Subscribe to Gizbot

ಆಪಲ್ ಐಫೋನ್ 8 ಹೊಸ ಬಣ್ಣದಲ್ಲಿ ಲಭ್ಯ: ಯಾವುದದು?

Written By: Lekhaka

ಈಗಾಗಲೇ ಮಾರುಕಟ್ಟೆಯಲ್ಲಿ ಆಪಲ್ ಐಫೋನ್ 8 ಬಗ್ಗೆ ಸಾಕಷ್ಟು ರೂಮರ್ ಗಳು ಹರಿದಾಡುತ್ತಿದ್ದು, ಈ ಫೋನ್ ಕಾಪರ್ ಗೋಲ್ಡ್ ಆವೃತ್ತಿಯಲ್ಲಿ ದೊರೆಯಲಿದೆ ಎನ್ನಲಾಗಿತ್ತು. ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ಹೊಸ ಬಣ್ಣವೊಂದರಲ್ಲಿಯೂ ಐಪೋನ್ 8 ಕಾಣಿಸಿಕೊಳ್ಳಲಿದೆ.

ಆಪಲ್ ಐಫೋನ್ 8 ಹೊಸ ಬಣ್ಣದಲ್ಲಿ ಲಭ್ಯ: ಯಾವುದದು?

ಐಫೋನ್ 8 ಕಾಪರ್, ಸಿಲ್ವರ್ ಮತ್ತು ಬ್ಲಾಕ್ ಬಣ್ಣದಲ್ಲಿ ದೊರೆಯಲಿದೆ ಎನ್ನುವ ಮಾಹಿತಿಯೂ ಈಗಾಗಲೇ ತಿಳಿದಿದೆ. ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ಐಫೋನ್ 8 ಬ್ಲಾಷ್ ಗೋಲ್ಡ್ ಬಣ್ಣದಲ್ಲಿಯೂ ದೊರೆಯಲಿದೆ ಎನ್ನಲಾಗಿದೆ.

ಹೊಸದಾಗಿ ಕಾಣಿಸಿಕೊಳ್ಳಲಿರುವ ಐಫೋನ್ 8 ಬ್ಲಾಷ್ ಗೋಲ್ಡ್ ಒಟ್ಟು ಎರಡು ಆವೃತ್ತಿಯಲ್ಲಿ ದೊರೆಯಲಿದ್ದು, 64 GB ಮತ್ತು 128 GB ಆವೃತ್ತಿಗಳಲ್ಲಿ ದೊರೆಯಲಿದೆ ಎಂದ ರೂಮರ್ ಕೇಳಿ ಬಂದಿದೆ. ಪ್ರತಿ ಬಾರಿ ಐಫೋನ್ ಬಿಡುಗಡೆ ಯಾಗುವ ಸಂದರ್ಭದಲ್ಲಿ ಹೊಸದೊಂದು ಬಣ್ಣ ಕಾಣಿಸಿಕೊಳ್ಳಲಿದೆ.

ಆನ್‌ಲೈನಿನಲ್ಲಿ ಹೆಚ್ಚಿನ ಬೆಲೆಗೆ ನಿಮ್ಮ ಹಳೇ ಸ್ಮಾರ್ಟ್‌ಫೋನ್‌ ಮಾರುವುದು ಹೇಗೆ.?

ಇದುವರೆಗೂ ಐಫೋನ್ ಬ್ಲಾಷ್ ಗೋಲ್ಡ್ ಬಣ್ಣದಲ್ಲಿ ಕಾಣಿಸಿಕೊಂಡಿಲ್ಲ ಎನ್ನಲಾಗಿದೆ. ರೋಸ್ ಗೋಲ್ಡ್ ಬಣ್ಣದ ಐಫೋನ್ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿತ್ತು. ಅದನ್ನು ಬಿಟ್ಟರೆ ಈ ಬಾರಿ ಐಫೋನ್ 8 ಬ್ಲಾಷ್ ಗೋಲ್ಡ್ ಹೆಚ್ಚು ಸದ್ದು ಮಾಡಲಿದೆ ಎನ್ನುವು ಮಾರುಕಟ್ಟೆ ಪರಿಣಿತ ಮಾತಾಗಿದೆ.

ಐಫೋನ್ 8 ಬ್ಲಾಷ್ ಗೋಲ್ಡ್ ಬಣ್ಣದಲ್ಲಿ ಲಾಂಚ್ ಆಗಲಿದ್ದು, ಇದರೊಂದಿಗೆ ಐಫೋನ್ 7 ಮತ್ತು ಐಫೋನ್ 7s ಸಹ ಲಾಂಚ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಮೂಲಗಳ ಪ್ರಕಾರ ಈ ತಿಂಗಳ ಅಂತ್ಯದಲ್ಲಿ ಈ ಐಫೋನ್ ಗಳು ಲಾಂಚ್ ಆಗಲಿದೆ.

English summary
A Weibo post is suggesting that the iPhone 8 model in Copper Gold will be referred as "Blush Gold".
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot