ಐಫೋನ್ 8 ನಲ್ಲಿ ಹೋಮ್ ಬಟನ್ ಇಲ್ಲವಂತೆ..!!

Written By: Lekhaka

ಆಪಲ್ ಬಿಡುಗಡೆ ಮಾಡುತ್ತಿರುವ ಸ್ಪೆಷಲ್ ಆಡಿಷನ್ ಡಿವೈಸ್ ಐಫೋನ್ 8 ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲಿದೆ ಎನ್ನಲಾಗಿದೆ. ಈಗಗಾಗಲೇ ತಿಳಿದಿರುವಂತೆ ಅಂಚುಗಳಲಿಲ್ಲದ ಡಿಸ್ ಪ್ಲೇಯನ್ನು ಈ ಫೋನು ಹೊಂದಿರಲಿದೆ. ಮುಂಭಾಗದಲ್ಲಿ ಹೊಮ್ ಬಟನ್ ಅನ್ನು ನೀಡಿಲ್ಲ.

ಐಫೋನ್ 8 ನಲ್ಲಿ ಹೋಮ್ ಬಟನ್ ಇಲ್ಲವಂತೆ..!!

ಇದಲ್ಲದೇ ಈ ಫೋನ್ ಬಗ್ಗೆ ಮತ್ತೊಂದು ಮಾಹಿತಿಯೂ ಲೀಕ್ ಆಗಿದ್ದು, ಐಫೋನ್ 8 ನಲ್ಲಿರುವ ವೇಕ್ ಆಪ್ /ಸ್ಲಿಪ್ ಬಟನ್ ಅನ್ನು ಸಿರಿಯನ್ನು ಆಕ್ಟಿವೇಟ್ ಮಾಡಿಕೊಳ್ಳಲು ಬಳಕೆ ಮಾಡಿಕೊಳ್ಳಬಹುದಂತೆ.

ಈ ಹಿಂದಿನ ಐಫೋನ್ ಗಳಲ್ಲಿ ಸಿರಿ ಆಕ್ಟೀವ್ ಮಾಡಿಕೊಳ್ಳಲು ಹೋಮ್ ಬಟನ್ ಅನ್ನು ದೀರ್ಘವಾಗಿ ಪ್ರೆಸ್ ಮಾಡಬೇಕಾಗಿತ್ತು.

ಆದರೆ ಈ ಹೊಸ ಫೋನಿನಲ್ಲಿ ಹೋಮ್ ಬಟನ್ ನೀಡಿಲ್ಲವಾಗಿರುವುದರಿಂದ ಸಿರಿ ಆಕ್ಟಿವ್ ಮಾಡಲು ಬೇರೆಯ ತಂತ್ರವನ್ನು ಅಳವಡಿಸಲಾಗಿದೆ. ಅಲ್ಲದೇ ಇದರಲ್ಲಿ ಲಾಕ್ ಬಟನ್ ಅನ್ನು ತೆಗೆದುಹಾಕಲಾಗಿದೆ ಎನ್ನುವ ಸುದ್ಧಿಯು ಲಭ್ಯವಿದೆ.

ಕನ್ನಡಕ್ಕೆ ಮತ್ತೊಂದು ಟಿವಿ ಚಾನಲ್ ಆಗಮನ

ಇದಲ್ಲದೇ ಲಾಕ್ ಬಟನ್ ಅನ್ನು ಕ್ಯಾಮೆರಾ ಶಟರ್ ಮಾದರಿಯಲ್ಲಿಯೂ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಐಫೋನ್ 8 ನಲ್ಲಿ ಮಾಡಿಕೊಡಲಾಗಿದೆ.

ಈ ಫೋನ್ ಇದೇ ಸೆಪ್ಟೆಂಬರ್ 12 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿದ್ದು, ಇದರೊಂಧಿಗೆ ಐಫೋನ್ 7S ಮತ್ತು ಐಫೋನ್ 7S+ ಸಹ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿಯೂ ಲೀಕ್ ಆಗಿದೆ.

English summary
Apple iPhone is believed to let users activate Siri via the Sleep/Wake button instead of the home button.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot