ 10ನೇ ಜೆನ್‌ ಆಕರ್ಷಕ ವಿನ್ಯಾಸ ಇದ್ದು, ಐಪ್ಯಾಡ್‌ ಏರ್‌ ನಂತೆಯೇ ಕಾಣುತ್ತದೆ. ಆದಾಗ್ಯೂ, ಐಪ್ಯಾಡ್‌ 10ನೇ ಜೆನ್‌ ಲ್ಯಾಮಿನೇಟೆಡ್ ಡಿಸ್‌ಪ್ಲೇಯನ್ನು ನೀಡುವುದಿಲ್ಲ, ಆದ್ದರಿಂದ ಇದು ಆಪಲ್‌ ಪೆನ್ಸಿಲ್‌ಗೆ 2ನೇ ಜೆನ್‌ ಹೊಂದಿಕೆಯಾಗುವುದಿಲ್ಲ. ಹಾಗಾದರೇ ಐಪ್ಯಾಡ್‌ 10ನೇ ಜೆನ್‌ ಮತ್ತು ಐಪ್ಯಾಡ್‌ ಪ್ರೊ M2 ಡಿವೈಸ್‌ಗಳ ಬೆಲೆ, ಲಾಂಚ್ ಆಫರ್‌ಗಳ ಹಾಗೂ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮೆಮೊರಿ ಆಯ್ಕೆಗಳು

ಮೆಮೊರಿ ಆಯ್ಕೆಗಳು

ಆಪಲ್ ಐಪ್ಯಾಡ್‌ ಪ್ರೊ M2 ಡಿವೈಸ್ ಎರಡು ಸ್ಕ್ರೀನ್‌ಗಳ ಆಯ್ಕೆಯಲ್ಲಿ ಲಭ್ಯವಿದ್ದು, ಅವುಗಳು ಕ್ರಮವಾಗಿ 11 ಇಂಚು ಮತ್ತು 12.9 ಇಂಚು ಆಗಿವೆ. ಹಾಗೆಯೇ ಈ ಡಿವೈಸ್‌ 128GB, 256GB, 512GB, 1TB ಮತ್ತು 2TB ಸ್ಟೋರೇಜ್‌ನ ಐದು ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಅದೇ ರೀತಿ ಆಪಲ್ ಐಪ್ಯಾಡ್‌ 10ನೇ ಜೆನ್‌ 64GB ಮತ್ತು 256GB ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಬೆಲೆ ವಿವರ

ಬೆಲೆ ವಿವರ

* ಆಪಲ್ ಐಪ್ಯಾಡ್‌ 10ನೇ ಜೆನ್‌ 64GB (WI-FI) - 44,900ರೂ.
* ಆಪಲ್ ಐಪ್ಯಾಡ್‌ 10ನೇ ಜೆನ್‌ 64GB (Cellular) - 59,900ರೂ.
* ಆಪಲ್ ಐಪ್ಯಾಡ್‌ 10ನೇ ಜೆನ್‌ 64GB (WI-FI) - 59,900ರೂ.
* ಆಪಲ್ ಐಪ್ಯಾಡ್‌ 10ನೇ ಜೆನ್‌ 64GB (Cellular) - 74,900ರೂ.

ಐಪ್ಯಾಡ್‌

* ಐಪ್ಯಾಡ್‌ ಪ್ರೊ 11 ಇಂಚು- 128GB (WI-FI) - 81,900ರೂ.
* ಐಪ್ಯಾಡ್‌ ಪ್ರೊ 11 ಇಂಚು- 128GB (Cellular) - 96,900ರೂ.
* ಐಪ್ಯಾಡ್‌ ಪ್ರೊ 11 ಇಂಚು- 256GB (WI-FI) - 91,900ರೂ.
* ಐಪ್ಯಾಡ್‌ ಪ್ರೊ 11 ಇಂಚು- 256GB (Cellular) - 1,06,900ರೂ.
* ಐಪ್ಯಾಡ್‌ ಪ್ರೊ 11 ಇಂಚು- 512GB (WI-FI) - 1,11,900ರೂ.
* ಐಪ್ಯಾಡ್‌ ಪ್ರೊ 11 ಇಂಚು- 512GB (Cellular) - 1,26,900ರೂ.

ಐಪ್ಯಾಡ್‌ ಪ್ರೊ

* ಐಪ್ಯಾಡ್‌ ಪ್ರೊ 12.9 ಇಂಚು- 128GB (WI-FI) - 1,12,900ರೂ.
* ಐಪ್ಯಾಡ್‌ ಪ್ರೊ 12.9 ಇಂಚು- 128GB (Cellular) - 1,27,900ರೂ.
* ಐಪ್ಯಾಡ್‌ ಪ್ರೊ 12.9 ಇಂಚು- 256GB (WI-FI) - 1,22,900ರೂ.
* ಐಪ್ಯಾಡ್‌ ಪ್ರೊ 12.9 ಇಂಚು- 256GB (Cellular) - 1,37,900ರೂ.
* ಐಪ್ಯಾಡ್‌ ಪ್ರೊ 12.9 ಇಂಚು- 512GB (WI-FI) - 1,42,900ರೂ.
* ಐಪ್ಯಾಡ್‌ ಪ್ರೊ 12.9 ಇಂಚು- 512GB (Cellular) - 1,57,900ರೂ.

ಆಪಲ್ ಐಪ್ಯಾಡ್‌ M2 ಫೀಚರ್ಸ್‌

ಆಪಲ್ ಐಪ್ಯಾಡ್‌ M2 ಫೀಚರ್ಸ್‌

ಆಪಲ್ ಐಪ್ಯಾಡ್‌ M2 (iPad Pro M2) ಡಿವೈಸ್‌ ಎರಡು ಸ್ಕ್ರೀನ್‌ ಆಯ್ಕೆಗಳನ್ನು ಒಳಗೊಂಡಿದೆ. ಅವು ಕ್ರಮವಾಗಿ 11 ಇಂಚು ಮತ್ತು 12.9-ಇಂಚು ಆಗಿವೆ. 11 ಇಂಚಿನ ಡಿವೈಸ್ 120Hz ಪ್ರೊ-ಮೋಷನ್ ಲಿಕ್ವಿಡ್ ರೆಟಿನಾ LED-ಬ್ಯಾಕ್‌ಲಿಟ್ ಡಿಸ್‌ಪ್ಲೇ ಹೊಂದಿದ್ದು, ಡಿಸ್‌ಪ್ಲೇಯು 2388 × 1668 ಪಿಕ್ಸೆಲ್ ರೆಸಲ್ಯೂಶನ್ ಪಡೆದಿದೆ. ಹಾಗೆಯೇ 264ppi ಪಿಕ್ಸೆಲ್ ಸಾಂದ್ರತೆ ಮತ್ತು 600nits ಬ್ರೈಟ್‌ನೆಸ್ ಹೊಂದಿದೆ.

ಆಪಲ್‌ ಐಪ್ಯಾಡ್‌ 10ನೇ ಜೆನ್ ಫೀಚರ್ಸ್‌

ಆಪಲ್‌ ಐಪ್ಯಾಡ್‌ 10ನೇ ಜೆನ್ ಫೀಚರ್ಸ್‌

ಆಪಲ್‌ ಐಪ್ಯಾಡ್‌ 10ನೇ ಜೆನ್ (Apple iPad - 10 ನೇ ಜೆನ್‌) ಡಿವೈಸ್‌ ವಿನ್ಯಾಸ ಬಹುತೇಕ ಐಪ್ಯಾಡ್‌ ಏರ್‌ (iPad Air) ನಂತೆಯೇ ಆಗಿದ್ದು, ಇದು 10.9-ಇಂಚಿನ ಲಿಕ್ವಿಡ್ ರೆಟಿನಾ ಟ್ರೂ ಟೋನ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇಯು 2360 × 1640 ಪಿಕ್ಸೆಲ್ ರೆಸಲ್ಯೂಶನ್ ಪಡೆದಿದ್ದು, 264ppi ಪಿಕ್ಸೆಲ್ ಸಾಂದ್ರತೆ ಜೊತೆಗೆ 500nits ಬ್ರೈಟ್‌ನೆಸ್‌ ಸಾಮರ್ಥ್ಯ ಪಡೆದಿದೆ.

Best Mobiles in India

English summary
Apple iPad (10th Gen) and iPad Pro (M2) Sale Starting Today: Price in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X